ETV Bharat / health

ಏನಿದು ಕ್ರ್ಯಾಶ್​ ಡಯಟ್, ಸತ್ಯವಾಗ್ಲೂ ಇದರಿಂದ ತೂಕ ಕಡಿಮೆ ಆಗುತ್ತಾ?; ಇದು ನಿಜವಾಗಿಯೂ ಉತ್ತಮ ಆರೋಗ್ಯಕ್ಕೆ ಸಹಕಾರಿಯೇ? - What Is CrashDiet

ಬೇಗ ತೂಕ ಕಳೆದುಕೊಳ್ಳ ಬಯಸುವ ಅನೇಕ ಮಂದಿ ಕ್ರ್ಯಾಶ್​​ ಡಯಟ್​ ಅನುಸರಿಸುತ್ತಾರೆ. ಕ್ರ್ಯಾಶ್​​ ​ ಡಯಟ್​ ಕುರಿತು ಅರಿವೇ ಇಲ್ಲದೇ ಆರಂಭಿಸುವುದು ಬಹುದೊಡ್ಡ ತಪ್ಪು. ಈ ಕುರಿತ ಮಾಹಿತಿ ಇಲ್ಲಿದೆ.

author img

By ETV Bharat Karnataka Team

Published : Jun 6, 2024, 12:07 PM IST

Do "Crash Diets" Really Lose Weight? - Is it good for health? - What Is CrashDiet
ಕ್ರಶ್​ ಡಯಟ್​ ((ಐಎಎನ್​ಎಸ್​))

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆ ಅಂದರೆ ಅದು ಅತಿಯಾದ ತೂಕವಾಗಿದೆ. ಸವಾಲಿನ ಜೀವನಶೈಲಿ, ತಿನ್ನುವ ಅಭ್ಯಾಸ ಮತ್ತು ವ್ಯಾಯಾಮದ ಕೊರತೆಯು ಈ ಅನಾರೋಗ್ಯಕರ ತೂಕ ಹೆಚ್ಚಳಕ್ಕೆ ಕಾರಣವಾಗಿದೆ. ಇದಕ್ಕಾಗಿ ಯುವಜನತೆ ಬಲುಬೇಗ ತೂಕ ಕಳೆದುಕೊಳ್ಳಬೇಕು ಎಂದು ಕ್ರ್ಯಾಶ್​ ಡಯಟ್​ ಮೊರೆ ಹೋಗುತ್ತಿದ್ದಾರೆ.

ಕ್ರ್ಯಾಶ್​ ಡಯಟ್​ನಿಂದ ವೇಗವಾಗಿ ತೂಕ ಕಳೆದುಕೊಳ್ಳಬಹುದು ಎಂದು ಕೂಡ ತಜ್ಞರು ತಿಳಿಸುತ್ತಾರೆ. ಹಾಗಾದರೆ ಈ ಕ್ರ್ಯಾಶ್​ ಡಯಟ್​ ಎಂದರೇನು? ಇದು ಯಾರಿಗೆ ಸೂಕ್ತ, ಯಾರಿಗೆ ಸೂಕ್ತ ಎಂಬ ಕುರಿತು ಹೈದರಾಬಾದ್​ನ ಖ್ಯಾತ ಪೌಷ್ಟಿಕಾಂಶ ತಜ್ಞೆಯಾಗಿರುವ ಡಾ ಜಾನಕಿ ಶ್ರೀನಾಥ್​​ ತಿಳಿಸಿದ್ದಾರೆ. ಹಾಗದ್ರೆ ಕ್ರಶ್​​ ಡಯಟ್​​ಗೆ ಯಾವ ನೀತಿ ಪಾಲಿಸಬೇಕು ಎಂಬ ಕುರಿತ ವಿವರ ಇಲ್ಲಿದೆ.

