Is Dates Good for Diabetes Patients: ಖರ್ಜೂರದ ಹಣ್ಣು ಕಂಡರೆ ಬಾಯಲ್ಲಿ ನೀರು ಬರುವುದು ಸಾಮಾನ್ಯವಾಗಿದೆ. ಇದು ಟೇಸ್ಟಿ ಮಾತ್ರವಲ್ಲ ಆರೋಗ್ಯಕರವೂ ಆಗಿದೆ. ಖರ್ಜೂರದಲ್ಲಿರುವ ಪೋಷಕಾಂಶಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಅದಕ್ಕಾಗಿಯೇ ಅನೇಕ ಜನರು ಅವುಗಳನ್ನು ತಿಂಡಿಗಳಾಗಿ ಸೇವಿಸುತ್ತಾರೆ. ಆದರೆ, ಬಹುತೇಕರಿಗೆ ಖರ್ಜೂರ ಅಂದ್ರೆ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಆದ್ರೆ, ಸಕ್ಕರೆ ಕಾಯಿಲೆ ಇವವರು ಖರ್ಜೂರ ತಿನ್ನಲು ಬಹಳಷ್ಟು ಯೋಚಿಸುತ್ತಾರೆ. ಏಕೆಂದರೆ ಖರ್ಜೂರ ನೈಸರ್ಗಿಕವಾಗಿ ಸಕ್ಕರೆಯನ್ನು ಹೊಂದಿರುತ್ತವೆ. ಈ ಸಕ್ಕರೆಯಿಂದಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಮಧುಮೇಹಿಗಳು ಖರ್ಜೂರ ತಿನ್ನಬಹುದೇ ಅಥವಾ ಇಲ್ಲವೇ? ತಿಳಿಯೋಣ.
ಮಧುಮೇಹಿಗಳು ಖರ್ಜೂರವನ್ನು ತಿನ್ನಬಹುದೇ?: ಖರ್ಜೂರವು ಸ್ವಾಭಾವಿಕವಾಗಿ ಸಿಹಿಯಾಗಿರುತ್ತದೆ. ಮತ್ತು ಅನೇಕ ಜನರು ಅವುಗಳನ್ನು ಸಕ್ಕರೆಯ ಬದಲಿಗೆ ತೆಗೆದುಕೊಳ್ಳುತ್ತಾರೆ. ಸಕ್ಕರೆ ಕಾಯಿಲೆ ಇರುವ ರೋಗಿಗಳೂ ಖರ್ಜೂರ ತಿನ್ನಬಹುದು ಎನ್ನುತ್ತಾರೆ ತಜ್ಞರು. ಇತರ ಆಹಾರಗಳಿಗೆ ಹೋಲಿಸಿದರೆ, ಖರ್ಜೂರವು ಕಡಿಮೆ ಗ್ಲೈಸೆಮಿಕ್ ಸೂಚಿ ಹೊಂದಿರುತ್ತದೆ. ಖರ್ಜೂರದಲ್ಲಿ ಫೈಬರ್ ಸಮೃದ್ಧವಾಗಿದೆ ಎಂದು ಹೇಳಲಾಗುತ್ತದೆ. ಇವು ರಕ್ತದಲ್ಲಿನ ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತವೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದನ್ನು ತಡೆಯುತ್ತದೆ ಎಂದು ವಿವರಿಸಲಾಗಿದೆ (ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ರಿಪೋರ್ಟ್). ಆದರೆ, ಹೆಚ್ಚು ತೆಗೆದುಕೊಳ್ಳುವುದಕ್ಕಿಂತಲೂ ಮಿತವಾಗಿ ಸೇವಿಸುವುದು ತುಂಬಾ ಒಳ್ಳೆಯದು ವೈದ್ಯರು ಸೂಚಿಸುತ್ತಾರೆ.
