ಹೈದರಾಬಾದ್: ಇದು ಹೇಳಿ ಕೇಳಿ ಬೇಸಿಗೆ ಕಾಲ. ಅಂದ ಹಾಗೆ ಈ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರುತ್ತದೆ. ಹಾಗಾಗಿ ಅನೇಕ ಜನರು ರಜೆಯ ಮೇಲೆ ಸಂಬಂಧಿಕರು, ಬಂಧು ಬಾಂಧವರು, ಆಪ್ತರು, ಮಿತ್ರರನ್ನು ಬೇಟಿ ಮಾಡಲು ಹೋಗುತ್ತಾರೆ. ರಜೆಗಳು ಬಂತೆಂದರೆ ಪ್ರಯಾಣವು ಶುರು ಆಗೇ ಆಗುತ್ತದೆ. ಆದರೆ, ಹೊರಗೆ ಹೋಗಬೇಕೆಂದರೆ ಬಿರು ಬೇಸಿಗೆ ಕಾಟ ಬೇರೆ ಇರುತ್ತದೆ. ಮತ್ತೊಂದು ಕಡೆ ಕಣ್ಣು ರೆಪ್ಪೆಗಳ ಭಯ ಕೂಡಾ ಆರಂಭವಾಗುತ್ತದೆ. ಬೇಸಿಗೆಯಲ್ಲಿ ಅನೇಕ ಜನರು ಕಣ್ಣು ಕೆಂಪಾಗುವಿಕೆ ಅಥವಾ ಕಣ್ಣುರಿಯಿಂದ ಬಳಲುತ್ತಾರೆ. ಇದನ್ನು "ಗುಲಾಬಿ ಕಣ್ಣು" ಎಂದೂ ಕರೆಯಲಾಗುತ್ತದೆ. ಈ ಕಣ್ಣುರಿ ಸಮಸ್ಯೆ ನಿಮ್ಮ ಬೇಸಿಗೆ ರಜೆಯ ವಿನೋದಕ್ಕೆ ಅಡ್ಡಿಯಾಗುತ್ತದೆ. ಇದಕ್ಕೆ ಕಾರಣಗಳೇನು, ಲಕ್ಷಣಗಳೇನು ಮತ್ತು ತಡೆಗಟ್ಟುವ ಕ್ರಮಗಳನ್ನು ತಿಳಿದುಕೊಳ್ಳುವುದು ಉತ್ತಮ.
ಸಾಮಾನ್ಯವಾಗಿ, ಕಣ್ಣುರಿ ವೈರಸ್ಗಳು, ಬ್ಯಾಕ್ಟೀರಿಯಾಗಳು ಮತ್ತು ಅಲರ್ಜಿಗಳಿಂದ ಉಂಟಾಗುತ್ತವೆ. ವಿಶೇಷವಾಗಿ ಬೇಸಿಗೆಯಲ್ಲಿ, ಪರಾಗ ಮತ್ತು ಅಚ್ಚು ಮುಂತಾದ ಅಲರ್ಜಿಗಳು ಹೆಚ್ಚು ಕಾಡುತ್ತವೆ. ಬಿಸಿ ವಾತಾವರಣದಿಂದಾಗಿ, ಅವು ಹೆಚ್ಚಾಗುತ್ತವೆ ಮತ್ತು ಕಣ್ಣಿನ ಅಲರ್ಜಿಯನ್ನು ಉಂಟುಮಾಡುತ್ತವೆ. ಪರಿಣಾಮ, ಕಣ್ಣು ಕೆಂಪಾಗುವುದು, ಊತ ಮತ್ತು ಉರಿ ಕೂಡಾ ಉಂಟಾಗುತ್ತದೆ. ಬೇಸಿಗೆ ಬಿಸಿಲಿನಲ್ಲಿ ಹೆಚ್ಚು ಸಮಯ ಹೊರಗಡೆ ಕಳೆಯುವುದು ಮತ್ತು ಇತರರೊಂದಿಗೆ ಹೆಚ್ಚು ಸಮಯ ವ್ಯಯ ಮಾಡುವುದರಿಂದ ಕಣ್ಣಿನ ಸೋಂಕು ವೈರಸ್ ಮತ್ತು ಬ್ಯಾಕ್ಟೀರಿಯಾಗಳ ರೂಪದಲ್ಲಿ ಹರಡುವ ಅಪಾಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಈಜುಕೊಳಗಳು ಮತ್ತು ಕಡಲತೀರಗಳು ನಿಮ್ಮ ಕಣ್ಣಿನ ಊತ, ಉರಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಕಣ್ಣು ಕೆಂಪಾಗುವಿಕೆಯ ಲಕ್ಷಣಗಳು
- ಕಣ್ಣು ಗುಲಾಬಿ ಬಣ್ಣಕ್ಕೆ ತಿರುಗುವುದು ಮತ್ತು ಕಣ್ಣಲ್ಲಿ ಸದಾ ನೀರು ಆಡುತ್ತಿರುತ್ತದೆ.
