ETV Bharat / health

ಐ ಸ್ಟ್ರೋಕ್: ರೋಗಲಕ್ಷಣಗಳೇನು, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳೇನು? - Eye Stroke - EYE STROKE

ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವವರಲ್ಲಿ ವಯಸ್ಸಿನ ಭೇದವೇನಿಲ್ಲ. ವಿಶೇಷವಾಗಿ ಯುವಕರು ಇತ್ತೀಚೆಗೆ ಪಾರ್ಶವಾಯುಗೆ ತುತ್ತಾಗುತ್ತಿದ್ದಾರೆ. ಪಾರ್ಶ್ವವಾಯು ಎಂದರೆ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್ ಮಾತ್ರವೇ ಅಲ್ಲ. ಕಣ್ಣಿನ ಪಾರ್ಶ್ವವಾಯು ಸಹ ಇದೆ. ಹಾಗಾದರೆ ಕಣ್ಣಿನ ಸ್ಟ್ರೋಕ್ ಎಂದರೇನು? ಈ ರೋಗದ ಲಕ್ಷಣಗಳೇನು? ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು ಎಂಬುದನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ

Eye Stroke
ಐ ಸ್ಟ್ರೋಕ್ (ETV Bharat)
author img

By ETV Bharat Karnataka Team

Published : Jun 8, 2024, 9:49 AM IST

ಕಣ್ಣುಗಳು ನಮ್ಮ ದೇಹದ ಪ್ರಮುಖ ಭಾಗಗಳು. ನೇತ್ರಗಳನ್ನು ಬಹಳ ಎಚ್ಚರಿಕೆಯಿಂದ ಕಾಪಾಡಬೇಕು. ಆದರೆ ಅನೇಕರು ತಮ್ಮ ನಯನಗಳ ಬಗ್ಗೆ ಅಸಡ್ಡೆ ಹೊಂದಿರುತ್ತಾರೆ. ಏನಾದರೂ ಕಿರಿಕಿರಿ ಎನಿಸಿದಾಗ ಸಣ್ಣ ಪುಟ್ಟ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡುವುದುಂಟು. ಇದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಕಣ್ಣಿನ ಸಮಸ್ಯೆಗಳಲ್ಲಿ 'ಐ ಸ್ಟ್ರೋಕ್' ಕೂಡ ಒಂದು. ಈ ವಿಷಯದಲ್ಲಿ ಬಹಳ ಎಚ್ಚರ ವಹಿಸಬೇಕು. ಹಾಗಾದರೆ ಐ ಸ್ಟ್ರೋಕ್ ಎಂದರೇನು? ರೋಗಲಕ್ಷಣಗಳೇನು? ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿ ಕ್ರಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಐ ಸ್ಟ್ರೋಕ್ ಎಂದರೇನು? ಕಣ್ಣಿನ ಪಾರ್ಶ್ವವಾಯು ಅನ್ನು 'ರೆಟಿನಲ್ ಐಸ್ಕೇಮಿಯಾ' ಅಥವಾ 'ರೆಟಿನಲ್ ಡಿಸೀಸ್​​' ಎಂದೂ ಕರೆಯಲಾಗುತ್ತದೆ. ಇದು ಆರೋಗ್ಯಕ್ಕೆ ಅಪಾಯಕಾರಿ. ಕಣ್ಣಿನ ಆಪ್ಟಿಕ್ ನರದ ಮುಂಭಾಗದಲ್ಲಿರುವ ಅಂಗಾಂಶಗಳಿಗೆ ಸಾಕಷ್ಟು ಪ್ರಮಾಣದ ರಕ್ತ ಪೂರೈಕೆ ಆಗದೇ ಈ ಸಮಸ್ಯೆ ಉಂಟಾಗುತ್ತದೆ. ಆಪ್ಟಿಕ್ ಕಣ್ಣನ್ನು ಮೆದುಳಿಗೆ ಸಂಪರ್ಕಿಸುವ ನರ. ಇದು ಲಕ್ಷಾಂತರ ನರಗಳು, ರಕ್ತನಾಳಗಳನ್ನು ಹೊಂದಿರುತ್ತದೆ. ಹಾಗಾಗಿ ಇದನ್ನು ಮೊದಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಕೊಡುವುದು ಅತ್ಯಗತ್ಯ ಎಂದು 'ಹಾರ್ವರ್ಡ್ ಹೆಲ್ತ್' ಸಂಸ್ಥೆ ತಿಳಿಸಿದೆ.

