ಹೈದರಾಬಾದ್: ಕೆಲಸದ ಒತ್ತಡ, ಆಹಾರ ಅಭ್ಯಾಸಗಳ ಬದಲಾವಣೆ ವ್ಯಕ್ತಿಯ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ವೇಗವಾಗಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಸವಾಲುಗಳಿಂದಾಗಿ ಬಿಪಿ, ಮಧುಮೇಹ ಮತ್ತು ಹೃದಯ ಸಮಸ್ಯೆಗಳು ವಿಶ್ವದೆಲ್ಲೆಡೆ ಜನರ ಆರೋಗ್ಯದ ಮೇಲೆ ಬೆದರಿಕೆ ಒಡ್ಡುತ್ತಿದೆ. ಇದು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಕಿಡ್ನಿ ಬಗ್ಗೆ ವಿಶೇಷ ಜಾಗೃತಿವಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಅದರ ನಿಯಂತ್ರಣ ನಡೆಸುವುದು ಅವಶ್ಯ. ಅದರಲ್ಲಿ ಊಟವು ಪ್ರಮುಖವಾಗಿದೆ. ಅಧಿಕ ಬಿಪಿ ಹೊಂದಿರುವ ಜನರು ಈ ತಮ್ಮ ಊಟದ ಬಗ್ಗೆ ಕೂಡ ಹೆಚ್ಚಿನ ಗಮನ ಹೊಂದಿರಬೇಕು. ಜೊತೆಗೆ ಅವರು ಸೇವಿಸುವ ಔಷಧಗಳಿಂದ ಈ ಆಹಾರ ಬದಲಾವಣೆ ಮಾಡುವುದು ಅನಿವಾರ್ಯವಾಗಿದೆ.
ಹಸಿರಿಗೆ ಪ್ರಾಶಸ್ತ್ಯ: ಆಹಾರದಲ್ಲಿ ಪೋಟಾಶಿಯಂ ಸಮೃದ್ಧ ಹಣ್ಣು, ತರಕಾರಿ, ಸೊಪ್ಪು, ಕಾಳುಗಳಿಗೆ ಒತ್ತು ನೀಡಿ. ಇದು ರಕ್ತದ ಒತ್ತಡದ ಸಮಸ್ಯೆ ತಗ್ಗಿಸಲು ಸಹಾಯ ಮಾಡುತ್ತದೆ. ಅಧಿಕ ಬಿಪಿ ನಿಯಂತ್ರಿಸುವ ಜೊತೆಗೆ ದೇಹದ ಅಗತ್ಯ ಕಾರ್ಯಾಚರಣೆಗೆ ಬೇಕಾದ ವಿಟಮಿನ್, ಖನಿಜಾಂಶ, ಫೈಬರ್ ಒದಗಿಸುತ್ತದೆ.
ಸ್ಟಾಬೆರಿ: ರಕ್ತದೊತ್ತಡ ನಿಯಂತ್ರಿಸಬೇಕು ಎಂದರೆ ಇದು ಅತ್ಯಂತ ಪ್ರಮುಖವಾದ ಹಣ್ಣಾಗಿದೆ. ಇದರಲ್ಲಿ ಸಮೃದ್ಧ ಆಂಟಿ ಆಕ್ಸಿಡೆಂಟ್ ಮತ್ತು ಫ್ಲವೊನೊಯ್ಡ್ಸ್ ಇದ್ದು, ಇದು ರಕ್ತದ ಪರಿಚಲನೆ ಸುಧಾರಣೆ ಮಾಡಿ, ಅಧಿಕ ರಕ್ತದೊತ್ತಡ ನಿಯಂತ್ರಿಸುತ್ತದೆ.
ಬಾಳೆಹಣ್ಣು: ಅನೇಕ ಪೋಷಕಾಂಶಗಳಿಂದ ಕೂಡಿದ್ದು, ಇದು ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿನ ಪೋಟಾಶಿಯಂ ದೇಹದ ಸೋಡಿಯಂ ಮಟ್ಟವನ್ನು ನಿಯಂತ್ರಿಸಿ, ಆರೋಗ್ಯಯುತ ರಕ್ತದೊತ್ತಡಕ್ಕೆ ಸಹಾಯ ಮಾಡುತ್ತದೆ.
ಓಟ್ಮಿಲ್: ಫೈಬರ್ನ ಅಗರವಾಗಿರುವ ಇದು ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಇದರ ಸೇವನೆಯಿಂದ ಕೂಡ ರಕ್ತದೊತ್ತಡ ನಿಯಂತ್ರಿಸಬಹುದು.
