ETV Bharat / health

ನೈಸರ್ಗಿಕವಾಗಿಯೇ ಮುಖದಲ್ಲಿನ ಅನಗತ್ಯ ಕೂದಲು ತೆಗೆಯಲು ಇಲ್ಲಿದೆ ಉಪಾಯ! - HOME REMEDIES TO REMOVE FACIAL HAIR - HOME REMEDIES TO REMOVE FACIAL HAIR

ಬೇಡವಾದ ಜಾಗದಲ್ಲಿ ಕೂದಲು ಬೆಳೆದರೆ ಅದು ಮಹಿಳೆಯರ ಸೌಂದರ್ಯಕ್ಕೆ ಅಡ್ಡಿಯಾಗುವುದರ ಜೊತೆಗೆ ಮುಜುಗರ ತರುತ್ತದೆ. ಅದರಲ್ಲೂ ಮುಖದ ಮೇಲೆ ಅನಗತ್ಯವಾಗಿ ಬೆಳೆಯುವ ಕೂದಲಿಗೆ ವಾಕ್ಸಿಂಗ್​ ಬದಲು ಮನೆಯಲ್ಲಿಯೇ ಸುಲಭ ಉಪಾಯದ ಮೂಲಕ ಮುಕ್ತಿ ನೀಡಬಹುದು..

how-to-remove-facial-hair-in-natural-process-in-home
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Jun 24, 2024, 4:27 PM IST

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಹಾರ್ಮೋನ್​ ಬದಲಾವಣೆಗಳಿಂದ ಮಹಿಳೆಯರು ಅನಗತ್ಯ ಕೂದಲಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಪರಿಣಾಮ ತುಟಿ ಮೇಲೆ ಮತ್ತು ಗದ್ದದ ಮೇಲೆ ಕೂದಲು ಬೆಳೆಯುತ್ತಿದೆ. ಇದು ಅವರ ಸೌಂದರ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಇದನ್ನು ತೆಗೆಯುವುದು ಅನೇಕ ಬಾರಿ ಕಷ್ಟವಾಗಿ ಪರಿಣಮಿಸುತ್ತದೆ. ವಾಕ್ಸಿಂಗ್​ ಮೊರೆ ಹೋದರೂ ಇದು ಸುಲಭದ ಪ್ರಯಾಣವಲ್ಲ. ಇದರಿಂದ ಅಲರ್ಜಿ, ತ್ವಚೆಯಲ್ಲಿ ದದ್ದು, ಕೆರೆತ ಮತ್ತು ನೋವು ಉಂಟಾಗುತ್ತದೆ. ಈ ರೀತಿ ಸಮಸ್ಯೆಯನ್ನು ನೀವು ಅನುಭವಿಸುತ್ತಿದ್ರೆ ಅದಕ್ಕೆ ಪರಿಹಾರ ಮಾರ್ಗವಿದೆ. ಈ ನೈಸರ್ಗಿಕ ವಿಧಾನಗಳ ಮೂಲಕ ಈ ಕೂದಲಿನ ಸಮಸ್ಯೆಗೆ ಮುಕ್ತಿ ಕಂಡುಕೊಳ್ಳಬಹುದು.

ಸಕ್ಕರೆ ಮತ್ತು ನಿಂಬೆ ಜ್ಯೂಸ್​: ಎರಡು ಟೇಬಲ್​ ಸ್ಪೂನ್​ ಸಕ್ಕರೆಗೆ 10 ಟೇಬಲ್​ ಸ್ಪೂನ್​ ನಿಂಬೆ ರಸವನ್ನು ಬೌಲ್​ಗೆ ಹಾಕಿ. ಇದನ್ನು ಚೆನ್ನಾಗಿ ಕುದಿಸಿ, ಅದು ಗಟ್ಟಿಯಾಗುವಂತೆ ಮಾಡಿ. ತಣ್ಣಗೆ ಆದ ಬಳಿಕ ಇದನ್ನು ಮುಖದಲ್ಲಿರುವ ಕೂದಲಿನ ಪ್ರದೇಶಕ್ಕೆ ಹಚ್ಚಿ. 20 ನಿಮಿಷದ ನಂತರ ವೃತ್ತಾಕಾರವಾಗಿ ಉಜ್ಜಿ, ತೆಗೆಯಿರಿ.

ಕಾರ್ನ್​ಸ್ಟ್ರಾಚ್​: ಇದಕ್ಕೆ ಕೂಡ ಎರಡು ಟೇಬಲ್​ಸ್ಪೂನ್​ ಸಕ್ಕರೆ ಮತ್ತು ನಿಂಬೆ ರಸವನ್ನು ಬೆರೆಸಿ ಅದಕ್ಕೆ ಜೇನುತುಪ್ಪ ಬೆರಸಿ ಮಿಕ್ಸ್​ ಮಾಡಿ. ಅದನ್ನು ಐದು ನಿಮಿಷ ಬಿಸಿ, ಮಾಡಿ ದಪ್ಪ ಹದಕ್ಕೆ ರೂಪಿಸಿ. ಬಳಿಕ ತಣ್ಣಗಾದ ಕಾರ್ನ್​​ಸ್ಟ್ರಾಚ್​ ಅನ್ನು ಕೂದಲಿರುವ ಕಡೆ ಹಚ್ಚಿ, 30 ನಿಮಿಷಗಳ ಬಳಿಕ ವೃತ್ತಾಕಾರವಾಗಿ ಉಜ್ಜಿ, ಹತ್ತಿ ಬಟ್ಟೆಯಿಂದ ತೆಗೆಯಿರಿ.

