ಬೆಂಗಳೂರು: ವೈದ್ಯಕೀಯ ಲೋಕದಲ್ಲಿ ಹೊಸ ಹೊಸ ತಂತ್ರಜ್ಞಾನ ಬಳಕೆಯಲ್ಲಿ ಮುಂದಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ ರೊಬೊಟಿಕ್ಸ್ ಯಂತ್ರದಿಂದ ಬೆನ್ನು ಮೂಳೆಯ ಗಡ್ಡೆ, ಘಾಸಿ, ವಿರೂಪತೆಗೆ ಸಂಕೀರ್ಣ ಶಸ್ತ್ರಚಿಕಿತ್ಸೆ ನೀಡುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಿದೆ.
ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ, ಬೆನ್ನು ಮೂಳೆ ಶಸ್ತ್ರ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿದೆ. ಬೆನ್ನು ಮೂಳೆಯ ಗಡ್ಡೆ, ಘಾಸಿ ಮತ್ತು ವಿರೂಪತೆ ಸೇರಿದಂತೆ ಸಂಕೀರ್ಣವಾದ ಬೆನ್ನುಮೂಳೆಯ ಸಮಸ್ಯೆಗಳಿಗೆ ರೋಗಿಗಳಿಗೆ ಅದ್ವಿತೀಯ ಎನ್ನಬಹುದಾದ ಪರಿಣತ ಮತ್ತು ಸಮಗ್ರ ಚಿಕಿತ್ಸಾ ಆಯ್ಕೆಗಳನ್ನು ನೀಡುವ ಮೂಲಕ ಅತ್ಯಂತ ಉನ್ನತ ಮಟ್ಟದ ಆರೈಕೆಯ ಮೇಲೆ ಕೇಂದ್ರೀಕರಿಸಿ, ಆಸ್ಪತ್ರೆಯ ನುರಿತ ಶಸ್ತ್ರ ಚಿಕಿತ್ಸಕರು ನರಕ್ಕೆ ಸಂಬಂಧಿಸಿದ ರೋಗದ ಜಾಡು ಪತ್ತೆಯೊಂದಿಗೆ, ಮುಂದುವರೆದ ರೊಬೊಟಿಕ್ಸ್ ತಂತ್ರಜ್ಞಾನ ಮತ್ತು ಚಿತ್ರಣದೊಂದಿಗೆ ಅನನ್ಯವಾದ ಕ್ಲಿನಿಕಲ್ ಫಲಿತಾಶವನ್ನು ಒದಗಿಸುತ್ತಾರೆ ಎನ್ನುವ ಮಾಹಿತಿಯನ್ನು ಆಸ್ಪತ್ರೆಯು ರೋಗಿಗಳ ಯಶಸ್ವಿ ಚಿಕಿತ್ಸೆಯ ದಾಖಲಾತಿಗಳೊಂದಿಗೆ ಪ್ರಕಟಿಸಿದೆ.
ಆಸ್ಪತ್ರೆಯ ಯಶೋಗಾಥೆಗೆ ಪೂರಕ ಎನ್ನುವಂತೆ ತನ್ನ ಕ್ಲಿನಿಕಲ್ ಫಲಿತಾಂಶಕ್ಕೆ ಉದಾಹರಣೆಯಾಗಿ ಇಬ್ಬರು ಬಾಲಕಿಯರಿಗೆ ನೀಡಲಾದ ರೊಬೋಟಿಕ್ ಶಸ್ತ್ರಚಿಕಿತ್ಸೆಯ ಸಂಪೂರ್ಣ ವಿವರದೊಂದಿಗೆ ಬಾಲಕಿಯರನ್ನು ಮಾಧ್ಯಮಗಳಿಗೆ ಪರಿಚಯಿಸಿಯೇ ಆಸ್ಪತ್ರೆಯ ಪ್ರತಿನಿಧಿಗಳು ರೊಬೊಟಿಕ್ಸ್ ಯಂತ್ರಗಳಿಂದ ದೊರೆಯುವ ನಿಖರತೆಯು ಅಂತಾರಾಷ್ಟ್ರೀಯ ಪರಿಣತಿಯ ಸಂಯೋಜನೆಯು ಈ ಮೊದಲು ಶಸ್ತ್ರ ಚಿಕಿತ್ಸೆ ನಡೆಸಲು ಸಾಧ್ಯವೇ ಇಲ್ಲವೆಂಬ ಪ್ರಕರಣಗಳಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲು ಅನುವು ಮಾಡಿಕೊಟ್ಟಿದೆ ಎನ್ನುವ ವಿವರಗಳನ್ನು ನೀಡಿದರು.