ಏನಿದು ಕ್ರ್ಯಾಶ್ ​ ಡಯಟ್​: ಕ್ರ್ಯಾಶ್​ ಡಯಟ್​ ಅನ್ನು ಜಿರೋ ಡಯಟ್​ ಎಂಬ ಹೆಸರಿನಿಂದ ಕೂಡ ಪರಿಚಿತವಾಗಿದೆ. ಅಮೆರಿಕದಲ್ಲಿ ಪ್ರಖ್ಯಾತವಾಗಿರುವ ತೂಕ ಇಳಿಕೆ ವಿಧಾನ ಇದಾಗಿದೆ. ತೂಕ ಕಳೆದುಕೊಳ್ಳುವ ಜೊತೆಗೆ ವಯಸ್ಸಾದಂತೆ ತ್ವಚೆಯ ಸುಕ್ಕನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಕ್ರ್ಯಾಶ್​ ಡಯಟ್​ಗೆ ಕೆಲವು ನಿರ್ದಿಷ್ಟ ಆಹಾರ ಕ್ರಮದ ನಿಯಮಗಳಿವೆ. ಅದರಲ್ಲಿ 40ರಷ್ಟು ಕಾರ್ಬೋಹೈಡ್ರೇಟ್​​, 30ರಷ್ಟು ಕೊಬ್ಬು ಮತ್ತು 30ರಷ್ಟು ಪ್ರೋಟಿನ್​ ಹೊಂದಿರುವುದು ಅಗತ್ಯವಾಗಿದೆ. ಆದಾಗ್ಯೂ ಈ ಡಯಟ್​ ಕ್ರಮ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ. ಈ ಡಯಟ್​ನಲ್ಲೂ ಮೂರು ಹೊತ್ತಿನ ಊಟ ಮತ್ತು ಎರಡು ಸ್ನಾಕ್ಸ್​ ಒಳಗೊಂಡಿರುತ್ತದೆ. ಇದು ಅಮೆರಿಕದಲ್ಲಿ ಹೆಚ್ಚು ಅನುಸರಿಸುವ ಡಯಟ್​ ಇದಾಗಿದೆ.

ಭಾರತಕ್ಕೆ ಅನುಗುಣವಾಗಿ ಆಹಾರ ಸೇವನೆ: ನಮ್ಮ ದೇಶದಲ್ಲಿ ಕ್ರ್ಯಾಶ್​ ಡಯಟ್​​ನಲ್ಲಿ ಅನ್ನ ಮತ್ತು ಎಣ್ಣೆ ಅಂಶವನ್ನು ಸಂಪೂರ್ಣವಾಗಿ ತಪ್ಪಿಸಲಾಗುವುದು. ಇದರ ಬದಲಾಗಿ, ಸಿಪ್ಪೆಗಳಿಂದ ಕೂಡಿದ ಧಾನ್ಯ- ಕಾಳುಗಳು. ಕಾರ್ಬೋಹೈಡ್ರೇಟ್​ ಸಮೃದ್ಧವಾದ ಬೆಂಡೆಕಾಯಿ, ಎಲೆಕೋಸ್​, ಬೀನ್ಸ್​, ಟೊಮಟೊದಂತಹ ತರಕಾರಿ ಆಯ್ಕೆ ಮಾಡಲಾಗುವುದು. ಆರೋಗ್ಯಯುತ ಕೊಬ್ಬಿಗೆ ಫ್ಲೆಕ್ಸ್​ಸೀಡ್​ ಪುಡಿ (ಅಗಸೆ ಬೀಜ), ಎಳ್ಳು, ಬಾದಾಮಿ ಮತ್ತು ಕುಂಬಳಕಾಯಿಗಳನ್ನು ಆಹಾರದ ಕ್ರಮದ ಭಾಗವಾಗಿ ಸೇರಿಸಲಾಗುವುದು.