ಬಾಳೆಹಣ್ಣಿನ ಜೊತೆಗೆ ಓಟ್​ಮಿಲ್​: ಕಳಿತ ಬಾಳೆ ಹಣ್ಣಿಗೆ ಎರಡು ಟೇಬಲ್​ಸ್ಪೂನ್​ ಓಟ್​ಮಿಲ್​ ಹಾಕಿ ಚೆನ್ನಾಗಿ ಪೇಸ್ಟ್​​ ರೀತಿ ಮಾಡಿ. ಬಳಿಕ ಕೂದಲಿರುವ ಸ್ಥಳದಲ್ಲಿ ಹಚ್ಚಿ, 15 ನಿಮಿಷ ಮಸಾಜ್​ ಮಾಡಿ. ನಂತರ ತಣ್ಣೀರಿನಿಂದ ತೊಳೆಯಿರಿ.

ಅರಿಶಿಣ ಪೇಸ್ಟ್​: ಅರಿಶಿಣವನ್ನು ಒಂದು ಬಟ್ಟಲಿಗೆ ಹಾಕಿ, ಅದಕ್ಕೆ ಸ್ವಲ್ಪ ನೀರು ಅಥವಾ ಹಾಲನ್ನು ಹಾಕಿ ಪೇಸ್ಟ್​ ರೀತಿ ಮಾಡಿ. ಬಳಿಕ ಇದನ್ನು ಕೂದಲಿರುವ ಸ್ಥಳದಲ್ಲಿ ಚೆನ್ನಾಗಿ ಹಚ್ಚಿ, ಉಜ್ಜಿ. 20 ನಿಮಿಷದ ಬಳಿಕ ಬೆಚ್ಚಗಿನ ನೀರಿನ ಸಹಾಯದಿಂದ ಮುಖ ತೊಳೆಯಿರಿ. ಇದರಿಂದ ಉತ್ತಮ ಫಲಿತಾಂಶ ಸಿಗಲಿದೆ.

2017ರಲ್ಲಿ ಪ್ರಕಟವಾದ ಜರ್ನಲ್​ ಆಫ್​ ಡರ್ಮಾಟಾಲಾಜಿ ಅಂಡ್​ ಕಾಸ್ಮೆಟಿಕ್​ ಡರ್ಮಾಟಾಲಾಜಿಯಲ್ಲಿ ಪ್ರಕಟವಾದ ಅಧ್ಯಯನ ಪ್ರಕಾರ, ಅರಿಶಿಣದ ಪ್ಯಾಕ್​ ಅನಗತ್ಯ ಕೂದಲನ್ನು ಪರಿಣಾಮಕಾರಿಯಾಗಿ ತೆಗೆಯಲು ಕಾರ್ಯನಿರ್ವಹಿಸುತ್ತದೆ. ದೆಹಲಿಯ ಜಾಮಿಯಾ ಹಮದ್ರ್​​ ಯೂನಿವರ್ಸಿಟಿಯ ಪ್ರಖ್ಯಾತ ಡರ್ಮಾಟಾಲಾಜಿಸ್ಟ್​ ಡಾ ಅಮಿತ್​ ಸಿಂಗ್ ಕೂಡ ಈ ಅಧ್ಯಯನದಲ್ಲಿ ಭಾಗಿಯಾಗಿದ್ದರು. ಅರಿಶಿಣದಲ್ಲಿರುವ ಉರಿಯೂತ ವಿರೋಧಿ ಗುಣವು ಅನಗತ್ಯ ಕೂದಲು ತೆಗೆಯುವಲ್ಲಿ ಸಹಾಯ ಮಾಡಲಿದೆ ಎನ್ನುತ್ತಾರೆ ಅವರು.

ಕಡಲೆಕಾಯಿ ಬೀಜ: ಒಂದು ಬಟ್ಟಲಿಗೆ ಒಂದು ಟೇಬಲ್​ ಸ್ಪೂನ್​ ಜೇನುತುಪ್ಪ, ನಿಂಬೆ ರಸ ಹಾಕಿ ಅದಕ್ಕೆ 5 ಚಮಚ ಆಲೂಗಡ್ಡೆ ರಸವನ್ನು ಸೇರಿಸಿ, ಬಳಿಕ ರಾತ್ರಿ ನೆನಸಿದ ಕಡಲೆಕಾಯಿ ಬೀಜವನ್ನು ಸೇರಿಸಿ, ಪೇಸ್ಟ್​ ಮಾಡಿ. ಎಲ್ಲವನ್ನು ಚೆನ್ನಾಗಿ ಕಲಿಸಿ, ಮುಖಕ್ಕೆ ಮಸಾಜ್​ ಮಾಡಿ. 30 ನಿಮಿಷದ ಬಳಿಕ ತಣ್ಣೀರಿನಿಂದ ತೊಳೆಯಿರಿ.

ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ಕುಟುಂಬದ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಚಪಾತಿ ಬದಲು ಗರಿಗರಿಯಾದ ಜೋಳದ ರೊಟ್ಟಿ ತಿನ್ನಿ; ಕೆಲವೇ ದಿನಗಳಲ್ಲಿ ಬಳಕುವ ಬಳ್ಳಿಯಂತಾಗಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.