ETV Bharat / health

ಕೆರೆ - ಕಟ್ಟೆಗಳಲ್ಲಿ ಈಜುವ ಮುನ್ನ ಇರಲಿ ಎಚ್ಚರ; ಕೇರಳದಲ್ಲಿ ಇಬ್ಬರ ಸಾವಿಗೆ ಕಾರಣವಾದ ಮಿದುಳು ತಿನ್ನುವ ಅಮೀಬಾ - brain eating amoeba

author img

By IANS

Published : Jun 28, 2024, 1:33 PM IST

ಅಮೀಬಿಕ್ ಎನ್ಸೆಫಾಲಿಟಿಸ್ ಅಪರೂಪವಾಗಿದ್ದು, ಮಾರಣಾಂತಿಕವಾಗಿದೆ. ಇದು ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ

contaminated water is a major reason for infection from a brain-eating amoeba
ಮಿದುಳು ತಿನ್ನುವ ಅಮೀಬಾ (ಐಎಎನ್​ಎಸ್​​)

ನವದೆಹಲಿ: ದಕ್ಷಿಣ ರಾಜ್ಯಗಳಲ್ಲಿ ಮಳೆ ಹಿನ್ನೆಲೆ ಕೆರೆ ಕಟ್ಟೆ, ಕೊಳಗಳು ತುಂಬಿದ್ದು, ಈಜಾಡುವುದನ್ನು ತಪ್ಪಿಸುವುದು ಸೂಕ್ತ. ನಿಂತ ನೀರಿನಲ್ಲಿ ಮಿದುಳು ತಿನ್ನುವ ಅಮೀಬಾಗಳಿರುತ್ತವೆ. ಅವು ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಗಳಿವೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈಗಾಗಲೇ ಇಂತಹ ಮಿದುಳು ತಿನ್ನುವ ಅಮೀಬಾಕ್ಕೆ ಕೇರಳದಲ್ಲಿ ಒಂದೇ ತಿಂಗಳ ಅಂತರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಅಮೀಬಿಕ್ ಎನ್ಸೆಫಾಲಿಟಿಸ್ ಅಪರೂಪವಾಗಿದ್ದು, ಮಾರಣಾಂತಿಕವಾಗಿದ್ದು, ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದು ಮುಕ್ತ ಜೀವಂತ ಅಮೀಬಾ ಆಗಿರುವ ನೈಗ್ಲೇರಿಯಾ ಫೌಲೇರಿದಿಂದ ಉಂಟಾಗುತ್ತದೆ. ಇದು ತಾಜಾ ನೀರಿನ ಸೆಲೆಗಳಾದ, ಕೆರೆ, ನದಿಗಳಲ್ಲೂ ಕಾಣಬಹುದಾಗಿದೆ. ಈ ಸೋಂಕಿಗೆ ವಾರದ ಹಿಂದೆ ಕಣ್ಣೂರಿನ 13 ವರ್ಷದ ಬಾಲಕಿ ಸಾವನ್ನಪ್ಪಿದ್ದಳು. ಇನ್ನು ಮೇ ತಿಂಗಳಲ್ಲಿ ಇದೇ ಸೋಂಕಿಗೆ ಐದು ವರ್ಷದ ಬಾಲಕಿ ಸಾವನ್ನಪ್ಪಿದ್ದಳು.

ಕೊಯಿಕ್ಕೋಡ್​ನಲ್ಲಿ ಕೂಡ 12 ವರ್ಷದ ಬಾಲಕ ಈ ಅಮೀಬಿಕ್​ ಸೋಂಕಿನ ಲಕ್ಷಣವನ್ನು ಹೊಂದಿರುವುದು ಕಂಡು ಬಂದಿದೆ. ಕೆರೆಯಲ್ಲಿ ಈಜಾಡಿದ ಎರಡು ದಿನದ ಬಳಿಕ ಈತ ಸೋಂಕಿಗೆ ಗುರಿಯಾಗಿದ್ದ. ನೈಗ್ಲೇರಿಯಾ ಫೌಲೆರಿ ಅಮೀಬಾದಿಂದ ಅಮೀಬಿಕ್​ ಎನ್ಸೆಫಾಲಿಟಿಸ್​​​ ಸೋಂಕು ತಗುಲುತ್ತದೆ. ನಿಂತ ನೀರಿಗೆ ತೆರೆದುಕೊಂಡ 9 ದಿನದ ಬಳಿಕ ಇದರ ಲಕ್ಷಣ ಕಾಣಿಸಿಕೊಳ್ಳುತ್ತದೆ. ಈ ಅಮೀಬಾ ಮೂಗಿನ ಮೂಲಕ ನೇರವಾಗಿ ಮಿದುಳು ಸೇರುತ್ತದೆ. ಇದು ಜೀವಕ್ಕೆ ಕುತ್ತು ತರುತ್ತದೆ ಎಂದು ಸಕ್ರಾ ವರ್ಲ್ಡ್​​​ ಆಸ್ಪತ್ರೆಯ ನರವಿಜ್ಞಾನ ಸಂಸ್ಥೆಯ ಎಚ್​ಒಡಿ ಡಾ ಅರ್ಜುನ್​ ಶ್ರೀವತ್ಸ ತಿಳಿಸಿದ್ದಾರೆ.

