Easy tips for Udupi sambar: ಉಡುಪಿ ಹೋಟೆಲ್‌ನಲ್ಲಿ ಇಡ್ಲಿ ಮತ್ತು ವಡಾದ ಜೊತೆಗೆ ನೀಡುವ ಬಿಸಿ ಬಿಸಿ ಸಾಂಬಾರ್ ತುಂಬಾ ಅದ್ಭುತವಾಗಿರುತ್ತದೆ. ಅದಕ್ಕಾಗಿಯೇ ಅನೇಕರು ಉಡುಪಿ ಹೋಟೆಲ್‌ನಲ್ಲಿ ಉಪಾಹಾರ ಸೇವಿಸಲು ಇಷ್ಟ ಪಡುತ್ತಾರೆ. ನಿಮಗೂ ಈ ಥರ ಸಾಂಬಾರ್ ಇಷ್ಟವೇ? ಹಾಗಾದರೆ, ಮನೆಯಲ್ಲಿ ಉಡುಪಿ ಸಾಂಬಾರ್ ತಯಾರಿಸಿ.
Easy to make in home: ಮನೆಯಲ್ಲಿ ಉಡುಪಿ ಸಾಂಬಾರ್ ಮಾಡುವ ವಿಧಾನ: ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ, ಪ್ರದೇಶವನ್ನು ಅವಲಂಬಿಸಿ ಸಾಂಬಾರ್ ರುಚಿ ಬದಲಾಗುತ್ತದೆ. ಆದರೆ, ಎಲ್ಲರಿಗೂ ಇಷ್ಟವಾಗುವ ಸಾಂಬಾರ್ ಇದ್ದರೆ ಅದು ಉಡುಪಿಯ ಸಾಂಬಾರ್ ಅನ್ನುವವರೇ ಹೆಚ್ಚು. ಅನೇಕ ಮಂದಿಗೆ ಅದನ್ನು ಮನೆಯಲ್ಲಿಯೇ ಮಾಡಬೇಕು ಎನ್ನುವ ಆಸೆ ಇರುತ್ತದೆ. ಆದರೆ ಹೇಗೆ ಮಾಡಬೇಕು ಎನ್ನುವುದು ತಿಳಿಯದೇ, ಅದರ ಉಸಾಬರಿಗೆ ಹೋಗಿರುವುದಿಲ್ಲ. ಆದರೆ, ಇನ್ನು ಮುಂದೆ ಆ ನಿರಾಸೆ ಬೇಡ. ಯಾಕೆಂದರೆ ಮನೆಯಲ್ಲಿಯೇ ಉಡುಪಿ ಸಾಂಬಾರ್ ಹೇಗೆ ಮಾಡುವುದು ಎನ್ನವುದನ್ನು ನಾವು ಹೇಳುತ್ತೇವೆ. ಈ ವಿಧಾನವನ್ನು ಅನುಸರಿಸಿದರೆ, ಕರ್ನಾಟಕ ಸ್ಪೆಷಲ್ ಡಿಶ್ ಉಡುಪಿ ಸಾಂಬಾರ್ ಮನೆಯಲ್ಲಿಯೇ ರೆಡಿ ಮಾಡಬಹುದು.
ಬೇಕಾಗುವ ಪದಾರ್ಥಗಳು:
- ಬೇಳೆ - 1 ಕಪ್
- ಕ್ಯಾರೆಟ್ ತುಂಡುಗಳು - 1 ಕಪ್
- ಕುಂಬಳಕಾಯಿ ಚೂರುಗಳು - 2 ಕಪ್
- ನುಗ್ಗೆಕಾಯಿ ಚೂರುಗಳು - 1 ಕಪ್
- ಬಿಳಿಬದನೆ - 3
- ಮೆಣಸಿನಕಾಯಿ - 5
- ಎಣ್ಣೆ - 2 ಟೀಸ್ಪೂನ್
- ಉಪ್ಪು - ರುಚಿಗೆ
- ಹುಣಸೆಹಣ್ಣು - 50 ಗ್ರಾಂ
- ದಾಲ್ಚಿನ್ನಿ - ಸ್ವಲ್ಪ
- ಕಡಲೆ ಬೇಳೆ - ಟೇಬಲ್ ಸ್ಪೂನ್
- ಕರಿ ಮೆಣಸು - ಟೇಬಲ್ ಸ್ಪೂನ್
- ಉದ್ದಿನ ಬೇಳೆ- ಒಂದು ಚಮಚ
- ಒಣ ಮೆಣಸಿನಕಾಯಿ - 10
- ಮೆಂತ್ಯ - ಟೇಬಲ್ ಸ್ಪೂನ್
- ಜೀರಿಗೆ - ಟೇಬಲ್ ಸ್ಪೂನ್
- ಬೆಲ್ಲ - ಅರ್ಧ ಕಪ್
- ಅರಿಶಿನ - ಟೀ ಚಮಚ
- ಕೊತ್ತಂಬರಿ - ಸ್ವಲ್ಪ
- ನೀರು ಬೇಕಾಗುವಷ್ಟು
- ಒಣ ಕೊಬ್ಬರಿ ಚೂರು - ಅರ್ಧ ಕಪ್
ಒಗ್ಗರಣೆಗಾಗಿ:
- ತೆಂಗಿನ ಎಣ್ಣೆ - 1 ಟೇಬಲ್ ಸ್ಪೂನ್
- ಸಾಸಿವೆ - 1 ಟೀಸ್ಪೂನ್
- ಜೀರಿಗೆ - 1 ಟೀಸ್ಪೂನ್
- ಕರಿಬೇವಿನ ಎಲೆಗಳು - 3 ಚಿಗುರುಗಳು
- ಇಂಗು ಪುಡಿ - ಟೀ ಚಮಚ
- ಕರಿಮೆಣಸು - 3
ಉಡುಪಿ ಸಾಂಬಾರ್ ಮಾಡುವ ವಿಧಾನ- Follow these steps to tasty Udupi sambar:
- ಮೊದಲು ಬೇಳೆಯನ್ನು ತೊಳೆದು ಅದಕ್ಕೆ ಸ್ವಲ್ಪ ಅರಿಶಿನ ಹಾಕಿ ಮೃದುವಾಗಿ ಬೇಯಿಸಿ ಪಕ್ಕಕ್ಕೆ ಇಡಿ. ನಂತರ ಹುಣಸೆ ಹಣ್ಣಿನ ರಸ ಮಾಡಿಕೊಂಡು ಅದನ್ನು ಒಲೆಯ ಮೇಲೆ ಇಡಿ. ಇಲ್ಲಿ ಸಾಂಬಾರ್ ಹುಳಿಯಾಗದಂತೆ ನೋಡಿಕೊಳ್ಳಬೇಕು. ನಮಗೆ ಬೇಕಾಗುವಷ್ಟು ಸಾಂಬಾರ್ ರುಚಿಗೆ ತಕ್ಕಂತೆ ಹುಣಸೆಹಣ್ಣು ಮತ್ತು ನೀರು ತೆಗೆದುಕೊಳ್ಳಬೇಕು.
