ETV Bharat / health

ಕೂದಲು ಉದುರುವಿಕೆ ತಡೆಗೆ ಆಯುರ್ವೇದದಲ್ಲಿದೆ ಪರಿಹಾರ; ಹೀಗಿದೆ ತಜ್ಞ ವೈದ್ಯರ ಸಲಹೆ - Hair loss treatment in Ayurveda

author img

By ETV Bharat Health Team

Published : Aug 29, 2024, 3:43 PM IST

Hair Loss Treatment in Ayurveda: ತಲೆಯ ಮೇಲಿನ ದಟ್ಟವಾದ ಕೂದಲು ಉದುರಿದರೆ ಯಾರಿಗಾದರೂ ಬೇಸರ ಆಗುತ್ತದೆ. ಬಹುತೇಕ ಜನರು ಸೋಪ್ ಮತ್ತು ಶಾಂಪೂ ಸೇರಿದಂತೆ ಔಷಧಗಳ ಬಳಕೆಯ ಮೂಲಕ ಕೂದಲು ಉದುರುವುದನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೆ, ಆಯುರ್ವೇದದಲ್ಲಿ ಈ ಸಮಸ್ಯೆಗೆ ಉತ್ತಮ ಪರಿಹಾರವಿದೆ ಎನ್ನುತ್ತಾರೆ ತಜ್ಞರು. ಕೂದಲು ಉದುರುವುದನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ತಿಳಿಯಲು ಈ ಸ್ಟೋರಿಯನ್ನು ಸಂಪೂರ್ಣವಾಗಿ ಓದಿ..

HAIR LOSS TREATMENT IN AYURVEDA  AYURVEDIC TREATMENT FOR HAIR LOSS  HAIR LOSS REMEDIES AT HOME  HAIR FALL CONTROL HOME REMEDIES
ಸಾಂದರ್ಭಿಕ ಚಿತ್ರ (ETV Bharat)

Hair Loss Treatment in Ayurveda: ನಮ್ಮ ಕೂದಲು ಉದುರುತ್ತಿದ್ದರೆ, ಸೌಂದರ್ಯದಲ್ಲಿ ಏನೋ ಕೊರತೆಯಿದೆ ಎಂದು ನಾವು ಚಿಂತಿಸುತ್ತೇವೆ. ಪ್ರತಿದಿನ ನಾವು ಕೂದಲು ಬಾಚಿದಾಗ, ಸ್ನಾನ ಮಾಡುವಾಗ, ಎಣ್ಣೆ ಹಚ್ಚಿದಾಗ ಸುಮಾರು 50 ಕೂದಲುಗಳು ಬರುವ ಸಾಧ್ಯತೆ ಇರುತ್ತದೆ. ಆದರೆ, ಇದು ಸಹಜವಾದ ಪ್ರಕ್ರಿಯೆಯಾಗಿದೆ. ಇದನ್ನು ಹೊರತುಪಡಿಸಿ ಕೂದಲು ಉದುರುತ್ತಿದ್ದರೆ, ಎಚ್ಚರ ವಹಿಸಬೇಕು ಎನ್ನುತ್ತಾರೆ ತಜ್ಞ ವೈದ್ಯರು.

ಅನೇಕ ಜನರು ತಮ್ಮ ಕೂದಲನ್ನು ಉಳಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಈ ಸಮಸ್ಯೆಗೆ ನಾವು ಸೇವಿಸುವ ಆಹಾರದಿಂದ ಹಿಡಿದು ದೇಹದಲ್ಲಿನ ಪಿತ್ತದೋಷ, ವಿಪರೀತ ಉಷ್ಣತೆ, ಒತ್ತಡ, ಚಿಂತೆ, ಮಾಲಿನ್ಯದವರೆಗೆ ಹಲವು ಕಾರಣಗಳಿವೆ ಎನ್ನುತ್ತಾರೆ ವೈದ್ಯರು. ಕಾರಣ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಕೂದಲು ಉದುರುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎನ್ನುತ್ತಾರೆ ಖ್ಯಾತ ಆಯುರ್ವೇದ ವೈದ್ಯಾಧಿಕಾರಿ ಡಾ. ಪೆದ್ದಿ ರಮಾದೇವಿ. ಈ ಹಿನ್ನೆಲೆಯಲ್ಲಿ ಕೂದಲು ಉದುರುವುದನ್ನು ತಡೆಯಲು ಆಯುರ್ವೇದದಲ್ಲಿ ನೀಡುವ ಚಿಕಿತ್ಸೆಗಳು ಮತ್ತು ಪರಿಹಾರಗಳನ್ನು ಕುರಿತು ತಿಳಿಯೋಣ.

