ನವದೆಹಲಿ: 32 ವರ್ಷದ ಮಹಿಳೆಯೊಬ್ಬರ ಪಿತ್ತ ಕೋಶದಲ್ಲಿದ್ದ 1,500 ಕಲ್ಲುಗಳನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ವೃತ್ತಿಯಲ್ಲಿ ಐಟಿ ಉದ್ಯೋಗಿಯಾಗಿದ್ದ ಮಹಿಳೆ ನಿಯಮಿತವಾಗಿ ಜಂಕ್ ಮತ್ತು ಕೊಬ್ಬಿನ ಆಹಾರವನ್ನು ಸೇವನೆ ಮಾಡುತ್ತಿದ್ದರು. ಪರಿಣಾಮವಾಗಿ ಅವರಿಗೆ ಉಬ್ಬರ, ಹಿಗ್ಗುವಿಕೆ, ಭಾರದಂತಹ ಸಮಸ್ಯೆ ಅನುಭವ ಆಗುತ್ತಿತ್ತು. ಈ ಸಮಸ್ಯೆ ತಗ್ಗಿಸಲು ಮಹಿಳೆ ಅಂಟಾಸಿಡ್ನಂತಹ ಮಾತ್ರೆಗಳನ್ನು ಕಳೆದ ಮೂರು ತಿಂಗಳಿನಿಂದ ನಿಯಮಿತವಾಗಿ ಸೇವಿಸಿದ್ದಾರೆ.
ಇದೇ ವೇಳೆ ಮಹಿಳೆ ತಮ್ಮ ಬಲ ಹೊಟ್ಟೆಯ ಮೇಲ್ಭಾಗದಲ್ಲಿ ಆಗಿಂದಾಗ್ಗೆ ನೋವಿನ ಸಮಸ್ಯೆ ಅನುಭವಿಸಿದ್ದಾರೆ. ಜೊತೆಗೆ ಬಲಭುಜ ಮತ್ತು ಬೆನ್ನಿನಲ್ಲಿ ಕೂಡ ನೋವು ಕಾಣಿಸಿಕೊಂಡಿದೆ. ಈ ನೋವು ಆಕೆಗೆ ತಲೆ ಸುತ್ತುವಿಕೆ ಸಮಸ್ಯೆ ಮತ್ತು ವಾಂತಿಗೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಮಹಿಳೆ ಕುಟುಂಬ ವೈದ್ಯರನ್ನು ಪರೀಕ್ಷಿಸಿದ್ದಾರೆ. ಅವರ ಸಲಹೆಯಂತೆ ಅಲ್ಟ್ರಾಸೌಂಡ್ಗೆ ಒಳಗಾದಾಗ ಆಕೆಯ ಪಿತ್ತಕೋಶದ ತುಂಬ ಕಲ್ಲಿರುವುದು ಪತ್ತೆಯಾಗಿದೆ.
ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯರು ಸರ್ಜರಿ ಮೂಲಕ ಪಿತ್ತಕೋಶದ ಸರ್ಜರಿ ನಡೆಸಿ, ಕಲ್ಲನ್ನು ಹೊರ ತೆಗೆದಿದ್ದಾರೆ. ಆಕೆಯ ಹೊಟ್ಟೆಯಲ್ಲಿ 10 ಎಂಎಂ ಮತ್ತು 5 ಎಂಎಂ ರಂಧ್ರಗಳನ್ನು ಮಾಡಿ ಪಿತ್ತಕೋಶದಲ್ಲಿನ ಕಲ್ಲನ್ನು ಹೊರ ತೆಗೆದಿರುವುದಾಗಿ ಎಂದು ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯ ಮನೀಷ್ ಕೆ ಗುಪ್ತಾ ತಿಳಿಸಿದ್ದಾರೆ.
ಡಾ ಮನೀಷ್ ಕೆ ಗುಪ್ತಾ ನೇತೃತ್ವದ ತಂಡ, ಉಪಾಧ್ಯಕ್ಷ ಮತ್ತು ಹಿರಿಯ ಸಲಹೆಗಾರ, ಲ್ಯಾಪರೊಸ್ಕೋಪಿಕ್ & ಸರ್ ಗಂಗಾ ರಾಮ್ ಆಸ್ಪತ್ರೆಯ ಜನರಲ್ ಸರ್ಜನ್, ಆಕೆಯ ಹೊಟ್ಟೆಯಲ್ಲಿ 10 ಎಂಎಂ ಮತ್ತು 5 ಎಂಎಂ ರಂಧ್ರಗಳನ್ನು ಮಾಡಿ ಪಿತ್ತಕೋಶವನ್ನು ಹೊರತೆಗೆದರು.
ಮಹಿಳೆಯ ಪಿತ್ತಕೋಶದಲ್ಲಿ 1,500 ಕ್ಕಿಂತ ಹೆಚ್ಚು ದೊಡ್ಡ ಮತ್ತು ಸಣ್ಣ ಕಲ್ಲುಗಳಿರುವುದನ್ನು ಕಂಡು ಅಚ್ಚರಿ ಕೂಡ ಆಯಿತು ಎಂದು ವೈದ್ಯರು ತಿಳಿಸಿದ್ದಾರೆ.
ಬದಲಾದ ಜೀವನಶೈಲಿ, ಎರಡು ಊಟದ ನಡುವಿನ ಅಂತರ ಹೆಚ್ಚಿರುವುದು ಮತ್ತು ದೀರ್ಘಾವಧಿಯ ಉಪವಾಸದಿಂದಲೂ ಪಿತ್ತಕೋಶದಲ್ಲಿ ಕಲ್ಲು ಸಂಗ್ರಹವಾಗುವ ಸಾಧ್ಯತೆ ಇರುತ್ತದೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಪಿತ್ತಕೋಶದಲ್ಲಿ ಕಲ್ಲು ಕಂಡು ಬರುತ್ತಿರುವ ಪ್ರಕರಣಗಳು ಹೆಚ್ಚಿವೆ.
ಸಣ್ಣ ಕಲ್ಲುಗಳು ಕೂಡ ಸಾಮಾನ್ಯ ಪಿತ್ತರಸದ ನಾಳದಲ್ಲಿ ಜಾರುತ್ತವೆ. ಇದು ಕಾಮಾಲೆ ಮತ್ತು ಪ್ಯಾಂಕ್ರಿಯಾಟೈಟಿಸ್ಗೆ ಕಾರಣವಾಗುತ್ತದೆ. ಪಿತ್ತಕೋಶದ ಕಲ್ಲುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೇ ಹೋದಲ್ಲಿ ಅದು ಕ್ಯಾನ್ಸರ್ಗೆ ಕಾರಣವಾಗಬಹುದು. (ಐಎಎನ್ಎಸ್)
ಇದನ್ನೂ ಓದಿ: ರಕ್ತ ಪರೀಕ್ಷೆ ಮೂಲಕ ಕ್ಯಾನ್ಸರ್, ಅಲ್ಝೈಮರ್ ಪತ್ತೆ: ವಿನೂತನ ಪರೀಕ್ಷೆ ಹಾದಿಯಲ್ಲಿ ವಿಜ್ಞಾನಿಗಳು