ETV Bharat / health

ಎಚ್ಚರಿಕೆ! ಗರ್ಭಿಣಿಯರು ಪೇರಳೆ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ?: ಸಂಶೋಧನೆಗಳು ಹೇಳಿದ್ದೇನು? - Can Pregnant Women Eat Guava - CAN PREGNANT WOMEN EAT GUAVA

ಗರ್ಭಿಣಿಯರು ಪೇರಳೆ ಹಣ್ಣು ಸೇವನೆ ಮಾಡುವುದರಿಂದ ಏನಾಗುತ್ತದೆ ಎಂದು ತಜ್ಞರು ಸಂಪೂರ್ಣ ಮಾಹಿತಿ ನೀಡಿದ್ದು, ಇಲ್ಲಿದೆ ಅದೆಲ್ಲದರ ಪೂರ್ಣ ವಿವರ.

ಪೇರಳೆ ಹಣ್ಣು ಸೇವನೆ ಪ್ರಯೋಜನಗಳು
ಪೇರಳೆ ಹಣ್ಣು ಸೇವನೆ ಪ್ರಯೋಜನಗಳು (ETV Bharat)
author img

By ETV Bharat Karnataka Team

Published : Jun 15, 2024, 9:48 AM IST

Can Pregnant Women Eat Guava: ಹೆಚ್ಚಿನ ಜನರು ಗರ್ಭಧಾರಣೆ ಸಮಯದಲ್ಲಿ ಹುಟ್ಟುವ ಮುಗು ಆರೋಗ್ಯವಂತವಾಗಿರಬೇಕು ಎಂದು ತಿನ್ನುವ ಆಹಾರದಿಂದ ಹಿಡಿದು ಕುಡಿಯುವ ಪಾನಿಯಗಳವರೆಗೆ ಹೆಚ್ಚಿನ ಜಾಗ್ರತೆ ವಹಿಸುತ್ತಾರೆ. ಅದರಲ್ಲೂ ತಾಜಾ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದರೇ ಹೆಚ್ಚಿನ ಗರ್ಭಿಣಿಯರು ಪ್ರೆಗ್ನೆನ್ಸಿ ಸಮಯದಲ್ಲಿ ಪೇರಳೆ ಹಣ್ಣು ತಿನ್ನಬೇಕೆ ಅಥವಾ ಬೇಡವೇ ಎಂಬ ಗೊಂದಲದಲ್ಲಿರುತ್ತಾರೆ. ಹಾಗಾದ್ರೆ ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ಇಲ್ಲಿ ತಿಳಿಯಿರಿ.

ಪೇರಳೆ ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್​ ಸಿ, ಎ, ಬಿ6, ಪೊಟ್ಯಾಷಿಯಂ, ಫೈಬರ್​, ಲುಟೆನ್​ನಂತಹ ಪೋಷಕಾಂಶಗಳು ಇದರಲ್ಲಿವೆ. ಹಾಗಾಗಿ ಈ ಹಣ್ಣು ಗರ್ಭಿಣಿಯರಿಗೆ ಹೆಚ್ಚಿನ ಪ್ರಯೋಜನಕಾರಿಯಾಗಿದ್ದು, ಇದನ್ನು ಸೇವಿಸಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಂತ ಅತೀ ಹೆಚ್ಚು ಸೇವನೆ ಮಾಡದೇ ದಿನಕ್ಕೆ 100 ರಿಂದ 150 ಗ್ರಾಂ ನಷ್ಟು ಸೇವನೆ ಮಾಡುವುದು ಉತ್ತಮ. ಈ ಕ್ರಮದಲ್ಲಿ ಹಣ್ಣನ್ನು ಸೇವನೆ ಮಾಡುವುದರಿಂದ ಗರ್ಭಿಣಿಯರ ಆರೋಗ್ಯವು ಉತ್ತಮವಾಗಿರಲಿದೆ ಎಂದು ತಜ್ಞರು ಹೇಳುತ್ತಾರೆ. ಬೆಳಗಿನ ಜಾವ ಪೇರಳೆ ಸೇವಿಸುವುದರಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ಇದೀಗ ತಿಳಿಯೋಣ

