ETV Bharat / health

ಕೋವಾಕ್ಸಿನ್​ ಸುರಕ್ಷತೆಯ ದಾಖಲೆ ಹೊಂದಿದೆ: ಭಾರತ್​ ಬಯೋಟೆಕ್ ಸ್ಪಷ್ಟನೆ​ - Covid 19 vaccine Covaxin - COVID 19 VACCINE COVAXIN

ಭಾರತ ಸರ್ಕಾರದ ಪ್ರತಿರಕ್ಷಣೆ ಕಾರ್ಯಕ್ರಮದಲ್ಲಿ ಪರಿಣಾಮಕಾರಿ ಪ್ರಯೋಗ ನಡೆಸಿದ ಏಕೈಕ ಕೋವಿಡ್​ 19 ಲಸಿಕೆ ಕೋವಾಕ್ಸಿನ್ ಆಗಿದೆ ಎಂದು ಭಾರತ್​ ಬಯೋಟೆಕ್​ ತಿಳಿಸಿದೆ.

Covid 19 vaccine Covaxin has an excellent safety record
ಕೋವಾಕ್ಸಿನ್​ ಯಾವುದೇ ಅಡ್ಡ ಪರಿಣಾಮದ ಅಪಾಯವನ್ನು ಹೊಂದಿಲ್ಲ (IANS)
author img

By IANS

Published : May 3, 2024, 10:23 AM IST

ಹೈದರಾಬಾದ್​: ಕೋವಿಡ್​ 19 ಲಸಿಕೆಯಾಗಿರುವ ಕೋವಾಕ್ಸಿನ್​ ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆ, ಥ್ರಂಬೋಸೈಟೋಪೆನಿಯಾ, ಟಿಟಿಎಸ್, ವಿಐಟಿಟಿ, ಪೆರಿಕಾರ್ಡಿಟಿಸ್, ಮಯೋಕಾರ್ಡಿಟಿಸ್ ನಂತಹ ಯಾವುದೇ ಅಡ್ಡ ಪರಿಣಾಮದ ಅಪಾಯವನ್ನು ಹೊಂದಿಲ್ಲ. ಇದನ್ನು ಸುರಕ್ಷತೆ, ಪರಿಣಾಮಕಾರಿತ್ವದ ಆದ್ಯತೆಯೊಂದಿಗೆ ಲಸಿಕೆ ಅಭಿವೃದ್ಧಿಪಡಿಸಲಾಗಿದೆ ಎಂದು ಭಾರತ್​ ಬಯೋಟೆಕ್​ ಹೇಳಿಕೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಜಾಗತಿಕ ಔಷಧ ತಯಾರಿಕಾ ಕಂಪನಿಯಾಗಿರುವ ಅಸ್ಟ್ರಾಜೆನಕಾ, ಆಕ್ಸಫರ್ಡ್​ ಯೂನಿವರ್ಸಿಟಿ ಜೊತೆ ಸೇರಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್​​ ಲಸಿಕೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಂಸ್ಥೆ ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೋವಿಡ್​​ ಲಸಿಕೆ ಸುರಕ್ಷಿತತೆ ಬಗ್ಗೆ ಪ್ರಶ್ನೆ ಮೂಡಿದ್ದು, ಜನರಲ್ಲಿ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್​ ಮೂಲದ ಕಂಪನಿ ಭಾರತ್​​ ಬಯೋಟೆಕ್​​​ ಕೋವಾಕ್ಸಿನ್​ ಸುರಕ್ಷತೆ ಭರವಸೆ ಕುರಿತು ಈ ಹೇಳಿಕೆ ಬಿಡುಗಡೆ ಮಾಡಿದೆ.

ಅಸ್ಟ್ರಾಜೆನೆಕಾ ಅಭಿವೃದ್ಧಿ ಪಡಿಸಿದ ಮತ್ತು ಪುಣೆ ಮೂಲದ ಸೀರಂ ಇನ್ಸುಟಿಟ್ಯೂಟ್​ ತಯಾರಿಸಿದ ಕೋವಿಶೀಲ್ಡ್​​ನ 175 ಕೋಟಿ ಡೋಸ್​ ಅನ್ನು ಭಾರತದಲ್ಲಿ ನಿರ್ವಹಿಸಲಾಗಿದೆ ಎಂದು ವರದಿ ತಿಳಿಸಿದೆ. ಭಾರತ ಸರ್ಕಾರದ ಪ್ರತಿರಕ್ಷಣೆ ಕಾರ್ಯಕ್ರಮದಲ್ಲಿ ಪರಿಣಾಮಕಾರಿ ಪ್ರಯೋಗ ನಡೆಸಿದ ಏಕೈಕ ಕೋವಿಡ್​ 19 ಲಸಿಕೆ ಕೋವಾಕ್ಸಿನ್ ಆಗಿದೆ ಎಂದು ಕಂಪನಿ ತಿಳಿಸಿದೆ.

