ETV Bharat / health

ರಾತ್ರಿ ತಲೆಗೆ ಎಣ್ಣೆ ಹಚ್ಚಿ ಮಲಗುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ...? - Benefits of Oiling Hair At Night - BENEFITS OF OILING HAIR AT NIGHT

ರಾತ್ರಿ ತಲೆಗೆ ಎಣ್ಣೆ ಹಚ್ಚಿ ಮಲಗುವುದರಿಂದ ಏನಾಗುತ್ತದೆ ಮತ್ತು ಯಾವೆಲ್ಲ ಪ್ರಯೋಜನಗಳಿವೆ ಮತ್ತು ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾತ್ರಿ ತಲೆಗೆ ಎಣ್ಣೆ ಹಚ್ಚುವುದರ ಪ್ರಯೋಜಗಳು
ರಾತ್ರಿ ತಲೆಗೆ ಎಣ್ಣೆ ಹಚ್ಚುವುದರ ಪ್ರಯೋಜಗಳು (ETV Bharat)
author img

By ETV Bharat Karnataka Team

Published : Jul 17, 2024, 6:10 PM IST

Oiling Hair At Night: ಇತ್ತೀಚಿನ ದಿನಗಳಲ್ಲಿ ತ್ವಚೆಯ ಆರೈಕೆ ಜತೆಗೆ ಕೂದಲು ರಕ್ಷಣೆಯತ್ತಲೂ ಜನರು ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಅದರಲ್ಲೂ ಕೂದಲು ದಟ್ಟವಾಗಿ ಮತ್ತು ಕಪ್ಪಾಗಿ ಹೊಳೆಯಲಿ ಎಂದು ದಿನವೂ ತಲೆಗೆ ಎಣ್ಣೆ ಹಾಕಿಕೊಳ್ಳುತ್ತಾರೆ. ಆದರೆ, ಬಹುತೇಕ ಜನರಿಗೆ ಯಾವ ಸಮಯಕ್ಕೆ ಎಣ್ಣೆ ಹಚ್ಚಿಕೊಳ್ಳಬೇಕು ಎಂದು ತಿಳಿದಿಲ್ಲ. ಬಹುತೇಕ ಜನರು ಬೆಳಗಿನ ಜಾವವೇ ಎಣ್ಣೆ ಹಚ್ಚಿಕೊಳ್ಳಲು ಬಯಸುತ್ತಾರೆ. ಆದರೆ ರಾತ್ರಿ ಸಮಯದಲ್ಲಿ ಎಣ್ಣೆ ಹಚ್ಚಿ ಮಲಗುವುದರಿಂದ ಏನಾಗುತ್ತದೆ, ಯಾವೆಲ್ಲ ಪ್ರಯೋಜನಗಳಿವೆ ಮತ್ತು ಸಂಶೋಧನೆ ಏನು ಹೇಳುತ್ತದೆ ಎಂದು ನೀವು ತಿಳಿದರೇ, ಇಂದಿನಿಂದಲೇ ರಾತ್ರಿ ಸಮಯ ಎಣ್ಣೆ ಹಚ್ಚಲು ಪ್ರಾರಂಭಿಸುವುದು ಪಕ್ಕಾ.

ವಾಸ್ತವವಾಗಿ, ಎಣ್ಣೆಯು ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದೇ ರೀತಿ ರಾತ್ರಿ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲಿನ ಆರೈಕೆಗೂ ಸಹಕಾರಿಯಾಗುತ್ತದೆ ಜತೆಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ಅವುಗಳಲ್ಲಿ ಕೆಲ ಪ್ರಮುಖ ಪ್ರಯೋಜನಗಳು ಹೀಗಿವೆ.

ಕೂದಲು ಶುಷ್ಕತೆ (ಒಣಗುವಿಕೆ)ಯನ್ನು ಕಡಿಮೆ ಮಾಡುತ್ತದೆ: ಸರಿಯಾದ ಪೋಷಣೆ ಮಾಡದೇ ಇದ್ದಾಗ ಕೂದಲು ಚರ್ಮದಂತೆಯೇ ಒಣಗಲಾರಂಭಿಸುತ್ತದೆ. ಹೆಚ್ಚಿನ ಜನರು ಈ ಸಮಸ್ಯೆಯನ್ನು ಎದುರಿಸಿಯೇ ಇರುತ್ತಾರೆ. ಇದಕ್ಕೆ ಪರಿಹಾರ ಎಂದರೆ ರಾತ್ರಿ ಕೂದಲಿಗೆ ಎಣ್ಣೆ ಹಚ್ಚುವುದು. ಹೀಗೆ ಮಾಡುವುದರಿಂದ ಕೂದಲು ಒಣಗುವಿಕೆ ತಡೆಯಬಹುದು. ಏಕೆಂದರೆ ರಾತ್ರಿ ಎಣ್ಣೆ ಹಚ್ಚುವುದರಿಂದ ಕೂದಲಿಗೆ ಉತ್ತಮ ಪೋಷಣೆ ಸಿಗುತ್ತದೆ ಜತೆಗೆ ಹೈಡ್ರೇಟ್ ಆಗಿರುವುದು ಮಾತ್ರವಲ್ಲದೇ ಆರೋಗ್ಯಕರವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