ಕಣ್ಣಿನ ಪಾರ್ಶ್ವವಾಯುವಿನ ಲಕ್ಷಣಗಳು: ಈ ಸಮಸ್ಯೆ ಉಂಟಾದಾಗ ಬ್ಲ್ಯಾಕ್​​ ವಿಷನ್, ದೃಷ್ಟಿ ಮಂದವಾಗುವುದು ಮತ್ತು ಮುಂದಿರುವ ವಸ್ತು ಅಥವಾ ಮನುಷ್ಯರು ನೆರಳಿನಂತೆ ತೋರುವುದು ಸೇರಿದಂತೆ ಕೆಲ ಸಮಸ್ಯೆಗಳು ಉಂಟಾಗುತ್ತವೆ. ಸಮಸ್ಯೆ ಒಂದು ಕಣ್ಣಿನಲ್ಲಿ ಮಾತ್ರ ಇರುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವ ಅನೇಕರು ಬೆಳಗ್ಗೆ ಎದ್ದಾಗ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡತೆ ಬಾಸವಾಗುತ್ತದೆ. ನೋವು ಕಾಣಿಸಿಕೊಳ್ಳುವುದಿಲ್ಲ. ಆದರೆ ಕಣ್ಣು ಕೆಂಪಾದಂತೆ ಅಥವಾ ಊತ ಕಾಣಿಸಿಕೊಳ್ಳಬಹುದು. ಹೆಚ್ಚಿನ ಪ್ರಕಾಶವನ್ನು ನೋಡಲು ಸಾಧ್ಯವಾಗುವುದಿಲ್ಲ. ಜ್ವರ, ತಲೆನೋವು, ದವಡೆ ನೋವು, ತೂಕ ಇಳಿಕೆ, ಹಸಿವಾಗದಿರುವುದು, ಸುಸ್ತು ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.

ಐ ಸ್ಟ್ರೋಕ್​​​​ ಸಮಸ್ಯೆಗೆ ಕಾರಣಳೇನು?

  • ಮಧುಮೇಹ ಸಮಸ್ಯೆ ಹೊಂದಿರುವವರಿಗೆ ಕಣ್ಣಿನ ಪಾರ್ಶ್ವವಾಯು ಹೆಚ್ಚು ಸಮಸ್ಯೆ ತಂದೊಡ್ಡುತ್ತದೆ.
  • ಹೈ ಬಿಪಿ ಕೂಡ ಕಣ್ಣಿನ ಪಾರ್ಶ್ವವಾಯುವಿಗೆ ಅಪಾಯಕಾರಿ ಅಂಶವಾಗಿದೆ ಎಂದು ತಜ್ಞರು ಹೇಳುತ್ತಾರೆ.
  • ಅಧಿಕ ಕೊಲೆಸ್ಟ್ರಾಲ್ ಮಟ್ಟವು ಕಣ್ಣಿನ ಪಾರ್ಶ್ವವಾಯುವಿಗೆ ಕಾರಣವಾಗಬಹುದು.
  • ಐ ಸ್ಟ್ರೋಕ್‌ಗೆ ಧೂಮಪಾನ ಕೂಡ ಅಪಾಯಕಾರಿ ಅಂಶ.
  • ಗ್ಲುಕೋಮಾ ಹೈ ಸ್ಟ್ರೋಕ್​ಗೆ ಕಾರಣವಾಗಬಹುದು. ಗ್ಲುಕೋಮಾ ಕಣ್ಣಿನ ಕಾಯಿಲೆಯಾಗಿದ್ದು, ಆಪ್ಟಿಕ್ ನರಕ್ಕೆ ಹಾನಿ ಮಾಡಬಹುದು.

