ETV Bharat / health

ನಿತ್ಯ ಬೇಡ, ವಾರಕ್ಕೆ ಎರಡೂ ದಿನ ವ್ಯಾಯಾಮ ಮಾಡಿದರೂ ಸಿಗತ್ತೆ ಅದ್ಬುತ ಪ್ರಯೋಜನ: ತಜ್ಞರು - Exercising even once a week - EXERCISING EVEN ONCE A WEEK

ವ್ಯಾಯಾಮ ಮಾಡದೇ ಇರುವುದಕ್ಕಿಂತ ವಾರದಲ್ಲಿ ಒಂದು ಅಥವಾ ಎರಡು ದಿನ ವ್ಯಾಯಾಮ ಮಾಡುವುದು ಉತ್ತಮ

http://10.10.50.85:6060/reg-lowres/25-March-2024/exercise-new_2503newsroom_1711357773_502.jpg

author img

By ETV Bharat Karnataka Team

Published : Mar 25, 2024, 3:30 PM IST

ನವದೆಹಲಿ: ಆರೋಗ್ಯಯುತ ಜೀವನಶೈಲಿಗೆ ನಿಯಮಿತ ವ್ಯಾಯಾಮ ಅವಶ್ಯ. ಆದರೆ, ನಿತ್ಯ ವ್ಯಾಯಾಮ ಮಾಡಲು ಸಾಧ್ಯವಿಲ್ಲ ಎಂಬ ಚಿಂತೆ ಕಾಡುತ್ತಿದ್ದರೆ, ಪರವಾಗಿಲ್ಲ. ವಾರದಲ್ಲಿ ಒಂದೇ ದಿನವೇ ವ್ಯಾಯಾಮ ಮಾಡಿ, ಯಾವುದೇ ದೈಹಿಕ ಚಟುವಟಿಕೆ ಇಲ್ಲದಿರುವಿಕೆಗಿಂತ ವಾರದಲ್ಲಿ ಮಾಡುವ ಒಂದು ದಿನದ ವ್ಯಾಯಾಮವೇ ಸಾಕಷ್ಟು ಪ್ರಯೋಜನ ನೀಡುತ್ತದೆ ಎಂದು ಹೈದರಾಬಾದ್​ ಮೂಲದ ನರರೋಗಶಾಸ್ತ್ರಜ್ಞರು ತಿಳಿಸಿದ್ದಾರೆ.

ಹೈದರಾಬಾದ್​​ ಡಾಕ್ಟರ್​ ಎಂದೇ ಎಕ್ಸ್​.ಕಾಂನಲ್ಲಿ ಚಿರಪರಿಚಿತ ಆಗಿರುವ ವೈದ್ಯರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾತನಾಡಿದ್ದಾರೆ. ಇತ್ತೀಚಿನ ಅಧ್ಯಯನ ಮಂಡಿಸಿರುವ ಅವರು ವಾರಾಂತ್ಯದಲ್ಲಿ ಮಾತ್ರ ವ್ಯಾಯಾಮದಂತೆ ಚಟುವಟಿಕೆ ನಡೆಸುವವರನ್ನು ವಾರಾಂತ್ಯದ ಯೋಧರು ಎಂದಿದ್ದಾರೆ.

ತುಂಬಾ ಬ್ಯುಸಿ ಇರುವವರು ವಾರಾಂತ್ಯದ ವ್ಯಾಯಾಮ ನಡೆಸಬಹುದಾಗಿದೆ ಎಂದಿದ್ದಾರೆ. ಈ ಕುರಿತ ಅಧ್ಯಯನವನ್ನು ಬಿಎಂಜೆಯಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನಕ್ಕೆ ಎರಡು ದಶಕಗಳ ಕಾಲ 1,50,000 ಜನರನ್ನು ಗಮನಿಸಲಾಗಿದೆ. ಅಧ್ಯಯನದ ಫಲಿತಾಂಶದಲ್ಲಿ ವಾರದಲ್ಲಿ ಒಂದು ಅಥವಾ ಎರಡು ದಿನ ವ್ಯಾಯಾಮ ಮಾಡುವವರು, ವಾರದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ದಿನ ವ್ಯಾಯಾಮ ಮಾಡುವವರಷ್ಟೇ ಪ್ರಮಾಣದಲ್ಲಿ ಶೇ 15ರಷ್ಟು ಅಕಾಲಿಕ ಸಾವಿನ ಅಪಾಯ ಕಡಿಮೆ ಮಾಡಬಹುದು. ಆದಾಗ್ಯೂ ಈ ವ್ಯಾಯಾಮದ ಪ್ರಯೋಜನ ಸಮಯದ ಮೇಲೆ ಆಧಾರವಾಗಿದ್ದು, ವಾರಾಂತ್ಯ ವ್ಯಾಯಾಮ ಮಾಡುವವರು ಕನಿಷ್ಠ 30 - 60 ನಿಮಿಷ ವ್ಯಾಯಾಮ ಮಾಡಬೇಕು.

ಅಧ್ಯಯನದ ಫಲಿತಾಂಶವೂ ಸಲಹೆ ನೀಡುವಂತೆ, ಬಿಡುವಿರದ ಕೆಲಸದಲ್ಲಿ ನಿರತರಾಗಿರುವ ವಯಸ್ಕರು ವಾರದಲ್ಲಿ ಒಂದು ಅಥವಾ ಎರಡು ದಿನ ವ್ಯಾಯಾಮ ನಡೆಸುವುದರಿಂದ ಪ್ರಯೋಜನ ಪಡೆಯಬಹುದು ಎಂದು ಕೊಲೊಂಬಿಯಾದ ಡೆ ಲೊಸ್​ ಆ್ಯಂಡೆಸ್​ ಯುನಿವರ್ಸಿಟಿಯ ಸಂಶೋಧಕರು ತಿಳಿಸಿದ್ದಾರೆ

ವ್ಯಾಯಾಮ ಮಾಡದೇ ಇರುವುದಕ್ಕಿಂತ ವಾರದಲ್ಲಿ ಒಂದು ದಿನ ವ್ಯಾಯಾಮ ಮಾಡುವುದು ಉತ್ತಮ. ಈ ವ್ಯಾಯಾಮದ ಅವಧಿ ಕನಿಷ್ಠ 30 - 60 ನಿಮಿಷ ಇರಬೇಕು ಎಂದು ಹೈದರಾಬಾದ್​ನ ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ವಾರದಲ್ಲಿ 150 ನಿಮಿಷಗಳ ಕಾಲದ ಸುಧಾರಿತ - ತೀವ್ರತರ ದೈಹಿಕ ಚಟುವಟಿಕೆ ನಡೆಸುವುದು ಉತ್ತಮ ಎಂದು ಶಿಫಾರಸು ಮಾಡಿದೆ.

ವಾರದಲ್ಲಿ 2 - 3 ದಿನ ಏರೋಬಿಕ್​ ಅಥವಾ ವಾರದಲ್ಲಿ 2-3 ದಿನ ಸ್ಟ್ರೆಂಥನಿಂಗ್ ವ್ಯಾಯಾಮ ಆಯ್ಕೆ ಮಾಡುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು ಎಂದಿದ್ದಾರೆ ವೈದ್ಯರು​. (ಐಎಎನ್​ಎಸ್​)

ಇದನ್ನೂ ಓದಿ: ನಿತ್ಯ ವಾಕಿಂಗ್​ ಮಾಡುತ್ತಿದ್ದಿರಾ?, ಈ ಸಮಯದಲ್ಲಿ ಮಾಡಿದ್ರೆ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.