ETV Bharat / health

ಸೋಶಿಯಲ್ ಮೀಡಿಯಾದಿಂದ ಯುವತಿಯರ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ - Tech Driven Disorders

author img

By ETV Bharat Karnataka Team

Published : Aug 8, 2024, 4:47 PM IST

ಮಾಹಿತಿ ತಂತ್ರಜ್ಞಾನದ ಬೆಳವಣಿಗೆ, ಅದರಲ್ಲೂ ವಿಶೇಷವಾಗಿ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್​ ಸಂವಹನದ ಹೆಚ್ಚಳ ಯುವತಿಯರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತಿದೆ.

increased use of Social media affecting mental health of young girls
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ಸಾಮಾಜಿಕ ಮಾಧ್ಯಮಗಳ ಅತೀ ಹೆಚ್ಚಿನ ಬಳಕೆ ಮತ್ತು ಡಿಜಿಟಲ್​ ಸಂವಹನಗಳು ಯುವಕರಿಗಿಂತ ಯುವತಿಯರ ಮಾನಸಿಕ ಆರೋಗ್ಯದ ಮೇಲೆ ಗಣನೀಯ ಪರಿಣಾಮ ಬೀರುತ್ತಿವೆ ಎಂದು ತಜ್ಞರು ತಿಳಿಸಿದ್ದಾರೆ.

ಬಾಲ್ಯ ಮತ್ತು ಹದಿವಯಸ್ಸಿನ ಗುಂಪಿನಲ್ಲಿ ಇದು ವೈಯಕ್ತಿಕ ಬದಲಾವಣೆಗೆ ಕಾರಣವಾಗುತ್ತಿದೆ. ಅವರು 20ನೇ ವಯಸ್ಸಿಗೆ ತಲುಪುವ ಮುನ್ನವೇ ನಿಧಾನವಾಗಿ ಈ ಬೆಳವಣಿಗೆ ಹೊಂದುತ್ತಿದ್ದಾರೆ ಎಂದಿದ್ದಾರೆ.

ತಂತ್ರಜ್ಞಾನ ಅಭಿವೃದ್ಧಿ 15ರಿಂದ 25 ವರ್ಷದವರ ಮೇಲೆ ಮಾನಸಿಕ ಆರೋಗ್ಯದ ದುರ್ಬಲತೆಯ ಸವಾಲು ಹೆಚ್ಚಿಸುತ್ತದೆ. ಮಾಹಿತಿ ತಂತ್ರಜ್ಞಾನದ ಬೆಳವಣಿಗೆ, ವಿಶೇಷವಾಗಿ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್​ ಸಂವಹನದ ಹೆಚ್ಚಳ ಗಂಭೀರ ಪ್ರಭಾವ ಬೀರುತ್ತದೆ ಎಂದು ಫರೀದಾಬಾದ್​ನ ಅಮೃತಾ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ರಾಕೇಶ್​ ಕೆ.ಚಡ್ಡಾ ತಿಳಿಸಿದರು.

ತಂತ್ರಜ್ಞಾನದ ಅತಿಯಾದ ಬಳಕೆ ದೈನಂದಿನ ಅಭ್ಯಾಸವಾಗಿರುವ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮಕ್ಕೆ ಕಡಿವಾಣ ಹಾಕುತ್ತದೆ. ಇದರ ಜೊತೆಗೆ, ನಿದ್ರಾ ಸಮಯ ಮತ್ತು ಅವಧಿಗೆ ಭಂಗ ತರುತ್ತದೆ. ಮುಖಾಮುಖಿ ಸಂವಹನವನ್ನೂ ಇದು ತಗ್ಗಿಸುತ್ತದೆ.

ಭಾವನಾತ್ಮಕ ಅನಿಯಂತ್ರಿತ ವ್ಯಕ್ತಿತ್ವ ಅಸ್ವಸ್ಥತೆ (ಇಯುಪಿಡಿ) ಎಂಬ ಬಾರ್ಡರ್​ಲೈನ್​ ಪರ್ಸನಾಲಿಟಿ ಡಿಸಾರ್ಡರ್ (ಬಿಪಿಡಿ) ಎಂಬುದು ಯುವಜನತೆಯಲ್ಲಿ ಕಳೆದೊಂದು ದಶಕದಿಂದ ಗಮನಾರ್ಹ ಪ್ರಮಾಣದಲ್ಲಿ ಏರುತ್ತಿದೆ. ಅದರಲ್ಲೂ, ಪುರಷರಿಗಿಂತ ಮಹಿಳೆಯರಲ್ಲಿ ಈ ದರ ಜಾಸ್ತಿ ಎಂದರು.