ರೋಗ ನಿರೋಧಕ ಶಕ್ತಿ ಹೆಚ್ಚಳ: ಪೇರಳೆಯಲ್ಲಿ ವಿಟಮಿನ್​-ಇ, ಸಿ, ಬಿ ಇರಲಿದ್ದು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಲಿದೆ. ಗರ್ಭಧಾರಣೆ ಸಮಯದಲ್ಲಿ ರೋಗ ನಿರೋಧಕ ಕುಂಠಿತಗೊಳ್ಳದ್ದಂತೆ ಮಾಡುತ್ತದೆ. ಅಲ್ಲದೇ ಇದು ಹುಟ್ಟುವ ಮಗುವೂ ಕೂಡ ಆರೋಗ್ಯವಂತವಾಗಿರುವಂತೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಡಯಾಬಿಟಿಸ್​: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಗರ್ಭಧರಿಸಿದ ಬಳಿಕ ಮಧುಮೇಹ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದನ್ನು ತಡೆಯಲು ಪೇರಳೆ ಹಣ್ಣು ಸೇವಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. 2017 ರಲ್ಲಿ ನ್ಯೂಟ್ರಿಷನ್ ಮತ್ತು ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಗರ್ಭಿಣಿಯರು ಪೇರಳೆಯನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು, ಜೊತೆಗೆ ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ರಕ್ತದೊತ್ತಡವನ್ನು ಸುಧಾರಿಸಬಹುದು ಎಂದು ಕಂಡು ಹಿಡಿದಿದ್ದಾರೆ. ಇರಾನ್‌ನ ಶಿರಾಜ್ ವಿಶ್ವವಿದ್ಯಾಲಯದ ಪೌಷ್ಟಿಕತಜ್ಞ ಡಾ.ಮೆಹದಿ ಅಲಿ ಅಬ್ದುಲ್ಲಾ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.

ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತೆ: ಪೇರಳೆಯಲ್ಲಿರುವ ನೀರಿನಂಶವು ದೇಹದಲ್ಲಿ ದ್ರವ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಗರ್ಭಿಣಿಯರಲ್ಲಿ ನೀರಿನಂಶ ಕಡಿಮೆಯಾಗುವುದನ್ನು ತಡೆಯುವಲ್ಲಿ ಪೇರಳೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತದೆ.

ಕಬ್ಬಿಣದ ಅಂಶ​: ಗರ್ಭಾವಸ್ಥೆಯಲ್ಲಿ ಮಹಿಳೆಯರು ಸಾಕಷ್ಟು ಕಬ್ಬಿಣಾಂಶ ಹೊಂದಿರುವುದು ಬಹಳ ಮುಖ್ಯ. ಪೇರಳೆಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣಾಂಶವಿದೆ ಎಂದು ಹೇಳಲಾಗುತ್ತದೆ. ಇದು ದೇಹಕ್ಕೆ ಸಾಕಷ್ಟು ಕಬ್ಬಿಣಾಂಶವನ್ನು ಹೊಂದಲು ಸಹಕಾರಿಯಾಗಲಿದೆ ಎಂದು ತಜ್ಞರು ಹೇಳುತ್ತಾರೆ.

  • ಪೇರಳೆಯಲ್ಲಿರುವ ಫೋಲೇಟ್ ಶಿಶುಗಳಲ್ಲಿನ ನ್ಯೂರಲ್ ಟ್ಯೂಬ್ ದೋಷಗಳನ್ನು ತಡೆಯಲು ಸಹಾಯ ಮಾಡುತ್ತದೆ.
  • ಪೇರಳೆಯಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ
  • ಪೇರಳೆಯಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ವೈರಸ್ ಗುಣಲಕ್ಷಣಗಳು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
  • ಪೇರಳೆ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಅಂತಾರೆ ಸಂಶೋಧಕರು.

ವಿಶೇಷ ಸೂಚನೆ: ಇಲ್ಲಿ ನೀಡಿರುವ ಎಲ್ಲ ಮಾಹಿತಿಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ, ಯಾವುದನ್ನೂ ಅನುಸರಿಸುವ ಮುನ್ನ ನಿಮ್ಮ ಮನೆಯ ವೈದ್ಯರನ್ನು ಅಥವಾ ಸಂಬಂಧಪಟ್ಟಂತ ಪರಿಣತರ ಸಲಹೆ ಪಡೆದು ಮುಂದುವರೆಯುವುದು ಉತ್ತಮ

ಇದನ್ನೂ ಓದಿ: ನಿಮ್ಮ ಕೂದಲು ಉದರದಂತೆ ತಡೆಯಬೇಕೇ, ನೈಸರ್ಗಿಕ ತೈಲಗಳನ್ನೇ ಬಳಸಿ,: ದಪ್ಪ ಕೂದಲು, ಡ್ಯಾಂಡ್ರಫ್ ಮುಕ್ತ ಆಗೋದಂತೂ ಪಕ್ಕಾ! - WHICH BEST NATURAL OILS FOR HAIR

ETV Bharat Logo

Copyright © 2025 Ushodaya Enterprises Pvt. Ltd., All Rights Reserved.