ಹೈದರಾಬಾದ್: ಹವಾಮಾನ ಬದಲಾವಣೆಯ ಪರಿಣಾಮವಾಗಿ ಜಗತ್ತಿನ ಸುಮಾರು ಅರ್ಧ ಬಿಲಿಯನ್ಗಿಂತ ಹೆಚ್ಚಿನ ಮಕ್ಕಳು ಪ್ರತಿ ವರ್ಷ ತೀವ್ರ ತಾಪಮಾನಕ್ಕೆ ಗುರಿಯಾಗುತ್ತಿದ್ದಾರೆ. ಈ ಶಾಖ ಪ್ರಮಾಣವು ಅವರ ಅಜ್ಜ-ಅಜ್ಜಿಯಂದಿರು ಎದುರಿಸಿದ್ದಕ್ಕಿಂತ ಹೆಚ್ಚಿದೆ. ಇದು ಮಾರಣಾಂತಿಕ ಪರಿಣಾಮಗಳ ಎಚ್ಚರಿಕೆಯಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಹವಾಮಾನ ಬದಲಾವಣೆಯು ನಿರಂತರವಾಗಿ ಜಗತ್ತಿನಲ್ಲಿ ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಕಳೆದ 60 ವರ್ಷಗಳ ಹಿಂದಿನದ್ದಕ್ಕೆ ಹೋಲಿಕೆ ಮಾಡಿದಾಗ 466 ಮಿಲಿಯನ್ ಮಕ್ಕಳು ಅಥವಾ ಐದರಲ್ಲಿ ಒಂದು ಮಗುವು ಪ್ರತಿ ವರ್ಷ ಶಾಖ ದುಪ್ಪಟ್ಟು ಆಗುತ್ತಿರುವ ಪ್ರದೇಶಗಳಲ್ಲಿ ಬದುಕುತ್ತಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ ಯುನಿಸೆಫ್ ತಿಳಿಸಿದೆ.
ಸಣ್ಣ ಮಕ್ಕಳ ದೇಹವು ವಯಸ್ಕರಂತೆ ಅಲ್ಲ. ಅವರು ತೀವ್ರ ಶಾಖಕ್ಕೆ ಒಡ್ಡಿಕೊಂಡಾಗ ದುರ್ಬಲವಾಗುತ್ತಾರೆ ಎಂದು ಯುನಿಸೆಫ್ನ ಮುಖ್ಯ ವಕೀಲ ಲಿಲೆ ಕ್ಯಾಪ್ರನಿ ಎಎಫ್ಪಿಗೆ ತಿಳಿಸಿದ್ದಾರೆ. ಅಲ್ಲದೇ ಈ ತೀವ್ರ ಶಾಖವು ಗರ್ಭಿಣಿಯರಿಗೆ ಅಪಾಯನ್ನುಂಟು ಮಾಡುತ್ತದೆ. ತೀವ್ರ ಶಾಖದ ಪರಿಣಾಮವಾಗಿ ಶಾಲೆಗಳನ್ನು ಬಲವಂತವಾಗಿ ಮುಚ್ಚಿಸಬೇಕಾಗುತ್ತದೆ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಈಗಾಗಲೇ 80 ಮಿಲಿಯನ್ ಮಕ್ಕಳು ಇದರ ಪರಿಣಾಮಕ್ಕೆ ಒಳಗಾಗಿದ್ದಾರೆ ಎಂದರು.
ಯುನಿಸೆಫ್ ತೀವ್ರ ಶಾಖವನ್ನು 35 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಗುರಿಯಾಗಿಸಿಕೊಂಡಿದೆ. 1960ರಿಂದ 2020-2024ರ ವರೆಗಿನ ಸಾಮಾನ್ಯ ತಾಪಮಾನವನ್ನು ಹೋಲಿಕೆ ಮಾಡಿದೆ. ಇಂತಹ ಬಿಸಿ ದಿನಗಳು ಹವಾನಿಯಂತ್ರಣದಂತಹ (ಎಸಿ) ಹೆಚ್ಚಿನ ತಾಪಮಾನವನ್ನು ನಿಭಾಯಿಸುವ ವಿಧಾನಗಳು ಇಡೀ ಜಗತ್ತಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಗಮನಿಸಿದೆ. ಈ ಬಿಸಿಲ ತಾಪಮಾನಕ್ಕೆ ಪಶ್ಚಿಮ ಮತ್ತು ಕೇಂದ್ರ ಆಫ್ರಿಕಾದ ಮಕ್ಕಳು ಹೆಚ್ಚು ಒಳಗಾಗುತ್ತಿದ್ದಾರೆ. ಈ ಪ್ರದೇಶದ 123 ಮಿಲಿಯನ್ ಅಂದರೆ ಶೇ. 39ರಷ್ಟು ಮಕ್ಕಳು ಈ ಪ್ರತಿ ವರ್ಷ 95 ಡಿಗ್ರಿ ಫ್ಯಾರನ್ಹೀಟ್ ಬಿಸಿಲಿನ ತಾಪಮಾನಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ.
