ETV Bharat / health

ತಲೆ ಬೋಳಿಸುವುದರಿಂದ ಕೂದಲು ಉದುರುವಿಕೆ ನಿಲ್ಲುತ್ತಾ?: ಸಂಶೋಧನೆಯಲ್ಲಿ ಬಯಲಾಯ್ತು ಈ ಸತ್ಯ! - Head Shaving Benefits - HEAD SHAVING BENEFITS

ತಲೆ ಬೋಳಿಸುವುದರಿಂದ ಕೂದಲು ದಪ್ಪ ಮತ್ತು ದಟ್ಟವಾಗಿ ಬೆಳೆಯುತ್ತವೆಯೇ? ಮತ್ತು ಕೂದಲು ಉದುರುವಿಕೆ ತಡೆಯಲು ಏನು ಮಾಡಬೇಕು ಎಂಬುದರ ಕುರಿತಾದ ಸಮಗ್ರ ಮಾಹಿತಿ ಈ ಕೆಳಗಿದೆ.

ಕೂದಲು ಉದರುವಿಕೆ ಸಮಸ್ಯೆ
ಕೂದಲು ಉದರುವಿಕೆ ಸಮಸ್ಯೆ (ETV Bharat)
author img

By ETV Bharat Karnataka Team

Published : Jun 3, 2024, 8:47 AM IST

Updated : Jun 3, 2024, 9:19 AM IST

Head Shaving Help Hair Growth Thicker?: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ವಿವಿಧ ಕೂದಲಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾದದ್ದು ಎಂದರೇ ಕೂದಲು ಉದುರುವಿಕೆ. ಅತೀಯಾದ ಒತ್ತಡ, ಅಪೌಷ್ಟಿಕಾಂಶ ಆಹಾರ ಸೇವನೆ, ದೇಹದಲ್ಲಿನ ಹಾರ್ಮೋನ್ಸ್​​​ ಬದಲಾವಣೆ ಸೇರಿದಂತೆ ವಿವಿಧ ಕಾರಣಗಳಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಇದನ್ನು ತಡೆಯಲು ಹೆಚ್ಚಿನ ಜನರು ವಿವಿಧ ರೀತಿಯ ಎಣ್ಣೆ, ಶಾಂಪೋ, ಮೆಡಿಸಿನ್​ ಮತ್ತು ಚಿಕಿತ್ಸೆ ಮೊರೆ ಹೋಗುತ್ತಾರೆ. ಇನ್ನೂ ಕೆಲವರು ಕೂದಲು ಉದುರುವ ಸಮಸ್ಯೆ ಕಡಿಮೆಯಾಗಿ ದಟ್ಟವಾಗಿ ಬೆಳೆಯಲೆಂದು ತಲೆಯನ್ನೇ ಬೋಳಿಸುಕೊಳ್ಳುತ್ತಾರೆ. ಆದರೇ ಕ್ಷೌರ ಮಾಡುವುದರಿಂದ ಕೂದಲು ದಪ್ಪವಾಗುತ್ತದೆಯೇ? ಇದರಿಂದ ಉದುರುವಿಕೆ ನಿಲ್ಲತ್ತದೆಯೇ? ಎಂಬುದರ ಬಗ್ಗೆ ತಜ್ಞರು ಏನು ಹೇಳುತ್ತಾರೆ ಗೊತ್ತಾ?

Does Head Shaving Make Hair Growth Thicker?: ಕೂದಲು ಉದುರುವಿಕೆ ತಡೆಯಲು ಜನರು ಹಲವಾರು ಮಾರ್ಗಗಳನ್ನು ಅನುಸರಿಸುತ್ತಾರೆ. ಅವುಗಳಲ್ಲಿ ಒಂದು ಶೇವಿಂಗ್. ಹೀಗೆ ತಲೆ ಬೋಳಿಸಿದರೆ ಕೂದಲು ದಟ್ಟವಾಗಿ ಬೆಳೆಯುತ್ತದೆ ಎಂದು ಹಲವರು ಭಾವಿಸುತ್ತಾರೆ. ಇದು ಎಷ್ಟು ಸತ್ಯ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಸಂಶೋಧನೆ ಏನು ಹೇಳುತ್ತದೆ ಎಂಬುದರ ಬಗ್ಗೆ ಇದೀಗ ತಿಳಿಯೋಣ.

ತಲೆ ಬೋಳಿಸುವುದು ಅಥವಾ ಗುಂಡು ಹೊಡೆಸುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ ಎಂಬ ಪ್ರಶ್ನೆಗೆ ಬಹುತೇಕ ತಜ್ಞರಿಂದ ಕೇಳಿ ಬಂದ ಉತ್ತರ "No". ನೀವು ನಿಮ್ಮ ತಲೆಯನ್ನು ಬೋಳಿಸಿಕೊಂಡಾಗ, ಸತ್ತ ಕೂದಲಿನ ಕೋಶಗಳು ಹೋಗುತ್ತವೆ ಅಷ್ಟೇ. ಶೇವಿಂಗ್ ಮಾಡಿದ ನಂತರ ಬೆಳೆಯುವ ಕೂದಲುಗಳು ಸೂರ್ಯನ ಬೆಳಕು ಅಥವಾ ಇತರ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದಿಲ್ಲ. ಹಾಗಾಗಿ ಸ್ವಲ್ಪ ಕಪ್ಪಾಗಿ ಕಾಣುತ್ತವೆ. ಆದರೇ ಕೂದಲು ಬೆಳವಣಿಗೆಯಲ್ಲಿ ಯಾವುದೇ ವ್ಯತ್ಯಾಸಗಳು ಕಂಡು ಬರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

