ETV Bharat / health

ಸ್ತನ ಕ್ಯಾನ್ಸರ್​​ಗೆ ರಾಮಬಾಣವಾಗಲಿದೆ ಈ ಹಾರ್ಮೋನ್​ ಥೆರಪಿ ಚಿಕಿತ್ಸೆ - treatment for breast cancer

ಹಾರ್ಮೋನ್​ ಥೆರಪಿ ಎಂಬುದು ಸುಲಭವಾಗಿ ಲಭ್ಯವಾಗುವ ಚಿಕಿತ್ಸೆಯಾಗಿದ್ದು, ಟ್ಯಾಬ್ಲೆಟ್​ ರೀತಿ ಸೇವಿಸಬಹುದು. ಈ ಗ್ರಾಹಕಗಳು ಅಥವಾ ತಡೆ ಹಾರ್ಮೋನ್​ ಉತ್ಪಾದನೆಗಳು ಕ್ಯಾನ್ಸರ್​ ಬೆಳವಣಿಗೆಯನ್ನು ನಾಶಮಾಡುತ್ತದೆ.

author img

By ETV Bharat Karnataka Team

Published : May 31, 2024, 3:39 PM IST

Hormone therapy can be an effective treatment against some breast cancers
Hormone therapy can be an effective treatment against some breast cancers (ಸಾಂದರ್ಭಿಕ ಚಿತ್ರ)

ನವದೆಹಲಿ: ಹಾರ್ಮೋನ್​, ಈಸ್ಟ್ರೋಜನ್​ ಮತ್ತು ಪ್ರೊಜೆಸ್ಟ್ರನ್​ನ ಪರಿಣಾಮಕ್ಕೆ ಒಳಗಾಗುವ ಕೆಲವು ಸ್ತನ ಕ್ಯಾನ್ಸರ್​ ಚಿಕಿತ್ಸೆಯಲ್ಲಿ ಹಾರ್ಮೋನ್​ ಥೆರಪಿ ಪರಿಣಾಮಕಾರಿಯಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಹಾರ್ಮೋನ್​ ಥೆರಪಿ ಎಂಬುದು ಹಾರ್ಮೋನ್​ ರೆಪ್ಲೆಸ್​ಮೆಂಟ್​​ ಥೆರಪಿಗಿಂತ ಭಿನ್ನವಾಗಿದ್ದು, ಇದು ಸ್ತನ ಕ್ಯಾನ್ಸರ್​ ಅನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಲೂ ಬಹುದು.

ಆದರೆ, ಕೆಲವು ಸ್ತನ ಕ್ಯಾನ್ಸರ್​​ನ ಟ್ಯೂಮರ್​ಗಳು ಹಾರ್ಮೋನ್​ ಗ್ರಾಹಕಗಳಾಗಿ ಪ್ರದರ್ಶಿಸುತ್ತದೆ. ಅವುಗಳನ್ನು ಹಾರ್ಮೋನ್​ನಿಂದ ಸೂಕ್ಷ್ಮವಾಗಿಸಬೇಕಿದೆ. ಇದನ್ನು ಹಾರ್ಮೋನ್​ ಸೂಕ್ಷ್ಮ ಸ್ತನ ಕ್ಯಾನ್ಸರ್​ ಎಂದು ಕರೆಯಲಾಗಿದೆ. ಈ ಗ್ರಾಹಕಗಳು ಈಸ್ಟ್ರೋಜನ್​ ಮತ್ತು ಪ್ರೊಜೆಸ್ಟನ್​ ಸಂಯೋಜಿತವಾಗಿದ್ದು, ಇದು ಟ್ಯೂಮರ್​ ಬೆಳವಣಿಗೆಗೆ ಉತ್ತೇಜನಕಾರಿಯಾಗಿದೆ.

ಹಾರ್ಮೋನ್​ ಥೆರಪಿ ಎಂಬುದು ಸುಲಭವಾಗಿ ಲಭ್ಯವಾಗುವ ಚಿಕಿತ್ಸೆಯಾಗಿದ್ದು, ಟ್ಯಾಬ್ಲೆಟ್​ ರೀತಿ ಸೇವಿಸಬಹುದು. ಈ ಗ್ರಾಹಕಗಳು ಅಥವಾ ತಡೆ ಹಾರ್ಮೋನ್​ ಉತ್ಪಾದನೆಗಳು ಕ್ಯಾನ್ಸರ್​ ಬೆಳವಣಿಗೆಯನ್ನು ನಾಶಮಾಡುತ್ತದೆ. ಇದು ಇದು ಅಪಾಯವನ್ನು ಕಡಿಮೆ ಮಾಡುತ್ತದೆ.

ಈ ಹಾರ್ಮೋನ್​ ಥೆರಪಿ ಎಂದು ಕರೆಯುತ್ತಿರುವ ಇದು ಆ್ಯಂಟಿ ಹಾರ್ಮೋನ್​ ಆಗಿದೆ. ದೇಹದಲ್ಲಿ ಈಸ್ಟ್ರೋಜನ್​ ಮಟ್ಟವನ್ನು ಕಡಿಮೆಮಾಡುತ್ತದೆ. ಇದರಿಂದ ದೇಹದ ಜೊತೆ ಟ್ಯೂಮರ್​ ಕೋಶದ ಕಾರ್ಯವನ್ನು ತಡೆಯುತ್ತದೆ ಎಂದು ನವದೆಹಲಿಯ ಅಪೋಲೋ ಕ್ಯಾನ್ಸರ್​ ಆಸ್ಪತ್ರೆಯ ಸ್ತನ ಶಸ್ತ್ರಚಿಕಿತ್ಸಕರಾದ ಡಾ ಗೀತಾ ಕದಯಪ್ರತ ತಿಳಿಸಿದ್ದಾರೆ.