ಮುನ್ನೆಚ್ಚರಿಕೆ ಕ್ರಮಗಳು:

  • ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಪೋಷಕಾಂಶಭರಿತ ಆಹಾರವು ಐ ಸ್ಟ್ರೋಕ್​​ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಕೊಬ್ಬು ಮತ್ತು ಸೋಡಿಯಂ ಕಡಿಮೆ ಇರುವ ಆಹಾರ ಸೇವಿಸಲು ಸಲಹೆ ನೀಡುತ್ತಾರೆ.
  • "ನ್ಯೂರಾಲಜಿ" ಜರ್ನಲ್‌ನಲ್ಲಿ ಪ್ರಕಟವಾದ 2017ರ ಅಧ್ಯಯನವು, ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪೋಷಕಾಂಶ ಸಮೃದ್ಧವಾಗಿರುವ ಆಹಾರ ಸೇವಿಸುವ ಜನರಿಗೆ ಕಣ್ಣಿನ ಸ್ಟ್ರೋಕ್‌ ಆಗುವುದು ಕಡಿಮೆ ಎಂಬುದನ್ನು ಎಂದು ಕಂಡುಹಿಡಿದಿದೆ. ಈ ಸಂಶೋಧನೆಯಲ್ಲಿ, ಶಾಂಘೈನಲ್ಲಿರುವ ಫುಡಾನ್ ವಿಶ್ವವಿದ್ಯಾನಿಲಯದ ಸ್ಕೂಲ್​ ಆಫ್​ ಪಬ್ಲಿಕ್​ ಹೆಲ್ತ್​​​​ನ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಎಸ್. ಜಾಂಗ್ ಸಹ ಭಾಗವಹಿಸಿದ್ದರು.
  • ವಾರಕ್ಕೆ ಕನಿಷ್ಠ 30 ನಿಮಿಷಗಳ ವ್ಯಾಯಾಮ ಮಾಡುವುದರಿಂದ ಈ ಸಮಸ್ಯೆಯನ್ನು ತಪ್ಪಿಸಬಹುದು.
  • ನೀವು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದರೆ, ಆರೋಗ್ಯಕರ ವಿಧಾನದಲ್ಲಿ ತೂಕ ಕಡಿಮೆ ಮಾಡಿಕೊಳ್ಳುವ ಮೂಲಕ ಐ ಸ್ಟ್ರೋಕ್​ನಂತಹ ಅಪಾಯವನ್ನು ಕಡಿಮೆ ಮಾಡಬಹುದೆಂದು ತಜ್ಞರು ಹೇಳುತ್ತಾರೆ.
  • ನಿಮಗೆ ಅಧಿಕ ರಕ್ತದೊತ್ತಡವಿದ್ದರೆ ಅದನ್ನು ನಿಯಂತ್ರಣದಲ್ಲಿಡಿ. ಜೀವನಶೈಲಿಯ ಬದಲಾವಣೆಗಳು ಪ್ರಯೋಜನಕಾರಿಯಾಗಲಿದೆ.
  • ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ಕಣ್ಣಿನ ಪಾರ್ಶ್ವವಾಯುವಿನಂತಹ ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.
  • ಹೆಚ್ಚು ಆಲ್ಕೋಹಾಲ್ ಸೇವನೆ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಈ ಅಭ್ಯಾಸವನ್ನೂ ದೂರವಿಡಿ.
  • ಧೂಮಪಾನದಿಂದಲೂ ದೂರವಿರಿ.
  • ಹೊರಗೆ ಹೋಗುವಾಗ ಯುವಿ ಪ್ರೊಟೆಕ್ಷನ್​ ಸನ್​ಗ್ಲಾಸ್​ ಧರಿಸಿ.
  • ಹೈಡ್ರೇಟೆಡ್ ಆಗಿರಲು ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ.

ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ನೆನೆಸಿಟ್ಟ 'ಕೊತ್ತಂಬರಿ' ನೀರಿನಿಂದ ಏನೇನೆಲ್ಲ ಪ್ರಯೋಜನ ಉಂಟು ಗೊತ್ತಾ? - Coriander Water Benefits

ETV Bharat Logo

Copyright © 2025 Ushodaya Enterprises Pvt. Ltd., All Rights Reserved.