ETV Bharat / health

ಮೊಬೈಲ್ ಫೋನ್​ನಿಂದ ಮೆದುಳಿನ ಕ್ಯಾನ್ಸರ್ ಬರುತ್ತಾ?: ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನ ಏನು ಹೇಳುತ್ತೆ ನೀವೇ ತಿಳಿಯಿರಿ - World Health Organization study

author img

By ETV Bharat Health Team

Published : Sep 5, 2024, 4:44 PM IST

Brain cancer from the phone?: ಮೊಬೈಲ್ ಫೋನ್​ನಿಂದ ಮೆದುಳಿನ ಕ್ಯಾನ್ಸರ್ ಬರುತ್ತಾ? ಎಂಬ ಪ್ರಶ್ನೆಗೆ ಬಹುತೇಕರಿಗೆ ಕಾಡುತ್ತಿತ್ತು. ಆದರೆ, ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನದಿಂದ, ಮೊಬೈಲ್ ಫೋನ್‌ಗಳಿಂದ ಮೆದುಳಿನ ಕ್ಯಾನ್ಸರ್‌ ಬರುವುದಿಲ್ಲ. ಮೊಬೈಲ್ ಫೋನ್‌ಗಳು ಮತ್ತು ಮೆದುಳಿನ ಕ್ಯಾನ್ಸರ್​ಗೆ ಯಾವುದೇ ಸಂಬಂಧವಿಲ್ಲ ಎಂದು ಬಹಿರಂಗವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ನೇಮಕಗೊಂಡ ಆಸ್ಟ್ರೇಲಿಯಾದ ಸಂಶೋಧಕರು, 1994 ರಿಂದ 2022 ರವರೆಗಿನ 63 ಅಧ್ಯಯನಗಳನ್ನು ವಿಶ್ಲೇಷಿಸಿ ಸತ್ಯವನ್ನು ತಿಳಿಸಿದ್ದಾರೆ. ಈ ಕುರಿತು ವರದಿ ಇಲ್ಲಿದೆ ಸಂಪೂರ್ಣ ಓದಿ...

BRAIN CANCER  MOBILE PHONES WITH BRAIN CANCER  USE OF MOBILE PHONE  WHO STUDY
ಸಾಂದರ್ಭಿಕ ಚಿತ್ರ (Getty Images)

Brain cancer from the phone?: ಅತಿಯಾದ ಮೊಬೈಲ್ ಬಳಕೆಯಿಂದ ಮೆದುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಇದೆಯೇ? ಈ ವಿಷಯದ ಬಗ್ಗೆ ಹಲವು ವರ್ಷಗಳಿಂದ ಸಂಶೋಧನೆ ನಡೆಯುತ್ತಿವೆ. ಈ ಕುರಿತಂತೆ ಕೆಲವು ತಪ್ಪು ಕಲ್ಪನೆಗಳು ಹಲವರಲ್ಲಿ ಮೂಡಿದ್ದವು. ಈ ಹಿಂದೆ ಪ್ರಕಟವಾದ ಕೆಲವು ಅಧ್ಯಯನಗಳು ಮೊಬೈಲ್ ಫೋನ್‌ಗಳಿಂದ ಬರುವ ರೇಡಿಯೊ ತರಂಗಗಳು ಮೆದುಳಿನ ಕ್ಯಾನ್ಸರ್‌ಗೆ ಕಾರಣವಾದ ಗ್ಲಿಯೊಮಾ ಟ್ಯೂಮರ್‌ಗಳನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ತಿಳಿಸಿದ್ದವು. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಅಧ್ಯಯನವು ಈ ತಪ್ಪು ಕಲ್ಪನೆಗಳನ್ನು ತಿರಸ್ಕರಿಸಿ, ಸತ್ಯ ಬಹಿರಂಬಪಡಿಸಿದೆ.