ಜರ್ನಲ್ ಆಫ್ ಆಯುರ್ವೇದ ಮತ್ತು ಇಂಟಿಗ್ರೇಟಿವ್ ಮೆಡಿಸಿನ್‌ನಲ್ಲಿ ಪ್ರಕಟವಾದ 2018ರ ಅಧ್ಯಯನವು, 12 ವಾರಗಳ ಕಾಲ ಖರ್ಜೂರವನ್ನು ಸೇವಿಸುವುದರಿಂದ ಟೈಪ್-2 ಡಯಾಬಿಟಿಸ್ ಇರುವವರಲ್ಲಿ ರಕ್ತದಲ್ಲಿನ ಸಕ್ಕರೆ ಮತ್ತು HbA1c ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಕಂಡು ಹಿಡಿದಿದೆ. ಬಾಂಗ್ಲಾದೇಶದ ಢಾಕಾದಲ್ಲಿರುವ ಬಂಗಬಂಧು ಶೇಖ್ ಮುಜಿಬ್ ವೈದ್ಯಕೀಯ ವಿಶ್ವವಿದ್ಯಾಲಯದ ಬಯೋಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕ ಡಾ. ಮೊಹಮ್ಮದ್ ಎಂ. ಅಲ್-ಮಾಮುನ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ಇವುಗಳಲ್ಲದೇ ಖರ್ಜೂರವನ್ನು ತಿನ್ನುವುದರಿಂದ ಇನ್ನೂ ಅನೇಕ ಪ್ರಯೋಜನಗಳಿವೆ.
ಖರ್ಜೂರದಿಂದ ದೊರೆಯುವ ಪ್ರಯೋಜನಗಳೇನು?:
ತ್ವರಿತ ಶಕ್ತಿ: ಖರ್ಜೂರದಲ್ಲಿರುವ ಗ್ಲೂಕೋಸ್, ಫ್ರಕ್ಟೋಸ್ ಮತ್ತು ಸುಕ್ರೋಸ್ ಕಾರ್ಬೋಹೈಡ್ರೇಟ್‌ಗಳನ್ನು ರೂಪಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ತುಂಬಾ ದಣಿದ ನಂತರ ಮತ್ತು ವರ್ಕ್ ಔಟ್ ಆದ ನಂತರ ಇವುಗಳನ್ನು ತಿಂದರೆ ತ್ವರಿತ ಶಕ್ತಿ ಬರುತ್ತದೆ ಎಂದು ವಿವರಿಸಲಾಗಿದೆ.
ಮೂಳೆಗಳ ಆರೋಗ್ಯಕ್ಕೆ ಉತ್ತಮ: ಕ್ಯಾಲ್ಸಿಯಂ, ಮೆಗ್ನೀಷಿಯಂ, ತಾಮ್ರ ಸೇರಿದಂತೆ ವಿವಿಧ ಖನಿಜಗಳು ಈ ಖರ್ಜೂರದಲ್ಲಿ ಹೇರಳವಾಗಿವೆ. ಮೂಳೆಗಳು ಮತ್ತು ಹಲ್ಲುಗಳನ್ನು ಬಲವಾಗಿಡಲು ಕ್ಯಾಲ್ಸಿಯಂ ಅನ್ನು ಸೂಚಿಸಲಾಗುತ್ತದೆ. ಕೆಂಪು ರಕ್ತ ಕಣಗಳ ಉತ್ಪಾದನೆಗೆ ತಾಮ್ರ. ಮೆಗ್ನೀಸಿಯಮ್ ಮೂಳೆಗಳ ಆರೋಗ್ಯಕ್ಕೆ ಉಪಯುಕ್ತವಾಗಿದೆ.
ತೂಕ ಇಳಿಸಲು ಪೂರಕ: ಖರ್ಜೂರದಲ್ಲಿ ಕೊಲೆಸ್ಟ್ರಾಲ್ ಮತ್ತು ಕ್ಯಾಲೋರಿಗಳು ಕಡಿಮೆ ಮತ್ತು ಹೆಚ್ಚಿನ ಪ್ರೋಟೀನ್ ಇರುತ್ತದೆ. ಹಾಗಾಗಿ ಇವುಗಳನ್ನು ತಿಂದರೆ ಬಹುಕಾಲ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಆದರೆ, ಇವು ತೂಕ ಇಳಿಸಲು ಮಾತ್ರವಲ್ಲ, ತುಂಬಾ ತೆಳ್ಳಗಿರುವವರಿಗೆ ಮತ್ತು ತೂಕ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ.
