ETV Bharat / health

ಎಂಪಾಕ್ಸ್​ ಆತಂಕ: ಭಾರತದ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆಗೆ ತಜ್ಞರ ಒತ್ತಾಯ - Mpox at airports in India

author img

By IANS

Published : Aug 17, 2024, 2:05 PM IST

ಎಂಪಾಕ್ಸ್ ಸೋಂಕು​​ ಹರಡುವಿಕೆ ತಡೆಯಲು ಭಾರತದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಪರೀಕ್ಷಿಸಿ, ಸೋಂಕಿತರನ್ನು ಪ್ರತ್ಯೇಕಿಸುವಂತೆ ಒತ್ತಾಯ ಕೇಳಿಬಂದಿದೆ.

health authorities to begin screening for the Mpox at key airports in India
ಸಾಂದರ್ಭಿಕ ಚಿತ್ರ (ಐಎಎನ್​ಎಸ್​)

ನವದೆಹಲಿ: ಕಾಂಗೋ, ಆಫ್ರಿಕಾದ ಬಳಿಕ ಇದೀಗ ಸ್ವೀಡನ್​ ಮತ್ತು ಪಾಕಿಸ್ತಾನದಲ್ಲಿ ಎಂಪಾಕ್ಸ್​ ಪ್ರಕರಣಗಳು ವರದಿಯಾಗಿವೆ. ಎಂಪಾಕ್ಸ್​ ಸೋಂಕು ಹಲವು ದೇಶಗಳಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾರಣಾಂತಿಕ ಸೋಂಕಿನ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಆಫ್ರಿಕಾದಲ್ಲಿ 13 ದೇಶಗಳಲ್ಲಿ ಸೋಂಕು ಹರಡಿದ್ದು, ಎಂಪಾಕ್ಸ್ ಸೋಂಕನ್ನು ಜಾಗತಿಕ ಆರೋಗ್ಯ ತುರ್ತು ಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಇತ್ತೀಚೆಗೆ ಈ ಮಾರಾಣಾಂತಿಕ ಸೋಂಕಿನ ತಳಿ ಕ್ಲೇಡ್ 1ಬಿ ಸ್ವೀಡನ್​ನಲ್ಲಿ ವರದಿಯಾಗಿದ್ದು, ಯುರೋಪ್​ನಲ್ಲಿ ಸೋಂಕಿನ ಹರಡುವಿಕೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಈ ನಡುವೆ ಪಾಕಿಸ್ತಾನದಲ್ಲೂ ಕೂಡ ಮೂರು ಪ್ರಕರಣಗಳು ಪತ್ತೆಯಾಗಿವೆ. ಅದರ ತಳಿ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಹೆಚ್ಚಿನ ಗಮನ ಅಗತ್ಯ: ಎಂಪಾಕ್ಸ್​ ಸೋಂಕಿನ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಂಭೀರವಾಗಿ ಪರಿಗಣಿಸಲಾಗಿದೆ. ಭಾರತದಲ್ಲಿ ಈ ಸೋಂಕಿನ ತಡೆಯಲು ವಿಮಾನ ನಿಲ್ದಾಣದಲ್ಲಿ ರೋಗ ಲಕ್ಷಣ ಪರೀಕ್ಷಿಸಿ, ಸೋಂಕಿತರನ್ನು ಪ್ರತ್ಯೇಕಿಸುವುದೊಂದೇ ಪ್ರಮುಖ ಮಾರ್ಗವಾಗಿದೆ. ಎಂಪಾಕ್ಸ್​ ಪ್ರಕರಣಗಳು ವರದಿಯಾಗಿರುವ ಪ್ರದೇಶದಲ್ಲಿ ಪ್ರಯಾಣ ನಡೆಸಿದವರ ಕುರಿತು ಹೆಚ್ಚಿನ ಗಮನಹರಿಸಬೇಕಿದೆ ಎಂದು ಅಶೋಕ ಯುನಿವರ್ಸಿಟಿ ಸಂಶೋಧಕ ಡೀನ್​ ಆಗಿರುವ ಡಾ. ಗೌತಮ್​ ಮೆನನ್​ ತಿಳಿಸಿದ್ದಾರೆ.