ARPANSA ಸಂಶೋಧನೆ ಹೀಗೆ ತಿಳಿಸುತ್ತೆ: WHO ಪರವಾಗಿ ಆಸ್ಟ್ರೇಲಿಯನ್ ರೇಡಿಯೇಶನ್ ಪ್ರೊಟೆಕ್ಷನ್ ಮತ್ತು ನ್ಯೂಕ್ಲಿಯರ್ ಸೇಫ್ಟಿ ಏಜೆನ್ಸಿ (ARPANSA) ಈ ಸಂಶೋಧನೆ ನಡೆಸಿದೆ. ಈ ಸಂಸ್ಥೆಯು ಸಮಗ್ರ ಅಧ್ಯಯನ ಕೈಗೊಂಡಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಡೇಟಾ ವಿಶ್ಲೇಷಣೆ ಮಾಡಲಾಗಿದೆ. ಇದರೊಂದಿಗೆ ಮೊಬೈಲ್ ಫೋನ್ ಬಳಕೆಗೂ ಬ್ರೈನ್ ಕ್ಯಾನ್ಸರ್​ಗೂ ಯಾವುದೇ ಸಂಬಂಧವಿಲ್ಲ ಎಂದು ತೀರ್ಮಾನಿಸಲಾಗಿದೆ. ಸುಮಾರು 5 ಸಾವಿರ ಅಧ್ಯಯನಗಳನ್ನು ವಿಶ್ಲೇಷಿಸಿದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ. ಕಳೆದ ಎರಡು ದಶಕಗಳಲ್ಲಿ ವೈರ್‌ಲೆಸ್ ತಂತ್ರಜ್ಞಾನವು ವೇಗವಾಗಿ ಹೆಚ್ಚಿದೆ. ಆದರೆ, ಮೆದುಳಿನ ಕ್ಯಾನ್ಸರ್ ಪ್ರಕರಣಗಳು ಅಷ್ಟೇ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ ಎಂದು ಅಧ್ಯಯನ ತಿಳಿಸಿದೆ.

ಈ ಹಿಂದಿನ IARC ಅಧ್ಯಯನ ಏನು ಹೇಳುತ್ತೆ?: 2011ರ ಮೇ ತಿಂಗಳಿನಲ್ಲಿ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಒಂದು ಅಧ್ಯಯನವನ್ನು ಪ್ರಕಟಿಸಿತು. ಇದರಲ್ಲಿ ರೇಡಿಯೋ ತರಂಗಗಳಿಗೆ ಒಡ್ಡಿಕೊಳ್ಳುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಮಿದುಳಿನ ಕ್ಯಾನ್ಸರ್​ಗೆ ಕಾರಣವಾಗಿರುವ ಗ್ಲಿಯೋಮಾ ಟ್ಯೂಮರ್​ಗಳು ವೈರ್​ಲೆಸ್ ಫೋನ್ ಬಳಕೆಯಿಂದ ಉಂಟಾಗಬಹುದು ಎಂದೂ ಹೇಳಲಾಗಿತ್ತು. ಈ ಸಂಶೋಧನೆಯ ಪುರಾವೆಗಳು ಸೀಮಿತವಾಗಿದ್ದವು. ಈ ಅಧ್ಯಯನವನ್ನು ಸೀಮಿತ ಮಾಹಿತಿಯೊಂದಿಗೆ ಪ್ರಕಟಿಸಲಾಗಿತ್ತು.

ರೇಡಿಯೊ ತರಂಗಗಳು ಆರೋಗ್ಯಕ್ಕೆ ಹಾನಿಯಲ್ಲ: ಆದ್ರೆ, ಇತ್ತೀಚಿನ ಸಂಶೋಧನೆಯಲ್ಲಿ, ARPANSA ದೊಡ್ಡ ಪ್ರಮಾಣದ ಡೇಟಾವನ್ನು ವಿಶ್ಲೇಷಿಸಿದೆ. ಈ ವಿಷಯದ ಬಗ್ಗೆ ಇತ್ತೀಚಿನ ಎಲ್ಲ ಅಧ್ಯಯನಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಮತ್ತು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ. ನಂತರ, ವೈರ್‌ಲೆಸ್ ತಂತ್ರಜ್ಞಾನದಿಂದ ಹೊರಸೂಸುವ ರೇಡಿಯೊ ತರಂಗಗಳು ಮಾನವನ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಮೊಬೈಲ್ ಫೋನ್‌ಗಳು ಹೊರಸೂಸುವ ರೇಡಿಯೊ ತರಂಗಗಳಿಂದ ಗ್ಲಿಯೋಮಾ ಟ್ಯೂಮರ್‌ಗಳು ಮೆದುಳಿನ ಕ್ಯಾನ್ಸರ್ ಮತ್ತು ಇತರ ಮೆದುಳು ಸಂಬಂಧಿತ ಕ್ಯಾನ್ಸರ್‌ ಕಾಯಿಲೆಗಳು ಬರುವ ಸಾಧ್ಯತೆಯಿಲ್ಲ ಎಂದು ARPANSA ಸಂಶೋಧಕರು ತೀರ್ಮಾನಿಸಿದ್ದಾರೆ. ಈ ಅಧ್ಯಯನವನ್ನು ಎನ್ವಿರಾನ್ಮೆಂಟ್ ಇಂಟರ್ನ್ಯಾಷನಲ್ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ.

ಇವುಗಳನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.