ETV Bharat / health

ಕಿಡ್ನಿ ಆರೋಗ್ಯಕ್ಕಾಗಿ ಯಾವ ಆಹಾರ, ಎಷ್ಟು ಪ್ರಮಾಣದಲ್ಲಿ ತಿನ್ನಬೇಕು? - Kidney Health Tips

Kidney Health Tips: ನೀವು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಬಳಲುತ್ತಿದ್ದೀರಾ? ಕಿಡ್ನಿ ಆರೋಗ್ಯವಾಗಿರಲು ಯಾವ ಆಹಾರ ಸೇವಿಸಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬುದರ ಕುರಿತು ವೈದ್ಯರು, ಆಹಾರ ತಜ್ಞರು ನೀಡಿರುವ ಸಲಹೆಗಳನ್ನು ಈ ಸ್ಟೋರಿಯಲ್ಲಿ ತಿಳಿಯೋಣ.

Kidney Health Tips  HEALTH TIPS FOR KIDNEY  KIDNEY FUNCTION TIPS  LOW SODIUM KIDNEY HEALTH
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Aug 20, 2024, 12:13 PM IST

ಹೈದರಾಬಾದ್: ನೀವು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ) ಹೊಂದಿದ್ದರೆ, ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಬಹುದು. ನಿಮ್ಮ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳುಲು ಯಾವ ಆಹಾರಗಳನ್ನು ಮತ್ತು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಎಂಬುದರ ಕುರಿತು ವೈದ್ಯರು, ಆಹಾರ ತಜ್ಞರು ಸಲಹೆಗಳನ್ನು ನೀಡಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಮತ್ತು ಕಿಡ್ನಿ ಡಿಸೀಸ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಮೂತ್ರಪಿಂಡದ ಆರೋಗ್ಯ ಕಾಯ್ದುಕೊಳ್ಳಲು ಜನರಿಗೆ ವಿಶೇಷ ಆಹಾರದ ಅಗತ್ಯವಿರುತ್ತದೆ.

ಮೂತ್ರಪಿಂಡದ ಆರೋಗ್ಯಕ್ಕೆ ವೈದ್ಯರ ಸಲಹೆ: ನಿಮ್ಮ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳುಲು ಯಾವ ಆಹಾರದ ಕ್ರಮಗಳನ್ನು ಪಾಲನೆ ಮಾಡಬೇಕು ಎಂಬುದರ ಕುರಿತು ವೈದ್ಯರು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಮೊದಲ ಮೂರು ಹಂತಗಳು (1-3) ಮೂತ್ರಪಿಂಡದ ಕಾಯಿಲೆ ಇರುವವರಿಗೆ ಮತ್ತು ಮೂತ್ರಪಿಂಡಗಳು ದುರ್ಬಲವಾಗಿದ್ದವರು ಕೊನೆಯ ಎರಡು ಹಂತಗಳ (4-5) ವ್ಯಾಪ್ತಿಯಲ್ಲಿ ಬರುತ್ತಾರೆ. ಇವರು ಯಾವ ಮತ್ತು ಎಷ್ಟು ಪ್ರಮಾಣದಲ್ಲಿ ಆಹಾರಗಳನ್ನು ತಿನ್ನಬೇಕು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಮೊದಲನೇ ಹಂತ 1: ಕಡಿಮೆ ಉಪ್ಪಿರುವ ಆಹಾರ ಸೇವಿಸಿ

ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಲು, ನಿಮ್ಮ ಆಹಾರದಲ್ಲಿ ದಿನಕ್ಕೆ 2,300 ಮಿ.ಗ್ರಾಂ ಸೋಡಿಯಂ ಕಡಿಮೆ ಇರಬೇಕು. ಯಾವಾಗಲೂ ತಾಜಾ ಆಹಾರವನ್ನು ಖರೀದಿಸಿ. ನೀವು ಸೂಪರ್​ ಮಾರ್ಕೆಟ್​ಗಳಲ್ಲಿ ಅಥವಾ ರೆಸ್ಟೋರೆಂಟ್​ಗಳಲ್ಲಿ ಖರೀದಿಸುವ ಅನೇಕ ಸಿದ್ಧಪಡಿಸಿದ ಅಥವಾ ಪ್ಯಾಕೇಜ್ ಮಾಡಿದ ಆಹಾರಗಳಲ್ಲಿ ಸೋಡಿಯಂ (ಉಪ್ಪು) ಸೇರಿಸಲಾಗುತ್ತದೆ. ರೆಡಿಮೇಡ್ ಆಹಾರಗಳಾದ ಫಾಸ್ಟ್ ಫುಡ್, ಹೆಪ್ಪುಗಟ್ಟಿದ ಊಟ ಮತ್ತು ಡಬ್ಬಿಯಲ್ಲಿಟ್ಟ ಆಹಾರಗಳನ್ನು (ಅವುಗಳಲ್ಲಿ ಸೋಡಿಯಂ ಹೆಚ್ಚಾಗಿರುತ್ತದೆ) ತಿನ್ನುವ ಬದಲು ನಿಮ್ಮ ಸ್ವಂತ ಊಟವನ್ನು ಬೇಯಿಸಿ. ನಿಮ್ಮ ಸ್ವಂತ ಆಹಾರವನ್ನು ನೀವು ತಯಾರಿಸಿ ಸೇವಿಸಿ, ಆದಷ್ಟು ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ಬಳಕೆ ಮಾಡಿ.

ಉಪ್ಪಿನ ಬದಲು ಮಸಾಲೆಗಳು ಮತ್ತು ಸೋಡಿಯಂ ಮುಕ್ತ ಮಸಾಲೆಗಳನ್ನು ಬಳಸಿ. ಆಹಾರ ಪ್ಯಾಕೆಟ್​ಗಳ ಮೇಲೆ ಪೌಷ್ಟಿಕಾಂಶದ ಅಂಶಗಳ ಲೇಬಲ್‌ಗಳಲ್ಲಿ ಸೋಡಿಯಂ ಅನ್ನು ಪರಿಶೀಲಿಸಿ. ಕಡಿಮೆ ಸೋಡಿಯಂ ಇರುವ ಆಹಾರಗಳನ್ನು ಉಪಯೋಗಿಸಲು ಪ್ರಯತ್ನಿಸಿ. ತರಕಾರಿಗಳು, ಬೀನ್ಸ್, ಮಾಂಸ ಮತ್ತು ಮೀನುಗಳನ್ನು ತಿನ್ನುವ ಮೊದಲು ನೀರಿನಿಂದ ತೊಳೆಯಿರಿ. ಆಹಾರದ ಲೇಬಲ್‌ಗಳಲ್ಲಿ ಸೋಡಿಯಂ-ಮುಕ್ತ ಅಥವಾ ಉಪ್ಪು-ಮುಕ್ತ ಅಥವಾ ಉಪ್ಪು ಇಲ್ಲ, ಸೋಡಿಯಂ ಇಲ್ಲ ಅಥವಾ ಉಪ್ಪುರಹಿತ ಅಥವಾ ಲಘುವಾಗಿ ಉಪ್ಪು ಹಾಕಿರುವಂತಹ ಪದಗಳನ್ನು ಮಾತ್ರ ಖರೀದಿಸಿ.

ಎರಡನೇ ಹಂತ: ಪ್ರೋಟೀನ್ ಸರಿಯಾದ ಪ್ರಮಾಣದಲ್ಲಿ ಸೇವಿಸಿ

ನಿಮ್ಮ ಮೂತ್ರಪಿಂಡಗಳನ್ನು ರಕ್ಷಿಸಲು ಸಹಾಯ ಮಾಡಲು, ಸರಿಯಾದ ರೀತಿಯ ಪ್ರೋಟೀನ್ ಅನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿ. ನಿಮ್ಮ ದೇಹಕ್ಕೆ ಹೆಚ್ಚು ಪ್ರೋಟೀನ್ ಅನ್ನು ನೀಡಿದರೆ, ಅದು ತ್ಯಾಜ್ಯವನ್ನು ಉತ್ಪಾದಿಸುತ್ತದೆ. ನಿಮ್ಮ ಮೂತ್ರಪಿಂಡಗಳು ಈ ತ್ಯಾಜ್ಯವನ್ನು ತೆಗೆದುಹಾಕುತ್ತವೆ. ಅಗತ್ಯಕ್ಕಿಂತ ಹೆಚ್ಚು ಪ್ರೊಟೀನ್ ಸೇವಿಸುವುದರಿಂದ ನಿಮ್ಮ ಮೂತ್ರಪಿಂಡಗಳು ಹೆಚ್ಚು ಕೆಲಸ ಮಾಡುತ್ತವೆ.

