ETV Bharat / health

ಎತ್ತರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಕ್ಕಳ ಬೆಳವಣಿಗೆ ಕುಂಠಿತ: ಅಧ್ಯಯನ - Children Living At Higher Altitudes

ಎತ್ತರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಕ್ಕಳು ಅಪೌಷ್ಠಿಕತೆಯಂತಹ ಸಂಕೀರ್ಣ ಸಮಸ್ಯೆ ಹೊಂದಿರುವುದಾಗಿ ಅಧ್ಯಯನ ತಿಳಿಸಿದೆ.

Children living at higher altitudes higher risk of stunted growth

author img

By ETV Bharat Karnataka Team

Published : Apr 26, 2024, 4:18 PM IST

ವದೆಹಲಿ: ಭಾರತದಲ್ಲಿ ಸಮುದ್ರ ಮಟ್ಟಕ್ಕಿಂತ 2 ಸಾವಿರ ಮೀಟರ್​ ಎತ್ತರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಐದು ವರ್ಷದೊಳಗಿನ ಮಕ್ಕಳಲ್ಲಿ ಶೇ 40ರಷ್ಟು ದೈಹಿಕ ಬೆಳವಣಿಗೆ ಕುಂಠಿತವಾಗಿದೆ ಎಂದು ಅಧ್ಯಯನ ತಿಳಿಸಿದೆ. ಬಿಎಂಜೆ ನ್ಯೂಟ್ರಿಷಿಯನ್​ ಪ್ರಿವೆನ್ಶನ್‌ ಮತ್ತು ಹೆಲ್ತ್​​ನಲ್ಲಿ ಈ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ.

ಸರ್ಕಾರದ ಅನೇಕ ಉಪಕ್ರಮಗಳ ಹೊರತಾಗಿಯೂ ದೀರ್ಘಕಾಲದ ಅಪೌಷ್ಟಿಕತೆ ಬಾಲ್ಯದಲ್ಲಿನ ಬೆಳವಣಿಗೆಗೆ ಕುಂಠಿತಗೊಳ್ಳಲು ಕಾರಣವಾಗುತ್ತಿದೆ. ಇದು ಭಾರತದ ಸಾರ್ವಜನಿಕ ಆರೋಗ್ಯಕ್ಕೆ ಸವಾಲಾಗಿದೆ. ಐದು ವರ್ಷದೊಳಗಿನ ಮೂರನೇ ಒಂದರಷ್ಚು ಮಕ್ಕಳು ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ಈ ಹಿಂದಿನ ಪರಿಸ್ಥಿತಿಗೆ ಹೋಲಿಸಿದಾಗ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಸಾರ್ವಜನಿಕ ಆರೋಗ್ಯದ ಮಧ್ಯಸ್ಥಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ. ಐಯೋಡಿನ್​​ ಕೊರತೆ ಅತಿ ಎತ್ತರ ಪ್ರದೇಶದಲ್ಲಿ ವಾಸಿಸುವ ಮಕ್ಕಳಲ್ಲಿ ಕಂಡುಬರುತ್ತಿರುವ ಸಾಮಾನ್ಯ ಸಮಸ್ಯೆಯಾಗಿದ್ದು, ನಿರ್ವಹಣೆ ಮಾಡಲಾಗುತ್ತಿದೆ ಎಂದು ನ್ಯೂಟ್ರಿಷಿಯನ್​ ಆ್ಯಂಡ್​ ಹೆಲ್ತ್​​​ನ ಪ್ರೊ.ಸುಮಂತ್ರಾ ರೇ ತಿಳಿಸಿದ್ದಾರೆ.

