ಹೈದರಾಬಾದ್: ದೇಶದಲ್ಲಿ 2016 ಮತ್ತು 2021ರ ನಡುವೆ ಸಿಸೇರಿಯನ್ ಹೆರಿಗೆ (ಸಿ ಸೆಕ್ಷನ್) ಗಳು ಹೆಚ್ಚಿನ ಮಟ್ಟದ ಏರಿಕೆ ಕಂಡಿವೆ ಎಂದು ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಮದ್ರಾಸ್ ತಿಳಿಸಿದೆ.
ಈ ಅಧ್ಯಯನವನ್ನು ಬಿಎಂಸಿ ಪ್ರಗ್ನೆನ್ಸಿ ಮತ್ತು ಚೈಲ್ಡ್ಬರ್ತ್ನಲ್ಲಿ ಪ್ರಕಟಿಸಲಾಗಿದೆ. ಈ ವರದಿ ಅನುಸಾರ ಭಾರತದಲ್ಲಿ 2016ರಲ್ಲಿ 17.2 ಸಿ ಸೆಕ್ಷನ್ ಹೆರಿಗೆಗಳು ಕಂಡು ಬಂದರೆ, 20221ರಲ್ಲಿ 21.5ರಷ್ಟು ಸಿಸೇರಿಯನ್ ಹೆರಿಗೆಗಳು ಆಗಿರುವ ಬಗ್ಗೆ ವರದಿ ಆಗಿದೆ.
ಸಿ ಸೆಕ್ಷನ್ ಎಂಬುದು ಹೆಚ್ಚಿನ ಅಪಾಯದಿಂದ ಗರ್ಭಿಣಿಯರ ಜೀವ ಉಳಿಸುವ ವಿಧಾನವಾಗಿದೆ. ಈ ರೀತಿಯ ಸರ್ಜಿಕಲ್ ಹೆರಿಗೆ ಮಾಡುವಾಗ ವೈದ್ಯಕೀಯ ಅಂಶಗಳು ಅಗತ್ಯ ಕಾರಣವಾಗಿರುವುದಿಲ್ಲ. ಅದರಲ್ಲೂ ತಮಿಳುನಾಡು ಮತ್ತು ಛತ್ತೀಸ್ಗಢದಲ್ಲಿ ವೈದ್ಯಕೀಯೇತರ ಕಾರಣದಿಂದ ಈ ರೀತಿ ಹೆರಿಗೆಗಳ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ.
ಸಿ ಸೆಕ್ಷನ್ ಅನ್ನು ಸಾಮಾನ್ಯವಾಗಿ ತಾಯಿ ಮತ್ತು ಮಗುವಿನ ಮೇಲೆ ಪರಿಣಾಮ ಬೀರುವ ವೈದ್ಯಕೀಯ ಅಂಶಗಳಾದ ಸೋಂಕು, ಗರ್ಭಾಶಯದ ರಕ್ತಸ್ರಾವ, ಶಿಶು ಉಸಿರಾಟದ ತೊಂದರೆ ಮತ್ತು ಹೈಪೊಗ್ಲಿಸಿಮಿಯಾ ನಡೆಸಲಾಗುವುದು.
ಸಾರ್ವಜನಿಕ (ಸರ್ಕಾರಿ) ಆಸ್ಪತ್ರೆಗೆ ಹೋಲಿಸಿದರೆ ಮಹಿಳಾ ಖಾಸಗಿ ಆಸ್ಪತ್ರೆಯಲ್ಲಿ ಸಿ-ಸೆಕ್ಷನ್ ಹೆರಿಗೆಯು ನಾಲ್ಕು ಪಟ್ಟು ಹೆಚ್ಚು ಎಂದು ತಿಳಿದುಬಂದಿದೆ.
