ETV Bharat / health

ದಿನವೂ ತುಪ್ಪ ತಿನ್ನುವುದರ ಪ್ರಯೋಜನ ನಿಮಗೆ ಗೊತ್ತಾ?: ಯಾಕಾಗಿ ತುಪ್ಪ ತಿನಬೇಕು ಅಂತಾ ಇಲ್ಲಿ ತಿಳಿಯಿರಿ! - Ghee Health Benefits

ನೀವು ನಿತ್ಯ ಊಟದಲ್ಲಿ ತುಪ್ಪವನ್ನು ಬಳಸುತ್ತಿಲ್ಲವೇ? ಹಾಗಾದರೆ ನೀವು ನಾನಾ ಆರೋಗ್ಯ ಪ್ರಯೋಜನಗಳನ್ನು ಕಳೆದುಕೊಂಡಿದ್ದೀರಿ ಅಂತಾರೆ ಆರೋಗ್ಯ ತಜ್ಞರು. ಏಕೆಂದರೆ ತುಪ್ಪವನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಅದರಲ್ಲೂ ದಿನವೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನಲ್ಲಿ ಇದನ್ನು ಬೆರೆಸಿ ಸೇವಿಸಿದರೆ, ನೀವು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಈ ವರದಿ ಓದಿ

ದಿನವೂ ತುಪ್ಪ ತಿನ್ನುವುದರ ಪ್ರಯೋಜನ ನಿಮಗೆ ಗೊತ್ತಾ?: ಯಾಕಾಗಿ ತುಪ್ಪ ತಿನಬೇಕು ಅಂತಾ ಇಲ್ಲಿ ತಿಳಿಯಿರಿ!

author img

By ETV Bharat Karnataka Team

Published : Apr 27, 2024, 9:37 AM IST

ಹೈದರಾಬಾದ್​: ತುಪ್ಪ ಸೇವಿಸುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬು ಹೆಚ್ಚಾಗುತ್ತದೆ ಎಂದು ಕೆಲವರು ಭಯಪಡುತ್ತಾರೆ. ತುಪ್ಪ ಹೃದಯಕ್ಕೆ ಒಳ್ಳೆಯದಲ್ಲ ಎಂದು ಕೆಲವರು ಭಯಪಡುತ್ತಾರೆ. ಕೆಲವರಿಗೆ ಇದು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ತಿನ್ನಬೇಕೆನಿಸಿದರೂ ಬಾಯಿ ಮುಚ್ಚಿಸುತ್ತಾರೆ. ಆದರೆ, ವಿವಿಧ ಪೋಷಕಾಂಶಗಳ ಸಮ್ಮಿಶ್ರಣವಾಗಿರುವ ತುಪ್ಪ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು. ಅದರಲ್ಲೂ ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಒಂದು ಚಮಚ ತುಪ್ಪವನ್ನು ಸೇವಿಸಿದರೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ಹಲವು ಪೋಷಕಾಂಶಗಳ ಆಗರ: ತುಪ್ಪದಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಅದರಲ್ಲೂ ವಿಟಮಿನ್ ಎ, ಡಿ, ಇ, ಕೆ, ಕೊಬ್ಬಿನಾಮ್ಲಗಳಾದ ಒಮೆಗಾ-3, ಒಮೆಗಾ-6, ಲಿನೋಲಿಕ್, ಬ್ಯುಟರಿಕ್ ಆಸಿಡ್, ಆ್ಯಂಟಿಆಕ್ಸಿಡೆಂಟ್ ಮೊದಲಾದ ಪೋಷಕಾಂಶಗಳು ದೇಹವನ್ನು ಆರೋಗ್ಯವಾಗಿಡಲು ನೆರವಾಗುತ್ತವೆ. ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್​ ನಂತಹ ಸಮಸ್ಯೆಗಳನ್ನು ಕಡಿಮೆ ಮಾಡಿ ನಿಮ್ಮನ್ನು ಜಾಣರನ್ನಾಗಿ ಮಾಡುತ್ತದೆ. ಅದಕ್ಕೆ ಹೇಳುವುದು ಕೆಲವರನ್ನ ತುಪ್ಪ ತಿಂದ ತಲೆ ಅದು ಅಂತಾ. ಇನ್ನು ನಿತ್ಯದ ಆಹಾರದಲ್ಲಿ ತುಪ್ಪವನ್ನು ಸೇರಿಸುವುದರಿಂದ ದೇಹದಲ್ಲಿನ ನರಗಳ ಕಾರ್ಯನಿರ್ವಹಣೆಯು ಸುಧಾರಿಸುತ್ತದೆ ಎಂಬುದು ತಲತಲಾಂತರದಿಂದ ಬಂದ ನಂಬಿಕೆ ಕೂಡಾ ಹೌದು.

ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ: ತಜ್ಞರು ಬೆಳಗ್ಗೆ ಒಂದು ಚಮಚ ತುಪ್ಪವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸಬಹುದು ಅಂತಾರೆ ಆರೋಗ್ಯ ತಜ್ಞರು. ಇದಲ್ಲದೇ, ಇದು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

ಮಲಬದ್ಧತೆ ನಿವಾರಣೆ: ನೀವು ಮಲಬದ್ಧತೆಯಿಂದ ಬಳಲುತ್ತಿದ್ದರೆ, ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪವನ್ನು ಸೇವಿಸುವುದರಿಂದ ಆ ಸಮಸ್ಯೆಯಿಂದ ಸುಲಭವಾಗಿ ಪರಿಹಾರವನ್ನು ಪಡೆಯಬಹುದು. ಇದು ಒಟ್ಟಾರೆ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ.