ಕಡಿಮೆ ಪ್ರೋಟೀನ್ ಭರಿತ ಆಹಾರ ಸೇವಿಸಿ: ಸಸ್ಯ ಮತ್ತು ಪ್ರಾಣಿಗಳ ಆಹಾರಗಳಲ್ಲಿ ಪ್ರೋಟೀನ್ ಕಂಡುಬರುತ್ತದೆ. ಹೆಚ್ಚಿನ ಜನರು ಎರಡೂ ರೀತಿಯ ಪ್ರೋಟೀನ್​ಗಳನ್ನು ಸೇವಿಸುತ್ತಾರೆ. ನಿಮಗಾಗಿ ಪ್ರೋಟೀನ್ ಆಹಾರಗಳ ಸರಿಯಾದ ಸಂಯೋಜನೆಯನ್ನು ಹೇಗೆ ಆಯ್ಕೆ ಮಾಡುವುದು ಎಂಬುದರ ಕುರಿತು ಆಹಾರ ತಜ್ಞರು ನಿಮಗಾಗಿ ಮಹತ್ವದ ಸೂತ್ರಗಳನ್ನು ನೀಡಿದ್ದಾರೆ.

  • ಮಾಂಸ- ಪ್ರೋಟೀನ್ ಆಹಾರ: ನೀವು ಸುಮಾರು 2 ರಿಂದ 3 ಔನ್ಸ್ (85 gm) ಬೇಯಿಸಿದ ಕೋಳಿ, ಮೀನು ಅಥವಾ ಕುರಿ ಮಾಂಸವನ್ನು ತಿನ್ನಬಹುದು. ಡೈರಿ ಆಹಾರಗಳ ಒಂದು ಭಾಗವು ಸುಮಾರು ಅರ್ಧ ಕಪ್ ಹಾಲು ಅಥವಾ ಮೊಸರು ಅಥವಾ ಚೀಸ್ ಸ್ಲೈಸ್ ಆಗಿರಬಹುದು.
  • ಸಸ್ಯ-ಪ್ರೋಟೀನ್ ಆಹಾರ: ನೀವು ಬೇಯಿಸಿದ ಬೀನ್ಸ್ ಅರ್ಧ ಕಪ್ ಮತ್ತು ಶೇಂಗಾ ಸೇರಿದಂತೆ ವಿವಿಧ ಬೀಜಗಳನ್ನು ಅರ್ಧ ಕಪ್​ಗಿಂತ ಕಡಿಮೆ ಪ್ರಮಾಣದಲ್ಲಿ ತಿನ್ನಬಹುದು. ನೀವು ಬ್ರೆಡ್ ಸ್ಲೈಸ್ ಮತ್ತು ಅರ್ಧ ಕಪ್ ಬೇಯಿಸಿದ ಅನ್ನ ಅಥವಾ ಬೇಯಿಸಿದ ನೂಡಲ್ಸ್​ ತಿನ್ನಬಹುದು.