2016 ರಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ 43.1 ರಷ್ಟು ಮಹಿಳೆಯರು ಸಿ ಸೆಕ್ಷನ್ ಮೂಲಕ ಮಗುವಿಗೆ ಜನ್ಮ ನೀಡಿದ್ದಾರೆ. 2021 ರಲ್ಲಿ ಈ ಸಂಖ್ಯೆಯು ಶೇ 49.7ರಷ್ಟು ಏರಿಕೆ ಕಂಡಿದೆ. ಅಂದರೆ, ಖಾಸಗಿ ಆಸ್ಪತ್ರೆಗಳಲ್ಲಿ ಎರಡರಲ್ಲಿ 1 ಸಿ ಸೆಕ್ಷನ್ ಹೆರಿಗೆಯಾಗಿದೆ. ಛತ್ತೀಸ್ಗಢದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸಿ-ಸೆಕ್ಷನ್ ಮೂಲಕ ಹೆರಿಗೆಯಾಗುವ ಸಂಖ್ಯೆ 10 ಪಟ್ಟು ಹೆಚ್ಚಿದ್ದರೆ, ತಮಿಳುನಾಡಿನಲ್ಲಿ ಮೂರು ಪಟ್ಟು ಹೆಚ್ಚಳ ಕಂಡಿದೆ.
ಛತ್ತೀಸ್‌ಗಢದಾದ್ಯಂತ ಬಡತನೇತರ ಗರ್ಭಿಣಿಯರು ಹೆಚ್ಚಾಗಿ ಸಿ ಸೆಕ್ಷನ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದರೆ ಈ ಚಿತ್ರಣ ತಮಿಳುನಾಡಿನಲ್ಲಿ ವಿರುದ್ಧವಾಗಿದೆ. ಕಾರಣ ಇಲ್ಲಿ ಬಡ ವರ್ಗದ ಮಹಿಳೆಯರು ಕೂಡ ಖಾಸಗಿ ಆಸ್ಪತ್ರೆಗಳಲ್ಲಿ ಸಿ ಸೆಕ್ಷನ್ ಮೊರೆ ಹೋಗುವುದು ಕಂಡು ಬಂದಿದೆ ಎಂದು ಐಐಟಿ ಮದ್ರಾಸ್ನ ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಪ್ರೊ. ವಿ ಆರ್ ಮುರಳೀಧರನ್ ತಿಳಿಸಿದ್ದಾರೆ.
ಮಹಿಳೆಯರ ಆದ್ಯತೆಗಳು, ಅವರ ಸಾಮಾಜಿಕ-ಆರ್ಥಿಕ ಮಟ್ಟ ಮತ್ತು ಶಿಕ್ಷಣಕ್ಕೆ ಸಿ- ಸೆಕ್ಷನ್ ಆಯ್ಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.
ಅಧಿಕ ತೂಕ ಹೊಂದಿರುವ 35 ರಿಂದ 49 ವರ್ಷ ವಯಸ್ಸಿನ ಗರ್ಭಿಣಿಯರು ಸಿ- ಸೆಕ್ಷನ್ ಹೊಂದುವ ಸಂಖ್ಯೆ ದುಪಟ್ಟು ಎಂದು ಅಧ್ಯಯನವು ತೋರಿಸಿದೆ.
ತಮಿಳುನಾಡಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸಿ-ಸೆಕ್ಷನ್‌ಗೆ ಒಳಗಾಗುವ ಬಡ ಮಹಿಳೆಯರ ಸಂಖ್ಯೆ ಏರಿಕೆ ಅಪಾಯಕಾರಿಯಾಗಿದೆ, ಇದರಲ್ಲಿ ಕೆಲವು ವೈದ್ಯಕೀಯ ಕಾರಣದ ಹೊರತಾಗಿರುವುದು ಕನಡು ಬಂದಿದ್ದು, ಇವುಗಳಿಗೆ ಹೆಚ್ಚಿನ ವಿಶ್ಲೇಷಣೆ ಮತ್ತು ಸರಿಪಡಿಸುವ ಕ್ರಮದ ಅಗತ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್) ಮೂಲಕ ನಡೆಸಲಾದ 2015-2016 ಮತ್ತು 2020-2021ರ ದತ್ತಾಂಶ ಅನುಸಾರ ಈ ಅಧ್ಯಯನ ನಡೆಸಲಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಮಹಿಳೆಯರನ್ನ ಕಾಡುವ ಅಂಡಾಶಯ ಕ್ಯಾನ್ಸರ್ ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಅವಶ್ಯಕ; ತಜ್ಞರು