ಈ ರೀತಿಯ ಸಮಸ್ಯೆಗಳಿಗೆ ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗದೇ ಹೋದಲ್ಲಿ ಸಾಮಾಜಿಕ ಮತ್ತು ವೃತ್ತಿಪರ ಕಾರ್ಯಾಚರಣೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಖಿನ್ನತೆ, ಆತಂಕ, ಆತ್ಮಹತ್ಯೆ ಅಪಾಯದಂತಹ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಬಲ್ಲದು ಎಂದು ಎಚ್ಚರಿಸಿದ್ದಾರೆ.

ಆಲ್ಕೋಹಾಲ್​ ಮತ್ತು ಡ್ರಗ್ಸ್​​ಗಳಂತಹ ಮಾದಕ ವಸ್ತುಗಳ ಅಭ್ಯಾಸ 15ರಿಂದ 25 ವರ್ಷದ ಯುವಜನತೆಯಲ್ಲಿ ಏರುತ್ತಿದೆ. ಯುವಕರಲ್ಲಿ ಇಂಥ ಸಮಸ್ಯೆಗಳು ಕಂಡುಬಂದರೆ, ಯುವತಿಯರಲ್ಲಿ ಖಿನ್ನತೆಯಂತಹ ತಡೆಗಟ್ಟಬಹುದಾದ ಸಮಸ್ಯೆಗಳು ಕಾಣಬಹುದು. ಸ್ವಯಂ ಹಾನಿ ಮತ್ತು ಆತಂಕದಂತಹ ಸಮಸ್ಯೆಗಳು ಯುವತಿಯರಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿವೆ.

ಇತ್ತೀಚಿಗೆ, ಏಪ್ರಿಲ್​ನಲ್ಲಿ ಪ್ರಕಟವಾದ ಇಂಡಿಯನ್​ ಜರ್ನಲ್​ ಆಫ್​ ಸೈಕಿಯಾಟ್ರಿಕ್​ ಅಧ್ಯಯನದ ಪ್ರಕಾರ, ಕಾಲೇಜು ವಿದ್ಯಾರ್ಥಿಗಳಲ್ಲಿ ಶೇ 22ರಷ್ಟು ಪ್ರಮಾಣದಲ್ಲಿ ಬಿಪಿಡಿ ಸಮಸ್ಯೆ ಕಂಡುಬಂದಿದೆ. 2019ರ ಅಂದಾಜಿಗೆ ಹೋಲಿಸಿದಾಗ ಇದು ಶೇ 15ರಷ್ಟು ಸಮಸ್ಯೆ ಕಾಣುತ್ತದೆ. ಈ ದತ್ತಾಂಶಗಳು ಭಾರತದಲ್ಲಿ ಬಿಪಿಡಿ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ. ಬಿಪಿಡಿ ಪ್ರಕರಣಗಳ ಕ್ಲಿನಿಕಲ್​ ಸಮಸ್ಯೆಗಳೂ ಕೂಡ ಹೆಚ್ಚುತ್ತಿವೆ.

ನಿಂದನೆ, ಆರ್ಥಿಕ ವಂಚನೆ, ಅಸಂಬದ್ಧ ವಿಷಯಗಳಿಗೆ ತೆರೆದುಕೊಳ್ಳುವಿಕೆಯಂತಹ ಸೈಬರ್​ ಅಪರಾಧಗಳ ಅಪಾಯವೂ ಯುವಜನತೆಯಲ್ಲಿ ಹೆಚ್ಚುತ್ತಿದೆ. ಸೈಬರ್​ ನಿಂದನೆಗಳು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ಗಮನಾರ್ಹ.

ಈ ನಿಟ್ಟಿನಲ್ಲಿ ಆರೋಗ್ಯಯುತ ಜೀವನಶೈಲಿಗೆ ಒತ್ತು ನೀಡುವುದರೊಂದಿಗೆ ಪೋಷಕರು, ಶಿಕ್ಷಕರು ಮತ್ತು ನೀತಿ ನಿರೂಪಕರು ಮಧ್ಯಸ್ಥಿಕೆವಹಿಸಬೇಕು ಎಂಬುದು ತಜ್ಞರ ಸಲಹೆ. (ಐಎಎನ್​ಎಸ್​)

ಇದನ್ನೂ ಓದಿ: ಭಾರತದಲ್ಲಿ ಟ್ರಿಲಿಯನ್​ಗಟ್ಟಲೇ ವೀಕ್ಷಣೆ ಪಡೆದುಕೊಳ್ಳುತ್ತಿದೆ ಯೂಟ್ಯೂಬ್​ ಶಾರ್ಟ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.