ETV Bharat / health

ಬೆಂಬಿಡದೇ ಕಾಡುವ ಬೆನ್ನುನೋವು ನಿವಾರಣೆಗೆ ಮನೆಯಲ್ಲೇ ಮಾಡಿ ಈ ವ್ಯಾಯಾಮ; ನೋವೆಲ್ಲ ಮಂಗಮಾಯ! - Exercises For Back And Spinal Cord

ದೇಹವನ್ನು ಬಲಗೊಳಿಸುವಲ್ಲಿ ವ್ಯಾಯಾಮ ಅಗತ್ಯವಾಗಿದೆ. ಅದರಲ್ಲೂ ಬೆನ್ನು ನೋವಿನ ನಿವಾರಣೆಯಲ್ಲಿನ ವ್ಯಾಯಾಮದ ಪರಿಣಾಮ ಕುರಿತ ಮಾಹಿತಿ ಇಲ್ಲಿದೆ.

is-back-pain-bothering-you-big-relief-with-these-5-exercises-at-home
is-back-pain-bothering-you-big-relief-with-these-5-exercises-at-home (ಮನೆಯಲ್ಲೇ ಮಾಡಿ ಈ ವ್ಯಾಯಾಮ)
author img

By ETV Bharat Karnataka Team

Published : May 13, 2024, 5:56 PM IST

ಹೈದರಾಬಾದ್​: ಇಂದಿನ ಡಿಜಿಟಲ್​ ಜಗತ್ತಿನಲ್ಲಿ ಬಹುತೇಕರಿಗೆ ಕಾಡುತ್ತಿರುವ ಸಮಸ್ಯೆ ಬೆನ್ನು ನೋವು. ನಿತ್ಯ ನಡೆಸುವ ನಿಯಮಿತ ವ್ಯಾಯಾಮಗಳು ನಿಮ್ಮ ಬೆನ್ನನ್ನು ಬಲಗೊಳಿಸುತ್ತದೆ. ಸಕ್ರಿಯವಾಗಿ ಮತ್ತು ದೈನಂದಿನ ವ್ಯಾಯಾಮ ಚಟುವಟಿಕೆಯು ದೇಹವನ್ನು ಬಲಗೊಳಿಸಿ, ತೊಂದರೆ ಮುಕ್ತವಾಗಿಸುತ್ತದೆ. ವ್ಯಾಯಾಮ ಎಂಬುದು ಸ್ನಾಯುವನ್ನು ಸರಿಯಾದ ಆಕಾರದಲ್ಲಿ ತರುವ ನಿಟ್ಟಿನಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ. ಆದರೆ, ಬಹುತೇಕರು ಈ ವ್ಯಾಯಾಮ ಮಾಡಲು ಸೋಮಾರಿಯಾಗುತ್ತಾರೆ. ನೀವು ಇದನ್ನು ಮಾಡಿಲ್ಲ ಎಂದರೆ ನಿಮ್ಮ ಬೆನ್ನಿನ ಪ್ರಮುಖ ಭಾಗವನ್ನು ಹಾನಿ ಮಾಡಿಕೊಳ್ಳುತ್ತೀರಾ ಅಂತಾನೇ ಅರ್ಥ. ಸಣ್ಣ ಸಮಸ್ಯೆ ಕೂಡ ಬೆನ್ನು ನೋವಿನಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಜೊತೆಗೆ ಇದು ಜಿಮ್​ ಮತ್ತು ಫಿಟ್​ನೆಸ್​ ಕ್ಲಬ್​ ಮೇಲೆ ಹಣ ಸುರಿಯುವಂತೆ ಮಾಡುತ್ತದೆ. ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ಬೆನ್ನು ನೋವಿನ ಸಮಸ್ಯೆ ತಪ್ಪಿಸಿ, ಅದನ್ನು ಬಲಗೊಳಿಸಲು ಮನೆಯಲ್ಲಿಯೇ ಈ ಸಣ್ಣ ವ್ಯಾಯಾಮ ಮಾಡುವುದು ಸೂಕ್ತ.

ಡೆಡ್​ಲಿಫ್ಟ್​​: ದೇಹದ ಎಲ್ಲ ಭಾಗದ ಸುಧಾರಣೆಯಲ್ಲಿ ಈ ವ್ಯಾಯಾಮ ಪ್ರಮುಖ ಪಾತ್ರವಹಿಸುತ್ತದೆ. ಇದು ಬೆನ್ನನ್ನು ಬಲವಾಗಿರಿಸಿ, ಬೆನ್ನುನೋವನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ದೀರ್ಘಕಾಲ ಕುಳಿತುಕೊಳ್ಳುವರರಿಗೆ ಇದು ಪ್ರಯೋಜನಕಾರಿಯಾಗಿದೆ.

