ETV Bharat / health

ಚಪಾತಿ ಬದಲು ಗರಿಗರಿಯಾದ ಜೋಳದ ರೊಟ್ಟಿ ತಿನ್ನಿ; ಕೆಲವೇ ದಿನಗಳಲ್ಲಿ ಬಳಕುವ ಬಳ್ಳಿಯಂತಾಗಿ! - HEALTH BENEFITS OF JOWAR ROTI

Best Food For Weight Loss: ಇತ್ತೀಚಿನ ದಿನಗಳಲ್ಲಿ ಹಲವರ ದೇಹಕ್ಕೆ ಈ ತೂಕ ಎಂಬ ಮಹಾಮಾರಿ ಕಾಡುತ್ತಿದೆ. ತೂಕ ಹೆಚ್ಚಳ ಎಂಬುದು ದೊಡ್ಡ ಸಮಸ್ಯೆಯಾಗಿದೆ. ವೇಟ್​ ಲಾಸ್​ ಮಾಡಿಕೊಳ್ಳಲು ಅನೇಕರು ಡಯಟ್​ ಮೊರೆ ಹೋಗ್ತಾರೆ. ರಾತ್ರಿ ವೇಳೆ ಅನ್ನದ ಬದಲು ಚಪಾತಿ ತಿಂತಾರೆ. ಈ ಬದಲು ಜೋಳದ ರೊಟ್ಟಿ ತಿಂದರೆ ಬೇಗ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ರಿಲ್ಯಾಕ್ಸ್​​ ಮೂಡ್​​ನಲ್ಲಿರಬಹುದು.

Best Food For Weight Loss
ದಲು ಗರಿಗರಿಯಾದ ಜೋಳದ ರೊಟ್ಟಿ ತಿನ್ನಿ; ಕೆಲವೇ ದಿನಗಳಲ್ಲಿ ಬಳಕುವ ಬಳ್ಳಿಯಂತಾಗಿ! (Best Food For Weight Loss (ETV Bharat))
author img

By ETV Bharat Karnataka Team

Published : Jun 24, 2024, 6:36 AM IST

Jowar Roti Health Benefits: ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದಾಗಿ ಹೆಚ್ಚಿನ ಜನರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹೆಚ್ಚಾಗುವ ತೂಕ ಸಮಸ್ಯೆಯಿಂದ ಹೊರ ಬರಲು ನಾನಾ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಅದಕ್ಕಾಗಿ ನಾನಾ ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ ತೂಕ ನಷ್ಟಕ್ಕಾಗಿ ರಾತ್ರಿ ಚಪಾತಿ ಸೇವನೆ ಮಾಡುತ್ತಾರೆ. ಆದರೆ, ಅದರ ಫಲಿತಾಂಶ ಮಾತ್ರ ಸೀಮಿತವಾಗಿರುತ್ತದೆ.

ಪೌಷ್ಟಿಕತಜ್ಞರು ಆಹಾರದಲ್ಲಿ ಕೆಲವು ರೀತಿಯ ಆಹಾರಗಳನ್ನು ತಿನ್ನುವಂತೆ ಶಿಫಾರಸು ಮಾಡುತ್ತಾರೆ. ಅದರಲ್ಲೂ ಜೋಳದಿಂದ ಮಾಡಿದ ಖಾದ್ಯವನ್ನು ಆಗಾಗ ಸೇವಿಸುವುದರಿಂದ ಕೆಲವೇ ದಿನಗಳಲ್ಲಿ ತೂಕ ಸುಲಭವಾಗಿ ಕಡಿಮೆಯಾಗಬಹುದು ಅಂತಾರೆ ಆರೋಗ್ಯ ತಜ್ಞರು. ಹಾಗಾದರೆ ಜೋಳದಲ್ಲಿ ಯಾವೆಲ್ಲ ಪೋಷಕಾಂಶಗಳಿವೆ ಎಂಬುದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ

ಜೋಳದಲ್ಲಿ ಆರೋಗ್ಯಕ್ಕೆ ಉತ್ತಮವಾದ ಹಲವು ಪೋಷಕಾಂಶಗಳಿವೆ. ಅದರಲ್ಲೂ ಜೋಳದಲ್ಲಿ ಗ್ಲುಟನ್ ಇರುವುದಿಲ್ಲ. ಹಾಗಾಗಿ ಎಲ್ಲರಿಗೂ ಒಳ್ಳೆಯ ಆಹಾರ ಎನ್ನುತ್ತಾರೆ ಆರೋಗ್ಯ ಮತ್ತು ಸೌಂದರ್ಯ ತಜ್ಞರು. ಜೋಳ್​ ಸಮೃದ್ಧವಾಗಿರುವ ಫೈಬರ್​ ಅಂಶವನ್ನು ಹೊಂದಿದೆ. ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ. ಇದಲ್ಲದೇ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ಅವು ಸಹಾಯ ಮಾಡುತ್ತವೆ. ಹಾಗಾಗಿ, ಮಧುಮೇಹದಿಂದ ಬಳಲುತ್ತಿರುವವರಿಗೆ ಜೋಳದಿಂದ ಮಾಡಿದ ಆಹಾರಗಳು ಉತ್ತಮ ಆಯ್ಕೆ ಎಂದು ಹೇಳಬಹುದು.

