ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 11' ಆರನೇ ವಾರಾಂತ್ಯ ಸಮೀಪಿಸಿದೆ. ಎಲಿಮಿನೇಶನ್ಗೂ ಮುನ್ನ ಮನೆಯಲ್ಲಿ ಕ್ಯಾಪ್ಟನ್ಸಿಗಾಗಿ ಕಾದಾಟ ಶುರುವಾಗಿದೆ. ಈ ವಾರದ ಟಾಸ್ಕ್ಗಳು ಹೇಗಿದ್ದವು ಎಂದರೆ, ನಾಮಿನೇಶನ್ನಿಂದ ಪಾರಾಗುವ ಅವಕಾಶಗಳೂ ಇದ್ದವು. ಇದೀಗ ಕ್ಯಾಪ್ಟನ್ ಆಗಲು ಯಾರು ಸೂಕ್ತರು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅವಕಾಶವನ್ನು ಮನೆ ಮಂದಿಗೆ ನೀಡಲಾಗಿದೆ.
''ಮನೆಯವರ ಅಭಿಪ್ರಾಯಗಳಿಗೆ ಕನ್ನಡಿ ಹಿಡಿದ ಭವ್ಯಾ!'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ - ಶುಕ್ರ ರಾತ್ರಿ 9:30ಕ್ಕೆ ಎಂಬ ಕ್ಯಾಪ್ಷನ್ನೊಂದಿಗೆ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಲಾಗಿದೆ. ಹೆಚ್ಚಿನವರು ಭವ್ಯಾ ಕ್ಯಾಪ್ಟನ್ ಆಗಲು ಸೂಕ್ತವಲ್ಲ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ನಂತರ ಅವರ ಅಭಿಪ್ರಾಯಗಳಿಗೆ ಭವ್ಯಾ ಅವರೇ ಕನ್ನಡಿ ಹಿಡಿದಂತೆ ತೋರಿದೆ. ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.
ಭವ್ಯಾ ಮತ್ತು ತ್ರಿವಿಕ್ರಮ್ ಅವರ ಪೈಕಿ, ಮುಂದಿನ ಕ್ಯಾಪ್ಟನ್ ಆರಿಸಲು ಬಿಗ್ ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ನೀಡಿದ್ದಾರೆ. ಮನೆ ಮಂದಿ ಓಡಿ ಹೋಗಿ ಅಲ್ಲಿಟ್ಟ ಬ್ಲ್ಯಾಕ್ ಕಲರ್ ತೆಗೆದುಕೊಳ್ಳಬೇಕಿದೆ. ಕಲರ್ ಬಾಟಲ್ ತೆಗೆದುಕೊಂಡವರಿಗೆ, ಮುಂದಿನ ಕ್ಯಾಪ್ಟನ್ ಲಿಸ್ಟ್ನಿಂದ ಓರ್ವರನ್ನು ಹೊರಗಿಡುವ ಅವಕಾಶ ಸಿಗಲಿದೆ. ಅದರಂತೆ ಕೆಲವರಿಗಷ್ಟೇ ಈ ಅವಕಾಶ ಸಿಕ್ಕಿದ್ದು, ಹೆಚ್ಚಿನವರು ಭವ್ಯಾ ಅವರ ಹೆಸರು ಹೇಳಿದ್ದಾರೆ. ಭವ್ಯಾ ಹೆಸರು ತೆಗೆದುಕೊಂಡ ಗೌತಮಿ, ಬಹಳಷ್ಟು ಜಾಗದಲ್ಲಿ ಭೇದ ಭಾವ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕಳೆದ ವಾರ ಸ್ವಲ್ಪ ಡಲ್ ಆಗಿದ್ರು ಎಂದು ಧರ್ಮ ತಿಳಿಸಿದ್ದಾರೆ. ಕೆಲವು ಪದಗಳು ಈ ಮನೆಯಲ್ಲಿ ಸೂಕ್ತವಲ್ಲ ಅಂತಾ ಮಂಜು ತಿಳಿಸಿದ್ರೆ, ಆ ಪದಗಳನ್ನು ತಗೊಳೋ ಶಕ್ತಿ ನನಗಿಲ್ಲ ಎಂದು ಗೌತಮಿ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ಜೊತೆ ಹೊಂಬಾಳೆ ಫಿಲ್ಮ್ಸ್ನ 3 ಸಿನಿಮಾ ಘೋಷಣೆ: ಬಿಡುಗಡೆಗೂ ಮುಹೂರ್ತ ಫಿಕ್ಸ್, 'ಸಲಾರ್ 2' ಮೊದಲ ಚಿತ್ರ
ಅಭಿಪ್ರಾಯ ವ್ಯಕ್ತವಾದ ನಂತರ ಈ ಬಗ್ಗೆ ಭವ್ಯಾ ತಮ್ಮವರೊಂದಿಗೆ ತಮ್ಮ ರಿಯಾಕ್ಷನ್ ಕೊಟ್ಟಿದ್ದಾರೆ. ನನಗೆ ನಾನೇ ಶ್ರೇಷ್ಠ ಎಂದು ಹೇಳಿಕೊಂಡಿದ್ದಾರೆ. ಅವರೇ ಆ್ಯಕ್ಟೀವ್ ಆಗಿಲ್ಲ, ನನ್ ಆ್ಯಕ್ಟಿವಿಟಿ ಬಗ್ಗೆ ಮಾತನಾಡುತ್ತಾರೆ ಎಂದು ಧರ್ಮ ಬಗ್ಗೆ ವ್ಯಂಗ್ಯವಾಡಿದ್ದಾರೆ. ನನಗೆ ತಡ್ಕೊಳೋ ಶಕ್ತಿ ಇಲ್ಲ ಅಂದ್ರೆ ಈ ಮನೆಗೆ ಯಾಕ್ ಬರಬೇಕಿತ್ತು. ಇವರತ್ರ ಅದೆಂಥಾ ಪಾಸಿಟಿವಿಟಿ ಇದೆ ಅಂತಾ ಗೌತಮಿ ಬಗ್ಗೆ ಟೀಕಿಸಿದ್ದಾರೆ. ನಾನ್ ಎಲ್ಲರಿಗಿನ್ನ ಬೆಟರ್. ಅವರಿಗೆ ಅವರೇ ಸುಪೀರಿಯರ್ ಅಂದ್ಕೊಂಡ್ರೆ ನನಿಗ್ ನಾನೇ ಡಬಲ್ ಸುಪೀರಿಯರ್ ಎಂದು ಹೇಳುವ ಮೂಲಕ ಮನೆಯವರ ಅಭಿಪ್ರಾಯಗಳಿಗೆ ಕನ್ನಡಿ ಹಿಡಿದಿದ್ದಾರೆ. ಪ್ರೋಮೋ ಪ್ರೇಕ್ಷಕರ ಕುತೂಹಲ ಕೆರಳಿಸಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಕಾತರರಾಗಿದ್ದಾರೆ.
ಇದನ್ನೂ ಓದಿ: 'ನವಗ್ರಹ' ಮರು ಬಿಡುಗಡೆ: ಸೆಲೆಬ್ರೇಷನ್ ವಿಡಿಯೋ ನೋಡಿ; ದರ್ಶನ್ ಬಗ್ಗೆ ನಟ ನಾಗೇಂದ್ರ ಹೇಳಿದ್ದಿಷ್ಟು