ETV Bharat / health

ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆಯಾ? ಹಾಗಾದರೆ ಈಗಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ! - Colon Cancer Warning Signs - COLON CANCER WARNING SIGNS

ಹೊಟ್ಟೆನೋವು, ಮಲದಲ್ಲಿ ರಕ್ತ, ಅತಿಯಾದ ತೂಕ ನಷ್ಟ, ಸುಸ್ತು ಲಕ್ಷಣಗಳು ಕಾಣಿಸಿಕೊಂಡಲ್ಲಿ ಕರುಳಿನ ಕ್ಯಾನ್ಸರ್​ ಆಗಿರುವ ಸಾಧ್ಯತೆಯಿದ್ದು, ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎನ್ನುತ್ತಾರೆ ವೈದ್ಯಕೀಯ ತಜ್ಞರು.

Colon Cancer Warning Signs
ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆಯಾ? ಹಾಗಾದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ! (ETV Bharat)
author img

By ETV Bharat Karnataka Team

Published : Jun 10, 2024, 8:47 AM IST

ಕ್ಯಾನ್ಸರ್,​ ಇತ್ತೀಚಿನ ದಿನಗಳಲ್ಲಿ ಜನರನ್ನು ತುಂಬಾ ಭಯಪಡಿಸುವ ಕಾಯಿಲೆಗಳಲ್ಲಿ ಒಂದು. ಕ್ಯಾನ್ಸರ್​ಗಳಲ್ಲಿ ಹಲವಾರು ವಿಧಗಳಿವೆ. ಅದರಲ್ಲಿ ಕೊಲೊನ್​ ಕ್ಯಾನ್ಸರ್​ (ಕರುಳಿನ ಕ್ಯಾನ್ಸರ್)​ ಕೂಡ ಒಂದು. ಒಂದಾನೊಂದು ಕಾಲದಲ್ಲಿ ಈ ಕ್ಯಾನ್ಸರ್​ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಂದ ವಯಸ್ಸಿನ ಭೇದವಿಲ್ಲದೇ ಬರುತ್ತಿದೆ. ಮಾತ್ರವಲ್ಲದೇ ಇತ್ತೀಚಿನ ಕೆಲವು ಅಧ್ಯಯನಗಳು, ಯುವಕರಲ್ಲಿ ಕರುಳಿನ ಕ್ಯಾನ್ಸರ್​ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಹೇಳಿವೆ.

ಹೆಚ್ಚಿನ ಜನರಿಗೆ ಈ ಕ್ಯಾನ್ಸರ್​ನ ಆರಂಭಿಕ ಹಂತಗಳಲ್ಲಿ ಯಾವುದೇ ರೋಗಲಕ್ಷಣಗಳು ಇರುವುದಿಲ್ಲ. ಕ್ಯಾನ್ಸರ್ ಮುಂದುವರೆದಂತೆ, ಗೆಡ್ಡೆಯ ಗಾತ್ರ ಮತ್ತು ಸ್ಥಳವನ್ನು ಅವಲಂಬಿಸಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಸರಿಯಾದ ಸಮಯಕ್ಕೆ ಗುರುತಿಸಲು ಸಾಧ್ಯವಾಗದೇ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ, ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಲು, ಕರುಳಿನ ಕ್ಯಾನ್ಸರ್‌ನ ಆರಂಭಿಕ ಎಚ್ಚರಿಕೆ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ತಜ್ಞರು ಹೇಳುತ್ತಾರೆ.

ಹಾಗಾದರೆ ಏನೀ ಕ್ಯಾನ್ಸರ್​ನ ಆರಂಭಿಕ ಲಕ್ಷಣಗಳು? ಆರಂಭಿಕ ಹಂತದಲ್ಲೇ ವೈದ್ಯರ ಬಳಿ ತೆರಳುವುದರಿಂದ ಆಗುವ ಪ್ರಯೋಜನಗಳಾದರೂ ಏನು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

ಮಲವಿಸರ್ಜನೆಯಲ್ಲಿನ ಬದಲಾವಣೆಗಳು: ಮಲವಿಸರ್ಜನೆಯಲ್ಲಿ ಆಗಾಗ್ಗೆ ಬದಲಾವಣೆಗಳು ಕಂಡು ಬಂದರೆ, ತಕ್ಷಣ ತಜ್ಞರನ್ನು ಭೇಟಿಯಾಗುವುದು ಒಳ್ಳೆಯದು. ಅದರಲ್ಲೂ ಕೆಲವು ದಿನಗಳಿಗಿಂತ ಹೆಚ್ಚು ಕಾಲ ನೀವು ಅತಿಸಾರ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅದು ದೊಡ್ಡ ಕರುಳಿನ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು ಎಂದು ಹೈದರಾಬಾದ್‌ನ ಅಪೋಲೋ ಕ್ಯಾನ್ಸರ್ ಸಂಸ್ಥೆಯ ಖ್ಯಾತ ಆಂಕೊಲಾಜಿಸ್ಟ್ ಡಾ.ಪಿ. ವಿಜಯ್ ಆನಂದ್ ರೆಡ್ಡಿ ಹೇಳುತ್ತಾರೆ. ಇದಲ್ಲದೇ, 2005 ರಲ್ಲಿ 'ಜರ್ನಲ್ ಆಫ್ ದಿ ನ್ಯಾಷನಲ್ ಕ್ಯಾನ್ಸರ್ ಇನ್​ಸ್ಟಿಟ್ಯೂಟ್' ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮಲಬದ್ಧತೆ ಹೊಂದಿರುವ ಜನರಲ್ಲಿ ಕರುಳಿನ ಕ್ಯಾನ್ಸರ್ ಅಭಿವೃದ್ಧಿಯಾಗುವ ಸಾಧ್ಯತೆಯಿದೆ ಎಂದು ಸಂಶೋಧಕರು ಕಂಡು ಕೊಂಡಿದ್ದಾರೆ.