2018 ರಲ್ಲಿ 'ಅಲಿಮೆಂಟರಿ ಫಾರ್ಮಾಕಾಲಜಿ ಮತ್ತು ಥೆರಪ್ಯೂಟಿಕ್ಸ್' ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರತಿದಿನ 1 ಚಮಚ ತುಪ್ಪವನ್ನು ಸೇವಿಸುವುದು ಮಲಬದ್ಧತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ ಎಂಬುದನ್ನು ಕಂಡುಕೊಳ್ಳಲಾಗಿದೆ. ಈ ಸಂಶೋಧನೆಯಲ್ಲಿ, 'ದಿ ಫಸ್ಟ್ ಅಫಿಲಿಯೇಟೆಡ್ ಹಾಸ್ಪಿಟಲ್ ಆಫ್ ನಾನ್ಜಿಂಗ್ ಮೆಡಿಕಲ್ ಯೂನಿವರ್ಸಿಟಿ'ಯಿಂದ ಪ್ರಮುಖ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. X.Y. ಜಾಂಗ್ ಭಾಗವಹಿಸಿದ್ದರು. ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಅದರ ಪೋಷಕಾಂಶಗಳಿಂದಾಗಿ ಮಲಬದ್ಧತೆ ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ತೂಕ ನಿಯಂತ್ರಣ: ದಿನವೂ ಬೆಳಿಗ್ಗೆ ತುಪ್ಪವನ್ನು ಸೇವಿಸುವುದರಿಂದ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ವಿಶೇಷವಾಗಿ ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬುಗಳು ಹಸಿವಿನ ಕಡು ಬಯಕೆಗಳನ್ನು ಕಡಿಮೆ ಮಾಡಲು ಮತ್ತು ಪೂರ್ಣತೆಯ ಭಾವನೆಯನ್ನು ಹೆಚ್ಚಿಸಲು ತುಂಬಾ ಉಪಯುಕ್ತವಾಗಿದೆ ಎಂದು ತಜ್ಞರು ಹೇಳುತ್ತಾರೆ.

ನೀವು ತಿನ್ನುವ ತುಪ್ಪ ಶುದ್ಧವಾಗಿದೆಯೇ?: - ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ: ತುಪ್ಪವು ಬ್ಯುಟರಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಉರಿಯೂತದ ಮತ್ತು ಪ್ರತಿರಕ್ಷಣಾ ವರ್ಧಕ ಗುಣಲಕ್ಷಣಗಳನ್ನು ಹೊಂದಿರುವ ಸಣ್ಣ ಸರಪಳಿ ಕೊಬ್ಬಿನಾಮ್ಲವಾಗಿದೆ. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು ಎಂದು ತಜ್ಞರ ಮಾತಾಗಿದೆ. ಇದು ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಟ ನಡೆಸುತ್ತದೆ.

ಮೆದುಳಿಗೆ ಒಳ್ಳೆಯದು: ಮೆದುಳಿನ ಆರೋಗ್ಯಕ್ಕೆ ತುಪ್ಪದಲ್ಲಿರುವ ಕೊಬ್ಬುಗಳು ಬಹಳ ಮುಖ್ಯ. ಏಕೆಂದರೆ, ಅವು ಮೆದುಳಿನ ಜೀವಕೋಶಗಳ ಬೆಳವಣಿಗೆ ಮತ್ತು ನಿರ್ವಹಣೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಹಾಗಾಗಿ ಹಗಲಿನಲ್ಲಿ ತುಪ್ಪವನ್ನು ಸೇವಿಸಲು ಆರಂಭಿಸಿದರೆ ಅದು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಅಲ್ಲದೆ, ಇದರಲ್ಲಿರುವ ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ಹಾರ್ಮೋನುಗಳನ್ನು ಸಮತೋಲನಕ್ಕೆ ಸಹಕಾರಿ: ನಿಯಮಿತವಾಗಿ ತುಪ್ಪವನ್ನು ಸೇವಿಸುವುದರಿಂದ ಹಾರ್ಮೋನ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ಇದು ಹಾರ್ಮೋನ್ ಸಂಬಂಧಿತ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಗಟ್ಟಿಮುಟ್ಟಾದ ಮೂಳೆಗಳು: ತಜ್ಞರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪವನ್ನು ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ. ಅಸ್ಥಿಮಜ್ಜೆ ಗಟ್ಟಿಯಾಗುತ್ತದೆ.. ದೇಹದ ಎಲ್ಲಾ ಮೂಳೆಗಳು ಆರೋಗ್ಯವಾಗಿರುತ್ತವೆ ಎಂದು ಹೇಳಲಾಗುತ್ತದೆ.

ಇದಲ್ಲದೆ, ಬೆಳಗ್ಗೆ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಚಯಾಪಚಯ ಕ್ರಿಯೆಗಳನ್ನು ಅತ್ಯಂತ ಸರಳ ಹಾಗೂ ಸುಲಭಗೊಳಿಸಬಹುದು. ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದಲ್ಲದೇ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ ಎನ್ನುವುದು ತಜ್ಞರ ಹೇಳಿಕೆಯಾಗಿದೆ.

ನಿಮ್ಮ ಗಮನಕ್ಕೆ: ಇಲ್ಲಿ ಒದಗಿಸಲಾದ ಎಲ್ಲ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ.

ಇದನ್ನು ಓದಿ: ಮಧುಮೇಹಿಗಳಲ್ಲಿ ತಕ್ಷಣಕ್ಕೆ ಸಕ್ಕರೆ ಮಟ್ಟ ಹೆಚ್ಚಾದರೆ ಏನಾಗುತ್ತೆ; ಇಲ್ಲಿದೆ ತಜ್ಞರ ಮಾತು - diabetes alarming rate in India

ETV Bharat Logo

Copyright © 2024 Ushodaya Enterprises Pvt. Ltd., All Rights Reserved.