ETV Bharat / health

ಹಾರ್ಟ್​ ಬ್ಲಾಕ್​ ತಡೆಗೆ ಕೆಟ್ಟ ಕೊಲೆಸ್ಟ್ರಾಲ್​ ನಿಯಂತ್ರಣವೇ ಮಾರ್ಗ; ವೈದ್ಯರಿಂದ ಹೃದಯದ ಮಾತು - plaque in the arteries of the heart - PLAQUE IN THE ARTERIES OF THE HEART

ಹೃದಯದಲ್ಲಿ ಬ್ಲಾಕ್​ ರೂಪುಗೊಳ್ಳದಂತೆ ಮಾಡುವಲ್ಲಿ ಇರುವ ಪ್ರಮುಖ ಹೆಜ್ಜೆ ಎಂದರೆ ಕೆಟ್ಟ ಕೊಲೆಸ್ಟ್ರಾಲ್​ ನಿಯಂತ್ರಣವಾಗಿದೆ.

caution-with-plaques-in-the-arteries-of-the-heart-doctors-say-controlling-bad-cholesterol-is-key
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Jul 27, 2024, 2:13 PM IST

ಹೈದರಾಬಾದ್​: ಹೃದಯದ ಅಪಧಮನಿಗಳಲ್ಲಿ ಪ್ಲೇಕ್​ಗಳ (ಬ್ಲಾಕ್​) ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ. ಅದರಲ್ಲೂ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್​ಗಳು ಹೆಚ್ಚಾದಗ ಈ ರೀತಿ ಬ್ಲಾಕ್​ಗಳು ರೂಪುಗೊಳ್ಳುತ್ತದೆ. ಕ್ರಮೇಣ ಇದು ಹೃದಯದ ಸಮಸ್ಯೆಗೆ ಕಾರಣವಾಗುತ್ತದೆ ಎನ್ನುತ್ತಾರೆ ಹೃದ್ರೋಗ ತಜ್ಞರು. ಹೈದರಾಬಾದ್​ನಲ್ಲಿ ಅಪೋಲೋ ಆಸ್ಪತ್ರೆ ಮತ್ತು ಅಮೆರಿಕದ ಕಾರ್ಡಿಯೋವಸ್ಕ್ಯುಲರ್​ ರಿಸರ್ಚ್​​ ಫೌಂಡೇಷನ್​ (ಸಿಆರ್​ಎಫ್​) ಅಡಿ ಮೂರು ದಿನ ಕಾರ್ಡಿಯೋ ಕಾನ್ಫರೆನ್ಸ್​ ಅನ್ನು ಹಮ್ಮಿಕೊಳ್ಳಲಾಗಿದ್ದು, ಈಟಿವಿ ಭಾರತ​​ನೊಂದಿಗೆ ಹೆಚ್​ಐಸಿಸಿ ವಕ್ತಾರರು ಮಾತನಾಡಿದ್ದಾರೆ.