ಪುಷ್​ ಅಪ್​: ಅನೇಕ ಬಗೆಯ ಪುಷ್​ ಅಪ್​ಗಳಿವೆ. ಆದರೆ, ಇದು ದೇಹದ ಎಲ್ಲ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಈ ವ್ಯಾಯಾಮ ವಿಶೇಷವಾಗಿ ಬೆನ್ನು, ಭುಜ, ಮೊಣಕೈ ಮತ್ತು ಹೊಟ್ಟೆ ಸ್ನಾಯುವನ್ನು ಬಲಗೊಳಿಸುತ್ತದೆ. ನಿಮ್ಮ ದೇಹವನ್ನು ಸರಿಯಾದ ಆಕಾರದಲ್ಲಿಡಲು ಹೆಚ್ಚಿನ ಪ್ರಯೋಜನ ನೀಡುವ ವ್ಯಾಯಾಮವಾಗಿದೆ.

ಪ್ಲಾಂಕ್ಸ್​: ಮನೆಯಲ್ಲಿ ಮಾಡಬಹುದಾದ ವ್ಯಾಯಾಮ ಇದಾಗಿದ್ದು, ಫಿಟ್ನೆಸ್​​ ಉತ್ಸಾಹಿಗಳಿಗೆ ಹೇಳಿ ಮಾಡಿಸಿದ ವ್ಯಾಯಾಮವಾಗಿದೆ. ಇದು ಬೆನ್ನಿನ ಜೊತೆಗೆ ನಿಮ್ಮ ಭಂಗಿಯನ್ನು ಯಾವುದೇ ಸಾಧನವಿಲ್ಲದೇ ಸುಧಾರಣೆ ಮಾಡಿ ಬಲಗೊಳಿಸುತ್ತದೆ.

ಬಲದ ಜೊತೆಗೆ ಮುಂದಕ್ಕೆ ತಳ್ಳುವುದು: ಇದು ಸಂಪೂರ್ಣವಾಗಿ ಬೆನ್ನಿಗೆ ಸಂಬಂಧಿಸಿದ ವ್ಯಾಯಾಮವಾಗಿದೆ. ಮೊದಲಿಗೆ ಇದು ಮೇಲ್ಬಾದ ನಂತರ ಕೆಳಭಾಗದ ಬೆನ್ನನ್ನು ಬಲವಾಗಿಸುತ್ತದೆ. ಇದು ಕೂಡ ದೇಹದ ಭಂಗಿಗಳ ಸುಧಾರಣೆ ಜೊತೆಗೆ ದೇಹವನ್ನು ಉತ್ತಮ ಆಕಾರದಲ್ಲಿಡಲು ಸಹಾಯ ಮಾಡುತ್ತದೆ.

ಪುಲ್​ ಅಪ್ಸ್​​: ಇದು ಕೂಡ ನಿತ್ಯದ ಉತ್ತಮ ವ್ಯಾಯಾಮವಾಗಿದೆ. ಇದು ದೇಹದ ಎಲ್ಲ ಭಾಗದ ಸ್ನಾಯುವನ್ನು ಸುಧಾರಣೆ ಮಾಡುವ ಭಂಗಿಯನ್ನು ಸುಧಾರಿಸುತ್ತದೆ. ಸ್ನಾಯುವನ್ನು ಉತ್ತಮ ಆಕಾರಕ್ಕೆ ತರಲು ಕೂಡಾ ಸಹಾಯ ಮಾಡುತ್ತದೆ.

ನಿತ್ಯ ಬೆಳಗ್ಗೆ ಸಾಧ್ಯಾವಾದರೆ ಸಂಜೆ ಸಮಯದಲ್ಲಿ ನಮ್ಮ ದೇಹಕ್ಕೆ ವ್ಯಾಯಾಮ ಮಾಡಲು ಅನುವು ಮಾಡಿಕೊಟ್ಟರೆ, ಇದು ಯಾವುದೇ ಸಮಸ್ಯೆಗಳಿಲ್ಲದೇ ನಮ್ಮನ್ನು ಆರೋಗ್ಯಯುತವಾಗಿರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ದೀರ್ಘಕಾಲ ಕುಳಿತುಕೊಳ್ಳುವವರಿಗೆ ಇದು ಸಹಾಯ ಮಾಡಲಿದೆ.

ಓದುಗರ ಗಮನಕ್ಕೆ: ಈ ಮೇಲಿನ ಎಲ್ಲ ಆರೋಗ್ಯ ಮಾಹಿತಿ ವೈದ್ಯಕೀಯ ಸಲಹೆಗಳು, ವೈಜ್ಞಾನಿಕ ಸಂಶೋಧನೆ ಅಧ್ಯಯನ, ಆರೋಗ್ಯ ವೃತ್ತಿಪರರ ಸಲಹೆಗಳನ್ನು ಆಧರಿಸಿ ನೀಡಲಾಗಿದ್ದು, ಇವುಗಳನ್ನು ಮಾಡುವ ಮುನ್ನ ನುರಿತ ತಜ್ಞರ ಸಲಹೆ ಪಡೆದು ಮಾಡುವುದು ಉತ್ತಮ.

ಇದನ್ನೂ ಓದಿ: ಪೋಷಕಾಂಶ ಕೊರತೆ, ಸ್ಥೂಲಕಾಯ, ಮಧುಮೇಹ ತಪ್ಪಿಸಲು ಈ ಆಹಾರ ಬೆಸ್ಟ್​; ಐಸಿಎಂಆರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.