ಸೋಂಕಿತ ಪ್ರಯಾಣಿಕರನ್ನು ವರದಿ ಮಾಡಿ ನಿಗಾ ವಹಿಸುವುದು ಅಗತ್ಯವಾಗಿದೆ. ಇದರಿಂದ ಸೋಂಕು ಹರಡುವಿಕೆಗೆ ತಪ್ಪಿಸಬಹುದು. ಜೊತೆಗೆ ಅವರ ಸಂಪರ್ಕಿತರನ್ನು ಪರೀಕ್ಷಿಸಬಹುದಾಗಿದೆ ಎಂದಿದ್ದಾರೆ. ಭಾರತೀಯ ವೈದ್ಯಕೀಯ ಸಂಸ್ಥೆಗಳು ಕೂಡ ಎಂಪಾಕ್ಸ್​ ಲಕ್ಷಣ ಅರಿತು ಈ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಲಕ್ಷಣ ತೋರದೇ ಈ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಸೋಂಕಿತ ದೇಶದ ಪ್ರಯಾಣಿಕರ ಮೇಲಿರಲಿ ಕಣ್ಣು: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಸೆಂಟ್ರಲ್ ಆಫ್ರಿಕನ್ ಹಾಗೂ ಸೋಂಕು ವರದಿಯಾಗಿರುವ ದೇಶಗಳಿಂದ ಬರುವ ಪ್ರಯಾಣಿಕರ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ತಮಿಳನಾಡಿನ ಸಾರ್ವಜನಿಕ ಆರೋಗ್ಯ ನಿರ್ದೇಶನಾಲಯ ಮತ್ತು ಪ್ರಿವೆಂಟಿವ್​ ಮೆಡಿಸಿನ್​ ಸೂಚಿಸಿದೆ.

ಚೀನಾದ ಗ್ರಾಹಕ ಪ್ರಧಾನ ಆಡಳಿತ ಈಗಾಗಲೇ ಪ್ರಯಾಣಿಕರ ಪ್ರವೇಶದಲ್ಲಿ ಕಣ್ಗಾವಲು ನಡೆಸುವ ಮೂಲಕ ಸೋಂಕು ತಡೆಯಲು ಮುಂದಾಗಿದೆ. ಆಸ್ಟ್ರೇಲಿಯಾ ಮತ್ತು ಜೆಕ್​ ಗಣರಾಜ್ಯದಲ್ಲೂ ಇದೇ ಕ್ರಮ ಕೈಗೊಳ್ಳಲಾಗಿದೆ.

ಈ ಸೋಂಕು ನಿಕಟ ಸಂಪರ್ಕದಲ್ಲಿ ಪ್ರಸರಣ ಹೊಂದಿದ್ದು, ಉಲ್ಬಣತೆಗೆ ಕಾರಣವಾಗಲಿದೆ. ವೇಗವಾಗಿ ಹರಡುವ ಸೋಂಕನ್ನು ತಡೆಯುವಲ್ಲಿ ಮುನ್ನೆಚ್ಚರಿಕೆ ಅಗತ್ಯವಾಗಿದೆ. ಸೋಂಕು ಮಕ್ಕಳಲ್ಲಿ ಹೆಚ್ಚಿನ ಪರಿಣಾಮ ಬೀರಲಿದೆ. ಜನನಿಬಿಡ, ಅನೈರ್ಮಲ್ಯ ಮತ್ತು ನಿರಾಶ್ರಿತ ಶಿಬಿರದಲ್ಲಿ ಹೆಚ್ಚಿನ ಕಾಳಜಿ ಅಗತ್ಯವಾಗಿದೆ ಎಂದರು.

ಕೋವಿಡ್-19 ಮತ್ತು ಇನ್ಫುಯೆನ್ಸ್​ಗೆ ಹೋಲಿಕೆ ಮಾಡಿದರೆ ಎಂಪಾಕ್ಸ್​ ಹರಡುವಿಕೆ ಕಷ್ಟಕರವಾಗಿದೆ. ಆದರೆ, ಸ್ಥಳೀಯ ಕಾಳಜಿ ಬಗ್ಗೆ ಎಚ್ಚರವಹಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: 'ಎಂಪಾಕ್ಸ್‌' ರೋಗಕ್ಕೆ ಬೆಚ್ಚಿ ಬಿದ್ದ ಆಫ್ರಿಕಾ! ಲಕ್ಷಣಗಳೇನು? ನಿಯಂತ್ರಣ ಹೇಗೆ? ನೀವು ತಿಳಿದಿರಬೇಕಾದ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.