ಈ ಹಿಂದೆ ಅಪಧಮನಿಯಲ್ಲಿ ಬ್ಲಾಕ್​ಗಳು ಇದ್ದಾಗ ಸರ್ಜರಿಗಳ ಅಗತ್ಯವಿತ್ತು. ಆದರೆ, ಇದೀಗ ಹೊಸ ಆಧುನಿಕ ಮಾದರಿ ಲಭ್ಯವಿದ್ದು, ಈ ಫ್ಲೇಕ್​ಗಳನ್ನು ಸುಲಭವಾಗಿ ನಿವಾರಣೆ ಮಾಡಬಹುದಾಗಿದೆ. ಈ ರೀತಿ ಬ್ಲಾಕ್​ ರೂಪುಗೊಳ್ಳದಂತೆ ಮಾಡುವಲ್ಲಿ ಇರುವ ಪ್ರಮುಖ ಹೆಜ್ಜೆ ಎಂದರೆ ಕೆಟ್ಟ ಕೊಲೆಸ್ಟ್ರಾಲ್​ ನಿಯಂತ್ರಣವಾಗಿದೆ. ಅಧಿಕ ರಕ್ತದೊತ್ತಡ, ಧೂಮಪಾನ, ಅಧಿಕ ತೂಕ, ಮಧುಮೇಹ, ಮಾನಸಿಕ ಒತ್ತಡ, ನಿದ್ರೆ ಕೊರತೆ ಮತ್ತು ಜಂಕ್​ ಫುಡ್​ಗಳು ಕೆಟ್ಟ ಕೊಲೆಸ್ಟ್ರಾಲ್​ಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಚುಚ್ಚುಮದ್ದು: ಕೊಲೆಸ್ಟ್ರಾಲ್​ ನಿಯಂತ್ರಣಕ್ಕಾಗಿ ಅನೇಕ ವಿಧದ ಔಷಧಗಳು ಲಭ್ಯವಿದೆ. ಇತ್ತೀಚಿಗೆ ಇನ್ಸಿಲಿಸಿರೊನ್​ ಎಂಬ ಚುಚ್ಚುಮದ್ದು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಆರು ತಿಂಗಳ ಕಾಲ ತೆಗೆದುಕೊಳ್ಳುವುದರಿಂದ ಕೆಟ್ಟ ಕೊಲೆಸ್ಟ್ರಾಲ್​ ಅನ್ನು ನಿಯಂತ್ರಿಸಬಹುದು. ಸಣ್ಣ ವಯಸ್ಸಿನಲ್ಲಿಯೇ ಅಪಧಮನಿಯಲ್ಲಿ ಫ್ಲೆಕ್​ ಹೊಂದಿರುವ ಮತ್ತು ಅಧಿಕ ಕೊಲೆಸ್ಟ್ರಾಲ್​ ಅಪಾಯದ ಇತಿಹಾಸ ಹೊಂದಿರುವ ಕುಟುಂಬದ ರೋಗಿಗಳಿಗೆ ಇದು ಉಪಯುಕ್ತವಾಗಿದೆ. ಈ ಇಂಜೆಕ್ಷನ್​ನ ಬೆಲೆ 1. 20 ಲಕ್ಷವಾಗಿದೆ. ಈ ಔಷಧಿಯು ಪಿಸಿಎಸ್​ಕೆ 9 ಜೀನ್​ ಅನ್ನು ನಿಯಂತ್ರಿಸಿ, ದೇಹದಲ್ಲಿನ ಕೆಟ್ಟ ಕೊಬ್ಬು ಎಲ್​ಡಿಎಲ್​ ವಾಹಕಗಳನ್ನು ನಾಶಮಾಡುತ್ತದೆ. ಇದು ಎಲ್​ಡಿಎಲ್​ ಮಟ್ಟ ಏರಿಕೆಯಾಗುವುದನ್ನು ತಡೆಯುತ್ತದೆ. ಈ ಹಿಂದೆ ಅಪಧಮನಿ ಸಂಪೂರ್ಣವಾಗಿ ಬ್ಲಾಕ್​ ಆಗಿದ್ದಾಗ ಶಸ್ತ್ರಚಿಕಿತ್ಸೆ ಕಡ್ಡಾಯವಾಗಿತ್ತು. ಇದೀಗ ವಿಶೇಷ ವೈದ್ಯಕೀಯ ಕ್ರಮದಿಂದ ಅಪಧಮನಿಯಲ್ಲಿ ಬ್ಲಾಕ್​ ಅನ್ನು ಕ್ಲೀಯರ್​ ಮಾಡಬಹುದಾಗಿದೆ ಎಂದು ಅಪೋಲೋ ಆಸ್ಪತ್ರೆಯ ಕ್ಲಿನಿಕಲ್​ ಸಂಶೋಧನಾ ನಿರ್ದೇಶಕರು ಡಾ ಎ ಶ್ರೀನಿವಾಸ್​ಕುಮಾರ್​ ತಿಳಿಸಿದ್ದಾರೆ.

