ETV Bharat / health

ನೇರಳೆ ಹಣ್ಣು ಮಾತ್ರವಲ್ಲ, ಹಣ್ಣಿನ ಬೀಜಗಳಿಂದ ಆರೋಗ್ಯಕ್ಕೆ ಭಾರಿ ಪ್ರಯೋಜನ; ಇದನ್ನು ತಿನ್ನಿ ಮಧುಮೇಹಕ್ಕೆ ಹೇಳಿ ಟಾಟಾ - ಬೈಬೈ..! - health benefits of jamun seeds - HEALTH BENEFITS OF JAMUN SEEDS

ನೇರಳೆ (ಜಾಮೂನು) ಹಣ್ಣುಗಳು ಮಾತ್ರವಲ್ಲ, ಅವುಗಳ ಬೀಜಗಳು ಕೂಡಾ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ ಅಂತಾರೆ ತಜ್ಞರು. ಬನ್ನಿ ಹಾಗಾದರೆ ಅವುಗಳ ಪ್ರಯೋಜನಗಳೇನು ಅಂತಾ ತಿಳಿದುಕೊಂಡು ಬರೋಣ.

jamun-seeds
ಜಾಮೂನು ಹಣ್ಣಿನ ಬೀಜ (ETV Bharat)
author img

By ETV Bharat Karnataka Team

Published : Jul 23, 2024, 8:51 PM IST

Updated : Jul 24, 2024, 8:32 PM IST

ಹೈದರಾಬಾದ್​ : ನೇರಳೆ ಬೀಜಗಳು ತಮ್ಮ ಸಿಹಿ, ರುಚಿಗಾಗಿ ಎಲ್ಲರಿಗೂ ಇಷ್ಟವಾಗುತ್ತವೆ. ಆದರೆ ಅನೇಕ ಜನರು ಈ ಹಣ್ಣನ್ನು ತಿನ್ನುತ್ತಾರೆ ಮತ್ತು ಅದರ ಬೀಜಗಳನ್ನು ತ್ಯಜಿಸುತ್ತಾರೆ. ಆದರೆ ಹಣ್ಣುಗಳು ಮಾತ್ರವಲ್ಲ, ಜಾಮೂನು ಬೀಜಗಳು ಸಹ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದನ್ನು ತಜ್ಞರು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲ ಜಾಮೂನು ಹಣ್ಣಿನ ಬೀಜಗಳಿಂದ ಆರೋಗ್ಯ ಪ್ರಯೋಜನಗಳುಂಟು.

ನೇರಳೆ ಬೀಜಗಳ ಆರೋಗ್ಯ ಪ್ರಯೋಜನಗಳು : ಅನೇಕ ಜನರು ನೇರಳೆ ಮತ್ತು ಕಪ್ಪು ಬಣ್ಣಗಳ ಮಿಶ್ರಣದ ಜಾಮೂನ್ ಬೀಜಗಳನ್ನು ತಿನ್ನಲು ಇಷ್ಟಪಡುತ್ತಾರೆ. ಮಳೆಗಾಲದಲ್ಲಿ ಗಾಡಿಗಳಲ್ಲಿ ಸಿಗುವ ಇವುಗಳನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಲಾಭಗಳಿವೆ. ಆದರೆ, ಅನೇಕ ಜನರು ಹಣ್ಣುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಅದರ ಬೀಜಗಳನ್ನು ತಿರಸ್ಕರಿಸುತ್ತಾರೆ. ಈ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತವೆ ಅಂತಿದ್ದಾರೆ ತಜ್ಞರು. ಹಾಗಾದ್ರೆ ಇದರ ಪ್ರಯೋಜನಗಳೇನು? ಈ ಸ್ಟೋರಿಯಲ್ಲಿ ಆ ಕಾಯಿಗಳನ್ನು ಹೇಗೆ ತಿನ್ನಬೇಕು ಎಂಬುದನ್ನು ತಿಳಿಯೋಣ.

