Weight management: ಆರೋಗ್ಯಕರ ತೂಕ ಕಾಪಾಡಿಕೊಳ್ಳಲು, ದೈನಂದಿನ ಜೀವನದಲ್ಲಿ ಸ್ಮಾರ್ಟ್ ಆಗಿರುವ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮುಖ್ಯ. ಆರೋಗ್ಯಕರ ಆಹಾರವನ್ನು ಸೇವಿಸಿ ದೈಹಿಕವಾಗಿ ಸದಾ ಸಕ್ರಿಯವಾಗಿರುವ ಜೊತೆಗೆ ತೂಕ ಕಾಪಾಡಿಕೊಳ್ಳಲು ಕೆಲವು ನಿಯಮಗಳ ಪಾಲಿಸಬೇಕಾಗುತ್ತದೆ. ಇದರಿಂದ ನಿಮ್ಮ ಒಟ್ಟಾರೆ ಆರೋಗ್ಯವೂ ಕೂಡ ಸುಧಾರಿಸುತ್ತದೆ. ಜೊತೆಗೆ ಕೆಲವು ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಾಧ್ಯವಾಗುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ತಜ್ಞರು ನೀಡಿರುವ ಕೆಲವು ಸರಳವಾದ ಸಲಹೆಗಳು ಇಲ್ಲಿವೆ ನೋಡಿ.
ಪೋಷಕಾಂಶಯುಕ್ತ ಆಹಾರಗಳು: ಪೋಷಕಾಂಶಗಳ ಶ್ರೇಣಿಯನ್ನು ಪಡೆಯಲು ಎಲೆಕೋಸು, ಪಾಲಕ್, ಕುಂಬಳಕಾಯಿ, ಸಿಹಿ ಆಲೂಗಡ್ಡೆ ಮತ್ತು ಟೊಮ್ಯಾಟೊಗಳಂತಹ ವಿವಿಧ ತರಕಾರಿಗಳನ್ನು ಸೇವಿಸಿ. ದೈನಂದಿನ ಆಹಾರದಲ್ಲಿ ತರಕಾರಿಗಳುನ್ನು ಹೆಚ್ಚು ಸೇವಿಸುವುದರಿಂದ ಆರೋಗ್ಯಕರ ತೂಕ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
ಈ ಆಹಾರಗಳಿಗೆ ಆದ್ಯತೆ ನೀಡಿ: ಸಂಸ್ಕರಿಸಿದ ಧಾನ್ಯಗಳ ಬದಲಿಗೆ ಗೋಧಿ ಬ್ರೆಡ್, ಪಾಸ್ಟಾ, ಓಟ್ ಮೀಲ್ ಅಥವಾ ಕಂದು ಅಕ್ಕಿಯನ್ನು ನಿಮ್ಮ ದೈನಂದಿನ ಆಹಾರ ಪಟ್ಟಿಯಲ್ಲಿ ಸೇರಿಸಿ.
ದೈಹಿಕ ಚಟುವಟಿಕೆಗೆ ಒತ್ತು ಕೊಡಿ: ಪ್ರತಿ ವಾರ ಸೈಕ್ಲಿಂಗ್ ಅಥವಾ ಚುರುಕಾದ ನಡಿಗೆಯಂತಹ ಕನಿಷ್ಠ 150 ನಿಮಿಷಗಳ ಮಧ್ಯಮ- ತೀವ್ರತೆಯ ಚಟುವಟಿಕೆಯ ಗುರಿಯನ್ನು ಹೊಂದಿರಿ.
ಸ್ನೇಹಿತರೊಂದಿಗೆ ಹೊರಗಡೆ ಸುತ್ತಾಡಿ: ಉದ್ಯಾನವನಗಳು, ಹತ್ತಿರದ ಮೈದಾನಗಳಿಗೆ ಲಘು ವ್ಯಾಯಾಮ ಮಾಡಿ. ಜೊತೆಗೆ ನಿಮ್ಮ ನೆರೆಹೊರೆಯಲ್ಲಿ ಕುಟುಂಬ ಅಥವಾ ಸ್ನೇಹಿತರೊಂದಿಗೆ ಹೊರಗಡೆ ಸುತ್ತಾಡಿ.
ಸಾಧ್ಯವಾದಾಗಲೆಲ್ಲಾ ವ್ಯಾಯಾಮ ಮಾಡಿ: ನಿಮಗೆ ಸಮಯ ಕಡಿಮೆಯಿದ್ದರೆ, ದಿನವಿಡೀ ನಿರ್ವಹಿಸಬಹುದಾದ ಅವಧಿಗಳಾಗಿ ವಿಭಜಿಸುವ ಮೂಲಕ ಆಗಾಗ ಚಿಕ್ಕ ವ್ಯಾಯಾಮ ಮಾಡುವುದು ಒಳ್ಳೆಯದು.
ಹೊಟ್ಟೆ ಫುಲ್ ಆಗುವವರೆಗೆ ಊಟ ಮಾಡಿ: ಹೊರಗಡೆ ಹೋಟೆಲ್ಗಳಿಗೆ ಊಟಕ್ಕೆ ಹೋದಾಗ ಮಿತವಾಗಿ ಊಟ ಮಾಡಿ. ನಿಮ್ಮ ಹೊಟ್ಟೆಯಲ್ಲಿ ಸ್ಥಳ ಖಾಲಿಯಿರುವ ರೀತಿಯಲ್ಲಿ ಊಟ ಮಾಡಿ. ಹೊಟ್ಟೆ ಹಿಡಿಸುವುದಕ್ಕಿಂತ ಜಾಸ್ತಿ ಊಟ ಮಾಡಿದರೆ ಮತ್ತೆ ತೂಕ ಹೆಚ್ಚಾಗುತ್ತದೆ. ಮಿತವಾಗಿ ಊಟ ಮಾಡುವುದು ಒಳ್ಳೆಯದು. ಹೋಟೆಲ್ಗಳಿಗೆ ಹೋದಾಗ ಅರ್ಧದಷ್ಟು ಊಟ ಮಾಡಿ ಮತ್ತು ಉಳಿದದ್ದನ್ನು ಪಾರ್ಸಲ್ ತೆಗೆದುಕೊಂಡು ಹೋಗಿ. ಹಸಿವಾದಾಗ ಚಿಕ್ಕ ಊಟ ಮಾಡುವುದು ಕೂಡ ಆರೋಗ್ಯಕರ ತೂಕ ಕಾಪಾಡಲು ಸಾಧ್ಯವಾಗುತ್ತದೆ.
ಈ ಮೇಲೆ ನೀಡಿರುವ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬಹುದು. ಈ ಕ್ರಮಗಳನ್ನು ಪಾಲಿಸುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯ ಸುಧಾರಿಸುವುದರ ಜೊತೆಗೆ ಕೆಲವು ಆರೋಗ್ಯದ ಸಮಸ್ಯೆಗಳನ್ನು ತಡೆಯಬಹುದು ಸಹಾಯವಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್ಸೈಟ್ಗೆ ಸಂಪರ್ಕಿಸಬಹುದು:
ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.