ETV Bharat / health

ಬಾರ್ಲಿ ನೀರು: ಬಿಸಿಲಿನಿಂದ ರಕ್ಷಣೆ ಮಾತ್ರವಲ್ಲ, ಈ ಸಮಸ್ಯೆಗಳಿಗೂ ರಾಮಬಾಣ! - Barley Water Health Benefits - BARLEY WATER HEALTH BENEFITS

Barley Water Health Benefits: ಒಂದು ಗ್ಲಾಸ್ ಬಾರ್ಲಿ ನೀರು ಕುಡಿದರೆ ಬೇಸಿಗೆಯ ಬೇಗೆಯಿಂದ ತಕ್ಷಣ ಪರಿಹಾರ ಸಿಗುತ್ತದೆ ಎನ್ನುತ್ತಾರೆ ತಜ್ಞರು. ಅಲ್ಲದೆ, ಬಾರ್ಲಿ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

HEALTH BENEFITS  BARLEY WATER  FULL DETAILS IN KANNADA  HEALTH BENEFITS IN SUMMER
ಬಾರ್ಲಿ ನೀರು: ಬಿಸಿಲಿನಿಂದ ರಕ್ಷಣೆ ಮಾತ್ರವಲ್ಲ, ಈ ಸಮಸ್ಯೆಗಳಿಗೂ ರಾಮಬಾಣ! (ಸಾಂದರ್ಭಿಕ ಚಿತ್ರ (ETV Bharat))
author img

By ETV Bharat Karnataka Team

Published : May 10, 2024, 7:48 AM IST

Barley Water Health Benefits in Summer: ಮೇ ತಿಂಗಳಲ್ಲಿ ತಾಪಮಾನ ವಿಪರೀತವಾಗಿ ಹೆಚ್ಚುತ್ತಿದೆ. ನೀವು ಸ್ವಲ್ಪ ಹೊತ್ತು ಹೊರಗೆ ಹೋದರೂ, ನಿಮ್ಮಲ್ಲಿರುವ ಎಲ್ಲಾ ಶಕ್ತಿಯನ್ನು ಯಾರೋ ಹೀರುವಂತೆ ಭಾಸವಾಗುತ್ತದೆ. ಅಲ್ಲದೆ, ಬೇಸಿಗೆಯ ಬಿಸಿಲಿನಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅನ್ನ ತಿನ್ನಲು ಮನಸ್ಸು ಬರಲ್ಲ, ತಿನ್ನದಿದ್ದರೆ ಹಸಿವಿನ ಸಮಸ್ಯೆ, ನಿರ್ಜಲೀಕರಣ, ಹೀಟ್ ಸ್ಟ್ರೋಕ್, ಭೇದಿ ಇತ್ಯಾದಿ ಸಮಸ್ಯೆಗಳು ಕಾಡುತ್ತವೆ. ಬೇಸಿಗೆಗೆ ಸಂಬಂಧಿಸಿದ ಇಂತಹ ಸಮಸ್ಯೆಗಳನ್ನು ಬಾರ್ಲಿ ನೀರಿನಿಂದ ಪರಿಹರಿಸಬಹುದು ಎಂದು ತಜ್ಞರು ಹೇಳುತ್ತಾರೆ. ಬಾರ್ಲಿಯು ಬೇಸಿಗೆಯ ಸಮಸ್ಯೆಗಳಿಗೆ ಮಾತ್ರವಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳಿಗೂ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಹೇಳುತ್ತಾರೆ. ಆ ಪ್ರಯೋಜನಗಳೇನು ಎಂಬುದನ್ನು ಈಗ ನೋಡೋಣ ಬನ್ನಿ...

ಬಾರ್ಲಿಯಲ್ಲಿರುವ ಪೋಷಕಾಂಶಗಳು: ಬಾರ್ಲಿ ನೀರಿನಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಮತ್ತು ತ್ವರಿತ ಶಕ್ತಿಯನ್ನು ನೀಡುವ ಗುಣಲಕ್ಷಣಗಳಿವೆ. ಇದು ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ಮೆಗ್ನೇಷಿಯಮ್, ಮ್ಯಾಂಗನೀಸ್, ಸತು, ತಾಮ್ರ, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ಇವೆ. ಈಗ ಬೇಸಿಗೆಯಲ್ಲಿ ಬಾರ್ಲಿ ನೀರನ್ನು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ..