ಮಲಬದ್ಧತೆ: ಖರ್ಜೂರದಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಮಲಬದ್ಧತೆ, ಅಸಿಡಿಟಿಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಮಲಬದ್ಧತೆಯಿಂದ ಬಳಲುತ್ತಿರುವವರು ಕೆಲವು ಖರ್ಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಬೇಗನೆ ತಿನ್ನಲು ಮತ್ತು ನೀರನ್ನು ಕುಡಿಯಲು ಸಲಹೆ ನೀಡಲಾಗುತ್ತದೆ.
ಕ್ಯಾನ್ಸರ್ನಿಂದ ರಕ್ಷಣೆ: ಬೀಟಾ ಕೆರಾಟಿನ್, ಲುಟೀನ್ ಮತ್ತು ಝಿಯಾಕ್ಸಾಂಥಿನ್ ಸ್ವಾದದ ಆಂಟಿಆಕ್ಸಿಡೆಂಟ್‌ಗಳು ಸ್ವತಂತ್ರ ರಾಡಿಕಲ್‌ಗಳನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಅವು ಕೊಲೊನ್, ಪ್ರಾಸ್ಟೇಟ್, ಸ್ತನ, ಎಂಡೊಮೆಟ್ರಿಯಲ್, ಶ್ವಾಸಕೋಶ ಮತ್ತು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ಗಳಿಂದ ಸ್ವಲ್ಪ ಮಟ್ಟಿಗೆ ರಕ್ಷಿಸುತ್ತವೆ. ಝೀಕ್ಸಾಂಥಿನ್ ವೃದ್ಧಾಪ್ಯದಲ್ಲಿ ರೆಟಿನಾದ ಮ್ಯಾಕ್ಯುಲರ್ ಡಿಜೆನರೇಶನ್ ಅನ್ನು ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ.
ಹೃದಯಕ್ಕೆ ಒಳ್ಳೆಯದು: ಜೀವಕೋಶಗಳಿಗೆ ಪೊಟ್ಯಾಸಿಯಮ್ ಅತ್ಯಗತ್ಯ. ಖರ್ಜೂರದಲ್ಲಿ ಸಮೃದ್ಧವಾಗಿದೆ. ಹೊಟ್ಟೆ, ಹೃದಯ ಮತ್ತು ರಕ್ತದೊತ್ತಡದಲ್ಲಿನ ದ್ರವಗಳ ನಿಯಂತ್ರಣಕ್ಕೆ ಪೊಟ್ಯಾಸಿಯಮ್ ಕೊಡುಗೆ ನೀಡುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ, ಖರ್ಜೂರವು ಹೃದಯ ಮತ್ತು ಮೆದುಳಿನಂತಹ ಪ್ರಮುಖ ಅಂಗಗಳಿಗೆ ತುಂಬಾ ಪ್ರಯೋಜನವಾಗಿದೆ.
ಮೂತ್ರಪಿಂಡದ ಕಲ್ಲು ಕರಗಿಸುತ್ತೆ: ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ನಿಯಮಿತವಾಗಿ ಖರ್ಜೂರವನ್ನು ತಿನ್ನಲು ತಜ್ಞರು ಸಲಹೆ ನೀಡುತ್ತಾರೆ. ಅಲ್ಲದೆ, ಕೆಲವರಿಗೆ ಮೂತ್ರ ವಿಸರ್ಜನೆ, ಮೂತ್ರನಾಳದ ಸೋಂಕು ಇತ್ಯಾದಿ ಸಮಸ್ಯೆಗಳಿರುತ್ತವೆ. ಖರ್ಜೂರ ತಿನ್ನುವುದರಿಂದ ಇವೆಲ್ಲವೂ ಕಡಿಮೆಯಾಗುತ್ತವೆ ಎನ್ನುತ್ತಾರೆ ವೈದ್ಯರು.
ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್ಸೈಟ್ಗೆ ಸಂಪರ್ಕಿಸಬಹುದು: National Library of Medicine Report: https://www.ncbi.nlm.nih.gov/pmc/articles/PMC8281151/
ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.