ಕೂದಲು ಉದುರುವುದನ್ನು ತಡೆಯಲು ತೆಗೆದುಕೊಳ್ಳಬೇಕಾದ ಆಹಾರಗಳೇನು?:

  • ಮೀನು ಮತ್ತು ಮೊಟ್ಟೆಗಳು
  • ಟ್ರೊಪೊಕಾಲಜನ್ ಅಥವಾ ಕಾಲಜನ್ ಸಮೃದ್ಧವಾಗಿರುವ ಆಹಾರ
  • ಒಮೆಗಾ 3 ಮತ್ತು 6 ಕೊಬ್ಬಿನಾಮ್ಲಗಳನ್ನು ಹೊಂದಿರುವ ಪದಾರ್ಥಗಳು
  • ಬ್ರೊಕೊಲಿ, ಎಲೆಕೋಸು ಸೇರಿ ತಾಜಾ ಹಣ್ಣುಗಳು
  • ವಿಟಮಿನ್-ಸಿ ಸಮೃದ್ಧವಾಗಿರುವ ಆಹಾರಗಳು
  • ಸಿಹಿ ಗೆಣಸು
  • ತ್ರಿಫಲ ಚೂರ್ಣವನ್ನು ಪ್ರತಿದಿನ ಅರ್ಧ ಚಮಚ ತೆಗೆದುಕೊಳ್ಳಬೇಕು.
  • ಭೃಂಗರಾಜ ಮತ್ತು ಅಶ್ವಗಂಧ ಪುಡಿಯನ್ನು ಅರ್ಧ ಚಮಚ ತೆಗೆದುಕೊಳ್ಳಬೇಕು.

ಕೆಲವರಿಗೆ ಕಾಲೋಚಿತ ಕೂದಲು ಉದುರುತ್ತದೆ ಎಂದು ತಿಳಿಸಿದ ಡಾ.ರಮಾದೇವಿ ಅವರು, ಆ ಸಮಯದಲ್ಲಿ ಆಹಾರದ ಬಗ್ಗೆ ಕಾಳಜಿ ವಹಿಸಿದರೆ ಸಾಕು. ಹಾಗೆಯೇ ಕೆಲವರು ಡಯಟ್ ಮಾಡುತ್ತಾ ಅನ್ನವನ್ನು ಸಂಪೂರ್ಣವಾಗಿ ತ್ಯಜಿಸಿ, ಹಾಗೆ ಮಾಡಬಾರದು. ಇದಲ್ಲದೇ ಹೆಚ್ಚು ವ್ಯಾಯಾಮ ಮಾಡುವವರಲ್ಲೂ ಸಹ ಕೂದಲು ಉದುರುವ ಸಾಧ್ಯತೆ ಇದೆ. ಈ ಮುನ್ನೆಚ್ಚರಿಕೆಗಳ ಜೊತೆಗೆ, ಆಯುರ್ವೇದದಿಂದ ಈ ಸಮಸ್ಯೆಯನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಕೆಲವು ಪದಾರ್ಥಗಳ ಮಿಶ್ರಣದಿಂದ ತಯಾರಿಸಿದ ಔಷಧಿಯನ್ನು ಕೂದಲಿಗೆ ಹಚ್ಚಿದರೆ ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ಹೇಳುತ್ತಾರೆ ವೈದ್ಯರು. ಈ ಔಷಧವನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಔಷಧ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳು:

