ಟೆಲ್ ಆವಿವ್: ಕಳೆದೆರಡು ವರ್ಷದಿಂದ ಇಸ್ರೇಲ್ನಲ್ಲಿ ಆಟಿಸಂನಿಂದ ಬಳಲುತ್ತಿರುವ ಜನರ ಸಂಖ್ಯೆ ಶೇ.41ರಷ್ಟು ಏರಿಕೆ ಕಂಡಿದೆ ಎಂದು ಇಸ್ರೇಲ್ ಯೋಗಕ್ಷೇಮ ಮತ್ತು ಸಾಮಾಜಿಕ ಭದ್ರತೆ ಸಚಿವಾಲಯ ತಿಳಿಸಿದೆ. ವಿಶ್ವ ಆಟಿಸಂ ಜಾಗೃತಿ ದಿನವನ್ನು ಏಪ್ರಿಲ್ 2ರಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸಚಿವಾಲಯ ಈ ಮಾಹಿತಿ ಬಿಡುಗಡೆ ಮಾಡಿದೆ.
ವರದಿಯಲ್ಲಿನ ದತ್ತಾಂಶ ತೋರಿಸುವಂತೆ, 2024ರ ಮೊದಲ ತ್ರೈಮಾಸಿಕದಲ್ಲಿ 30,876 ಜನರು ಆಟಿಸಂ ಸೇವೆ ಪಡೆಯುತ್ತಿದ್ದಾರೆ. 2022ರಲ್ಲಿ ಈ ಸಂಖ್ಯೆ 27,105 ಇದ್ದರೆ, 2021ರಲ್ಲಿ 22,231 ಆಗಿದೆ.
ಇಸ್ರೇಲ್ನಲ್ಲಿ 3ರಿಂದ 14 ವರ್ಷದ ವಯಸ್ಸಿನವರು ಈ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಈ ಸೇವೆಯನ್ನು ಪಡೆಯುತ್ತಿದ್ದಾರೆ. ಇದರಲ್ಲಿ 7,609 ಗಂಡು ಮತ್ತು 1,961 ಹೆಣ್ಣು ಮಕ್ಕಳಿದ್ದಾರೆ. ಈ ಸಮಸ್ಯೆಯಿಂದ ಬಳಲುತ್ತಿರುವ ಹೆಚ್ಚಿನ ಮಂದಿ ಟೆಲ್ ಅವಿವಾ ಮತ್ತು ದಕ್ಷಿಣದಲ್ಲಿ ವಾಸಿಸುತ್ತಿದ್ದು, ದಕ್ಷಿಣದಲ್ಲಿ ಕಡಿಮೆ ಮಂದಿ ವಾಸಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಏನಿದು ಆಟಿಸಂ ಸಮಸ್ಯೆ?: ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ ಎಂಬುದು ನರ ವೈಜ್ಞಾನಿಕ ಅಸಹಜತೆಯ ಸಮಸ್ಯೆ. ಇದರಿಂದ ಬಳಲುತ್ತಿರುವವರು ಸಂವಹನ ಕೊರತೆ ಎದುರಿಸುತ್ತಾರೆ. ಮಗು ಜನಿಸಿದ ಮೂರು ವರ್ಷದೊಳಗೆ ಈ ಸಮಸ್ಯೆ ಬೆಳಕಿಗೆ ಬರುತ್ತದೆ. ಇಂಥ ಅಸ್ವಸ್ಥತೆಯಿಂದ ಮಗು ಜೀವನ ಪರ್ಯಂತ ಸಮಸ್ಯೆ ಅನುಭವಿಸುವಂತೆ ಆಗುತ್ತದೆ. ಪುರುಷರು ಮತ್ತು ಮಹಿಳೆ ಇಬ್ಬರಲ್ಲೂ ಇದು ಕಂಡುಬರುತ್ತದೆ. ಇದಕ್ಕೆ ಪರಿಸರದ ಜತೆಗೆ ಆನುವಂಶೀಯತೆ ಕೂಡ ಕಾರಣ.
ಚಿಕಿತ್ಸೆ: ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ ಸಮಸ್ಯೆ ಹೊಂದಿರುವವರಿಗೆ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲ. ಮಕ್ಕಳಲ್ಲಿ ಈ ರೋಗ ನಿರೀಕ್ಷಿತ ಮತ್ತು ಅನಿರೀಕ್ಷಿತ ಬದಲಾವಣೆ ಕಾಣಬಹುದು. ಆಟಿಸಂ ಸ್ಪೆಕ್ಟ್ರಮ್ ಅಸ್ವಸ್ಥತೆಯ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಈ ಆರೋಗ್ಯ ಸಮಸ್ಯೆಗೆ ಔಷಧಿ, ವರ್ತನೆಯ ಶಿಕ್ಷಣ ಮತ್ತು ಸಾಮಾಜಿಕ ಸಂವಹನ ಕೌಶಲ್ಯಗಳ ಮೂಲಕ ಆಟಿಸಂ ಚಿಕಿತ್ಸೆ ನೀಡಬಹುದು.(ಎಎನ್ಐ)
ಇದನ್ನೂ ಓದಿ: ಎಡಿಎಚ್ಡಿ ಹೊಂದಿರುವ ಮಕ್ಕಳಿಗೆ ಔಷಧದ ಜತೆಗೆ ಬೇಕು ಮಾನಸಿಕ ಚಿಕಿತ್ಸೆ