ETV Bharat / health

ದಿನಕ್ಕೆ ಹತ್ತೇ ಹತ್ತು ಪಿಸ್ತಾ ತಿಂದು ನೋಡಿ: ನಿಮ್ಮಲ್ಲಿ ಯಾವೆಲ್ಲ ಬದಲಾವಣೆ ಆಗುತ್ತೆ ಗೊತ್ತಾ? - BENEFITS OF PISTACHIO NUTS

ಪಿಸ್ತಾ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಆರೋಗ್ಯಕ್ಕೆ ಅತ್ಯುತ್ತಮವಾಗಿರುವ ಪಿಸ್ತಾ ನಾನಾ ಕಾರಣದಿಂದ ಬಹುಪಯೋಗಿಯಾಗಿದೆ.

author img

By ETV Bharat Karnataka Team

Published : Jul 8, 2024, 4:55 PM IST

how many pista is good for daily consumption
ಪಿಸ್ತಾ ಆರೋಗ್ಯಕರ ಪ್ರಯೋಜನ (ಸಂಗ್ರಹ ಚಿತ್ರ)

Benefits Of Pista Dry Fruit: ಒಣ ಹಣ್ಣುಗಳು ಆರೋಗ್ಯಕರ ಸ್ನಾಕ್ಸ್ ​ಆಗಿದೆ. ಇತ್ತೀಚಿನ ದಿನಗಳಲ್ಲಿ ಈ ಒಣ ಹಣ್ಣುಗಳನ್ನು ಜನರು ತಪ್ಪದೇ ನಿತ್ಯ ಸೇವನೆಗೆ ಮುಂದಾಗುತ್ತಿದ್ದಾರೆ. ಕೆಲವರು ರಾತ್ರಿ ನೆನಸಿ ಬೆಳಗೆ ತಿಂದರೆ, ಮತ್ತೆ ಕೆಲವರು ಸಂಜೆ ಕುರುಕಲಾಗಿ ಬಳಕೆ ಮಾಡುತ್ತಾರೆ. ಡ್ರೈ ಫ್ರೂಟ್ಸ್​ನಲ್ಲಿ ಪಿಸ್ತಾಗೆ ವಿಶೇಷ ಸ್ಥಾನವಿದೆ. ಕಾರಣ ರುಚಿ. ಇದರ ಹೊರತಾಗಿ ಇದು ಅನೇಕ ಆರೋಗ್ಯ ಪ್ರಯೋಜನ ಹೊಂದಿದೆ. ದಿನಕ್ಕೆ 10 ರಿಂದ 12 ಪಿಸ್ತಾ ಸೇವನೆ ಮಾಡುವುದರಿಂದ ಒಟ್ಟಾರೆ ಆರೋಗ್ಯಕ್ಕೆ ಲಾಭವಾಗಲಿದೆ.

ಪ್ರಮುಖ ಪೋಷಕಾಂಶ: ಪಿಸ್ತಾದಲ್ಲಿ ಕೂಡ ಇತರ ಡ್ರೈಫ್ರೂಟ್ಸ್​​ನಲ್ಲಿರುವಂತೆ ಪ್ರೋಟಿನ್​, ಫೈಬರ್​, ವಿಟಮಿನ್​ ಮತ್ತು ಖನಿಜಾಂಶವಿದೆ. ದಿನಕ್ಕೆ 10 ರಿಂದ 12 ಪಿಸ್ತಾ ಸೇವನೆ ಮಾಡುವುದರಿಂದ ಮಿದುಳಿನ ಕಾರ್ಯಾಚರಣೆ ಸುಧಾರಣೆಯಾಗಲಿದೆ. ಹಾಗೆಯೇ ದೇಹದ ಪ್ರತಿರೋಧಕ ವ್ಯವಸ್ಥೆ ಆರೋಗ್ಯಯುತವಾಗಿರುತ್ತದೆ. ಇದರಲ್ಲಿ ವಿಟಮಿನ್​ ಬಿ 6 ಹಾಗೂ ಪೋಟಾಶಿಯಂ, ಮೆಗ್ನಿಶಿಯಂ ಮತ್ತು ಆಂಟಿಆಕ್ಸಿಡೆಂಟ್​ ಇದ್ದು, ಇದು ಆರೋಗ್ಯವನ್ನು ಸಂಪೂರ್ಣವಾಗಿ ರಕ್ಷಿಸುತ್ತದೆ.

ಹೃದಯಕ್ಕೆ ಉತ್ತಮ: ಆರೋಗ್ಯಯುತ ಕೊಬ್ಬುಗಳು ಇದರಲ್ಲಿ ಇದು ಕೆಟ್ಟ ಕೊಲೆಸ್ಟ್ರಾಲ್​ ಮಟ್ಟ ಕಡಿಮೆ ಮಾಡುತ್ತದೆ. ಹಾಗೇ ಉತ್ತಮ ಕೊಲೆಸ್ಟ್ರಾಲ್​ ಮಟ್ಟ ಹೆಚ್ಚಿಸುತ್ತದೆ. ಫಲಿತಾಂಶವಾಗಿ ಹೃದಯ ರೋಗದಿಂದ ದೂರವಿಡುತ್ತದೆ.