2016 ರಲ್ಲಿ "ಇಂಟರ್​​​​ನ್ಯಾಷನಲ್​ ಜರ್ನಲ್ ಆಫ್ ಡರ್ಮಟಾಲಜಿ" ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ರಾತ್ರಿ ಸಮಯ ಕೂದಲಿಗೆ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಶುಷ್ಕತೆ ಮತ್ತು ಕೂದಲು ಸೀಳುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ. ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ ಅಜೀಜ್ ವಿಶ್ವವಿದ್ಯಾಲಯದ ಖ್ಯಾತ ಚರ್ಮರೋಗ ತಜ್ಞ ಡಾ.ಇಸ್ಮತುಲ್ಲಾ ಖಾನ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ಕೊಬ್ಬರಿ ಎಣ್ಣೆಯನ್ನು ರಾತ್ರಿ ಕೂದಲಿಗೆ ಹಚ್ಚುವುದರಿಂದ ಕೂದಲು ಆರೋಗ್ಯಕರವಾಗಿ ಮತ್ತು ತೇವಾಂಶದಿಂದ ಕೂಡಿರುತ್ತದೆ ಎಂದೂ ತಿಳಿಸಿದ್ದಾರೆ.

ಕೂದಲು ಬೆಳವಣಿಗೆಗೆ ಸಹಕಾರಿ: ರಾತ್ರಿ ಎಣ್ಣೆ ಹಚ್ಚುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತವೆ. ಎಣ್ಣೆಯನ್ನು ಕೂದಲಿನ ಬೇರುಗಳಿಗೆ ಮಾತ್ರವಲ್ಲದೇ ತುದಿಗಳಿಗೂ ಹಚ್ಚಬೇಕು. ಹೀಗೆ ಮಾಡುವುದರಿಂದ ಕೂದಲು ಉದುರುವುದು ಸೇರಿ ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತವೆ ಕೂದಲು ದಟ್ಟವಾಗಿ ಬೆಳೆಯುತ್ತವೆ ಅಂತಾರೆ ತಜ್ಞರು.

ಸಿಲ್ಕಿ ಜೊತೆಗೆ ಶೈನಿಂಗ್​: ರಾತ್ರಿ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಉತ್ತಮ ಪೋಷಕಾಂಶ ದೊರೆಯುತ್ತದೆ ಮತ್ತು ಗಟ್ಟಿಮುಟ್ಟಾಗಿ ಬಲಯುತವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇದಲ್ಲದೆ, ಕೂದಲು ಸಿಲ್ಕಿಯಾಗಿರಲು ಇದು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಈ ಮುನ್ನೆಚ್ಚರಿಕೆಗಳನ್ನು ಅನುಸರಿಸಿ!: ಮಲಗುವ ಎರಡು ಗಂಟೆಗಳ ಮೊದಲು ಎಣ್ಣೆಯನ್ನು ಹಚ್ಚುವುದು ಉತ್ತಮ. ಹೀಗಾಗಿ, ಎಣ್ಣೆ ತಲೆ ದಿಂಬಿಗೆ ಅಂಟಿಕೊಳ್ಳುವುದಿಲ್ಲ. ಇನ್ನು ಕೆಲವರು ಎಣ್ಣೆ ಹಚ್ಚಿದ್ದರಿಂದ ಆಗಾಗ ತಲೆ ಕೂದಲಿಗೆ ಕೈ ಹಾಕಿ ಮಸಾಜ್​ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಈ ರೀತಿ ಮಾಡುವುದು ಸರಿಯಲ್ಲ ಎನ್ನುತ್ತಾರೆ ತಜ್ಞರು. ಇದರಿಂದ ಕೂದಲು ಬಲಹೀನವಾಗುವುದಲ್ಲದೇ, ದೀರ್ಘಕಾಲ ಸ್ಪರ್ಶಿಸುವುದರಿಂದ ಉದುರುತ್ತವೆ. ಹಾಗಾಗಿ ಒಮ್ಮೆ ತಲೆಗೆ ಎಣ್ಣೆ ಹಚ್ಚಿ ಮಸಾಜ್​ ಮಾಡಿದ ಬಳಿಕ ಸ್ಪರ್ಶಿಸದೇ ಇರುವುದು ಉತ್ತಮ.

ಇದನ್ನು ಗಮನಿಸಿ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಮತ್ತು ಸಲಹೆಗಳು ಕೇವಲ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಈ ಸಂಬಂಧಿತ ಪರಿಣತ ಬಳಿ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಕೂದಲು ಉದುರುವುದನ್ನು ತಡೆಯುವುದಕ್ಕೆ, ಬೆಳೆಯುವುದಕ್ಕೆ ಈರುಳ್ಳಿ ಜ್ಯೂಸ್​ ಪರಿಣಾಮಕಾರಿಯೇ?; ಏನ್​ ಹೇಳ್ತಾರೆ ತಜ್ಞರು? - Onion Juice for Hair

ETV Bharat Logo

Copyright © 2025 Ushodaya Enterprises Pvt. Ltd., All Rights Reserved.