ಮೂರನೇ ಹಂತ 3: ಹೃದಯ- ಕಿಡ್ನಿಗೆ ಆರೋಗ್ಯಕರ ಆಹಾರ

ಹೃದಯ ಮತ್ತು ಮೂತ್ರಪಿಂಡಗಳಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯಲು ಸಹಾಯ ಮಾಡಲು, ಆರೋಗ್ಯಕರವಾದ ಆಹಾರವನ್ನು ಆರಿಸಿ. ಹೆಚ್ಚು ಕೊಬ್ಬಿನಾಂಶವಿರುವ ಆಹಾರಗಳನ್ನು ಸೇವಿಸುವ ಬದಲಿಗೆ, ಹಸಿ ತರಕಾರಿ, ಸೊಪ್ಪು ಸೇವಿಸಿದರೆ ತುಂಬಾ ಒಳ್ಳೆಯದು. ತುಪ್ಪ ಮತ್ತು ಬೆಣ್ಣೆಯ ಬದಲಿಗೆ, ನಾನ್‌ಸ್ಟಿಕ್ ಅಡುಗೆ ಸ್ಪ್ರೇ ಅಥವಾ ಸ್ವಲ್ಪ ಪ್ರಮಾಣದ ಆಲಿವ್ ಎಣ್ಣೆಯಿಂದ ಬೇಯಿಸಿ. ಮಾಂಸದಿಂದ ಕೊಬ್ಬನ್ನು ಟ್ರಿಮ್ ಮಾಡಿ ಮತ್ತು ತಿನ್ನುವ ಮೊದಲು ಕೋಳಿಯಿಂದ ಚರ್ಮವನ್ನು ತೆಗೆದುಹಾಕಿ. ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳನ್ನು ಮಿತಿಗೊಳಿಸಿ ಮತ್ತು ಆಹಾರ ಲೇಬಲ್​ಗಳನ್ನು ತಪ್ಪದೇ ಓದಿ. ತೆಳುವಾದ ಮಾಂಸದ ತುಂಡುಗಳು, ಚರ್ಮರಹಿತ ಚಿಕನ್, ಮೀನು, ಕಡಿಮೆ ಕೊಬ್ಬು ಅಥವಾ ಕೊಬ್ಬು ಮುಕ್ತ ಹಾಲು, ಮೊಸರು, ಚೀಸ್, ಬೀನ್ಸ್, ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ.

ಮದ್ಯಕ್ಕೆ ಮಿತಿ ಇರಲಿ: ನೀವು ಪುರುಷರಾಗಿದ್ದರೆ ಎರಡಕ್ಕಿಂತ ಹೆಚ್ಚು ಬಾರಿ ಮದ್ಯಪಾನ ಮಾಡಬೇಡಿ. ಮತ್ತು ನೀವು ಮಹಿಳೆಯಾಗಿದ್ದರೆ ದಿನಕ್ಕೆ ಒಂದಕ್ಕಿಂತ ಹೆಚ್ಚು ಸಲ ಮದ್ಯ ಸೇವಿಸಬೇಡಿ. ಅತಿಯಾಗಿ ಮದ್ಯಪಾನ ಮಾಡುವುದರಿಂದ ಯಕೃತ್ತು, ಹೃದಯ ಮತ್ತು ಮೆದುಳು ಹಾನಿಗೊಳಗಾಗಬಹುದು. ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ಸುರಕ್ಷಿತವಾಗಿ ಎಷ್ಟು ಆಲ್ಕೋಹಾಲ್ ಕುಡಿಯಬಹುದು ಎಂಬುದಕ್ಕೆ ನಿಮ್ಮ ವೈದ್ಯರು, ಆಹಾರ ತಜ್ಞರ ಸಲಹೆ ಪಡೆದುಕೊಳ್ಳಬಹುದು.

