ETV Bharat / health

ಭಾರತದಲ್ಲಿ ರಾತ್ರಿ ಹೊತ್ತು ಏರುತ್ತಿದೆ ತಾಪಮಾನ: ನಿದ್ರೆ, ಆರೋಗ್ಯದ ಮೇಲೆ ಆಗ್ತಿದೆ ಗಂಭೀರ ಪರಿಣಾಮ - rise in nighttime warming

author img

By IANS

Published : Jun 21, 2024, 10:55 AM IST

ಹವಾಮಾನ ಬದಲಾವಣೆಯಿಂದ ಭೂಮಿಯಲ್ಲಿ ರಾತ್ರಿ ಸಮಯದ ತಾಪಮಾನವೂ ಬೆಳಗಿನ ಹವಾಮಾನಕ್ಕಿಂತ ವೇಗವಾಗಿ ಬದಲಾವಣೆ ಆಗುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದ್ದು, ನಿದ್ದೆಯ ಮೇಲೆ ಬಾರಿ ಪರಿಣಾಮವನ್ನುಂಟು ಮಾಡುತ್ತಿದೆ.

Climate change rise in nighttime warming it impacting sleep quality, health in Indians
ಬೆಚ್ಚಗಿನ ರಾತ್ರಿ ಪರಿಣಾಮ (ಐಎಎನ್​ಎಸ್​)

ನವದೆಹಲಿ: ಭಾರತದಲ್ಲಿ ರಾತ್ರಿ ಸಮಯದಲ್ಲಿ ಕೂಡಾ ತಾಪಮಾನದಲ್ಲಿ ಬದಲಾವಣೆ ಕಾಣುತ್ತಿದ್ದು, ದೇಶ ತೀವ್ರತರನಾದ ಶಾಖದ ಅಲೆಯಿಂದ ಬಳಲುತ್ತಿದೆ ಎಂದು ಹೊಸ ಅಧ್ಯಯನವೊಂದು ವಿಶ್ಲೇಷಿಸಿದೆ. ವರ್ಷದಲ್ಲಿ 50 ರಿಂದ 80 ರಾತ್ರಿಗಳಲ್ಲಿ ತಾಪಮಾನ 25 ಡಿಗ್ರಿ ಸೆಲ್ಸಿಯಸ್​​ಗಿಂತ ಹೆಚ್ಚಾಗಿದ್ದು, ಇದು ನಿದ್ರೆ ಮತ್ತು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಹವಾಮಾನ ಬದಲಾವಣೆಯಿಂದಾಗಿ ರಾತ್ರಿ ಸಮಯವೂ ಬೆಚ್ಚಗಾಗುತ್ತಿದ್ದು, ಇದು ಭಾರತ ದೇಶ ಮಾತ್ರವಲ್ಲದೇ, ವಿಶ್ವದೆಲ್ಲೆಡೆ ಜನರ ನಿದ್ರೆ ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

ಹವಾಮಾನ ಬದಲಾವಣೆಯಿಂದ ಭೂಮಿಯಲ್ಲಿ ರಾತ್ರಿ ಸಮಯದ ತಾಪಮಾನವೂ ಬೆಳಗಿನ ಹವಾಮಾನಕ್ಕಿಂತ ವೇಗವಾಗಿ ಬದಲಾವಣೆ ಆಗುತ್ತಿದೆ. ಇದಕ್ಕೆ ಪ್ರಮುಖ ಪ್ರಾಥಮಿಕ ಕಾರಣ ಕಲ್ಲಿದ್ಧಲು, ಎಣ್ಣೆ ಮತ್ತು ಅನಿಲದಂತಹ ಪಳೆಯುಳಿಕೆಯ ಇಂಧನವನ್ನು ಹೆಚ್ಚು ಹೆಚ್ಚು ಬಳಕೆ ಮಾಡುತ್ತಿರುವುದು ಮತ್ತು ಸುಡುತ್ತಿರುವುದು. ಹವಾಮಾನ ಬಿಕ್ಕಟ್ಟಿನ ದುರ್ಬಲ ಪರಿಣಾಮಕ್ಕೆ ಭಾರತ ಒಳಗಾಗುತ್ತಿದ್ದು, ದೇಶದಲ್ಲಿ ಕಳೆದೊಂದು ದಶಕದಿಂದ ರಾತ್ರಿ ತಾಪಮಾನದಲ್ಲಿ ಗಮನಾರ್ಹ ಏರಿಕೆ ಕಾಣುತ್ತಿದೆ.