- ಇದಕ್ಕೆ ಹಸಿಮೆಣಸಿನಕಾಯಿ, ಬದನೆಕಾಯಿ, ಟೊಮೇಟೊ, ಕ್ಯಾರೆಟ್, ನುಗ್ಗೆ ತುಂಡು, ಕುಂಬಳಕಾಯಿ ತುಂಡುಗಳು, ಬೆಲ್ಲ, ಸ್ವಲ್ಪ ಉಪ್ಪು ಸೇರಿಸಿ ಮುಚ್ಚಿ 15 ನಿಮಿಷ ಬೇಯಿಸಿ.
- ಈಗ ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ದಾಲ್ಚಿನ್ನಿ, ಕಡ್ಲೆಬೇಳೆ, ಮೆಣಸು, ಒಣ ಮೆಣಸಿನಕಾಯಿ, ಕೊತ್ತಂಬರಿ, ಮೆಂತ್ಯ ಮತ್ತು ಜೀರಿಗೆ ಸೇರಿಸಿ ಫ್ರೈ ಮಾಡಿ. ನಂತರ ಈ ಮಿಶ್ರಣವನ್ನು ತಣ್ಣಗಾಗಿಸಿ ತೆಂಗಿನ ತುರಿ ಹಾಕಿ ನೀರು ಸೇರಿಸಿ ಮಿಕ್ಸಿ ಜಾರ್ನಲ್ಲಿ ತೆಳುವಾಗಿ ರುಬ್ಬಿಕೊಳ್ಳಿ.
- ಈಗ ಕುದಿಯುತ್ತಿರುವ ಹುಣಸೆ ಹಣ್ಣಿನ ರಸಕ್ಕೆ ಸ್ವಲ್ಪ ಅರಿಶಿನ ಹಾಕಿ. ನಂತರ ಬೇಯಿಸಿದ ಬೇಳೆ ಮಿಶ್ರಣ ಮತ್ತು ತಯಾರಿಸಿದ ತೆಂಗಿನಕಾಯಿ ಪೇಸ್ಟ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಾಂಬಾರ್ ದಪ್ಪವಾಗಿದ್ದರೆ ಸ್ವಲ್ಪ ನೀರು ಹಾಕಿ. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಅರ್ಧ ಮುಚ್ಚಿ ಬೇಯಿಸಿ.
- ಈ ಮಧ್ಯೆ ಬಾಣಲೆಗೆ ಕೊಬ್ಬರಿ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಇಂಗು, ಕರಿಮೆಣಸು, ಜೀರಿಗೆ ಹಾಕಿ ಸಾಂಬಾರಿಗೆ ಘಮ್ಮೆನ್ನುವ ಒಗ್ಗರಣೆ ಹಾಕಿ. ನಂತರ ಸ್ಟವ್ ಆಫ್ ಮಾಡಿ ಸ್ವಲ್ಪ ಕೊತ್ತಂಬರಿ ಸೊಪ್ಪು ಉದುರಿಸಿ. ತುಂಬಾ ರುಚಿಯಾದ ಉಡುಪಿ ಶೈಲಿಯ ಸಾಂಬಾರ್ ರೆಡಿ.
- ಇಲ್ಲಿ ನಾವು ಶುದ್ಧ ಉಪಾಹಾರ ಶೈಲಿಯ ಉಡುಪಿ ಸಾಂಬಾರ್ ಮಾಡುವುದನ್ನು ವಿವರಿಸಿದ್ದೇವೆ. ನೀವು ಅದನ್ನು ಅನ್ನಕ್ಕೆ ಕಾಂಬಿನೇಷನ್ ಆಗಿ ಬಯಸಿದರೆ, ಬೆಲ್ಲ ಮತ್ತು ದಾಲ್ಚಿನಿಯನ್ನು ಕಡಿಮೆ ಸೇರಿಸಿ. ಇಷ್ಟವಾದರೆ ಈ ಸಾಂಬಾರ್ ಅನ್ನು ನೀವೂ ಮಾಡಿ ನೋಡಿ.