ಆದರೆ, ಈ ಅಧ್ಯಯನವು ಗುಡ್ಡಗಾಡಿನಂತಹ ಎತ್ತರದ ಪ್ರದೇಶದಲ್ಲಿ ವಾಸಿಸುವ ಮಕ್ಕಳಲ್ಲಿ ಅಪೌಷ್ಠಿಕತೆಯಂತಹ ಸಂಕೀರ್ಣ ಸಮಸ್ಯೆಯನ್ನು ತೋರಿಸುತ್ತಿದೆ. ಇದರಲ್ಲಿ ವಂಶವಾಹಿನಿ, ಪರಿಸರ, ಜೀವನಶೈಲಿ ಮತ್ತು ಸಾಮಾಜಿಕ ಆರ್ಥಿಕ ಅಂಶಗಳನ್ನು ಅಧ್ಯಯನ ಗಮನಿಸಿದೆ ಎಂದಿದ್ದಾರೆ.

ಈ ಕುರಿತ ಹೆಚ್ಚಿನ ಅಧ್ಯಯನಕ್ಕಾಗಿ 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ದತ್ತಾಂಶವನ್ನು ಗಮನಿಸಲಾಗಿದೆ. ಇದರಲ್ಲಿ ಐದು ವರ್ಷದೊಳಗಿನ 1,67,555 ಮಕ್ಕಳು ಅಪೌಷ್ಠಿಕತೆಯಿಂದ ಇದ್ದಾರೆ. ಇದರಲ್ಲಿ ಸಮುದ್ರಮಟ್ಟದಿಂದ 1000 ಮತ್ತು 1999 ಮೀಟರ್​ ಎತ್ತರದಲ್ಲಿರುವವರಲ್ಲಿ ಶೇ 1.4ರಷ್ಟು ಮಕ್ಕಳಲ್ಲಿ ಅಪೌಷ್ಠಿಕತೆ ತೊಂದರೆ ಇದ್ದರೆ, 2000 ಮೀಟರ್​ ಎತ್ತರದ ಪ್ರದೇಶದಲ್ಲಿ ಶೇ 0.2ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ ಕೊರತೆ ಇದೆ.

ಒಟ್ಟಾರೆ ಮಕ್ಕಳಲ್ಲಿ ಶೇ 36ರಷ್ಟು ಬೆಳವಣಿಗೆ ಕುಂಠಿತ ಕಾಣಬಹುದಾಗಿದೆ. ಇದರಲ್ಲಿ 18-59 ತಿಂಗಳ ಮಕ್ಕಳಲ್ಲಿ ಅತಿ ಹೆಚ್ಚು ಅಂದರೆ ಶೇ 41ರಷ್ಟಿದ್ದರೆ, 18 ತಿಂಗಳೊಳಗಿನ ಮಕ್ಕಳಲ್ಲಿ ಶೇ 27ರಷ್ಟಿದೆ. ಇನ್ನು ಹುಟ್ಟಿದಾಗ ಸಣ್ಣ ಅಥವಾ ಅತಿ ಕಡಿಮೆ ತೂಕ ಹೊಂದಿರುವ ಮಕ್ಕಳಲ್ಲಿ ಈ ಕುಂಠಿತ ಪ್ರಮಾಣ ಹೆಚ್ಚಿದೆ.

ತಾಯಂದಿರ ಶಿಕ್ಷಣ, ವೈದ್ಯರ ಭೇಟಿ, ಲಸಿಕೆ, ಪೋಲಿಕ್​​ ಆ್ಯಸಿಡ್ ಪೂರಕದಂತಹ ವೈದ್ಯಕೀಯ ಆರೈಕೆ, ಆರೋಗ್ಯ ಸೌಲಭ್ಯಗಳೊಂದಿಗೆ ಈ ಸಮಸ್ಯೆಯನ್ನು ತಪ್ಪಿಸಬಹುದು ಎಂದು ಅಧ್ಯಯನ ಸಲಹೆ ನೀಡಿದೆ.(ಐಎಎನ್​ಎಸ್​​)

ಇದನ್ನೂ ಓದಿ: ವಾರದಲ್ಲಿ ಅಪೌಷ್ಟಿಕತೆಗೆ 5 ಮಕ್ಕಳು ಸಾವು: ಮಾನ್​ನ್ಯೂಟ್ರಿಷಿಯನ್​​​ನಿಂದ ಬಳಲುತ್ತಿರುವ 3,667 ಮಕ್ಕಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.