ETV Bharat / health

ಕಿಡ್ನಿ ಆರೋಗ್ಯ ಕಾಪಾಡುವ ಆಹಾರಗಳಿವು; ತಪ್ಪದೇ ಡಯಟ್​​ನಲ್ಲಿ ಸೇರಿಸಿ ನೋಡಿ! - how to keep kidneys health safe

author img

By ETV Bharat Karnataka Team

Published : May 31, 2024, 5:22 PM IST

ಮೂತ್ರಪಿಂಡದ ಆರೋಗ್ಯ ಕಾಪಾಡಿಕೊಳ್ಳುವುದು ಆರೋಗ್ಯಕ್ಕೆ ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೆಲವು ಆಹಾರಗಳು ಪ್ರಯೋಜನಕಾರಿಯಾಗಿದೆ.

how to keep kidneys health safe with healthy food
how to keep kidneys health safe with healthy food (ಸಾಂದರ್ಭಿಕ ಚಿತ್ರ)

ಹೈದರಾಬಾದ್​: ಮೂತ್ರಪಿಂಡ ಎಂಬುದು ದೇಹ ಪ್ರಮುಖ ಅಂಗವಾಗಿದ್ದು, ಇದಕ್ಕೆ ಹಾನಿಯಾದರೆ, ಜೀವಕ್ಕೆ ಕುತ್ತಾಗುತ್ತದೆ. ದೇಹದ ರಕ್ತ ಶುದ್ಧೀಕರಣ ಮತ್ತು ತ್ಯಾಜ್ಯ ಹೊರ ಹಾಕಲು ಇದು ಅಗತ್ಯವಾಗಿದೆ. ಕಿಡ್ನಿ ಸರಿಯಾಗಿ ಕೆಲಸ ಮಾಡಿದ್ದಲ್ಲಿ ಮಾತ್ರ ಇತರ ಅಂಗಾಂಗಗಳು ಉತ್ತಮವಾಗಿರುತ್ತದೆ. ಇಲ್ಲದೇ ಹೋದಲ್ಲಿ ಅಪಾಯ. ಮೂತ್ರಪಿಂಡ ನಷ್ಟವಾದಲ್ಲಿ ಕಾಲಿನ ಊತ ಸಂಭವಿಸುತ್ತದೆ. ಈ ಹಿನ್ನೆಲೆಯಲ್ಲಿ ಎಚ್ಚರವಹಿಸುವುದು ಅವಶ್ಯಕ. ಮೂತ್ರಪಿಂಡದ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೆಲವು ಆಹಾರಗಳು ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಕಿಡ್ನಿಗೆ ಆರೋಗ್ಯ ಕಾಪಾಡುವ ಆಹಾರಗಳಿವು

ನಿಂಬೆ ನೀರು: ತಜ್ಞರು ಹೇಳುವಂತೆ ನಿಂಬೆ ಜ್ಯೂಸ್​​ ಯೂರಿನ್​ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ದೇಹದ ಮಲಿನ ಅಂಶ ಹೊರ ಹೋಗಿ, ಕಿಡ್ನಿ ಆರೋಗ್ಯ ಸುಧಾರಣೆಯಾಗುತ್ತದೆ. ನಿಂಬೆಯಲ್ಲಿರುವ ಸಿಟ್ರಿಕ್​ ಆಮ್ಲ ಮೂತ್ರಪಿಂಡದಲ್ಲಿ ಕಲ್ಲು ರೂಪುಗೊಳ್ಳುವುದನ್ನು ತಪ್ಪಿಸುತ್ತದೆ.

ಕ್ಯಾನ್​ಬೆರ್ರಿಸ್​: ತಜ್ಞರು ಹೇಳುವಂತೆ ಇದು ಕೂಡ ಮೂತ್ರಪಿಂಡ ಶುದ್ದವಾಗಿರಿಸಲು ಇದು ಪರಿಣಾಮಕಾರಿಯಾಗಿದೆ. ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ಸ್​, ಪ್ರೊಂಥೋಸೈನಿಡಿಯನ್ಸ್​ ಕಿಡ್ನಿಯನ್ನು ಬ್ಯಾಕ್ಟೀರಿಯಾ ಬೆಳವಣಿಗೆಯಿಂದ ರಕ್ಷಿಸುತ್ತದೆ. ಜೊತೆಗೆ ಸೋಂಕಿನಿಂದ ರಕ್ಷಿಸಿ, ಮೂತ್ರ ಸಂಬಂಧಿ ಸೋಂಕು ತಡೆಯುತ್ತದೆ.

ಹಸಿರು ತರಕಾರಿ - ಸೊಪ್ಪು: ಹಸಿರು ಆಹಾರ ಪದಾರ್ಥಗಳಲ್ಲಿ ಖನಿಜಾಂಶ ಮತ್ತು ಆ್ಯಂಟಿ ಆಕ್ಸಿಡೆಂಟ್​ ಇದೆ. ವಿಶೇಷವಾಗಿ ಕಾಲೆ, ಪಾಲಕ್​, ಲೆಟ್ಯೂಸ್​ನಲ್ಲಿ ಮೂತ್ರಪಿಂಡದ ಆರೋಗ್ಯ ಹೆಚ್ಚುತ್ತದೆ. ಜೊತೆಗೆ ಇದರಲ್ಲಿ ಮೆಗ್ನಿಶಿಯಂ ಇದ್ದು, ಇದು ಕಿಡ್ನಿ ಸ್ಟೋನ್​ ಆಗುವುದನ್ನು ತಡೆಯುತ್ತದೆ.