ಅಧಿಕ ಮಟ್ಟದಲ್ಲಿ ಮಾಲಿ ಮಕ್ಕಳು ಒಳಗಾಗುತ್ತಿದ್ದಾರೆ. ಇಲ್ಲಿ ಎಸಿ ಎಂಬುದು ಮಿಲಿಯಾಂತರ ಜನರಿಗೆ ಕೈಗೆಟುಕದ ಸಾಧನವಾಗಿದ್ದು, ಅವರು ಫ್ಯಾನ್ನಲ್ಲಿಯೇ ಉಳಿಯಬೇಕಿದೆ. ಇಲ್ಲಿ 200 ದಿನಗಳ ಕಾಲ 35 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ ಹೊಂದಿದೆ. ಲ್ಯಾಟಿನ್ ಅಮೆರಿಕದಲ್ಲೂ 48 ಮಿಲಿಯನ್ ಮಕ್ಕಳು ಕೂಡ 60ವರ್ಷಗಳ ಹಿಂದಿಗಿಂತ ಈಗ ದುಪ್ಪಟ್ಟು ಶಾಖಕ್ಕೆ ಒಳಗಾಗುತ್ತಿದ್ದಾರೆ.
ಜಗತ್ತಿನಲ್ಲೆ ಈ ರೀತಿಯ ದುರಂತಗಳು ಮತ್ತಷ್ಟು ಕೆಟ್ಟದಾಗುತ್ತಿದ್ದು, ಇದು ಮಕ್ಕಳಿಗೆ ಮತ್ತಷ್ಟು ಹಾನಿಕಾರಕವಾಗಿದೆ. ಮಕ್ಕಳು ಸೂಕ್ಷ್ಮವಾಗಿರುತ್ತಾರೆ. ಅವರು ಬೇಗನೆ ಉಸಿರಾಡುತ್ತಾರೆ. ಅವರು ವಯಸ್ಕರಂತೆ ಬೆವರುವುದಿಲ್ಲ. ಶಾಖದ ಒತ್ತಡದಿಂದ ಹೆಚ್ಚು ದುರ್ಬಲಗೊಳ್ಳಬಹುದು. ಅಲ್ಲದೇ ಇದು ಮಾರಕವು ಆಗಬಹುದು.
ಅಧಿಕ ತಾಪಮಾನವು ಮಕ್ಕಳ ಅಪೌಷ್ಠಿಕತೆಗೆ ಕಾರಣವಾಗಬಹುದು. ದುರ್ಬಲಗೊಂಡ ಮಕ್ಕಳು ರೋಗಗಳಿಗೆ ಸುಲಭವಾಗಿ ತೆರೆದುಕೊಳ್ಳಬಹುದು. ಅದರಲ್ಲೂ ಮಲೇರಿಯಾ, ಡೆಂಗ್ಯೂ ಬೆಚ್ಚಗಿನ ತಾಪಮಾನದಿಂದ ಹರಡುತ್ತದೆ ಎಂದು ಯುನಿಸೆಫ್ ಎಚ್ಚರಿಕೆ ನೀಡಿದೆ. ಅಧಿಕ ಶಾಖ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಶಾಖದ ಹೊಡೆತದ ಚಿಹ್ನೆಗಳನ್ನು ಹೆಚ್ಚಿನ ಶಿಕ್ಷಣ ನೀಡಬೇಕು. ಬಿಸಿ ತಾಪಮಾನದಲ್ಲಿ ಶಾಲೆ ರದ್ದು ಬದಲಾಗಿ ವೈದ್ಯಕೀಯ ಸಿಬ್ಬಂದಿಗೆ ಉತ್ತಮ ತರಬೇತಿ ಮತ್ತು ಶಾಲೆಗಳಲ್ಲಿ ಹವಾನಿಯಂತ್ರಣಕ್ಕೆ ಹೂಡಿಕೆ ಮಾಡುವುದು ಅಗತ್ಯ ಎಂದು ಯುನಿಸೆಫ್ ತಿಳಿಸಿದೆ.
ಸರ್ಕಾರಗಳು ಪ್ರಸ್ತುತ ತಮ್ಮ ರಾಷ್ಟ್ರೀಯ ಹವಾಮಾನ ಕ್ರಿಯಾ ಯೋಜನೆಗಳನ್ನು ರಚಿಸುತ್ತಿದೆ. ಇದು ಇಂದಿನ ಮಕ್ಕಳು ಮತ್ತು ಭವಿಷ್ಯದ ಪೀಳಿಗೆಗಳು ಬದುಕುವ ಉದ್ದೇಶ ಹೊಂದಿದೆ ಎಂದು ಯುನಿಸೆಫ್ ಮುಖ್ಯಸ್ಥೆ ಕ್ಯಾಥರನ್ ರುಸೆಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಗಾಜಿನ ಬಳೆ ಉದ್ಯಮದ ಮೇಲೆ ಹವಾಮಾನ ಬದಲಾವಣೆ ಪರಿಣಾಮ; ಒಳ-ಹೊರಗಿನ ಶಾಖದಿಂದ ಕಾರ್ಮಿಕರು ಹೈರಾಣ