ಯಶಸ್ಸಿನ ಕುರಿತು ವೈದ್ಯರ ಮಾತು: ಈ ಕುರಿತು ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ನಾರಾಯಣ ಹೆಲ್ತ್ ಸಿಟಿಯ ಬೆನ್ನು ಮೂಳೆ ಶಸ್ತ್ರ ಚಿಕಿತ್ಸಕ ಪ್ರೊ.ಅರುಣ್ ರಂಗನಾಥನ್ ಅವರು, 13 ವರ್ಷದ ಬಾಲಕಿಯೊಬ್ಬರಿಗೆ ಮೊದಲು ಹೃದಯ ಶಸ್ತ್ರ ಚಿಕಿತ್ಸೆಗೊಳಗಾಗಿದ್ದು, ಬಳಿಕ ಬೆನ್ನುಮೂಳೆಯ ತೀವ್ರವಾದ ಊನತೆ/ವಿರೂಪತೆ ಹಂತಕ್ಕೆ ಬೆಳೆದು ಬಿಟ್ಟಿತ್ತು. ಚಿತ್ರಣ ಮಾರ್ಗದರ್ಶಕ ತಂತ್ರಜ್ಞಾನವು ಶಸ್ತ್ರ ಚಿಕಿತ್ಸಕರ ತಂಡಕ್ಕೆ ಅತ್ಯಂತ ನಿಖರವಾಗಿ ಸ್ಕ್ರೂ ಅಳವಡಿಸಲು ಮತ್ತು ಆಕೆಯ ಕರಾರುವಕ್ಕಾದ ತಿದ್ದುಪಡಿಗೆ ಕಾರಣವಾಯಿತು'' ಎಂದು ತಿಳಿಸಿದರು.
''ಮುಂದುವರೆದು ಮಾರ್ಗದರ್ಶಕ ತಂತ್ರಜ್ಞಾನದ ಬಳಕೆಯು ಮತ್ತು ರೊಬೊಟಿಕ್ಸ್ ಸಹಾಯವು ನಮಗೆ ಅಭೂತಪೂರ್ವವಾದ ನಿಖರತೆಯನ್ನು ಸಾಧಿಸಲು ಅನುವು ಮಾಡಿಕೊಟ್ಟಿದೆ. ಅದರಲ್ಲೂ ವಿಶೇಷವಾಗಿ ಅಂಗಾಂಶಗಳ ಕಡಿಮೆ ಪ್ರಮಾಣದ ಛೇದನ ಮತ್ತು ಗಾಯದ ಗುಣಪಡಿಸುವಿಕೆಯ ಸುಧಾರಿತ ವ್ಯವಸ್ಥೆಯು ನಮ್ಮ ರೋಗಿಗಳಿಗೆ ಕಡಿಮೆ ಅವಧಿಯಲ್ಲಿ ತ್ವರಿತವಾಗಿ ಚೇತರಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ'' ಎಂದು ಅವರು ವಿವರಿಸಿದರು.