  • ಕೋಳಿ ಮೊಟ್ಟೆ
  • ಮೊಸರು
  • ಬಾಳೆಹಣ್ಣು
  • ಆಲಿವ್ ಎಣ್ಣೆ
  • ನಿಂಬೆ ರಸ
  • ವಿಟಮಿನ್ ಇ ಕ್ಯಾಪ್ಸುಲ್
  • ತಯಾರಿಕೆ ಮತ್ತು ಬಳಕೆಯ ವಿಧಾನ:
  • ಒಂದು ಮೊಟ್ಟೆಯನ್ನು ಎರಡು ಚಮಚ ಮೊಸರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅರ್ಧ ಬಾಳೆಹಣ್ಣು, ಒಂದು ಚಮಚ ನಿಂಬೆ ರಸ ಮತ್ತು ಆಲಿವ್ ಎಣ್ಣೆಯನ್ನು ಸೇರಿಸಿ ಎಲ್ಲವನ್ನು ಸಂಪೂರ್ಣವಾಗಿ ಮಿಶ್ರಣ ಮಾಡಿ.
  • ಇದಕ್ಕೆ ಒಂದು ವಿಟಮಿನ್ ಇ ಕ್ಯಾಪ್ಸುಲ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಇದನ್ನು ರೆಡಿ ಮಾಡಿದ ನಂತರ ಈ ಮಿಶ್ರಣವನ್ನು ತಲೆಗೆ ಅನ್ವಯಿಸಿ.
  • ಸುಮಾರು 15-20 ನಿಮಿಷಗಳ ಕಾಲ ಬಿಡಿ ಮತ್ತು ಬಳಿಕ ತಾಜಾ ನೀರಿನಿಂದ ತೊಳೆಯಿರಿ.
  • ನೀವು ಇದನ್ನು ಮಾಡಿದರೆ, ಖಂಡಿತವಾಗಿಯೂ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಪಿಸಿಒಡಿ ಮತ್ತು ಥೈರಾಯ್ಡ್ ಇರುವವರಲ್ಲಿಯೂ ಕೂದಲು ಬೇಗನೆ ಉದುರುತ್ತದೆ. ಇದನ್ನು ಮೊದಲ ಹಂತದಲ್ಲಿ ಗುರುತಿಸುವುದರಿಂದ ಈ ಸಮಸ್ಯೆಯಿಂದ ಬೇಗ ಮುಕ್ತಿ ಪಡೆಯಬಹುದು ಎಂದು ಡಾ. ರಮಾದೇವಿ ತಿಳಿಸುತ್ತಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯಕರ ಮತ್ತು ದಟ್ಟವಾದ ಕೂದಲು ಬೆಳೆಯಬೇಕಾದರೆ, ತಲೆ ತೊಳೆಯುವುದರಿಂದ ಹಿಡಿದು ಕೂದಲು ಬಾಚಿಕೊಳ್ಳುವವರೆಗೆ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು?:

  • ನಿಮ್ಮ ಕೂದಲಿನ ಪ್ರಕಾರಕ್ಕೆ ಅನುಗುಣವಾಗಿ ಶ್ಯಾಂಪೂಗಳನ್ನು ಆರಿಸಿ.
  • ವಾರದಲ್ಲಿ ಎರಡು ಬಾರಿ ತಲೆ ಸ್ನಾನ ಮಾಡಿ.
  • ನೀವು ಒಣ ಕೂದಲು ಹೊಂದಿದ್ದರೆ, ಸ್ನಾನ ಮಾಡುವ ಮೊದಲು ಎಣ್ಣೆಯನ್ನು ಹಚ್ಚಿ.
  • ಸತು ಮತ್ತು ಬಯೋಟಿನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ
  • ತಲೆಯನ್ನು ಪದೇ ಪದೇ ಬಾಚಿಕೊಳ್ಳುವುದು ಮತ್ತು ಹೇರ್ ಡ್ರೈಯರ್ ಅನ್ನು ಹೆಚ್ಚಾಗಿ ಬಳಸದಿರುವುದು
  • ಒತ್ತಡ ಮತ್ತು ಆತಂಕವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳಿ
  • ತಲೆಹೊಟ್ಟು ಮತ್ತು ಪರೋಪಜೀವಿಗಳ (ಹೇನು) ಕಡಿತದಂತಹ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಸಾಕಷ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು.

ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.