ನಾಲ್ಕನೇ ಹಂತ: ಕಡಿಮೆ ರಂಜಕ ಅಂಶವಿರುವ ಆಹಾರ, ಪಾನೀಯಗಳನ್ನು ಸೇವಿಸಿ

ನಿಮ್ಮ ಮೂಳೆಗಳು ಮತ್ತು ರಕ್ತನಾಳಗಳನ್ನು ರಕ್ಷಿಸಲು ಸಹಾಯ ಮಾಡಲು ಕಡಿಮೆ ರಂಜಕ ಆಹಾರ ಮತ್ತು ಪಾನೀಯಗಳನ್ನು ಸೇವಿಸಿ. ನೀವು ಕಿಡ್ನಿ ಸಮಸ್ಯೆ ಹೊಂದಿದ್ದರೆ, ರಂಜಕವು ನಿಮ್ಮ ರಕ್ತದಲ್ಲಿ ಸಂಗ್ರಹಗೊಳ್ಳುತ್ತದೆ. ನಿಮ್ಮ ರಕ್ತದಲ್ಲಿನ ಹೆಚ್ಚಿನ ರಂಜಕವು ನಿಮ್ಮ ಮೂಳೆಗಳಿಂದ ಕ್ಯಾಲ್ಸಿಯಂ ಅನ್ನು ಸೆಳೆಯುತ್ತದೆ. ನಿಮ್ಮ ಮೂಳೆಗಳನ್ನು ತೆಳ್ಳಗೆ, ದುರ್ಬಲಗೊಳಿಸುತ್ತದೆ ಮತ್ತು ಮುರಿಯುವ ಸಾಧ್ಯತೆಯಿದೆ. ನಿಮ್ಮ ರಕ್ತದಲ್ಲಿ ಹೆಚ್ಚಿನ ಮಟ್ಟದ ರಂಜಕವು ಚರ್ಮದಲ್ಲಿ ತುರಿಕೆ ಮತ್ತು ಮೂಳೆಗಳು ಮತ್ತು ಕೀಲುಗಳಲ್ಲಿ ನೋವನ್ನು ಉಂಟುಮಾಡಬಹುದು. ಅನೇಕ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಿಗೆ ರಂಜಕವನ್ನು ಸೇರಿಸಲಾಗುತ್ತದೆ.

ಆಹಾರ ಲೇಬಲ್‌ಗಳಲ್ಲಿ ಫಾಸ್ಫರಸ್ ಪ್ರಮಾಣ ಎಷ್ಟಿದೆ ಎಂಬುದನ್ನು ಗಮನಿಸಿ. ಕುರಿ ಮಾಂಸ, ಕೋಳಿ ಮತ್ತು ಕೆಲವು ತಾಜಾ ಮಾಂಸಗಳಿಗೆ ರಂಜಕವನ್ನು ಸೇರಿಸಬಹುದು. ಮಾಂಸದ ಅಂಗಡಿಯಲ್ಲಿ ನೀವು ರಂಜಕವನ್ನು ಸೇರಿಸದೆಯೇ ತಾಜಾ ಮಾಂಸ ಖರೀದಿಸಬೇಕು. ರಕ್ತದಲ್ಲಿನ ರಂಜಕದ ಪ್ರಮಾಣವನ್ನು ಕಡಿಮೆ ಮಾಡಲು ನಿಮಗೆ ವೈದ್ಯರು, ಆಹಾರ ತಜ್ಞರು ಸಲಹೆ ನೀಡಿದ್ದಾರೆ.

ಕೆಲವು ಕಡಿಮೆ ರಂಜಕವಿರುವ ಆಹಾರ: ನೀವು ತಾಜಾ ಹಣ್ಣುಗಳು, ತರಕಾರಿಗಳು, ಬ್ರೆಡ್, ಅಕ್ಕಿ, ಪಾಸ್ಟಾ, ಕಾರ್ನ್, ನಿಂಬೆ ಚಹಾ ಅಥವಾ ಮನೆಯಲ್ಲಿ ತಯಾರಿಸಿದ ಐಸ್ಡ್ ಟೀ ಮತ್ತು ತಿಳಿ ಬಣ್ಣದ ಸೋಡಾ, ಪಾಪ್ ಅನ್ನು ಸೇವಿಸಬಹುದು.

ಕೆಲವು ಹೆಚ್ಚಿನ ರಂಜಕವಿರುವ ಆಹಾರ: ಮಾಂಸ, ಧಾನ್ಯಗಳು ಮತ್ತು ಸಿರಿಧಾನ್ಯಗಳು, ಕೋಳಿ, ಮೀನು, ಬೀನ್ಸ್, ಮೊಸರು, ಬೀಜಗಳು, ಹೊಟ್ಟು, ಡೈರಿ ಆಹಾರಗಳು, ಡಾರ್ಕ್ ಸೋಡಾ, ಪಾಪ್‌ಗಳು, ಹಣ್ಣಿನ ಪಂಚ್‌ಗಳು, ರಂಜಕವನ್ನು ಸೇರಿಸಿದ ಕೆಲವು ಬಾಟಲ್ ಅಥವಾ ಮೊದಲೇ ತಯಾರಿಸಿದ ಐಸ್ಡ್ ಟೀ.