ಸಂಶೋಧನೆ ಏನು ಹೇಳುತ್ತೆ: 1999 ರಲ್ಲಿ 'ಜರ್ನಲ್ ಆಫ್ ಡರ್ಮಟಾಲಜಿ'ನಲ್ಲಿ ಪ್ರಕಟವಾದ ವರದಿ ಪ್ರಕಾರ, ತಲೆ ಬೋಳಿಸುವುದರಿಂದ ಕೂದಲು ದಟ್ಟವಾಗಿ ಬೆಳೆಯಲ್ಲ ಎಂದು ತಿಳಿದು ಬಂದಿದೆ. ಈ ಸಂಶೋಧನೆಯಲ್ಲಿ ನ್ಯೂಯಾರ್ಕ್​ನ ಮೌಂಟ್ ಸಿನಾಯ್ ಸ್ಕೂಲ್ ಆಫ್ ಮೆಡಿಸಿನ್​ನ ಚರ್ಮರೋಗ ತಜ್ಞ ಡಾ.ಕೆ.ಆರ್.ಮೆಕ್ಡೊನಾಲ್ಡ್ ಭಾಗವಹಿಸಿದ್ದರು. ತಲೆ ಬೋಳಿಸಿಕೊಳ್ಳುವುದರಿಂದ ಕೂದಲು ದಟ್ಟವಾಗಿ ಬೆಳೆಯುವುದಿಲ್ಲ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿರುವುದಾಗಿ ಹೇಳಿಕೊಂಡಿದ್ದಾರೆ.

ಕೂದಲು ಬೋಳಿಸುವುದರಿಂದ ಪ್ರಯೋಜನೆಗಳೆನು: ತಲೆ ಬೋಳಿಸಿಕೊಳ್ಳುವುದರಿಂದ ಕೂದಲಿನ ಆರೋಗ್ಯಕ್ಕೆ ಕೆಲವು ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ಮೊದಲನೆಯದಾಗಿ, ಕೂದಲನ್ನು ನಿರ್ವಹಿಸುವುದು ಸುಲಭ. ಅಂದರೇ ಬಾಚಣಿಕೆ ಅಥವಾ ಡ್ರೈಯರ್ ಬಳಸುವ ಅಗತ್ಯವಿರಲ್ಲ. ಅಲ್ಲದೆ ಶೇವಿಂಗ್ ಮಾಡುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ! ತಲೆಯ ಮೇಲೆ ಸಂಗ್ರಹವಾದ ಧೂಳು ಮತ್ತು ಕೊಳೆಯನ್ನು ತೆಗೆದುಹಾಕಲಾಗುತ್ತದೆ. ಇದರಿಂದ ಕೂದಲು ಉದುರುವ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞರು.

ಆದರೆ, ಕೂದಲಿನ ಆರೋಗ್ಯದ ದೃಷ್ಟಿಯಿಂದ ಶೇವ್ ಮಾಡಿಕೊಳ್ಳಲು ಬಯಸುವವರು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ವಿಶೇಷವಾಗಿ ತಲೆಹೊಟ್ಟು ಮತ್ತು ಚರ್ಮದ ಸಮಸ್ಯೆ ಇರುವವರು ಶೇವಿಂಗ್‌ನಲ್ಲಿ ಜಾಗರೂಕರಾಗಿರಬೇಕು.

ಕೂದಲನ್ನು ದಪ್ಪವಾಗಿಸುವುದು ಹೇಗೆ?:

  • ನೀವು ಸೇವಿಸುವ ಆಹಾರವು ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
  • ವಿಟಮಿನ್ ಎ, ಸಿ, ಡಿ, ಇ, ಬಯೋಟಿನ್, ಐರನ್​ ಮತ್ತು ಝಿಂಕ್​ನಂತ ಪೋಷಕಾಂಶಗಳಲ್ಲಿ ವಿಶೇಷವಾಗಿ ಸಮೃದ್ಧವಾಗಿರುವ ಆಹಾರವನ್ನು ತೆಗೆದುಕೊಳ್ಳಲು ವೈದ್ಯರು ಸೂಚಿಸುತ್ತಾರೆ.
  • ಅಂತೆಯೇ, ರಕ್ತಚಲನೆ ಉತ್ತೇಜಿಸಲು ಹೆಡ್​ ಮಸಾಜ್​ ಮಾಡಿಕೊಳ್ಳುವುದು ಉತ್ತಮ.
  • ಕೂದಲಿನ ಆರೋಗ್ಯಕ್ಕೆ ಹಾನಿಯುಂಟುಮಾಡುವ ಅತಿಯಾದ ಹೀಟ್ ಸ್ಟೈಲಿಂಗ್ ಮತ್ತು ರಾಸಾಯನಿಕ ಜೆಲ್​ಗಳ ಬಳಕೆ ಕಡಿಮೆ ಮಾಡುವುದು ಉತ್ತಮ. ಇದರಿಂದಾಗಿ ಕೂದಲು ಹಾಳಾಗುವುದಲ್ಲದೆ ತೆಳುವಾಗುತ್ತದೆ.
  • ಇವುಗಳ ಬದಲಿಗೆ ಪ್ರೊಟೀನ್ ಟ್ರೀಟ್​ಮೆಂಟ್ ( ಪೌಷ್ಟಿಕಾಂಶ ಆಹಾರ) ಮಾಡುವುದರಿಂದ ಕೂದಲು ಸ್ಟ್ರಾಂಗ್ ಆಗುತ್ತವೆ ಎಂದು ವೈದ್ಯರು ಹೇಳುತ್ತಾರೆ.

NOTE : ಇಲ್ಲಿ ನಿಮಗೆ ನೀಡಲಾದ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸೂಚನೆಗಳು ಕೇವಲ ಮಾಹಿತಿಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

Last Updated : Jun 3, 2024, 9:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.