ಮಲದಲ್ಲಿ ರಕ್ತ: ಇದು ಕರುಳಿನ ಕ್ಯಾನ್ಸರ್​ನ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ ಎಂದು ವೈದ್ಯರು ಹೇಳುತ್ತಾರೆ. ವಿಶೇಷವಾಗಿ ಗುದದ್ವಾರದಿಂದ ಅಥವಾ ಮಲದಲ್ಲಿ ರಕ್ತ ಬರುವುದನ್ನು ನೀವು ಗಮನಿಸಿದರೆ, ನೀವು ತಕ್ಷಣ ಎಚ್ಚರ ವಹಿಸಬೇಕು. ಅಷ್ಟೇ ಅಲ್ಲ, ಕೆಲವರ ಮಲದಲ್ಲಿ ರಕ್ತ ಬಂದು ಭೇದಿ ಕಪ್ಪಾಗಬಹುದು. ಹಾಗಾಗಿ ಇಂತಹ ಲಕ್ಷಣ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಹೊಟ್ಟೆ ನೋವು: ಕೊಲೊನ್ ಕ್ಯಾನ್ಸರ್ ಬಗ್ಗೆ ತಿಳಿದುಕೊಳ್ಳಲು ಮತ್ತೊಂದು ಪ್ರಮುಖ ಲಕ್ಷಣ ಎಂದರೆ ಹೊಟ್ಟೆ ನೋವು. ನಿರಂತರವಾದ ಕಿಬ್ಬೊಟ್ಟೆಯ ನೋವು, ಸೆಳೆತವನ್ನು ನಿರ್ಲಕ್ಷಿಸದಂತೆ ತಜ್ಞರು ಸಲಹೆ ನೀಡುತ್ತಾರೆ. ವಿಶೇಷವಾಗಿ ಔಷಧಿಗಳನ್ನು ತೆಗೆದುಕೊಂಡ ನಂತರವೂ ನಿಮ್ಮ ಹೊಟ್ಟೆಯಲ್ಲಿ ನೀವು ನಿವಾರಿಸದ ಅಸ್ವಸ್ಥತೆಯನ್ನು ಅನುಭವಿಸಿದರೆ ವೈದ್ಯರನ್ನು ಭೇಟಿಯಾಗಬೇಕು.

ಅತಿಯಾದ ತೂಕ ನಷ್ಟ: ಯಾವುದೇ ಪ್ರಯತ್ನವಿಲ್ಲದೇ ತೂಕ ನಷ್ಟವು ಕರುಳಿನ ಕ್ಯಾನ್ಸರ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳ ಸಂಕೇತವಾಗಿದೆ ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ನಿಮ್ಮ ಆಹಾರ ಕ್ರಮದಲ್ಲಿ ಅಥವಾ ವ್ಯಾಯಾಮದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೇ ತೂಕ ನಷ್ಟ ಸಂಭವಿಸಿದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಲು ಮತ್ತು ಎಚ್ಚರಿಕೆ ವಹಿಸಲು ವೈದ್ಯರು ಸಲಹೆ ನೀಡುತ್ತಾರೆ.

ದಣಿವು: ಸಾಕಷ್ಟು ನಿದ್ದೆ ಮಾಡಿದ ನಂತರವೂ ನೀವು ಯಾವಾಗಲೂ ಸುಸ್ತಾಗಿರುತ್ತಿದ್ದರೆ, ಎಚ್ಚರ. ಏಕೆಂದರೆ, ಇದೂ ಕೂಡ ಕೊಲೊನ್ ಕ್ಯಾನ್ಸರ್ ನ ಲಕ್ಷಣ. ವಿಶೇಷವಾಗಿ ನೀವು ತೀವ್ರ ಆಯಾಸ ಅನುಭವಿಸುತ್ತಿದ್ದರೆ, ಅಲ್ಲದೆ, ಹಸಿವಿನ ಕೊರತೆ ಮತ್ತು ತೀವ್ರ ರಕ್ತಹೀನತೆಯಂತಹ ಲಕ್ಷಣಗಳು ಕಂಡುಬಂದರೆ, ತಕ್ಷಣವೇ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಉತ್ತಮ. ಕೊನೆಯದಾಗಿ, ಮೇಲೆ ಹೇಳಿದ ಲಕ್ಷಣಗಳು ಕಂಡುಬಂದಲ್ಲಿ ತಡಮಾಡದೇ ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆಗಳಿಗೆ ಒಳಗಾಗುವಂತೆ ತಜ್ಞರು ಸಲಹೆ ನೀಡುತ್ತಾರೆ.

ನಿಮ್ಮ ಗಮನಕ್ಕೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ಆಪ್ತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಬೀ ಅಲರ್ಟ್​, ನಿಮ್ಮ ದೇಹದಲ್ಲಿ ಈ ಚಿಹ್ನೆಗಳೇನಾದರೂ ಇವೆಯಾ? ಹಾಗಾದರೆ ನಿಮ್ಮ ಆರೋಗ್ಯ ಅಪಾಯದಲ್ಲಿದೆ! ಇದಕ್ಕೆ ಕಾರಣವೇನು ಗೊತ್ತಾ? - SYMPTOMS OF HIGH CHOLESTEROL

ETV Bharat Logo

Copyright © 2025 Ushodaya Enterprises Pvt. Ltd., All Rights Reserved.