ETV Bharat / health

ಗೆಡ್ಡೆಗಳಿಂದ ಬೇರುಗಳವರೆಗೆ ಸಾಕಷ್ಟು ಪ್ರಯೋಜನ: ನುಗ್ಗೆಯ ಈ ವಿಷಯಗಳು ನಿಮಗೆ ತಿಳಿದಿದೆಯೇ? - Drumstick Health Benefits

ಸಾಕಷ್ಟು ಹಳ್ಳಿ ಮಂದಿ ನುಗ್ಗೆ ಮರದ ಎಲೆಗಳನ್ನು ಇಷ್ಟಪಡುತ್ತಾರೆ. ಅವುಗಳ ಜೊತೆಗೆ ಸಾಂಬಾರ್, ಚಟ್ನಿ, ಪಲ್ಯ ಮುಂತಾದ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸಿ ತಿನ್ನುತ್ತಾರೆ. ಹಾಗಾದರೆ, ನುಗ್ಗೆ ಸೊಪ್ಪು, ನುಗ್ಗೆಕಾಯಿ ಹಾಗೂ ಬೇರಿನಿಂದ ಸಿಗುವ ಪ್ರಯೋಜನಗಳು ಏನು ಎಂಬುದು ಗೊತ್ತಾ. ಗೊತ್ತಿಲ್ಲ ಎಂದರೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಗೆಡ್ಡೆಗಳಿಂದ ಬೇರುಗಳವರೆಗೆ ಸಾಕಷ್ಟು ಪ್ರಯೋಜನ: ನುಗ್ಗೆಯ ಈ ವಿಷಯಗಳು ನಿಮಗೆ ತಿಳಿದಿದೆಯೇ?

author img

By ETV Bharat Karnataka Team

Published : Apr 27, 2024, 7:49 AM IST

ಬೆಂಗಳೂರು: ಪ್ರಕೃತಿಯಲ್ಲಿರುವ ಪ್ರತಿಯೊಂದು ಮರಕ್ಕೂ ವಿಶೇಷವಾದ ಸ್ಥಾನವಿದೆ. ಹಾಗೂ ಅದರಿಂದ ಹಲವು ಪ್ರಯೋಜನಗಳೂ ಇವೆ. ಆಯುರ್ವೇದ ಮತ್ತು ಸಸ್ಯಶಾಸ್ತ್ರದ ಪ್ರಕಾರ ಪ್ರತಿಯೊಂದು ಸಸ್ಯವು ಕೆಲವು ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಅದ್ಭುತ ಸಸ್ಯಗಳಲ್ಲಿ ಒಂದು ನುಗ್ಗೆ ಗಿಡ. ನುಗ್ಗೆ ಮರದಲ್ಲಿ ಒಂದಲ್ಲ ನೂರಾರು ಔಷಧೀಯ ಗುಣಗಳಿವೆ.

ನುಗ್ಗೆ ಸೊಪ್ಪು , ಕಾಯಿಗಳು, ತೊಗಟೆ, ಹೂವು, ಬೇರುಗಳು ಔಷಧಗಳ ತಯಾರಿಕೆಯಲ್ಲಿ ಉಪಯುಕ್ತವಾಗಿವೆ. ಅಷ್ಟೇ ಏಕೆ ಇವುಗಳೆಲ್ಲ ಅದ್ಭುತ ಪ್ರಯೋಜನಗಳನ್ನು ಹೊಂದಿವೆ. ನುಗ್ಗೆ ಮರಕ್ಕೆ ಅನೇಕ ರೀತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಇದೆ.

ಚರ್ಮದ ಆರೈಕೆ: ನುಗ್ಗೆ ಸೊಪ್ಪು ಮಂದ ತ್ವಚೆಯನ್ನು ಪುನರ್​ಯೌವನಗೊಳಿಸುತ್ತದೆ. ಇದು ಚರ್ಮವನ್ನು ಯುವ ಮತ್ತು ಮೃದುವಾಗಿಸುತ್ತದೆಯಲ್ಲದೇ ಆರೋಗ್ಯಕರ ಹೊಳಪನ್ನು ನೀಡುತ್ತದೆ. ನುಗ್ಗೆ ಸೊಪ್ಪಿನ ಪೇಸ್ಟ್ ಹಚ್ಚುವುದರಿಂದ ಮೊಡವೆ, ಕಲೆಗಳು ಕಡಿಮೆಯಾಗುತ್ತವೆ ಎನ್ನುತ್ತಾರೆ ಬ್ಯೂಟಿಷಿಯನ್ ಗಳು.