ಬಾರ್ಲಿ ವಾಟರ್ ಪ್ರಯೋಜನಗಳು:

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ಬಾರ್ಲಿಯಲ್ಲಿ ಬೀಟಾ-ಗ್ಲುಕನ್ ಎಂಬ ಕರಗುವ ಫೈಬರ್‌ ಇದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಉತ್ತಮ (ಎಚ್‌ಡಿಎಲ್) ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2017 ರಲ್ಲಿ BMC ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬಾರ್ಲಿ ನೀರನ್ನು ಸೇವಿಸುವ ಜನರು ಹೃದ್ರೋಗದ ಅಪಾಯವನ್ನು ಶೇ.9ರಷ್ಟು ಕಡಿಮೆ ಮಾಡುತ್ತಾರೆ. ಈ ಸಂಶೋಧನೆಯಲ್ಲಿ ಚೀನಾದ ಶಾಂಘೈ ಜಿಯಾಟೊಂಗ್ ವಿಶ್ವವಿದ್ಯಾಲಯದ ಡಾ.ಡಾಂಗ್ ಲಿಯು ಭಾಗವಹಿಸಿದ್ದರು. ಬಾರ್ಲಿ ನೀರು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳುತ್ತಾರೆ.

ಅಜೀರ್ಣ ಸಮಸ್ಯೆಗಳ ನಿವಾರಣೆ: ಬೇಸಿಗೆಯಲ್ಲಿ ಅಜೀರ್ಣ ಸಮಸ್ಯೆ ಸಾಮಾನ್ಯವಾಗಿದೆ. ಆ ಸಂದರ್ಭದಲ್ಲಿ ಬಾರ್ಲಿ ನೀರನ್ನು ಕುಡಿಯುವುದು ತುಂಬಾ ಒಳ್ಳೆಯದು. ಜೀರ್ಣಾಂಗ ವ್ಯವಸ್ಥೆಯೂ ಸ್ವಚ್ಛವಾಗುತ್ತದೆ. ಅಜೀರ್ಣ ದೂರವಾಗುತ್ತದೆ. ಬಾರ್ಲಿಯಲ್ಲಿರುವ ಫೈಬರ್ ಜೀರ್ಣಾಂಗವನ್ನು ಆರೋಗ್ಯವಾಗಿರಿಸುತ್ತದೆ. ಎದೆಯುರಿ, ಅಸಿಡಿಟಿ, ಗ್ಯಾಸ್, ಅಜೀರ್ಣ ಮತ್ತು ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಬಾರ್ಲಿ ನೀರು ಒಳ್ಳೆಯದು. ಬಾರ್ಲಿ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ಎಲ್ಲಾ ತ್ಯಾಜ್ಯ ವಸ್ತುಗಳು ಹೊರಹೋಗುತ್ತವೆ.

ನಿರ್ಜಲೀಕರಣಕ್ಕೆ ತಡೆ: ಬಾರ್ಲಿಯು ಪೊಟ್ಯಾಸಿಯಮ್ ಮತ್ತು ಮೆಗ್ನೇಷಿಯಮ್​​ನಂತಹ ಪ್ರಮುಖ ಎಲೆಕ್ಟ್ರೋಲೈಟ್‌ಗಳಿವೆ. ನಿರ್ಜಲೀಕರಣದ ಸಮಯದಲ್ಲಿ ಈ ವಿದ್ಯುದ್ವಿಚ್ಛೇದ್ಯಗಳು ದೇಹದಿಂದ ಕಳೆದುಹೋಗುತ್ತವೆ. ಈ ಅನುಕ್ರಮದಲ್ಲಿ ಬಾರ್ಲಿ ನೀರನ್ನು ಕುಡಿಯುವುದು ಈ ಎಲೆಕ್ಟ್ರೋಲೈಟ್‌ಗಳನ್ನು ಪುನಃ ತುಂಬಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ದೇಹವು ಜಲಸಂಚಯನ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ: ಬಾರ್ಲಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೀಟಾ-ಗ್ಲುಕನ್ ರಕ್ತಪ್ರವಾಹಕ್ಕೆ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಕೆಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು.

ತೂಕ ನಷ್ಟಕ್ಕೆ ಸಹಾಯ: ಬಾರ್ಲಿಯು ಹಸಿವನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ದೇಹವನ್ನು ಉತ್ತೇಜಿಸುತ್ತದೆ. ಬಾರ್ಲಿ ನೀರು ಹೊಟ್ಟೆ ತುಂಬಿದ ಭಾವನೆಯನ್ನು ಉಂಟುಮಾಡುತ್ತದೆ. ಈ ಹಾರ್ಮೋನುಗಳು ಚಯಾಪಚಯವನ್ನು ಹೆಚ್ಚಿಸುತ್ತವೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ: ಬಾರ್ಲಿಯು ಆ್ಯಂಟಿಆಕ್ಸಿಡೆಂಟ್ಸ್​ ಸಮೃದ್ಧವಾಗಿದೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಫ್ರೀ ರಾಡಿಕಲ್​ಗಳಿಂದ ಉಂಟಾಗುವ ಹಾನಿಯಿಂದ ಜೀವಕೋಶಗಳನ್ನು ರಕ್ಷಿಸಲು ಸಹ ಬಾರ್ಲಿ ನೀರು ಸಹಾಯ ಮಾಡುತ್ತದೆ.