ಕಳೆದ 12 ವರ್ಷದಲ್ಲಿ ಜೂನ್​ 18ರ ರಾತ್ರಿ ನವದೆಹಲಿಯಲ್ಲಿ ಅತಿ ಹೆಚ್ಚಿನ ತಾಪಮಾನ ಅಂದರೆ 35.2 ಡಿಗ್ರಿಯಷ್ಟು ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 2018 ಮತ್ತು 2023 ರ ನಡುವೆ ಕೇರಳ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಮತ್ತು ಆಂಧ್ರಪ್ರದೇಶದ ಹಲವು ನಗರಗಳಲ್ಲಿ ಹವಾಮಾನ ಬದಲಾವಣೆಯಿಂದ ಪ್ರತಿ ವರ್ಷ ಸುಮಾರು 50 ರಿಂದ 80 ದಿನಗಳು ಮಿತಿ ಹೆಚ್ಚಿಸಿದೆ. ಅದರಲ್ಲೂ ಮೆಟ್ರೋ ನಗರಗಳು, ಮುಂಬೈನಲ್ಲಿ ಈ ಬಿಸಿ ರಾತ್ರಿ ಸಂಖ್ಯೆಗೆ ಮತ್ತೆ 65 ದಿನ ಸೇರ್ಪಡಯಾಗಿದೆ

ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವ ಬಂಗಾಳ - ಅಸ್ಸಾಂ: ಇದರಲ್ಲಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಬಹಳ ಪರಿಣಾಮಕ್ಕೆ ಒಳಗಾಗಿವೆ. ಜಲ್ಪೈಗುರಿ, ಗುವಾಹಟಿ, ಸಿಲ್ಚಾರ್, ದಿಬ್ರುಗಢ್ ಮತ್ತು ಸಿಲಿಗುರಿಯಂತಹ ನಗರಗಳು ಹವಾಮಾನ ಬದಲಾವಣೆಯಿಂದಾಗಿ ರಾತ್ರಿ ತಾಪಮಾನ 25 ಡಿಗ್ರಿ ಮಿತಿಗಿಂತ ಹೆಚ್ಚಾಗಿದೆ, ಇಲ್ಲಿ ವರ್ಷಕ್ಕೆ 80 ರಿಂದ 86 ಹೆಚ್ಚುವರಿ ಬಿಸಿ ರಾತ್ರಿಗಳು ಜನರನ್ನು ಭಾದಿಸಿವೆ. ಅನೇಕ ನಗರಗಳು ಕೂಡ ಹವಾಮಾನ ಬದಲಾವಣೆಯಿಂದ 15 ರಿಂದ 50ರವರೆಗೆ ಹೆಚ್ಚುವರಿ ಬಿಸಿ ತಾಪಮಾನದ ರಾತ್ರಿಗಳನ್ನು ಅನುಭವಿಸುತ್ತಿದ್ದಾರೆ.

ಈ ನಡುವೆ ಗಮನಿಸಿದ ಮತ್ತೊಂದು ಅಂಶ ಎಂದರೆ ಭಾರತದಲ್ಲೆಡೆ ಬೇಸಿಗೆ ಸಮಯದಲ್ಲಿ ರಾತ್ರಿ ತಾಪಮಾನ 20 ಡಿಗ್ರಿ ಸೆಲ್ಸಿಯಸ್​ ಮೀರಿದೆ.

ಬಿಸಿ ರಾತ್ರಿಗಳು ದೈಹಿಕ ಅನಾನುಕೂಲತೆಗೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೆಚ್ಚಗಿನ ರಾತ್ರಿಗಳು ದೇಹದ ಉಷ್ಣತೆಯು ತಣ್ಣಗಾಗುವುದನ್ನು ತಡೆಯುವುದರಿಂದ ಇದು ಆರೋಗ್ಯದ ಮೇಲೆ ಪರಿಣಾಮ ಬೀರುವ ಜೊತೆಗೆ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ.

ರಾತ್ರಿಯ ಬೆಚ್ಚಗಿನ ತಾಪಮಾನಗಳು ನಿದ್ರೆಯ ಗುಣಮಟ್ಟ ಮತ್ತು ದೀರ್ಘಾವಧಿ ಮೇಲೆ ಪರಿಣಾಮ ಬೀರುತ್ತದೆ. ಕಳಪೆ ನಿದ್ರೆ ದೈಹಿಕ ಮತ್ತು ಮಾನಸಿಕ ಆರೋಗ್ಯ, ಅರಿವಿನ ಕಾರ್ಯಾಚರಣೆ ಹಾಗೂ ಜೀವಿತಾವಧಿ ಮೇಲೆ ಪರಿಣಾಮ ಬೀರುತ್ತದೆ. ದುರ್ಬಲ ಗುಂಪಿನವರಲ್ಲಿ ದೇಹ ತಣ್ಣಗಾಗುವ ಪ್ರಕ್ರಿಯೆಗೆ ತಡೆಯಾದಾಗ ಮತ್ತಷ್ಟು ಹೆಚ್ಚಿನ ಪರಿಣಾಮ ಬೀರುತ್ತದೆ.

ಈ ಅಧ್ಯಯನದ ಫಲಿತಾಂಶಗಳನ್ನು ಭಾರತದ ಹಲವು ನಗರಗಳಲ್ಲಿ ವಾರಗಳ ಕಾಲ ರಾತ್ರಿ ಸಮಯದ ತಾಪಮಾನ ದಾಖಲಿಸಿ ವಿಶ್ಲೇಷಿಸಲಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಮೈಗ್ರೇನ್​ ಪದೇ ಪದೇ ಕಾಡುತ್ತಿದ್ಯಾ; ಇದಕ್ಕೆ ಸಂಶೋಧಕರು ತಿಳಿಸಿದ ಕಾರಣ ಏನ್​ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.