ವಿಟಮಿನ್​ ಡಿ ಕೊರತೆ ಕೂಡ ಹೃದಯ ಸಮಸ್ಯೆ: ವಿಟಮಿನ್​ ಡಿ ಕೊರತೆಯು ಅನೇಕ ಜನರಲ್ಲಿ ಹೃದಯ ಸಮಸ್ಯೆಗೆ ಕಾರಣವಾಗುತ್ತದೆ. ಉದ್ಯೋಗ, ಜೀವನಶೈಲಿ ಬದಲಾವಣೆ, ಧೂಮಪಾನ ಕೂಡ ಹೃದಯದ ಅಪಾಯವನ್ನು ಹೆಚ್ಚಿಸುತ್ತದೆ. ದೇಹಕ್ಕೆ ಅಗತ್ಯವಾದ ಸೂರ್ಯನ ಬೆಳಕು ಲಭ್ಯವಾಗುತ್ತಿದ್ಯಾ ಎಂದು ಗುರುತಿಸುವುದು ಅವಶ್ಯವಾಗಿದೆ ಇದೆ. ಜೀವನಶೈಲಿ ಬದಲಾವಣೆ ಕೂಡ ಹೃದಯದ ಸಮಸ್ಯೆ ತಪ್ಪಿಸುವಲ್ಲಿ ಪ್ರಮುಖವಾಗಿದೆ.

ಕೃತಕ ಹೃದಯದ ಕವಾಟ: ಅನೇಕ ಚಿಕಿತ್ಸೆಯಲ್ಲಿ ತೆರೆದಯ ಹೃದಯ ಶಸ್ತ್ರ ಚಿಕಿತ್ಸೆ ಬದಲಾಗಿ ಕೃತಕ ಹೃದಯದ ಕವಾಟವನ್ನು ಅಳವಡಿಸಬಹುದಾಗಿದೆ. ತೊಡೆಯ ಅಥವಾ ತೋಳು ಮತ್ತು ಕುತ್ತಿಗೆಯಿಂದ ಕ್ಯಾತಿಟರ್ ಬಳಸಿ ಈ ಚಿಕಿತ್ಸೆಯನ್ನು ಪೂರ್ಣಗೊಳಿಸಬಹುದು. ತೀವ್ರತರದ ಹೃದಯದ ಅಪಧಮನಿಯಲ್ಲಿನ ಕ್ಲಾಟ್​ಗಳಿಗೆ ಸ್ಟಂಟ್​ ಸಾಧ್ಯವಾಗಿಲ್ಲ ಎಂದರೆ ಅದನ್ನು ಐವಿಲ್​ ಮತ್ತು ಲೇಸರ್​ ತಂತ್ರಜ್ಞಾನದ ಮೂಲಕ ತೆಗೆಯಲು ಸಾಧ್ಯವಿದೆ. ಶೇ 90ರಷ್ಟು ಜನರು ಕೆಟ್ಟ ಕೊಲೆಸ್ಟ್ರಾಲ್​ ನಿಯಂತ್ರಣಕ್ಕೆ ಮಾತ್ರೆಗಳನ್ನು ಸೇವಿಸುತ್ತಾರೆ. ಈ ಇಂಜೆಕ್ಷನ್​ಗಳು ಕೆಲವರಿಗೆ ಮಾತ್ರ ಅಗತ್ಯವಾಗಿದೆ. ಅವರಲ್ಲಿ ಕೆಟ್ಟ ಕೊಲೆಸ್ಟ್ರಾಲ್​ ಮಟ್ಟ ಇನ್ನೂ ಹೆಚ್ಚಿದ್ದರೆ, ರಕ್ತದ ಶುದ್ಧೀಕರಣ (ಅಲ್ಟ್ರಾಫಿಲ್ಟರೇಷನ್​) ಮೂಲಕ ಅದನ್ನು ಕಡಿಮೆ ಮಾಡಬಹುದು ಎಂದು ಅಪೋಲೋ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ಕರುಣಾಕರನ್​ ರಪೊಲು ತಿಳಿಸಿದ್ದಾರೆ.

ಇದನ್ನೂ ಓದಿ: ಕೊಬ್ಬು ಒಳ್ಳೆಯದೇ; ಉತ್ತಮ ಕೊಲೆಸ್ಟ್ರಾಲ್​ ಪಡೆಯಲು ಇಲ್ಲಿವೆ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.