ETV Bharat / health

ಬಿಪಿ, ರಕ್ತದೊತ್ತಡದಿಂದ ಬಳಲುವವರಿಗೆ ಹರ್ಬಲ್ ಟೀ ಒಳ್ಳೆಯದು

Herbal Tea Benefits: ನೀವು ಹೈ-ಬಿಪಿಯಿಂದ ಬಳಲುತ್ತಿದ್ದೀರಾ? ಹಾಗೇ ಬಿಟ್ಟರೆ ಜೀವಕ್ಕೇ ಅಪಾಯ. ಹಾಗಿದ್ದರೆ ನೀವು ಹರ್ಬಲ್ ಟೀಗಳ ಕುರಿತು ತಿಳಿದುಕೊಳ್ಳಲೇಬೇಕು.

Herbal Tea Controls Blood Pressure  HERBAL TEA  WHAT KIND OF TEA LOWER BP  WHICH TEA IS GOOD FOR LOW BP
ಹರ್ಬಲ್ ಟೀ (ETV Bharat)
author img

By ETV Bharat Health Team

Published : Oct 12, 2024, 6:00 AM IST

Herbal Tea Benefits: ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದಾಗಿ ಅನೇಕರು ಅಧಿಕ ರಕ್ತದೊತ್ತಡದ (ಬಿಪಿ) ಸಮಸ್ಯೆ ಎದುರಿಸುತ್ತಿದ್ದಾರೆ. ಬಿಪಿಯನ್ನು ಹತೋಟಿಯಲ್ಲಿಡಲು ನಾನಾ ಔಷಧಗಳ ಮೊರೆ ಹೋಗುತ್ತಾರೆ. ಉಪ್ಪು ಸೇವಿಸುವುದನ್ನು ಕೂಡ ಕಡಿಮೆ ಮಾಡುತ್ತಾರೆ. ಆದಾಗ್ಯೂ, ಜನರು ಅನಿಯಂತ್ರಿತ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಅಂಥವರಿಗೆ ಹರ್ಬಲ್ ಟೀಯಿಂದ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುತ್ತಾರೆ ವೈದ್ಯರು.

ದಾಸವಾಳದ ಟೀ: ದಾಸವಾಳದ ಹೂವಿನಿಂದ ತಯಾರಿಸಿದ ಟೀ ಕುಡಿಯುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಎನ್ನುತ್ತಾರೆ ವೈದ್ಯರು. 2010ರಲ್ಲಿ ಜರ್ನಲ್ ಆಫ್ ಹ್ಯೂಮನ್ ಹೈಪರ್‌ಟೆನ್ಶನ್‌ನಲ್ಲಿ ಪ್ರಕಟವಾದ ಅಧ್ಯಯನ ಇದನ್ನು ತಿಳಿಸಿದೆ. Hibiscus sabdariffa extract reduces blood pressure in hypertensive individuals ಎಂಬ ಸಂಶೋಧನೆಯಲ್ಲಿ ಮೆಕ್ಸಿಕನ್ ಸಂಶೋಧಕರಾದ A. Herrera-Arellano ಅವರು ಭಾಗವಹಿಸಿದ್ದರು. ದಾಸವಾಳದ ಚಹಾದ ಗುಣಲಕ್ಷಣಗಳು ರಕ್ತನಾಳಗಳನ್ನು ಹಿಗ್ಗಿಸುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ ಎಂದು ವಿವರಿಸಲಾಗಿದೆ. ಇದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಎಂದು ವೈದ್ಯರು ಹೇಳಿದ್ದಾರೆ.

Herbal Tea Controls Blood Pressure  HERBAL TEA  WHAT KIND OF TEA LOWER BP  WHICH TEA IS GOOD FOR LOW BP
ದಾಸವಾಳದ ಟೀ (ETV Bharat)

ತುಳಸಿ ಚಹಾ: ಆಯುರ್ವೇದದಲ್ಲಿ ತುಳಸಿಯನ್ನು ಅತ್ಯುತ್ತಮ ಔಷಧೀಯ ಸಸ್ಯವೆಂದು ಪರಿಗಣಿಸಲಾಗಿದೆ. ತುಳಸಿ ಟೀ ಕುಡಿಯುವುದರಿಂದ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ವೈದ್ಯರು. ಈ ಚಹಾ ವಿಶೇಷವಾಗಿ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.