ತೂಕ ನಿಯಂತ್ರಣ: ಪಿಸ್ತಾ ಕಡಿಮೆ ಕ್ಯಾಲೋರಿ ಹೊಂದಿದ್ದು, ಇದು ತೂಕವನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದರಲ್ಲಿನ ಪ್ರೋಟಿನ್​ ಮತ್ತು ಫೈಬರ್​ ಹೊಟ್ಟೆ ತುಂಬಿದ ಅನುಭವ ನೀಡುವ ಹಿನ್ನೆಲೆಯಲ್ಲಿ ಹಸಿವು ಮತ್ತು ಅನಿಯಂತ್ರಿತ ಆಹಾರ ಸೇವನೆಗೆ ಮುಂದಾಗಲು ಬಿಡುವುದಿಲ್ಲ.

ರಕ್ತದ ಸಕ್ಕರೆ ಮಟ್ಟ: ಪಿಸ್ತಾದಲ್ಲಿ ಗ್ಲೆಸೆಮಿಕ್​ ಸೂಚ್ಯಂಕ ಕಡಿಮೆ ಇದೆ ಹಾಗೂ ಫೈಬರ್​ ಮತ್ತು ಆರೋಗ್ಯಯುತ ಕೊಬ್ಬಿದೆ. ಇದನ್ನು ನಿಯಮಿತವಾಗಿ ಸೇವನೆಯಿಂದ ರಕ್ತದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಪಿಸ್ತಾ ಉತ್ತಮ ಆರೋಗ್ಯಕರ ಸ್ನಾಕ್ಸ್​​ ಆಗಿದ್ದು, ಮಧುಮೇಹಿಗಳಿಗೆ ಉತ್ತಮ ಆಯ್ಕೆ.

ದೃಷ್ಟಿ ಅಭಿವೃದ್ಧಿ: ಇದರಲ್ಲಿ ಲುಟೀನ್, ಕ್ಸಿಯಾನ್ಕ್ಸಿಥಿನ್ ಮತ್ತು ಆಂಟಿ ಆಕ್ಸಿಡೆಂಟ್​ ಸಮೃದ್ದವಾಗಿದ್ದು, ಕಣ್ಣಿನ ಆರೋಗ್ಯ ಕಾಪಾಡುತ್ತದೆ. ಇದು ನೀಲಿ ಬೆಳಕಿನಿಂದ ರಕ್ಷಿಸುವ ಜೊತೆಗೆ ವಯೋ ಸಂಬಂಧಿತ ಕಣ್ಣಿನ ಸಮಸ್ಯೆ ಹಾಗೂ ಕ್ಯಾಟ್ರಾಕ್ಟ್​​ ಅಪಾಯ ತಪ್ಪಿಸುತ್ತದೆ.

ಜೀರ್ಣಕ್ರಿಯೆ: ಇದರಲ್ಲಿ ಅಧಿಕ ಫೈಬರ್​ ಇರುವ ಹಿನ್ನೆಲೆಯಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಿಯಮಿತವಾಗಿ ಇದರ ಸೇವನೆ ಮಾಡುವುದರಿಂದ ಆರೋಗ್ಯಯುತ ಬ್ಯಾಕ್ಟೀರಿಯಾ ವೃದ್ಧಿಯಾಗುತ್ತದೆ. ಇದು ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.

ಉರಿಯೂತ ವಿರೋಧಿ ಗುಣ: ಶಕ್ತಿಯುತವಾತ ಉತ್ಕರ್ಷಣ ವಿರೋಧಿ ಜೊತೆಗೆ ಉರಿಯೂತ ವಿರೋಧಿ ಗುಣ ಕೂಡ ಇದರಲ್ಲಿದೆ. ಇದು ಊರಿಯುತ ಮತ್ತು ದೇಹದಲ್ಲಿನ ನೋವು ಕಡಿಮೆ ಮಾಡುತ್ತದೆ. ಇದು ಅಸ್ಥಿಸಂಧಿವಾತ ಮತ್ತು ಹೃದಯ ಸಮಸ್ಯೆಯಂತಹ ದೀರ್ಘ ಕಾಯಿಲೆ ಅಪಾಯ ಕಡಿಮೆ ಮಾಡುತ್ತದೆ.

ಅರಿವಿನ ಕಾರ್ಯಾಚರಣೆ: ಪಿಸ್ತಾದಲ್ಲಿ ವಿಟಮಿನ್​ ಬಿ6 ಮತ್ತು ಆಂಟಿ ಆಕ್ಸಿಡೆಂಟ್​ ಇದ್ದು ಇದು ಮಿದುಳಿನ ಆರೋಗ್ಯ ಕಾಪಾಡುತ್ತದೆ. ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಅರಿವಿನ ಪ್ರದರ್ಶನ ಉತ್ತಮವಾಗಿ ನಡೆಸಬಹುದು. ಇದು ಸ್ಮರಣೆ ಸುಧಾರಣೆ ಮಾಡುವ ಜೊತೆಗೆ ನರ ಸಂಬಂಧಿ ರೋಗದ ಅಪಾಯ ತಪ್ಪಿಸುತ್ತದೆ.

ವಿಶೇಷ ಸೂಚನೆ: ಇಲ್ಲಿ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಬಲಶಾಲಿಯಾದ ಹೊಳೆಯುವ ಕೂದಲು ಬೇಕಾ ಹಾಗಾದರೆ: ಕನಿಷ್ಠ ವಾರಕ್ಕೊಮ್ಮೆಯಾದರೂ ಬಳಕೆ ಮಾಡಿ ಮೊಟ್ಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.