ನವದೆಹಲಿ: ಜೀನ್ ಆಧಾರಿತ ಔಷಧಗಳು ರಕ್ತದಲ್ಲಿ ನೈಸರ್ಗಿಕವಾಗಿ ಹೆಚ್ಚಿನ ಮಟ್ಟದ ಲಿಪಿಡ್‌ಗಳನ್ನು ಹೊಂದಿರುವ ಜನರಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಎರಡು ಅಧ್ಯಯನಗಳು ಕಂಡು ಕೊಂಡಿವೆ. ಈ ಔಷಧಗಳನ್ನು ವರ್ಷಕ್ಕೆ ನಾಲ್ಕು ಬಾರಿ ಚುಚ್ಚುಮದ್ದಿನ ರೂಪದಲ್ಲಿ ನೀಡಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಧ್ಯಯನದ ಭಾಗವಾಗಿ ನಡೆದ ಸಂಶೋಧಕರು ಹಂತ-2ಬಿ ಕ್ಲಿನಿಕಲ್ ಪ್ರಯೋಗದಲ್ಲಿ ಪ್ಲೋಝಾಸಿರಾನ್ ಮತ್ತು ಜೋರ್ಡಾನಿಯನ್ ಎಂಬ ಎರಡು ಜೀನ್ - ಆಧಾರಿತ ಔಷಧಗಳ ಕಾರ್ಯಕ್ಷಮತೆ ವಿಶ್ಲೇಷಿಸಲಾಗಿದೆ. ವರ್ಷದಲ್ಲಿ ನಾಲ್ಕು ಬಾರಿ ಈ ಜೀನ್ ಆಧಾರಿತ ಔಷಧ ನೀಡುವುದು ಪ್ರಯೋಜನಕಾರಿ ಎಂದು ತೋರಿಸಿದೆ.
ಈ ಔಷಧಗಳು ಆರ್‌ಎನ್‌ಎ ಆಧಾರಿತವಾಗಿದೆ. ಅಂದರೆ, ಜೀವಿಗಳಲ್ಲಿ ಇರುವ ರೈಬೋನ್ಯೂಕ್ಲಿಕ್ ಆಮ್ಲದ ಸಣ್ಣ ತುಂಡುಗಳಿಂದ ಇವುಗಳನ್ನು ತಯಾರಿಸಲಾಗುತ್ತದೆ. ಡಿಎನ್ಎಯಿಂದ ಆರ್‌ಎನ್‌ಎ ರೂಪುಗೊಳ್ಳುತ್ತದೆ. ಇದು ಡಿಎನ್‌ಎಯಲ್ಲಿನ ಮಾಹಿತಿಯನ್ನು ದೇಹದ ಕಾರ್ಯಗಳಿಗೆ ಅಗತ್ಯವಿರುವ ಪ್ರೋಟೀನ್‌ಗಳಾಗಿ ಪರಿವರ್ತಿಸುತ್ತದೆ. ದೇಹದಲ್ಲಿರುವ ನೈಸರ್ಗಿಕ ಆರ್‌ಎನ್‌ಎ ಜೊತೆಗೆ ಹೊಸ ಮೆಡಿಸಿನ್ನಲ್ಲಿನ ಆರ್‌ಎನ್‌ಎ ಮಿಶ್ರಣವಾಗುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೇ ಪ್ರೋಟೀನ್‌ಗಳ ಉತ್ಪಾದನೆ ತಡೆಯುತ್ತದೆ. ಪ್ಲಾಸ್ಟ್ರಾನ್ ಔಷಧವು ದೇಹದಲ್ಲಿ ಅಪೊಲಿಪೊಪ್ರೋಟೀನ್ ಸಿ3 ಎಂಬ ಪ್ರೋಟೀನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
ಜೋಡಸಿರಾನ್, ಆಂಜಿಯೋಪೊಯೆಟಿನ್-ಲೈಕ್ 3 ಎಂಬ ಪ್ರೋಟೀನ್‌ನ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಈ ಔಷಧಗಳು ದೇಹದಲ್ಲಿ ನೈಸರ್ಗಿಕವಾಗಿ ಹೆಚ್ಚಿನ ಮಟ್ಟದ ಕೊಲೆಸ್ಟಾಲ್ ಮತ್ತು ಕೊಬ್ಬಿನ (ಹೈಪರ್ಲಿಪಿಡೆಮಿಯಾ) ಹೊಂದಿರುವ ಜನರಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಅಧ್ಯಯನದಲ್ಲಿ ಕಂಡು ಬಂದಿದೆ.. ಟ್ರೈಗ್ಲಿಸರೈಡ್ ಪ್ರಮಾಣ ಹೆಚ್ಚಾದರೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ. ಅಂತಹ ರೋಗಿಗಳು ಈಗಾಗಲೇ ಸ್ಟ್ಯಾಟಿನ್ ಎಂಬ ಕೊಲೆಸ್ಟ್ರಾಲ್ - ಕಡಿಮೆಗೊಳಿಸುವ ಔಷಧಗಳನ್ನು ಬಳಸುತ್ತಿದ್ದಾರೆ.
ಈ ಅಧ್ಯಯನಕ್ಕಾಗಿ 353ಜನರನ್ನು ಭಾಗಿಯಾಗಿಸಿದ್ದು, ಅವರಲ್ಲಿ ಪ್ಲೋಜಸಿರಾನ್ ಮತ್ತು ಜೋಡಾಸಿರಾನ್ ಎಂಬ ಎರಡು ಜೀನ್ ಔಷಧಗಳ ಪ್ರಯೋಗ ಬಳಕೆಗೆ ಒಳಪಡಿಸಲಾಗಿದೆ. 12 ವಾರ ಅಥವಾ 24 ವಾರಗಳಿಗೊಮ್ಮೆ 10 ಮಿಲಿಗ್ರಾಂ , 25 ಮಿಗ್ರಾಂ ಅಥವಾ 50 ಮಿಗ್ರಾಂ ಪ್ಲೋಜಸಿರಾನ್ ನೀಡಲಾಗಿದೆ. 24 ವಾರಗಳ ಬಳಿಕ ಭಾಗಿದಾರರಲ್ಲಿ ಟ್ರೈಗ್ಲಿಸರೈಡ್ ಮಟ್ಟವು ಸುಮಾರು ಶೇ 50ರಷ್ಟು ಕಡಿಮೆಯಾಗಿರುವುದು ಕಂಡು ಬಂದಿದೆ.
ಪ್ಲೋಝಾಸಿರಾನ್ ಸುರಕ್ಷಿತ ಬಳಕೆಯನ್ನು ಹೊಂದಿದ್ದು, ಇದು ಅನುಕೂಲಕರ ಪರಿಣಾಮವನ್ನು ಹೊಂದಿದೆ. ಪರಿಹರಿಸಲಾಗದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಆರ್‌ಎನ್‌ಎ ಆಧಾರಿತ ಔಷಧಗಳನ್ನು ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.
ಇದನ್ನೂ ಓದಿ: ದೀರ್ಘಕಾಲ ಎಸಿ ಬಳಕೆಯಿಂದ ಏನೆಲ್ಲ ಸಮಸ್ಯೆ ಗೊತ್ತಾ?: ಒಣತ್ವಚೆ, ಅಸ್ತಮಾದ ಅಪಾಯ ಇದೆ ಅಂತಾರೆ ವೈದ್ಯರು