''ಗಮನಾರ್ಹವಾದ ಇತರೇ ಕೆಲವು ಪ್ರಕರಣಗಳೆಂದರೆ 13 ವರ್ಷದ ಬಾಲಕಿ ಬೆಳವಣಿಗೆ ಹೆಚ್ಚಾಗುತ್ತಿದ್ದಂತೆ ಬೆನ್ನುಮೂಳೆಯ ಊನತೆಯಿಂದ ಬಳಲುತ್ತಿದ್ದರು. ಚಿತ್ರಣ ಮಾರ್ಗದರ್ಶಕ ತಂತ್ರಜ್ಞಾನವು ಕರಾರುವಾಕ್ಕಾದ ಶಸ್ತ್ರ ಚಿಕಿತ್ಸಾ ಯೋಜನೆಗೆ ಮತ್ತು ಅವರ ಬೆನ್ನುಮೂಳೆಯ ಸುಧಾರಣೆಗೆ ಮತ್ತು ಅಂಗಾಂಶಗಳ ಕಡಿಮೆ ಪ್ರಮಾಣದ ಛೇದನ ಮತ್ತು ಗಾಯದ ಗುಣಪಡಿಸುವಿಕೆಯ ಸುಧಾರಿತ ವ್ಯವಸ್ಥೆಯು ಶೀಘ್ರ ಚೇತರಿಕೆಗೆ ಅನುವು ಮಾಡಿಕೊಟ್ಟಿತು'' ಎಂದ ಅವರು, ''11 ವರ್ಷದ ಬಾಲಕಿಯ ಬೆನ್ನು ಮೂಳೆಯು ಬಾಗಿದ್ದು, ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಶಸ್ತ್ರ ಚಿಕಿತ್ಸೆ ಬಳಿಕ ಆಕೆ ಸುಧಾರಣೆಯಾಗಿದ್ದು, ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ'' ಎಂದು ವಿವರಿಸಿದರು. ರೊಬೊಟಿಕ್ಸ್ ಯಂತ್ರಗಳಿಂದ ದೊರೆಯುವ ನಿಖರತೆಯು ಅಂತಾರಾಷ್ಟ್ರೀಯ ಪರಿಣತಿಯ ಸಂಯೋಜನೆಯು ಈ ಮೊದಲು ಶಸ್ತ್ರ ಚಿಕಿತ್ಸೆ ನಡೆಸಲು ಸಾಧ್ಯವೇ ಇಲ್ಲವೆಂಬ ಪ್ರಕರಣಗಳಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲು ಅನುವು ಮಾಡಿಕೊಟ್ಟಿದೆ” ಎಂದು ಅವರು ವಿವರಿಸಿದರು.
''ಸೋಂಕು ಮತ್ತು ಊನತೆ ಸೇರಿದಂತೆ ಬೆನ್ನುಮೂಳೆ ಸಮಸ್ಯೆಗಳು ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ನಾರಾಯಣ ಹೆಲ್ತ್ ಸಿಟಿಯ ಉತ್ಕೃಷ್ಟತೆಗೆ ಬದ್ಧತೆ, ಮುಂದುವರಿದ ತಂತ್ರಜ್ಞಾನದ ಬಳಕೆಯೊಂದಿಗೆ ಸೇರಿ, ರೋಗಿಗಳಿಗೆ ಸುರಕ್ಷಿತ, ಹೆಚ್ಚು ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುತ್ತದೆ'' ಎಂದು ನರ ಸಂಬಂಧಿ ಮತ್ತು ಬೆನ್ನು ಮೂಳೆ ಶಸ್ತ್ರ ಚಿಕಿತ್ಸಕ ಡಾ.ಕೋಮಲ್ ಪ್ರಸಾದ್ ಮಾಹಿತಿ ನೀಡಿದರು.
''ಬೆನ್ನು ಮೂಳೆಯ ರೊಬೊಟಿಕ್ಸ್ ಶಸ್ತ್ರ ಚಿಕಿತ್ಸೆಯು ಚಿಕಿತ್ಸೆಗೆ ಹೊಸ ಆಯಾಮ ನೀಡಿದೆ. ಹೆಚ್ಚು ಸಂಕೀರ್ಣವಾದ ಪ್ರಕರಣಗಳನ್ನು ಹೆಚ್ಚಿನ ಪ್ರಮಾಣದ ಆತ್ಮವಿಶ್ವಾಸ ಮತ್ತು ಯಶಸ್ಸಿನೊಂದಿಗೆ ಚಿಕಿತ್ಸೆ ನೀಡಲು ನಮಗೆ ಅನುವು ಮಾಡಿಕೊಟ್ಟಿದೆ. ಅಪಾಯಗಳನ್ನು ಕಡಿಮೆ ಮಾಡುವ ಮತ್ತು ಚೇತರಿಕೆಯ ಪ್ರಮಾಣವನ್ನು ಹೆಚ್ಚಿಸುವ ಮತ್ತು ನಮ್ಮ ರೋಗಿಗಳಿಗೆ ಸಾಧ್ಯವಾದಷ್ಟೂ ಉತ್ತಮ ಆರೈಕೆಯನ್ನು ಇದು ಒದಗಿಸುತ್ತದೆ'' ಎಂದು ಅವರು ಅಭಿಪ್ರಾಯಪಟ್ಟರು.