ಹಾರ್ಮೋನ್ ಸೆನ್ಸಿಟಿವ್ ಟ್ಯೂಮರ್‌ಗಳ ವಿರುದ್ಧ ಹಾರ್ಮೋನ್ ಚಿಕಿತ್ಸೆಯು ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಋತುಚಕ್ರಕ್ಕೆ ಒಳಗಾಗಿರುವ ಮಹಿಳೆಯರಲ್ಲಿ, ಟ್ಯಾಮೋಕ್ಸಿಫೆನ್ ಅನ್ನು ಬಳಸುವುದು ಆಯ್ಕೆಯಾಗಿದೆ. ಇದು ಈಸ್ಟ್ರೊಜೆನ್ ಹಾರ್ಮೋನ್ ಅನ್ನು ಗೆಡ್ಡೆಯ ಕೋಶಗಳಿಗೆ ಬಂಧಿಸುವುದನ್ನು ತಡೆಯುತ್ತದೆ ಆದರೆ, ಋತುಚಕ್ರಕ್ಕೆ ಒಳಗಾಗಿರುವ ಮಹಿಳೆಯರಲ್ಲಿ, ಆದ್ಯತೆಯ ಆಯ್ಕೆಯು ಆರೊಮ್ಯಾಟೇಸ್ ಪ್ರತಿರೋಧಕಗಳು, ಇದು ಹಾರ್ಮೋನ್ ಉತ್ಪಾದನೆಯನ್ನು ತಡೆಯುತ್ತದೆ. ಅಂದರೆ ಕೊಬ್ಬನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ ಇದು ಹಾರ್ಮೋನ್​ಗಳ ಮೂಲವೂ ಆಗಿದೆ

ಹಾರ್ಮೋನ್ ಚಿಕಿತ್ಸೆಯ ಪಾತ್ರವು ಹಂತ 1-3 ರಲ್ಲಿ ತಡೆಗಟ್ಟುವ ಚಿಕಿತ್ಸೆಯಿಂದ 4ನೇ ಹಂತದಲ್ಲಿ ಉಪಶಾಮಕ ಚಿಕಿತ್ಸೆಗೆ ಬದಲಾಗುತ್ತದೆ. ಈ ಚಿಕಿತ್ಸೆ ಸ್ವತಃ ಗುಣಪಡಿಸುವಿಕೆಯನ್ನು ಸಾಧಿಸದಿದ್ದರೂ, ಹಾರ್ಮೋನ್ ರಿಸೆಪ್ಟರ್ ಪಾಸಿಟಿವ್ ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದು ಪ್ರಮುಖ ಮತ್ತು ಅನಿವಾರ್ಯ ಪಾತ್ರ ವಹಿಸುತ್ತದೆ ಎಂದು ಮುಂಬೈನ ವೈದ್ಯರಾದ ಡಾ ತಸ್ನೀಮ್​ ಬರ್ಮಲ್​ ತಿಳಿಸಿದ್ದಾರೆ.

ಯಾರು ಆಯ್ಕೆ ಮಾಡಬಹುದು?: ವಯಸ್ಸಾದ ಮಹಿಳೆಯರು, ಆರಂಭಿಕ ಹಂತದ ಹಾರ್ಮೋನ್ - ಸೂಕ್ಷ್ಮ ಕಾಯಿಲೆಯೊಂದಿಗೆ, ಕೀಮೋಥೆರಪಿಯನ್ನು ಪಡೆಯುವವರಿಗೆ ಸಮಾನವಾದ ಫಲಿತಾಂಶಗಳೊಂದಿಗೆ ಹಾರ್ಮೋನ್ ಚಿಕಿತ್ಸೆಯನ್ನು ಸಹಾಯಕ ರೂಪವಾಗಿ ಬಳಸಬಹುದು. ಭಾರತದಲ್ಲಿ ವಿಶಾಲ ವ್ಯಾಪ್ತಿಯಲ್ಲಿ ಕೂಡ ಈ ಚಿಕಿತ್ಸೆ ಲಭ್ಯವಿದೆ. ಸೂಚಿಸಿದ ಹಾರ್ಮೋನ್​ಗೆ ಅನುಗುಣವಾಗಿ ಮಾಸಿಕ 200 ರಿಂದ 10 ಸಾವಿರವರೆಗೆ ಇದರ ವೆಚ್ಚ ಇರಲಿದೆ (ಐಎಎನ್​ಎಸ್)

ಇದನ್ನೂ ಓದಿ: ಭಾರತದ ಈ ರಾಜ್ಯಗಳಲ್ಲಿ ಸ್ತನ ಕ್ಯಾನ್ಸರ್​ ಹೊರೆ ಅಧಿಕ: ಐಸಿಎಂಆರ್​​ ಅಧ್ಯಯನ​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.