ದೇಹಕ್ಕೆ ಅನುಗುಣವಾಗಿ ಫಾಲೋ ಮಾಡಿ: ಡಯಟ್​ ಆಹಾರದಲ್ಲಿ ಆಲಿವ್​ ಆಯಿಲ್​ ಮಿಶ್ರಿತ ತರಕಾರಿ ಸಲಾಡ್​​ ಉತ್ತಮ ಫಲಿತಾಂಶ ನೀಡುತ್ತದೆ. ಇದರ ಜೊತೆಗೆ ಕಡಿಮೆ ಕೊಬ್ಬಿನ ಹಾಲು, ಚೀಸ್​, ಪನ್ನೀರ್​ ಮತ್ತು ಅಧಿಕ ಪ್ರೋಟಿನ್​ ಮಜ್ಜಿಗೆ ಕೂಡ ಸೇರಿಸಬಹುದು. ಆದಾಗ್ಯೂ ಈ ಎಲ್ಲಾ ಆಹಾರಗಳನ್ನು ದೇಹದ ಸಂಯೋಜನೆ ಪರೀಕ್ಷೆ ಪಡೆದ ಬಳಿಕವೇ ದೇಹಕ್ಕೆ ಅನುಸಾರವಾಗಿ ತೆಗೆದುಕೊಳ್ಳಬೇಕು ಎನ್ನುತ್ತಾರೆ ಡಾ ಜಾನಕಿ ಶ್ರೀನಾಥ್​​.

ಕಾರಣ, ಕೆಲವು ಮಂದಿ ಕಡಿಮೆ ಸ್ನಾಯು ಸಾಂದ್ರತೆ ಹೊಂದಿದ್ದು, ಅಧಿಕ ಕೊಬ್ಬು ಹೊಂದಿರಬಹುದು. ಜೊತೆಗೆ ಕೆಲವರು ಹೆಚ್ಚು ಸ್ನಾಯು ಹೊಂದಿದ್ದು, ಕಡಿಮೆ ಕೆಟ್ಟ ಕೊಬ್ಬು ಹೊಂದಿರಬಹುದು. ಈ ಕಾರಣದಿಂದ ಆಹಾರ ಸೇವನೆ ನಿಯಮ ಮತ್ತು ಗುಣಮಟ್ಟ, ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ. ಈ ಹಿನ್ನೆಲೆಯಲ್ಲಿ ಕ್ರ್ಯಾಶ್​ ಡಯಟ್​ ಆರಂಭಿಸುವ ಮುನ್ನ ತಜ್ಞರು ಸಮಲೋಚನೆ ನಡೆಸಯವುದು ಅಗತ್ಯ. ಮತ್ತೊಂದು ಪ್ರಮುಖ ಅಂಶ ಎಂದರೆ ಡಯಟ್​ ಜೊತೆಗೆ ವ್ಯಾಯಾಮ ಸೇರಿದಲ್ಲಿ ಅದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ಎಂಬುದನ್ನು ಎಂಬುದು ಮರೆಯಬಾರದು.

ದಿಢೀರ್​ ತೂಕ ಕಳೆದುಕೊಳ್ಳುವುದರಿಂದ ಗಂಭೀರ ಆರೋಗ್ಯ ಅಪಾಯವನ್ನು ಎದುರಿಸಬೇಕಾಗುತ್ತದೆ. ವಾರಕ್ಕೆ ಇಂತಿಷ್ಟು ಪ್ರಮಾಣದಲ್ಲಿ ತೂಕ ಕಡಿಮೆ ಆದಲ್ಲಿ ಮಾತ್ರ ಪ್ರಯೋಜನ ಪಡೆಯಬಹುದು. ಕ್ರ್ಯಾಶ್​ ಡಯಟ್​ ಅನ್ನು ಅನುಸರಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಅಗತ್ಯವಾಗಿದೆ.

ದಯವಿಟ್ಟು ಗಮನಿಸಿ: ಇಲ್ಲಿ ನೀಡಲಾಗಿರುವ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ.

ಇದನ್ನೂ ಓದಿ: ಈ ನಟಿಯ ಸಾವಿಗೆ ಕಾರಣವಾಯಿತಾ ಕ್ರಶ್​​ ಡಯಟ್?​​; ಮಾರಾಣಾಂತಿಕ ಆಹಾರ ಪದ್ದತಿ ಇದು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.