ಬೀಜಗಳಲ್ಲಿದೆ ಹೇರಳ ಪೋಷಕಾಂಶ : ಫೈಬರ್, ಪ್ರೋಟೀನ್, ಒಮೆಗಾ 3, ಒಮೆಗಾ 6, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಇ, ಫ್ಲೇವನಾಯ್ಡ್​​ಗಳು, ಜಾಂಬೋಲಿನ್, ಜಾಂಬೊಸಿನ್ ಮುಂತಾದ ಪೋಷಕಾಂಶಗಳು ಈ ಹಣ್ಣಿನ ಬೀಜಗಳಲ್ಲಿ ಸಮೃದ್ಧವಾಗಿವೆ. ಇವುಗಳನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ಜಾಮೂನ್ ಬೀಜಗಳ ಪ್ರಯೋಜನ :

ಮಧುಮೇಹ ನಿಯಂತ್ರಣ : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಅಂಥವರು ಜಾಮೂನ್ ಹಣ್ಣುಗಳನ್ನು ತಿಂದರೆ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ ಎನ್ನುತ್ತಾರೆ ತಜ್ಞರು. ಏಕೆಂದರೆ ಇವುಗಳಲ್ಲಿರುವ ಜಂಬೋಲಿನ್ ಮತ್ತು ಜಾಂಬೊಸಿನ್ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಡಯಾಬಿಟಿಸ್ ಕೇರ್ ಜರ್ನಲ್‌ನಲ್ಲಿ ಪ್ರಕಟವಾದ 2013 ರ ಅಧ್ಯಯನವು ಟೈಪ್ 2 ಡಯಾಬಿಟಿಸ್ ಹೊಂದಿರುವ ಜನರು 12 ವಾರಗಳವರೆಗೆ ದಿನಕ್ಕೆ ಎರಡು ಬಾರಿ 500 ಮಿಲಿಗ್ರಾಂ ಏಪ್ರಿಕಾಟ್ ಕರ್ನಲ್ ಪುಡಿಯನ್ನು ತೆಗೆದುಕೊಂಡರೆ, ಅವರ ರಕ್ತದಲ್ಲಿನ ಸಕ್ಕರೆ ಮತ್ತು ಹಿಮೋಗ್ಲೋಬಿನ್ A1c ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಕಂಡು ಹಿಡಿದಿದೆ. ದೆಹಲಿಯ ಏಮ್ಸ್‌ನ ಅಂತಃ ಸ್ರಾವಶಾಸ್ತ್ರದ ಪ್ರಾಧ್ಯಾಪಕ ಡಾ. ಸುಜಿತ್ ಶರ್ಮಾ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.

ಯಕೃತ್ತಿನ ಆರೋಗ್ಯ ಸುಧಾರಿಸುತ್ತೆ: ಉತ್ತಮ ಯಕೃತ್ತಿನ ಆರೋಗ್ಯಕ್ಕಾಗಿ ಜಾಮೂನ್ ಹಣ್ಣಿನ ಬೀಜಗಳನ್ನು ನಿಯಮಿತವಾಗಿ ಸೇವಿಸಬೇಕೆಂದು ತಜ್ಞರು ಸೂಚಿಸುತ್ತಾರೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್​ಗಳು ಲಿವರ್ ಅನ್ನು ಆರೋಗ್ಯವಾಗಿಡುತ್ತವೆ ಎಂದು ಹೇಳಿದ್ದಾರೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ : ಜಾಮೂನ್ ಹಣ್ಣಿನ ಬೀಜಗಳಲ್ಲಿ ಫೈಬರ್ ಸಮೃದ್ಧವಾಗಿವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ತೂಕ ಇಳಿಕೆಗೂ ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : ಜಾಮೂನ್ ಬೀಜಗಳಲ್ಲಿ ವಿಟಮಿನ್ ಸಿ ಸೇರಿದಂತೆ ಇತರ ಪೋಷಕಾಂಶಗಳು ಸಮೃದ್ಧವಾಗಿವೆ. ಅವರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ, ಶೀತ ಮತ್ತು ಜ್ವರದಂತಹ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ ಎಂದು ಹೇಳಲಾಗುತ್ತದೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು : ಜಾಮೂನ್ ಬೀಜಗಳಲ್ಲಿನ ಫೈಬರ್, ಫ್ಲೇವನಾಯ್ಡ್​​ಗಳು ಮತ್ತು ಜಾಂಬೋಲಿನ್ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೃದಯದ ಆರೋಗ್ಯ ಸುಧಾರಿಸುತ್ತದೆ ಮತ್ತು ಪಾರ್ಶ್ವವಾಯು ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಹೇಳಿದ್ದಾರೆ.

