ETV Bharat / health

ಭಾರತದಲ್ಲಿ ಕಾರ್ಮಿಕ ಉತ್ಪಾದನೆ.. ಶೇ 40ರಷ್ಟು ಕಡಿಮೆ ಮಾಡಲಿದೆ ಹವಾಮಾನ ಬದಲಾವಣೆ - ಕಾರ್ಮಿಕರ ಉತ್ಪಾದನೆ ಕುಸಿತ

ಹವಾಮಾನ ಬದಲಾವಣೆ ಎಂಬುದು ಸದ್ಯ ಜಾಗತಿಕ ಮಟ್ಟದಲ್ಲಿ ಹೊಸ ಸವಾಲಾಗಿ ಪರಿಣಮಿಸಿದೆ.

climate-change-will-reduce-labor-productivity-in-india-by-40-percent

author img

By PTI

Published : Jan 20, 2024, 5:22 PM IST

ನವದೆಹಲಿ: ಹವಾಮಾನ ಬದಲಾವಣೆಯಿಂದಾಗಿ ಭಾರತ ಮತ್ತು ಪಾಕಿಸ್ತಾನದಲ್ಲಿ ಈ ಶತಮಾನದ ಅಂತ್ಯದ ಮೇಲೆ ಕಾರ್ಮಿಕರ ಉತ್ಪಾದನೆ ಕುಂಠಿತಗೊಳಿಸಬಹುದು. ಇದು ಜಾಗತಿಕ ಆಹಾರ ಉತ್ಪಾದನೆ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಅಧ್ಯಯನ ತಿಳಿಸಿದೆ. ಜರ್ನಲ್​ ಗ್ಲೋಬಲ್​ ಚೇಂಜ್​ ಬಯೋಲಾಜಿಯಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ಆಗ್ನೇಯ ಮತ್ತು ದಕ್ಷಿಣ ಏಷ್ಯಾ, ಪಶ್ಚಿಮ ಮತ್ತು ಆಫ್ರಿಕಾದ ಕೇಂದ್ರ ಹಾಗೂ ಉತ್ತರದ ದಕ್ಷಿಣ ಅಮೆರಿಕದಲ್ಲಿ ಈ ಹವಾಮಾನ ಬದಲಾವಣೆಗಳು ದೈಹಿಕ ಕೆಲಸ ಸಾಮರ್ಥ್ಯದ ಮೇಲೆ ಶೇ 70ರಷ್ಟು ಪರಿಣಾಮ ಬೀರುತ್ತದೆ.

ಹವಾಮಾನ ಬದಲಾವಣೆಯು ಬೆಳೆಗಳ ಇಳುವರಿಯನ್ನೂ ಸಹ ಕಡಿಮೆ ಮಾಡಲಿದೆ. ಇದು ಆಹಾರ ಭದ್ರತೆ ಮೇಲೆ ಗಂಭೀರ ಸವಾಲನ್ನು ಹೊಂದಿದೆ ಎಂದು ಅಮೆರಿಕಯದ ಇಲ್ಲಿನೊಯ್ಸ್​​ ಯುನಿವರ್ಸಿಟಿ ಪ್ರೊಫೆಸರ್​ ಗೆರೆಲ್ಡ್​​ ನೆಲ್ಸನ್​ ತಿಳಿಸಿದ್ದಾರೆ. ಇದು ಕೇವಲ ಬೆಳೆ ಮತ್ತು ಜಾನುವಾರುಗಳ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಇದು ಭೂಮಿ ಮೇಲಿನ ಎಲ್ಲ ಕೃಷಿ ಕಾರ್ಮಿಕರ ಮೇಲೆ ಮತ್ತು ವ್ಯವಸಾಯದ ಮೇಲೆ ಪರಿಣಾಮ ಬೀರಲಿದೆ. ಭಾರೀ ಬಿಸಿಲಿನಿಂದಾಗಿ ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಇದು ಕುಂಠಿತಗೊಳಿಸಲಿದೆ ಎಂದರು.