ಕೋವಾಕ್ಸಿನ್ ಪರವಾನಗಿ ಪ್ರಕ್ರಿಯೆಯ ಭಾಗವಾಗಿ 27,000 ಕ್ಕೂ ಹೆಚ್ಚು ವಿಷಯಗಳಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಕ್ಲಿನಿಕಲ್ ಟ್ರಯಲ್ ಮೋಡ್‌ನಲ್ಲಿ ನಿರ್ಬಂಧಿತ ಬಳಕೆಯ ಅಡಿ ಇದು ಪರವಾನಗಿ ಪಡೆದಿದೆ. ಈ ವೇಳೆ ಹಲವು ವಿಷಯಗಳಿಗೆ ವಿವರವಾದ ಸುರಕ್ಷತಾ ವರದಿಯನ್ನು ಕೈಗೊಳ್ಳಲಾಗಿದೆ. ಕೋವಾಕ್ಸಿನ್​​ ಸುರಕ್ಷತೆಯನ್ನು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮೌಲ್ಯಮಾಪನ ನಡೆಸಲಾಗಿದೆ ಎಂದು ತಯಾರಿಕಾ ಸಂಸ್ಥೆ ತಿಳಿಸಿದೆ.

ಕೋವಾಕ್ಸಿನ್​ ಉತ್ಪನ್ನದ ಜೀವನ ಚಕ್ರದ ಉತ್ಪಾದನೆಯಲ್ಲಿ ಸುರಕ್ಷತಾ ಮೇಲ್ವಿಚಾರಣೆಯನ್ನು ಮುಂದುವರೆಸಲಾಗಿದೆ. ರಕ್ತ ಹೆಪ್ಪುಗಟ್ಟುವಿಕೆ, ಥ್ರಂಬೋಸೈಟೋಪೆನಿಯಾ, ಟಿಟಿಎಸ್, ವಿಐಟಿಟಿ, ಪೆರಿಕಾರ್ಡಿಟಿಸ್, ಮಯೋಕಾರ್ಡಿಟಿಸ್, ಇತ್ಯಾದಿಗಳ ಬಗ್ಗೆ ಲಸಿಕೆಯು, ಯಾವುದೇ ಅಡ್ಡ ಪರಿಣಾಮವನ್ನು ಹೊಂದಿಲ್ಲ. ಇದು ಹೆಚ್ಚಿನ ಸುರಕ್ಷತಾ ದಾಖಲೆ ಹೊಂದಿದೆ.

ಭಾರತ್ ಬಯೋಟೆಕ್ ತಂಡವು ಕೋವಿಡ್-19 ಲಸಿಕೆಗಳ ಪರಿಣಾಮಕಾರಿತ್ವವು ಅಲ್ಪಾವಧಿಯದ್ದಾಗಿದ್ದರೂ, ರೋಗಿಗಳ ಸುರಕ್ಷತೆಯ ಮೇಲಿನ ಪರಿಣಾಮವು ಜೀವಿತಾವಧಿಯವರೆಗೆ ಇರಲಿದೆ ಎಂಬುದರ ಅರಿವನ್ನು ಹೊಂದಿತ್ತು. ಇದರಿಂದ ಲಸಿಕೆಯನ್ನು ಜನರ ಸುರಕ್ಷತೆ ಗಮನದಲ್ಲಿರಿಸಿ ತಯಾರಿಸಲಾಗಿದೆ ಎಂದು ಕಂಪನಿ ಇದೇ ವೇಳೆ ಸ್ಪಷ್ಟಪಡಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಆಸ್ಟ್ರಾಜೆನೆಕಾ ಕೋವಿಡ್​ ಲಸಿಕೆಯಿಂದ ಟಿಟಿಎಸ್​ ಅಡ್ಡ ಪರಿಣಾಮ ಸಾಧ್ಯತೆ; ಏನಿದು ಸಮಸ್ಯೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.