ಗರ್ಭಿಣಿಯರಿಗೆ ಒಳ್ಳೆಯದು: ಗರ್ಭಿಣಿಯರು ಪ್ರತಿದಿನ ಬಾರ್ಲಿ ನೀರನ್ನು ಕುಡಿಯುವುದು ತುಂಬಾ ಒಳ್ಳೆಯದು. ಕಾಲಿನ ಊತದ ಸಮಸ್ಯೆ ಅವರ ಮೇಲೆ ಪರಿಣಾಮ ಬೀರುವುದಿಲ್ಲ. ಆಯಾಸವೂ ಆಗುವುದಿಲ್ಲ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಬಾರ್ಲಿ ನೀರನ್ನು ಕುಡಿದರೆ ಹುಟ್ಟುವ ಮಗು ಕೂಡ ಆರೋಗ್ಯವಾಗಿರುತ್ತದೆ.

ಸೋಂಕು ದೂರ: ಮೂತ್ರನಾಳದ ಸೋಂಕು ಮಹಿಳೆಯರನ್ನು ಹೆಚ್ಚಾಗಿ ಕಾಡುವ ಪ್ರಮುಖ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಪ್ರತಿದಿನ ಬೆಳಗ್ಗೆ ಒಂದು ಲೋಟ ಬಾರ್ಲಿ ನೀರನ್ನು ಕುಡಿಯುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎನ್ನುತ್ತಾರೆ ತಜ್ಞರು. ಅಲ್ಲದೆ, ಮೂತ್ರನಾಳದಲ್ಲಿ ಸೋಂಕು ಉಂಟುಮಾಡುವ ಅಂಶಗಳು, ತ್ಯಾಜ್ಯಗಳು ಹೊರಗೆ ಹೋಗುತ್ತವೆ ಮತ್ತು ಸೂಕ್ಷ್ಮ ಕಲ್ಲುಗಳು ಸಹ ಕರಗುತ್ತವೆ ಎಂದು ಹೇಳಲಾಗುತ್ತದೆ.

ಬಾರ್ಲಿ ನೀರನ್ನು ಹೇಗೆ ತಯಾರಿಸುವುದು?

  • ಬಾರ್ಲಿಯನ್ನು ತಿಳಿ ಕಂದು ಬಣ್ಣ ಬರುವವರೆಗೆ ಹುರಿದು ಒಣಗಿಸಬೇಕು.
  • ಈಗ ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಮೂರು ಲೋಟ ನೀರು ಹಾಕಿ ಕುದಿಸಿ.
  • ಮತ್ತೊಂದೆಡೆ, ಎರಡು ಚಮಚ ಬಾರ್ಲಿ ಪುಡಿಯನ್ನು ಕಾಲು ಕಪ್ ನೀರಿನಲ್ಲಿ ಹಾಕಿ ಚೆನ್ನಾಗಿ ಬೆರೆಸಬೇಕು.
  • ಈ ಮಿಶ್ರಣವನ್ನು ಕುದಿಯುವ ನೀರಿನಲ್ಲಿ ಹಾಕಿ ಮಿಕ್ಸ್​ ಮಾಡಿ.. ಹತ್ತು ನಿಮಿಷ ಬೇಯಿಸಿ, ನಂತರ ತಣ್ಣಗಾಗಲು ಬಿಡಿ..
  • ಈ ನೀರಿಗೆ ಚಿಟಿಕೆ ಉಪ್ಪು ಸೇರಿಸಿ. ಬಳಿಕ ಈ ಬೇಸಿಗೆಯಲ್ಲಿ ಆಗಾಗ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರ ಹೊರತಾಗಿ, ನೀವು ಉಪ್ಪು ಜೊತೆಗೆ ಕಾಲು ಲೋಟ ಮಜ್ಜಿಗೆಯನ್ನು ಬೆರೆಸಿ ಕುಡಿಯಬಹುದು.

ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಓದಿ: ತಾಯಿ ಎದೆಹಾಲನ್ನು ಶಿಶುಗಳಿಗೆ ಯಾವ ವಯಸ್ಸಿನವರೆಗೆ ನೀಡಬಹುದು?: ಇಲ್ಲಿದೆ ಐಸಿಎಂಆರ್ ವರದಿ - Mother Breast milk

ETV Bharat Logo

Copyright © 2025 Ushodaya Enterprises Pvt. Ltd., All Rights Reserved.