ಸಾಮಾನ್ಯ ಲಕ್ಷಣ: ಈ ಸೋಂಕಿನ ಲಕ್ಷಣಗಳು ಎಂದರೆ ತಲೆನೋವು, ಜ್ವರ, ತಲೆಸುತ್ತು, ವಾಂತಿ, ಗೊಂದಲ, ಸೀನು, ಭ್ರಮೆ, ಬೆಳಕಿನ ಸೂಕ್ಷ್ಮತೆ ಮತ್ತು ಕೋಮಾ ಆಗಿದೆ. ಅಮೀಬಿಕ್​ ಎನ್ಸಿಫಾಲಿಟಿಸ್​​ನಲ್ಲಿ ಎರಡು ವಿಧಗಳಿವೆ. ಪ್ರಾಥಮಿಕ ಮೆನಿಂಗೊಎನ್ಸೆಫಾಲಿಟಿಸ್ (ಪಿಎಎಂ) ಮತ್ತು ಗ್ರ್ಯಾನುಲೋಮಾಟಸ್ ಅಮೀಬಿಕ್ ಎನ್ಸೆಫಾಲಿಟಿಸ್ (ಜಿಎಇ). ಪಿಎಂನ ಆರಂಭಿಕ ಲಕ್ಷಣಗಳನ್ನು ಮೆನಿಂಜೈಟಿಸ್‌ನಿ ರೀತಿಯಲ್ಲಿದೆ. ಜಿಎಇ ಲಕ್ಷಣಗಳು ಮೆದುಳಿನ ಬಾವು, ಎನ್ಸೆಫಾಲಿಟಿಸ್ ಅಥವಾ ಮೆನಿಂಜೈಟಿಸ್ ಹೊಂದಿದೆ. ಇದರ ಸಾವಿನ ದರ 90ರಷ್ಟಿದೆ.

ಈ ಹಿನ್ನೆಲೆಯಲ್ಲಿ ಪೋಷಕರು ನೀರಿನ ಮೂಲಗಳಲ್ಲಿ ಮಕ್ಕಳು ಆಡುವ ಮುನ್ನ ಎಚ್ಚರಿಕೆವಹಿಸಬೇಕು ಎಂದು ಬೆಂಗಳೂರಿನ ಸ್ಪರ್ಶ್​​ ಆಸ್ಪತ್ರೆಯ ವೈದ್ಯರಾದ ಡಾ ಜಾನ್​ ಪೌಲ್​ ಕರೆ ನೀಡಿದ್ದಾರೆ. ಪಿಎಎಂ ಕೇಂದ್ರ ನರ ವ್ಯವಸ್ಥೆ ಮೇಲೆ ತ್ವರಿತ ಪರಿಣಾಮ ಬೀರುತ್ತದೆ. ಇದರ ಸಾವಿನ ದರ 90ರಷ್ಟಿದೆ. ಅಮೀಬಾ ನೈಗ್ಲೇರಿಯಾ ಫೌಲೆರಿ ಇರುವಂತಹ ನೀರಿನ ಸೆಲೆಗಳಲ್ಲಿ ಆರೋಗ್ಯಯುತ ಮಕ್ಕಳು ಮತ್ತು ಯುವ ವಯಸ್ಕರರಲ್ಲೂ ಈ ಸೋಂಕು ತಗಲುತ್ತದೆ. ಈ ಅಮೀಬಾವು ತಾಜಾ ಮತ್ತು ಬೆಚ್ಚಗಿನ ನೀರು ಮತ್ತು ಮಣ್ಣಿನಲ್ಲಿ ಅಡಗಿರುತ್ತದೆ ಎಂದಿದ್ದಾರೆ.

ಈ ಸೋಂಕು ತಗುಲಿದ ವಾರದೊಳಗೆ ಇದರ ಲಕ್ಷಣಗಳಾದ ಕುತ್ತಿಗೆ ನೋವು, ಸೀನುವಿಕೆ, ಗೊಂದಲ, ಭ್ರಮೆ ಮತ್ತು ವ್ಯಕ್ತಿತ್ವ ಬದಲಾವಣೆ, ಫೋಟೋಫೋಬಿಯಾ, ಸಮತೋಲನ ನಷ್ಟಗಳು ಕಾಣುತ್ತದೆ. ಇವುಗಳನ್ನು ಆರಂಭಿಕ ಹಂತದಲ್ಲಿ ಪತ್ತೆಯಾಗದಿದ್ದರೆ, ಕೋಮಾ, ಮಿದುಳಿನ ಊತ ಮತ್ತು ಸಾವಿಗೆ ಕಾರಣವಾಗುತ್ತದೆ.

ಈ ಸೋಂಕಿಗೆ ಒಳಗಾಗುವುದನ್ನು ತಡೆಯಲು ಇರುವ ಪ್ರಮುಖ ಮುನ್ನೆಚ್ಚರಿಕೆ ಎಂದರೆ, ನಿಂತ ನೀರಿನಲ್ಲಿ ಈಜುವುದು, ಡೈವಿಂಗ್​​ ಮಾಡುವುದನ್ನು ತಪ್ಪಿಸುವುದಾಗಿದೆ. ಒಂದು ವೇಳೆ ಈಜು ಅನಿವಾರ್ಯವಾದರೆ, ಮೂಗಿಗೆ ಕ್ಲಿಪ್​ನಂತಹ ಸುರಕ್ಷತಾ ಕ್ರಮ ತೆಗೆದುಕೊಳ್ಳುವುದು ಅವಶ್ಯವಾಗಿದೆ ಎಂದು ಡಾ ಅರ್ಜುನ್​ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಬಾಲಕನ ಮೆದುಳು ತಿಂದ ಅಮೀಬಾ; ಕೆರೆ, ಕೊಳದಲ್ಲಿ ಈಜುವ ಮುನ್ನ ಇರಲಿ ಎಚ್ಚರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.