- ಕಣ್ಣು ಊದಿಕೊಂಡ ಕಣ್ಣುರೆಪ್ಪೆಗಳನ್ನು ಬಡಿಯಲು ಕಷ್ಟವಾಗುತ್ತದೆ
- ಕಣ್ಣುಗಳಲ್ಲಿ ಸುಡುವಿಕೆ, ನೋವು ಮತ್ತು ಸ್ವಲ್ಪ ತುರಿಕೆ ಇರುತ್ತದೆ.
- ಬೆಳಕನ್ನು ನೋಡಲು ಕಷ್ಟವಾಗುತ್ತದೆ.
ಕಣ್ಣುರಿತದ ವಿಧಗಳು:
1. ವೈರಸ್ನಿಂದ ಕಣ್ಣು ಕೆಂಪಾಗುವಿಕೆ; ಇದು ತುಂಬಾ ಸಾಮಾನ್ಯವಾದ ಸಮಸ್ಯೆ ಆಗಿದೆ. ಚಿಕಿತ್ಸೆ ಇಲ್ಲದೇ ಎರಡು ವಾರಗಳಲ್ಲಿ ಕಡಿಮೆಯಾಗುತ್ತದೆ. ಇದರಿಂದ ಪರಿಹಾರ ಪಡೆಯಲು ಕಣ್ಣುಗಳ ಮೇಲೆ ಒದ್ದೆ ಬಟ್ಟೆಯನ್ನು ಇಡಬೇಕು. ಇದನ್ನು ದಿನವಿಡೀ ನಾಲ್ಕೈದು ಬಾರಿ ಮಾಡಬಹುದು.
2. ಬ್ಯಾಕ್ಟೀರಿಯಾದಿಂದ ಆಗುವ ಕಣ್ಣುರಿತ: ಇದನ್ನು ತೊಡೆದುಹಾಕಲು ವೈದ್ಯರು ಪ್ರತಿಜೀವಕ ಕಣ್ಣಿನ ಹನಿಗಳನ್ನು ಸೂಚಿಸುತ್ತಾರೆ. ಅವುಗಳ ಸಂಪೂರ್ಣ ಕೋರ್ಸ್ ಅನ್ನು ಬಳಸುವುದರಿಂದ ಬ್ಯಾಕ್ಟೀರಿಯಾದಿಂದ ಆಗುವ ಕಣ್ಣುರಿತವನ್ನು ಕಡಿಮೆ ಮಾಡಬಹುದು.
3. ಅಲರ್ಜಿಕ್ ಕಣ್ಣುರಿ: ಪರಾಗದಂತಹ ಅಲರ್ಜಿನ್‌ಗಳಿಂದಾಗಿ ಕಣ್ಣಿನಲ್ಲಿ ಬಹಳಷ್ಟು ಉರಿಯೂತವನ್ನು ಉಂಟುಮಾಡಬಹುದು. ವೈದ್ಯರ ಸಲಹೆಯಂತೆ ಇದನ್ನು ಆಂಟಿಹಿಸ್ಟಮೈನ್ ಕಣ್ಣಿನ ಹನಿಗಳೊಂದಿಗೆ ಚಿಕಿತ್ಸೆ ನೀಡಬಹುದು.
ಗುಲಾಬಿ ಕಣ್ಣಿನ ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ತಡೆಯಲು ಕೆಲವು ಮಾರ್ಗಗಳಿವೆ:
- ಆಗಾಗ್ಗೆ ಕಣ್ಣುಗಳನ್ನು ಮುಟ್ಟಬೇಡಿ ಮತ್ತು ಉಜ್ಜಬೇಡಿ
- ಆಗಾಗ್ಗೆ ಕೈಗಳನ್ನು ತೊಳೆಯಿರಿ.
- ದಿಂಬಿನ ಕವರ್ ಮತ್ತು ಟವೆಲ್ ಅನ್ನು ನಿಯಮಿತವಾಗಿ ಬದಲಾಯಿಸಬೇಕು.
- ಈಜುವಾಗ ಕನ್ನಡಕಗಳನ್ನು ಧರಿಸಬೇಕು. ಕಣ್ಣುರಿಯಿಂದ ಬಳಲುತ್ತಿರುವವರು ಈಜಬಾರದು.
- ಅಲರ್ಜಿಗಳನ್ನು ತಪ್ಪಿಸಿ.
ಪ್ರಮುಖ ಸೂಚನೆ: ಈ ಲೇಖನದಲ್ಲಿ ನಿಮಗೆ ಒದಗಿಸಲಾದ ಎಲ್ಲಾ ಆರೋಗ್ಯ ಮಾಹಿತಿ, ವೈದ್ಯಕೀಯ ಸಲಹೆಗಳು ನಿಮ್ಮ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ಕುಟುಂಬದ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನು ಓದಿ: ಸುಡು ಬಿಸಿಲ ಬೇಗೆಯಲ್ಲಿ 'ಬೆಂದ'ಕಾಳೂರಿಗೆ ತಂಪೆರೆದ ವರುಣ; ರಾಜಧಾನಿಯಲ್ಲಿ ಇಳಿದ ತಾಪಮಾನ, ಜನರ ನಿಟ್ಟುಸಿರು - Bengaluru Rain