ತೂಕ ನಷ್ಟಕ್ಕೆ ರಾಮಬಾಣ: ಎಲ್ಲಕ್ಕಿಂತ ಮುಖ್ಯವಾಗಿ ತೂಕ ಇಳಿಸಲು ಜೋಳದ ರೊಟ್ಟಿ ಬಹಳಷ್ಟು ಸಹಕಾರಿ. ದಿನನಿತ್ಯ ಚಪಾತಿ ಬದಲು ಜೋಳದ ರೊಟ್ಟಿ ತಿಂದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಎಂದು ಹೇಳಲಾಗುತ್ತದೆ. ಏಕೆಂದರೆ.. ಜೋಳದಲ್ಲಿ ಹೇರಳವಾದ ನಾರಿನಂಶ, ಪ್ರೊಟೀನ್ ಮತ್ತು ನಾರಿನಂಶದ ಪದಾರ್ಥಗಳಿವೆ. ಪರಿಣಾಮವಾಗಿ, ಜೋಳದ ರೊಟ್ಟಿ, ಅಂಬಲಿ ತಿನ್ನುವುದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹೆಚ್ಚು ತಿನ್ನುವ ಬಯಕೆ ಕೂಡಾ ಕಡಿಮೆಯಾಗುತ್ತದೆ. ಇದರಿಂದ ಕ್ರಮೇಣ ತೂಕ ಕಡಿಮೆಯಾಗಬಹುದು ಎನ್ನುತ್ತಾರೆ ತಜ್ಞರು.

ಇದನ್ನು ಓದಿ:ಪುರುಷರಿಗಿಂತ ಮಹಿಳೆಯರಲ್ಲೇ ಆತಂಕ ಹೆಚ್ಚು; ಇದಕ್ಕೆ ಕಾರಣಗಳೇನು? - Why Women are More Anxiety

ಅಧ್ಯಯನಗಳು ಹೇಳುವುದೇನು?: 2019 ರಲ್ಲಿ "ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್" ನಲ್ಲಿ ಪ್ರಕಟವಾದ ಅಧ್ಯಯನವು 12 ವಾರಗಳ ಕಾಲ ಜೋಳದ ರೊಟ್ಟಿಯನ್ನು ಸೇವಿಸಿದ ಜನರು ಗೋಧಿ ಚಪಾತಿ ತಿನ್ನುವವರಿಗಿಂತ ಹೆಚ್ಚು ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಕಂಡುಹಿಡಿದಿದೆ. ಕೆನಡಾದ ಟೊರೊಂಟೊ ವಿಶ್ವವಿದ್ಯಾನಿಲಯದ ಪೌಷ್ಟಿಕತಜ್ಞ ಡಾ. ಜೇಮ್ಸ್ ಪೆರ್ರಿ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ಜೋಳದ ರೊಟ್ಟಿಯಲ್ಲಿರುವ ಪೋಷಕಾಂಶಗಳು ತೂಕ ನಷ್ಟಕ್ಕೆ ಉತ್ತಮವಾಗಿವೆ ಎಂದು ಪೆರ್ರಿ ಹೇಳಿದ್ದಾರೆ.

ಏನೆಲ್ಲ ಪೋಷಕಾಂಶಗಳಿವೆ ಗೊತ್ತಾ: ಜೋಳದಿಂದ ಮಾಡಿದ ರೊಟ್ಟಿಯನ್ನು ತಿನ್ನುವುದರಿಂದ ಇತರ ಆರೋಗ್ಯ ಪ್ರಯೋಜನಗಳಿವೆ. ಕಬ್ಬಿಣ, ಮೆಗ್ನೀಸಿಯಮ್, ತಾಮ್ರ, ಕ್ಯಾಲ್ಸಿಯಂ, ಸತು ಮತ್ತು ವಿಟಮಿನ್ ಬಿ-3 ಯಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಜೋಳ ಮೂಳೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೇ, ದೈನಂದಿನ ಆಹಾರದಲ್ಲಿ ಜೋಳದ ಬಳಕೆ ಮಾಡುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಬಹುದಂತೆ.

ಇದನ್ನು ಓದಿ:ಗೋಧಿ ಹಿಟ್ಟು ಕಲಸುವಾಗ ಈ ತಪ್ಪಿನಿಂದಲೇ ಮೃದುತ್ವ ಕಳೆದುಕೊಳ್ಳುತ್ತದೆ.. ಉಬ್ಬಿದ ಚಪಾತಿಗಾಗಿ ಹೀಗೆ ಮಾಡಿ! - how to make soft chapati

ಅಂತೆಯೇ, ಜೋಳದಲ್ಲಿನ ಪೋಷಕಾಂಶಗಳು ರಕ್ತನಾಳಗಳಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಕೂಡಾ ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೇ ಇವುಗಳಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು, ಉರಿಯೂತ ನಿವಾರಕ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳಿವೆ. ಇವು ರೋಗಗಳ ವಿರುದ್ಧ ಹೋರಾಡುತ್ತವೆ ಎನ್ನುತ್ತಾರೆ ತಜ್ಞರು.

ವಿಶೇಷ ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನು ಓದಿ:ಸರ್ವರೋಗಕ್ಕೂ ಬೆಲ್ಲದೊಂದಿಗೆ ಇದನ್ನು ಸೇವಿಸಿ; ಅಡಿಯಿಂದ ಮುಡಿವರೆಗಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ - Jaggery and Black Pepper

ETV Bharat Logo

Copyright © 2024 Ushodaya Enterprises Pvt. Ltd., All Rights Reserved.