ETV Bharat / health

ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯೇ? ಜೀವನ ಶೈಲಿ ಬದಲಾವಣೆಯಿಂದ ಈ ತೊಂದರೆಗಿದೆ ಮುಕ್ತಿ - Remedy for gastric problem

author img

By ETV Bharat Karnataka Team

Published : Mar 25, 2024, 1:47 PM IST

ಗ್ಯಾಸ್ಟ್ರಿಕ್​ ನೀವು ಬಳಲುತ್ತಿದ್ದರೆ ಇಲ್ಲಿರುವ ಹಲವು ಟಿಪ್ಸ್​ಅನ್ನು ಪಾಲಿಸಿದರೆ ಸಮಸ್ಯೆಯಿಂದ ಪಾರಾಗಬಹುದು.

ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯೇ
ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯೇ

ಬಹಳ ಜನರಿಗೆ ಬೆನ್ನು ಬಿಡದೇ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಲೇ ಇರುತ್ತದೆ. ಗ್ಯಾಸ್ಟ್ರಿಕ್ ಸಾಮಾನ್ಯ ಆರೋಗ್ಯ ಸಮಸ್ಯೆ ಎಂದರೂ ಆ ನೋವು ಅನುಭವಿಸಿದಾಗಲೇ ಬೆಟ್ಟದಷ್ಟು ದೊಡ್ಡದಿದೆ ಎಂದೆನ್ನಿಸಿ ಬಿಡುತ್ತದೆ. ಯಾವು ನೋವು ಆಗಬಹುದು ಆದರೆ ಗ್ಯಾಸ್ಟ್ರಿಕ್ ಮಾತ್ರ ಬೇಡಪ್ಪಾ ಅನ್ನುವವರು ನಮ್ಮಲ್ಲಿದ್ದಾರೆ. ಅವರಿಗಾಗಿ ಗ್ಯಾಸ್ಟ್ರಿಕ್​ ಹೋಗಲಾಡಿಸಲು ಸುಲಭವಾಗಿ ಮನೆಯಲ್ಲೇ ಕಂಡುಕೊಳ್ಳಬಹುದಾದ ಪರಿಹಾರ ಇಲ್ಲಿದೆ ನೋಡಿ.

ಈ ಗ್ಯಾಸ್ಟ್ರಿಕ್​ಗೆ ಮುಖ್ಯವಾಗಿ ನಿಗದಿತ ಸಮಯಕ್ಕೆ ಆಹಾರ ಸೇವಿಸದೇ ಜೀರ್ಣಾಂಗ ವ್ಯವಸ್ಥೆಯಲ್ಲಿ ಉಂಟಾಗುವ ಏರುಪೇರು ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಗೆ ಮೂಲ ಕಾರಣ. ವಯಸ್ಸಿನ ಭೇದವಿಲ್ಲದೆ ಈ ಗ್ಯಾಸ್ ಸಮಸ್ಯೆ ಕಾಡುತ್ತದೆ. ಆ ವೇಳೆ ಗ್ಯಾಸ್ಟ್ರಿಕ್​ ನಿವಾರಿಸಲು ಅನೇಕ ಜನರು ಹಲವಾರು ಪ್ರಯತ್ನಗಳನ್ನು ಮಾಡಿಯೂ ಸರಿಯಾಗದೇ ಒದ್ದಾಡುತ್ತಾರೆ. ಇನ್ನೂ ಕೆಲವರು ಸರಿಯಾಗಿ ತಿಂದರೂ ಹೊಟ್ಟೆಯಲ್ಲಿ ಗ್ಯಾಸ್​ ತುಂಬಲು ಆರಂಭವಾಗುತ್ತದೆ. ಇದೇ ಗ್ಯಾಸ್ಟ್ರಿಕ್​ ದೀರ್ಘಾವಧಿಯ ತೊಂದರೆಯಾಗಬಹುದು. ಔಷಧಿ ಅಥವಾ ಇತರ ವಿಧಾನಗಳಿಂದ ಇದನ್ನು ನಿವಾರಿಸಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ ಮೊದಲು ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಅದಾಗ್ಯೂ ನಿಮಗೆ ಅಗತ್ಯ ಬಿದ್ದರೆ ಔಷಧಗಳನ್ನು ಉಪಯೋಗಿಸಿ ಹೊಟ್ಟೆಯ ಗ್ಯಾಸ್ ಸಮಸ್ಯೆ ಬರದಂತೆ ತಡೆಯಬಹುದು ಎನ್ನುತ್ತಾರೆ ವೈದ್ಯರು.

ಬದಲಾವಣೆ ಮುಖ್ಯ: ತಜ್ಞರ ಪ್ರಕಾರ ಜೀವನಶೈಲಿ ಹಾಗೂ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ಈ ಸಮಸ್ಯೆಯಿಂದ ಹೊರಬರಬಹುದು. ಹೊಟ್ಟೆಯ ಗ್ಯಾಸ್ ಸಮಸ್ಯೆಯನ್ನು ಉಲ್ಬಣಗೊಳಿಸುವ ಧೂಮಪಾನ, ಕಾಫಿ ಕುಡಿತ ಮತ್ತು ಚಾಕೊಲೇಟ್‌ಗಳನ್ನು ಅತಿಯಾಗಿ ತಿನ್ನುವುದನ್ನು ತಡೆಯಬೇಕು. ಕಡಿಮೆ ಕೊಬ್ಬು ಮತ್ತು ಹೆಚ್ಚಿನ ಫೈಬರ್ ಹೊಂದಿರುವ ಆಹಾರವನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ನಾರಿನಂಶ ಹೆಚ್ಚಿರುವ ಹಸಿರು ತರಕಾರಿ, ಹೂಕೋಸು, ಕೋಸುಗಡ್ಡೆ, ಸೌತೆಕಾಯಿಗಳನ್ನು ತಿನ್ನುವುದು ಜೀರ್ಣಕ್ರಿಯೆಗೆ ಒಳ್ಳೆಯದು ಎನ್ನುತ್ತಾರೆ.