ಮೂಳೆ ಆರೋಗ್ಯಕ್ಕೆ ಮುಖ್ಯ : ಜಾಮೂನ್ ಬೀಜಗಳಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳು ಸಮೃದ್ಧವಾಗಿವೆ. ಮೂಳೆಗಳ ಆರೋಗ್ಯಕ್ಕೆ ಇವು ಮುಖ್ಯ. ಈ ಖನಿಜಗಳು ಮೂಳೆ ಸಾಂದ್ರತೆಯನ್ನು ಹೆಚ್ಚಿಸಲು ಮತ್ತು ಆಸ್ಟಿಯೊಪೊರೋಸಿಸ್ನಂತಹ ಮೂಳೆ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಚರ್ಮದ ಆರೋಗ್ಯಕ್ಕೆ : ಜಾಮೂನ್ ಬೀಜಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವುಗಳು ಫ್ರೀ ರಾಡಿಕಲ್ ಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತವೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಸಹ ಉಪಯುಕ್ತವಾಗಿವೆ ಎಂದು ತಜ್ಞರು ಹೇಳಿದ್ದಾರೆ.

ಕೂದಲಿನ ಬೆಳವಣಿಗೆಗೆ: ಜಾಮೂನ್ ಹಣ್ಣಿನ ಬೀಜಗಳಲ್ಲಿ ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಈ ಪೋಷಕಾಂಶಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಹೇಗೆ ತಿನ್ನಬೇಕು : ಈ ಬೀಜಗಳನ್ನು ನೇರವಾಗಿ ತಿನ್ನುವುದಕ್ಕಿಂತ ಒಣ ರೂಪದಲ್ಲಿ ಸೇವಿಸುವುದು ಉತ್ತಮ ಎಂದು ತಜ್ಞರು ಸೂಚಿಸಿದ್ದಾರೆ.

  • ಕೆಲವು ಜಾಮೂನ್ ಹಣ್ಣಿನ ಬೀಜಗಳನ್ನು ತೆಗೆದುಕೊಂಡು ಒಣಗಿಸಿ.
  • ಚೆನ್ನಾಗಿ ಒಣಗಿದ ನಂತರ, ಅವುಗಳನ್ನು ಮೃದುವಾದ ಪುಡಿಯಾಗಿ ಸಂಗ್ರಹಿಸಬೇಕು.
  • ಪುಡಿಯನ್ನು ನೀರು ಅಥವಾ ಹಾಲಿನೊಂದಿಗೆ ಬೆರೆಸಿ ಕುಡಿಯುವುದು ಉತ್ತಮ.

ಜಾಮೂನು(ನೇರಳೆ) ಹಣ್ಣಿನ ಕುರಿತ ಹೆಚ್ಚಿನ ಮಾಹಿತಿ :

  • ಜಾಮೂನ್ ಹಣ್ಣನ್ನು 'ದೇವರ ಹಣ್ಣು' ಎಂದೂ ಕರೆಯುತ್ತಾರೆ.
  • ಹಿಂದೂ ಪುರಾಣಗಳಲ್ಲಿ ಈ ಹಣ್ಣು ಗಮನಾರ್ಹ ಪ್ರಾಮುಖ್ಯತೆಯನ್ನು ಪಡೆದಿದೆ.
  • ಜಾಮೂನ್ ಅನ್ನು ಜಂಬುಲ್ ಎಂದೂ ಕರೆಯಲಾಗುತ್ತದೆ, ಇದು ಏಷ್ಯಾದಲ್ಲಿ ಹೇರಳವಾಗಿ ಕಂಡುಬರುವ ಪೌಷ್ಟಿಕಾಂಶದ ಸೀಸನ್​ ಹಣ್ಣು.
  • ಪ್ರಪಂಚದ ಅನೇಕ ಭಾಗಗಳಲ್ಲಿ ಈ ಹಣ್ಣನ್ನು ತಿಂಡಿಯಾಗಿಯೂ ಸೇವಿಸಲಾಗುತ್ತದೆ.
  • ಜಾಮೂನ್ ಬೀಜದ ಪುಡಿ ಹಾಗೂ ಅರಿಶಿಣವನ್ನು ಜಾಮೂನ್ ರಸದೊಂದಿಗೆ ಬೆರೆಸಿ ಚರ್ಮದ ಮೇಲೆ ಹಚ್ಚಿದರೆ ಕಲೆಗಳು ಕಡಿಮೆಯಾಗುತ್ತವೆ.

ಇದನ್ನೂ ಓದಿ : ಭಾರತದಲ್ಲಿ ಎಷ್ಟು ಮಾವಿನ ತಳಿಗಳಿವೆ ಗೊತ್ತೇ? ಹಲವು ಆರೋಗ್ಯ ಪ್ರಯೋಜನ ನೀಡುವ 'ಹಣ್ಣುಗಳ ರಾಜ' - National Mango Day

Last Updated : Jul 24, 2024, 8:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.