ತುಳಸಿ ಟೀ (ETV Bharat)

ಬಡೆ ಸೋಂಪು ಚಹಾ: ನೀರಿನಲ್ಲಿ ಕುದಿಸಿ ಬಡೆ ಸೋಂಪು ತಯಾರಿಸಲಾಗುತ್ತದೆ. ಈ ಚಹಾದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತವೆ ಎನ್ನುತ್ತಾರೆ ವೈದ್ಯರು.

ಕ್ಯಾಮೊಮೈಲ್ ಟೀ: ಈ ಚಹಾವನ್ನು ಕ್ಯಾಮೊಮೈಲ್ ಜಾತಿಯ ಎಲೆಗಳಿಂದ ತಯಾರಿಸಲಾಗುತ್ತದೆ. ಕ್ಯಾಮೊಮೈಲ್ ಚಹಾವನ್ನು ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಎಂದು ವೈದ್ಯರು ಹೇಳಿದ್ದಾರೆ.

ಕ್ಯಾಮೊಮೈಲ್ ಟೀ (ETV Bharat)

ಶುಂಠಿ ಟೀ: ಶುಂಠಿ ಚಹಾವನ್ನು ಬಹುತೇಕರು ಕುಡಿಯುತ್ತಾರೆ. ಇದು ಹಲವು ಔಷಧೀಯ ಗುಣಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ಶುಂಠಿ ತುಂಡುಗಳನ್ನು ನೀರಿನಲ್ಲಿ ಕುದಿಸಿ ನಂತರ ನೀರನ್ನು ಸೋಸಿಕೊಂಡು ಕುಡಿಯಲು ಸೂಚಿಸಲಾಗುತ್ತದೆ. ಇದನ್ನು ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ ಎಂದು ಹೇಳಲಾಗುತ್ತದೆ.

ಶುಂ'ಟೀ' (ETV Bharat)

ಅರ್ಜುನ ತೊಗಟೆ ಟೀ: ಅರ್ಜುನ ಮರದ ತೊಗಟೆಯಿಂದ ತಯಾರಿಸಿದ ಟೀ ಕುಡಿಯುವುದರಿಂದಲೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಎನ್ನುತ್ತಾರೆ ವೈದ್ಯರು.

ಹರ್ಬಲ್​ ಟೀ (ETV Bharat)

ಪುದೀನಾ ಟೀ: ಪುದೀನಾ ಟೀ ಕುಡಿಯುವುದರಿಂದ ದೇಹಕ್ಕೆ ತುಂಬಾ ಉಲ್ಲಾಸ ಸಿಗುತ್ತದೆ ಎನ್ನುತ್ತಾರೆ ವೈದ್ಯರು. ಇದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ದಾಲ್ಚಿನ್ನಿ ಚಹಾ: ದಾಲ್ಚಿನ್ನಿಯಿಂದ ತಯಾರಿಸಿದ ಚಹಾ ಕುಡಿಯುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ ಎಂದು ವೈದ್ಯರು ತಿಳಿಸುತ್ತಾರೆ.

ದಾಲ್ಚಿನ್ನಿ ಚಹಾ (ETV Bharat)

ಜೇನು ಮತ್ತು ಲೆಮನ್ ಟೀ: ಜೇನು (ಹನಿ) ಮತ್ತು ಲೆಮನ್ ಟೀ ಕುಡಿಯುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಎನ್ನುತ್ತಾರೆ ವೈದ್ಯರು. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಬಿಪಿಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಈ ವೆಬ್​ಸೈಟ್ ಅ​ನ್ನು ಸಂಪರ್ಕಿಸಿ:

ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.