ಐದನೇ ಹಂತ: ಸರಿಯಾದ ಪ್ರಮಾಣದ ಪೊಟ್ಯಾಸಿಯಮ್ ಹೊಂದಿರುವ ಆಹಾರ ಆಯ್ಕೆ

ನಿಮ್ಮ ನರಗಳು ಮತ್ತು ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡಲು ಸರಿಯಾದ ಪ್ರಮಾಣದ ಪೊಟ್ಯಾಸಿಯಮ್ ಹೊಂದಿರುವ ಆಹಾರವನ್ನು ಆರಿಸಿ. ರಕ್ತದಲ್ಲಿನ ಪೊಟ್ಯಾಸಿಯಮ್ ಮಟ್ಟವು ತುಂಬಾ ಹೆಚ್ಚಾದಾಗ ಅಥವಾ ತುಂಬಾ ಕಡಿಮೆಯಾದಾಗ ಸಮಸ್ಯೆಗಳು ಉಂಟಾಗಬಹುದು. ಹಾನಿಗೊಳಗಾದ ಮೂತ್ರಪಿಂಡಗಳು ನಿಮ್ಮ ರಕ್ತದಲ್ಲಿ ಪೊಟ್ಯಾಸಿಯಮ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದು ಗಂಭೀರ ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಗತ್ಯವಿದ್ದರೆ ನಿಮ್ಮ ಆಹಾರ ಮತ್ತು ಪಾನೀಯಗಳು ನಿಮ್ಮ ಪೊಟ್ಯಾಸಿಯಮ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಡಿಮೆ ಪೊಟ್ಯಾಸಿಯಮ್ ಆಹಾರ: ಸೇಬುಗಳು, ಪೀಚ್‌ಗಳು, ಸೇಬು ಸೈಡರ್, ದ್ರಾಕ್ಷಿ ಅಥವಾ ಕ್ರ್ಯಾನ್‌ಬೆರಿ ಜ್ಯೂಸ್, ಬಿಳಿ ಬ್ರೆಡ್ ಮತ್ತು ಪಾಸ್ಟಾ, ಕ್ಯಾರೆಟ್, ಬಿಳಿ ಅಕ್ಕಿ, ಹಸಿರು ಬೀನ್ಸ್, ಬೇಯಿಸಿದ ಅಕ್ಕಿ ಮತ್ತು ಗೋಧಿ ಧಾನ್ಯಗಳು, ಗ್ರಿಟ್ಸ್.

ಪೊಟ್ಯಾಸಿಯಮ್ ಅಧಿಕವಾಗಿರುವ ಆಹಾರ: ಆಲೂಗಡ್ಡೆ, ಟೊಮ್ಯಾಟೊ, ಸಂಪೂರ್ಣ ಗೋಧಿ ಬ್ರೆಡ್ ಮತ್ತು ಪಾಸ್ಟಾ, ಬೀನ್ಸ್ ಮತ್ತು ಬೀಜಗಳು, ಕಿತ್ತಳೆ, ಬಾಳೆಹಣ್ಣುಗಳು ಮತ್ತು ಕಿತ್ತಳೆ ರಸ, ಕಂದು ಅಕ್ಕಿ, ಹೊಟ್ಟು ಧಾನ್ಯಗಳು, ಡೈರಿ ಆಹಾರಗಳು. ಕೆಲವು ಔಷಧಿಗಳು ನಿಮ್ಮ ಪೊಟ್ಯಾಸಿಯಮ್ ಮಟ್ಟವನ್ನು ಹೆಚ್ಚಿಸಬಹುದು.

ಓದುಗರ ಗಮನಕ್ಕೆ: ಈ ಸ್ಟೋರಿಯಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ, ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ನಿಮ್ಮ ಹೊಟ್ಟೆ ಭಾಗದಲ್ಲಿ ಬೊಜ್ಜು ಜಾಸ್ತಿಯಾಗಿದ್ದರೆ ಜಾಗರೂಕರಾಗಿರಿ: ನೀವು ಈ ಕಾಯಿಲೆಯಿಂದ ಬಳಲುತ್ತಿರಬಹುದು, ಒಮ್ಮೆ ಚೆಕಪ್ ಮಾಡಿಕೊಳ್ಳಿ - Know About Type 2 Diabetes

ETV Bharat Logo

Copyright © 2024 Ushodaya Enterprises Pvt. Ltd., All Rights Reserved.