ಶುಂಠಿ: ಊರಿಯೂತ ಗುಣ ಮತ್ತು ಆ್ಯಂಟಿ ಆಕ್ಸಿಡೆಂಟ್​​ ಗುಣಗಳು ಇದರಲ್ಲಿದ್ದು, ಇದು ಮೂತ್ರಪಿಂಡದಲ್ಲಿ ಆಕ್ಸಿಡೇಟಿವ್​ ಒತ್ತಡ ಮತ್ತು ಊರಿಯೂತವನ್ನು ಕಡಿಮೆ ಮಾಡಿ, ಮೂತ್ರಪಿಂಡ ನಿರ್ವಹಣೆ ಮಾಡುತ್ತದೆ. ಜೊತೆಗೆ ರಕ್ತದ ಪರಿಚಲನೆಯನ್ನು ಸರಳಗೊಳಿಸುತ್ತದೆ.

ಸೇಬು: ನಿತ್ಯ ಸೇಬು ಸೇವನೆ ಮಾಡಿದರೆ, ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು ಎಂದು ತಿಳಿಸಲಾಗಿದೆ. ಸೇಬು ಸೇವನೆ ಮೂತ್ರಪಿಂಡ ಸಂಬಂಧಿತ ಸಮಸ್ಯೆ ಕಡಿಮೆ ಮಾಡುತ್ತದೆ. ಇದರಲ್ಲಿನ ಫೈಬರ್​ ಅಂಶವೂ ದೇಹದ ಅಶುದ್ಧತೆಯನ್ನು ತೆಗೆಯುತ್ತದೆ.

ಅರಿಶಿಣ: ಇದು ಕರ್ಕ್ಯುಮಿನ್​, ಊರಿಯೂತ ವಿರೋಧಿ ಮತ್ತು ಆ್ಯಂಟಿ ಆಕ್ಸಿಡೆಂಟ್​​​ ಸಮೃದ್ಧವಾಗಿದೆ. ಅರಿಶಿಣ ಸೇವನೆಯು ಕಿಡ್ನಿ ರೋಗದ ಸಮಸ್ಯೆ ಕಡಿಮೆ ಮಾಡುತ್ತದೆ.

ನೀರು: ನೀರು ಕೂಡ ಆರೋಗ್ಯದ ಮೇಲೆ ಪ್ರಮುಖ ಪಾತ್ರ ವಹಿಸಿದೆ. ಸಾಕಷ್ಟ ಪ್ರಮಾಣದ ನೀರು ಸೇವನೆಯಿಂದ ದೇಹದ ವಿಷಕಾರಿ ಅಂಶ ಮತ್ತು ಮೂತ್ರಪಿಂಡಕ್ಕೆ ಹಾನಿ ಮಾಡುವ ಅಂಶವನ್ನು ತೆಗೆದು ಹಾಕಬಹುದು. ಇದು ಮೂತ್ರ ಪಿಂಡದಲ್ಲಿ ಕಲ್ಲು ರೂಪುಗೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಕಿಡ್ನಿ ಆರೋಗ್ಯವಾಗಿರಲು ದಿನಕ್ಕೆ 7- 8 ಲೋಟ ನೀರು ಸೇವಿಸಬೇಕು.

2020ರಲ್ಲಿ ಜರ್ನಲ್​​​ ಆಫ್​ ದಿ ಅಮೆರಿಕನ್​ ಸೊಸೈಟಿ ಆಫ್​ ನೆಫ್ರೊಲಾಜಿಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ದಿನಕ್ಕೆ 2 ಲೀ ನೀರು ಸೇವನೆ ಮಾಡುವವರಲ್ಲಿ ಮೂತ್ರಪಿಂಡದ ಕಲ್ಲು ರೂಪುಗೊಳ್ಳುವ ಅಪಾಯ ಶೇ 50ರಷ್ಟು ಕಡಿಮೆ ಇದೆ.

ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರರ ಸಲಹೆಯನ್ನು ಆಧರಿಸಿ ಈ ಮಾಹಿತಿ ಸಿದ್ಧಪಡಿಸಲಾಗಿದೆ. ಇದನ್ನು ಅನುಸರಿಸುವ ಮೊದಲು ನಿಮ್ಮ ಆಪ್ತ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ: ತೂಕ ನಷ್ಟಕ್ಕೆ ಬಾದಾಮಿ ಉತ್ತಮವಾ ಅಥವಾ ಗೋಡಂಬಿಯಾ?.. ಇಲ್ಲಿದೆ ಸೂಕ್ತ ಉತ್ತರ! - Wight Loss Journey

ETV Bharat Logo

Copyright © 2024 Ushodaya Enterprises Pvt. Ltd., All Rights Reserved.