ಈ ಅಧ್ಯಯನದ ವೇಳೆ, ಸಂಶೋಧನಾ ತಂಡವು ಕಂಪ್ಯೂಟಷನಲ್​ ಮಾದರಿಯನ್ನು ಬಳಕೆ ಮಾಡಿಕೊಂಡು ದೈಹಿಕ ಕೆಲಸದ ಸಾಮರ್ಥ್ಯವನ್ನು ಅಂದಾಜಿಸಿದೆ. ಈ ಮಾದರಿಯನ್ನು ಯುಕೆಯ ಲಾಫ್​ಬೊರ್ಗ್​​ ಯುನಿವರ್ಸಿಟಿ ಅಭಿವೃದ್ಧಿ ಪಡಿಸಿದೆ. 700 ಶಾಖದ ಒತ್ತಡದ ಪ್ರಯೋಕ್ಕಿಂತ ಹೆಚ್ಚಿನ ದತ್ತಾಂಶವನ್ನು ಪಡೆಯಲಾಗಿದೆ. ಈ ತಾಪಾಮಾನ ಮತ್ತು ಆರ್ದ್ರತೆ ಮತ್ತು ವಿಭಿನ್ನ ಹವಾಮಾನ ಪರಿಸ್ಥಿತಿಯಲ್ಲಿ ಜನರ ಕೆಲಸ ಮಾಡುವುದನ್ನು ಗಮನಿಸಲಾಗಿದೆ.

ವ್ಯಕ್ತಿಯೊಬ್ಬನ ಅತಿ ಹೆಚ್ಚಿನ ಕೆಲಸದ ಸಾಮರ್ಥ್ಯವನ್ನು ತಂಪಾದ ಹವಾಮಾನದಲ್ಲೇ ಪಡೆಯಲು ಸಾಧ್ಯ ಎಂಬುದನ್ನು ಅಧ್ಯಯನ ತೋರಿಸಿದ್ದು, ಈ ವೇಳೆ ಶೇ 100ರಷ್ಟು ಕೆಲಸದ ಸಾಮರ್ಥ್ಯವನ್ನು ಪ್ರತಿನಿಧಿಸುತ್ತಾರೆ ಎಂದು ಸಂಶೋಧನೆ ತಿಳಿಸಿದೆ. ಸಾಮರ್ಥ್ಯದ ಕಡಿತ ಎಂದರೆ, ಜನರು ದೈಹಿಕವಾಗಿ ಕೆಲಸ ಮಾಡಲು ಉತ್ಸಾಹ ಹೊಂದಿದ್ದರೂ ಸೀಮಿತ ಮಾಡಿಕೊಂಡಿದ್ದಾರೆ. ರೈತರು ತಮ್ಮ ಎಂದಿನ ನಿರ್ವಹಣೆಗೆ ಹೆಚ್ಚುವರಿ ಕೆಲಸ ಬೇಕಾಗುತ್ತದೆ. ಅಥವಾ ಅವರು ತಮ್ಮ ಬೆಳೆಯ ಗಾತ್ರವನ್ನು ಕಡಿಮೆ ಮಾಡುತ್ತಾರೆ ಎಂಬ ಅಂಶ ಅಧ್ಯಯನದ ವೇಳೆ ಕಂಡು ಬಂದಿದೆ.

ಈಗಾಗಲೇ ಕೃಷಿಕರು ಶಾಖವನ್ನು ಎದುರಿಸುತ್ತಿದ್ದಾರೆ. ಅರ್ಧದಷ್ಟು ಜಗತ್ತಿನ ಕೃಷಿಕರ ಕೆಲಸದ ಸಾಮರ್ಥ್ಯವೂ ಶೇ 86ರಷ್ಟು ಆಗಿದೆ ಎಂದು ಅಧ್ಯಯನ ತೋರಿಸಿದೆ. ರಾತ್ರಿ ಹೊತ್ತಿನ ಕೆಲಸ ಅಥವಾ ಶೇಡ್​ ಕೆಲಸವೂ ನೇರವಾಗಿ ಸೂರ್ಯನ ತಾಪಮಾನವನ್ನು ಕಡಿಮೆ ಮಾಡುತ್ತದೆ. ಇದರಿಂದ 5-10ರಷ್ಟು ಕೆಲಸದ ಉತ್ಪಾದನೆ ಅಭಿವೃದ್ಧಿ ಕಾಣಬಹುದು ಎಂದರು. (ಪಿಟಿಐ)

ಇದನ್ನೂ ಓದಿ: ಹವಾಮಾನ ಬದಲಾವಣೆಯು ಅತಿಸಾರ ಕಾಯಿಲೆ ಹರಡುವಿಕೆಯ ಅಪಾಯ ಹೆಚ್ಚಿಸಬಹುದು: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.