ಇವುಗಳನ್ನು ಮಾಡಲೇಬೇಡಿ: ನಮ್ಮಲ್ಲಿ ಹೆಚ್ಚಿನವರು ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಇದರಿಂದ ಹೊಟ್ಟೆಯ ಗ್ಯಾಸ್ ಸಮಸ್ಯೆ ಉಲ್ಬಣಿಸುತ್ತದೆ. ತಿಂದ ತಕ್ಷಣ ಮಲಗಿದರೆ ಅರೆಬೆಂದ ಆಹಾರ ಬಾಯಿಗೆ ಬರುವ ಸಾಧ್ಯತೆ ಇದೆ. ಚಿಕನ್, ಮೀನಿನಂತಹ ಪದಾರ್ಥಗಳನ್ನು ಚೆನ್ನಾಗಿ ಬೇಯಿಸಿ ಸೇವಿಸುವುದು ಉತ್ತಮ ಎಂದು ವೈದ್ಯರು ಹೇಳುತ್ತಾರೆ.

ಗ್ಯಾಸ್ಟ್ರಿಕ್​ ತಡೆಯಲು ಈ ಸಲಹೆಗಳನ್ನು ಪಾಲಿಸಿ:

ಪುದೀನ ಚಹಾ: ಪುದೀನಾ ಎಲೆಗಳನ್ನು ಜಗಿಯುವುದು ಅಥವಾ ಪುದೀನಾ ಟೀ ಕುಡಿಯುವುದರಿಂದ ಹೊಟ್ಟೆಯ ಗ್ಯಾಸ್ ಸಮಸ್ಯೆಯಿಂದ ಶೀಘ್ರ ಪರಿಹಾರ ಸಿಗುತ್ತದೆ.

ಕ್ಯಾಮೊಮೈಲ್ ಟೀ : ಕ್ಯಾಮೊಮೈಲ್‌ನಿಂದ ಮಾಡಿದ ಚಹಾವನ್ನು ಕುಡಿಯುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ.

ಆಕ್ಟಿವೇಟೆಡ್​ ಚಾರ್ಕೋಲ್ ಮಾತ್ರೆಗಳು (ಕ್ರಿಯಾಶೀಲ ಇದ್ದಿಲು): ಹೊಟ್ಟೆಯಲ್ಲಿ ಅಧಿಕ ಗ್ಯಾಸ್​ನಿಂದ ಬಳಲುತ್ತಿದ್ದರೆ ವೈದ್ಯರ ಸಲಹೆಯಂತೆ ಆಕ್ಟಿವೇಟೆಡ್ ಚಾರ್ಕೋಲ್ ಮಾತ್ರೆಗಳನ್ನು ಸೇವಿಸಿ ಗ್ಯಾಸ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಆಪಲ್ ಸೈಡರ್ ವಿನೆಗರ್ : ನಿಮ್ಮ ಹೊಟ್ಟೆ ಗ್ಯಾಸ್ಟ್ರಿಕ್​ನಿಂದ ಪರಿಹಾರ ಕಂಡುಕೊಳ್ಳಲು ನೀವು ಆಪಲ್ ಸೈಡರ್ ವಿನೆಗರ್ ಅನ್ನು ನೀರು ಮತ್ತು ಚಹಾದೊಂದಿಗೆ ಸೇವಿಸಿದರೆ ತ್ವರಿತ ಪರಿಹಾರವನ್ನು ಪಡೆಯಬಹುದು.

ಲವಂಗ : ಗ್ಯಾಸ್ ಸಮಸ್ಯೆ ತುಂಬಾ ತೀವ್ರವಾಗಿದ್ದರೆ ಲವಂಗವನ್ನು ತಿನ್ನುವುದು ಉತ್ತಮ. ಲವಂಗದ ಎಣ್ಣೆಯನ್ನು ಆಹಾರದಲ್ಲಿ ಬಳಸುವುದರಿಂದ ಪರಿಹಾರವನ್ನು ಪಡೆಯಬಹುದು.

ಜೀರಿಗೆ ಸೇವನೆ: ಸ್ವಲ್ಪ ಜೀರಿಗೆಯನ್ನು ಜಗಿದು ನೀರಿನೊಂದಿಗೆ ಸೇವಿಸಿದರೆ ನಿಮ್ಮ ಗ್ಯಾಸ್ಟ್ರಿಕ್ ಮಾಯವಾಗುತ್ತದೆ.

ಓದುಗರಿಗೆ ಸೂಚನೆ: ಈ ವೆಬ್‌ಸೈಟ್‌ನಲ್ಲಿ ನಿಮಗೆ ಒದಗಿಸಲಾದ ಎಲ್ಲಾ ಆರೋಗ್ಯ ಮಾಹಿತಿ ವೈದ್ಯಕೀಯ ಸಲಹೆಗಳಿಂದ ಪಡೆದಿದ್ದು ನಿಮಗಾಗಿ ನೀಡಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೂ ಇವುಗಳನ್ನು ಪಾಲಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ನೀವು ಹೈ-ಬಿಪಿಯಿಂದ ಬಳಲುತ್ತಿದ್ದೀರಾ? ಅಧಿಕ ಬಿಪಿ ಇದ್ದರೆ ಈ ಆಹಾರದಿಂದ ದೂರವಿರಿ - high BP patients food system

ETV Bharat Logo

Copyright © 2024 Ushodaya Enterprises Pvt. Ltd., All Rights Reserved.