ಕೂದಲಿನ ಬೆಳವಣಿಗೆಗೆ ನುಗ್ಗೆ ಸೊಪ್ಪು, ಬೇರಿನ ರಸ ಕೂಡ ಕೂದಲ ರಕ್ಷಣೆಗೆ ತುಂಬಾ ಸಹಕಾರಿಯಾಗಿದೆ. ಇದನ್ನು ತಲೆಗೆ ಹಚ್ಚುವುದರಿಂದ ತಲೆಹೊಟ್ಟು ಕಡಿಮೆಯಾಗಿ ಕೂದಲು ದಟ್ಟವಾಗುತ್ತದೆ. ನುಗ್ಗೆಸೊಪ್ಪಿನ ಜ್ಯೂಸ್ ಕೂದಲ ಬುಡವನ್ನು ಸ್ಟ್ರಾಂಗ್ ಮಾಡಲು ಚೆನ್ನಾಗಿ ಕೆಲಸ ಮಾಡುತ್ತದೆ.

ಉರಿಯೂತ ನಿವಾರಕ: ನುಗ್ಗೆ ಸೊಪ್ಪು ಐಸೋಥಿಯೋಸೈನೇಟ್‌ಗಳನ್ನು ಹೊಂದಿದೆ. ಇದು ದೇಹದ ಅನೇಕ ಸ್ಥಳಗಳಲ್ಲಿ ಊತ ಮತ್ತು ನೋವಿನಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೇ ವಿಟಮಿನ್-ಸಿ, ಝೆಟಿನ್, ಕ್ಲೋರೊಜೆನಿಕ್ ಆಮ್ಲದಂತಹ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ರೋಗಗಳಿಂದ ರಕ್ಷಿಸುತ್ತದೆ.

ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನುಗ್ಗೆ ಸೊಪ್ಪು ಉತ್ತಮ ಔಷಧಿ ಎಂದು ಹೇಳಬಹುದು. ದೇಹದ ಕೊಬ್ಬನ್ನು ಕಡಿಮೆ ಮಾಡುವಲ್ಲಿ ನುಗ್ಗೆ ಮಹತ್ತರ ಪಾತ್ರ ವಹಿಸುತ್ತದೆ ಎಂಬುದು ಆಯುರ್ವೇದದಲ್ಲಿ ಸಾಬೀತಾಗಿದೆ. ನುಗ್ಗೆ ಅಥವಾ ನುಗ್ಗೆಕಾಯಿ ಹಾಕಿದ ದಾಲ್ ತಿನ್ನುವುದರಿಂದ ಹೃದ್ರೋಗದ ಅಪಾಯ ಕಡಿಮೆ ಆಗುತ್ತದೆ. ಇನ್ನು ಇದರಿಂದ ಕೊಲೆಸ್ಟ್ರಾಲ್ ಕೂಡಾ ನಿಯಂತ್ರಣಕ್ಕೆ ಬರುತ್ತದೆ. ತೂಕಕ್ಕೆ ಸಂಬಂಧಿಸಿದಂತೆ ದಿನನಿತ್ಯದ ಆಹಾರದಲ್ಲಿ ನುಗ್ಗೆಸೊಪ್ಪು, ಕಾಯಿ, ಬೇರು ಸೇವನೆ ಮಾಡುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಯಕೃತ್ತಿನ ರಕ್ಷಣೆ: ನುಗ್ಗೆ ಸೊಪ್ಪಿನ ಪೇಸ್ಟ್ ಮತ್ತು ನುಗ್ಗೆ ಪುಡಿ ಕ್ಷಯ ವಿರೋಧಿ ಔಷಧಿಗಳಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ಎದುರಿಸಲು ಉತ್ತಮ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಹಾನಿಗೊಳಗಾದ ಯಕೃತ್ತಿನ ಕೋಶಗಳನ್ನು ಸರಿಪಡಿಸಲು, ಆಕ್ಸಿಡೀಕರಣದ ಮಟ್ಟವನ್ನು ಕಡಿಮೆ ಮಾಡಲು, ಪ್ರೋಟೀನ್ ಮಟ್ಟವನ್ನು ಸುಧಾರಿಸಲು ನುಗ್ಗೆ ಮರದ ಎಲ್ಲ ಭಾಗಗಳು ರಾಮಬಾಣವಾಗಿವೆ.

ಇದನ್ನು ಓದಿ: ಬಾಯಿಚಪ್ಪರಿಸಿ ಕೇಕ್​, ಬಿಸ್ಕೆಟ್​, ಬ್ರೇಡ್​ ತಿನ್ನುವ ಮುನ್ನ ಎಚ್ಚರ; ಯಾಕೆ ಎಂದರೆ? - processed foods may raise diabetes

ETV Bharat Logo

Copyright © 2024 Ushodaya Enterprises Pvt. Ltd., All Rights Reserved.