ಬೀಟ್ರೂಟ್: ರಕ್ತದ ಸಂಖ್ಯೆ ಹೆಚ್ಚಿಸಲು ಇದು ಪ್ರಯೋಜನಕಾರಿ. ಬಹುತೇಕ ಜನರಿಗೆ ಇದು ತಿಳಿದಿಲ್ಲ. ಇದರಲ್ಲಿ ನೈಟ್ರೇಟ್ ಅಂಶವೂ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಉಪ್ಪನ್ನು ಕಡಿಮೆ ಮಾಡುವುದರಿಂದ ಪ್ರಯೋಜನ: ಅಧಿಕ ರಕ್ತದೊತ್ತಡಕ್ಕೆ ಪ್ರಮುಖ ಕಾರಣ ಸೋಡಿಯಂ. ಇದು ಹೈಬಿಪಿಯನ್ನು ಉತ್ತೇಜಿಸುತ್ತದೆ. ಈ ಹಿನ್ನೆಲೆ ಸೋಡಿಯಂ ಮುಕ್ತ ಆಹಾರ ಸೇವಿಸಿ. ಸಾಧ್ಯವಾದಷ್ಟು ಉಪ್ಪಿನ ಬಳಕೆ ಕಡಿಮೆ ಮಾಡಿ.
ತೇಳು ಪ್ರೊಟೀನ್ಗೆ ಆದ್ಯತೆ: ಕೆಂಪು ಮಾಂಸ ಕಡಿತ ಮಾಡಿ, ಮೀನು, ಕೋಳಿ, ಲೆಗುಮ್ಸ್ ಮತ್ತ ಟೊಪು ರೀತಿಯ ತೇಳು ಪ್ರೋಟಿನ್ ಸೇವನೆ ಮಾಡಿ. ವಿಶೇಷವಾಗಿ ಮೀನಿನಲ್ಲಿರುವ ಒಮೆಗಾ 3 ಫ್ಯಾಟಿ ಆಮ್ಲ, ಅಧಿಕ ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆರೋಗ್ಯಯುತ ಕೊಬ್ಬು: ಆಲಿವ್ ಎಣ್ಣೆ, ಅವಕಾಡೊ ಮತ್ತು ನಟ್ನಂತಹ ಆರೋಗ್ಯಯುತ ಕೊಬ್ಬಿನ ಸೇವನೆ ಉತ್ತಮ
ಆಲ್ಕೋಹಾಲ್: ಅಧಿಕ ರಕ್ತದೊತ್ತಡ ಹೊಂದಿರುವವರು ಸಾಧ್ಯವಾದಷ್ಟು ಆಲ್ಕೋಹಾಲ್ ಅಭ್ಯಾಸದಿಂದ ದೂರವಿರುವುದು ಉತ್ತಮ. ಅತಿ ಹೆಚ್ಚಿನ ಮದ್ಯದಿಂದ ಬಿಪಿ ಹೆಚ್ಚಳವಾಗುತ್ತದೆ.
ಸಕ್ಕರೆ ಸೇವೆ: ಸಕ್ಕರೆ ಹೆಚ್ಚಿನ ಸೇವೆನೆಯು ತೂಕದ ಹೆಚ್ಚಳ ಜೊತೆಗೆ ಹೃದಯದ ಆರೋಗ್ಯ ಸಮಸ್ಯೆ ಹೆಚ್ಚಿಸುತ್ತದೆ. ಈ ಹಿನ್ನೆಲೆ ಕೃತಕ ಸಿಹಿ ಬದಲಾಗಿ ಜೇನಿನಂತ ನೈಸರ್ಗಿಕ ಸಿಹಿ ಸೇವಿಸಿ
ಪ್ರಮುಖ ಸೂಚನೆ: ಮೇಲಿನ ಎಲ್ಲ ಆರೋಗ್ಯ ಮಾಹಿತಿಗಳನ್ನು ಪಾಲಿಸುವ ಮುನ್ನ ವೈದ್ಯರು, ಆರೋಗ್ಯ ವೃತ್ತಿಪರರ ಸಲಹೆಯನ್ನು ಪಡೆಯುವುದು ಅಗತ್ಯ. ಯಾವುದೇ ಸಲಹೆ ಸೂಚನೆಗಳನ್ನು ನಿಮ್ಮ ಕುಟುಂಬದ ವೈದ್ಯರ ಶಿಫಾರಸಿನ ಮೇಲೆ ಪಾಲಿಸಬೇಕು.
ಇದನ್ನೂ ಓದಿ: 18 ದಾಟಿದ ಎಲ್ಲರೂ ಬಿಪಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ: ಯಾರು ಯಾವಾಗ ಈ ಟೆಸ್ಟ್ ಮಾಡಿಸಿಕೊಳ್ಳಬೇಕು ಗೊತ್ತಾ?