ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (ಎಬಿ-ಪಿಎಂಜೆಎವೈ) ಆರನೇ ವಾರ್ಷಿಕೋತ್ಸವ ಆಚರಣೆಯ ಈ ದಿನವು ನಮ್ಮೆಲ್ಲರಿಗೂ ಅಪಾರ ಹೆಮ್ಮೆ ಮತ್ತು ಸಂತಸದ ಕ್ಷಣವಾಗಿದೆ. ನಮ್ಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ 2018 ರ ಸೆಪ್ಟೆಂಬರ್ ನಲ್ಲಿ ಪ್ರಾರಂಭವಾದ ಎಬಿ-ಪಿಎಂಜೆಎವೈ ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆಗಳಲ್ಲಿ ಒಂದಾಗಿದೆ. ಇದು ಎಲ್ಲಾ ನಾಗರಿಕರಿಗೆ, ವಿಶೇಷವಾಗಿ ದುರ್ಬಲರಿಗೆ ಸಮಾನ ಆರೋಗ್ಯ ವ್ಯವಸ್ಥೆಯನ್ನು ಒದಗಿಸುವ ಈ ಸರ್ಕಾರದ ಬದ್ಧತೆಗೆ ಸಾಕ್ಷಿಯಾಗಿದೆ.
ಕಳೆದ ಆರು ವರ್ಷಗಳಲ್ಲಿ, ಲಕ್ಷಾಂತರ ಜನ ಈ ಮಹತ್ವಾಕಾಂಕ್ಷೆಯ ಯೋಜನೆಯ ಸೌಲಭ್ಯ ಪಡೆದಿದ್ದು ಭರವಸೆ, ರೋಗ ಗುಣಪಡಿಸುವಿಕೆ ಮತ್ತು ಅನೇಕ ಸಂದರ್ಭಗಳಲ್ಲಿ ಜೀವ ಉಳಿಸುವ ಚಿಕಿತ್ಸೆಯನ್ನು ನೀಡಿದೆ. ಎಬಿ - ಪಿಎಂಜೆಎವೈನ ಪ್ರಯಾಣವು ಒಂದು ರಾಷ್ಟ್ರ ತನ್ನ ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತಮಗೊಳಿಸುವ ಗುರಿಯೊಂದಿಗೆ ಒಗ್ಗೂಡಿದಾಗ ಮಹತ್ತರವಾದುದನ್ನು ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದೆ.
Ayushman Bharat is a TOTAL Game-Changer, here's why!
— MyGovIndia (@mygovindia) September 23, 2024
With the world’s largest health insurance scheme benefiting over 55 crore people, this initiative is changing the landscape of healthcare access and expanding to cover all citizens above 70!
Watch the transformation unfold—as… pic.twitter.com/PSc2NgFztN
ಎಲ್ಲರಿಗೂ ಆರೋಗ್ಯ ರಕ್ಷಣೆಯ ಭರವಸೆ - ಆಯುಷ್ಮಾನ್ ಭಾರತದ ಮುಖ್ಯ ಧ್ಯೇಯ ಸರಳವಾಗಿದ್ದರೂ ಆಳವಾಗಿದೆ: ಯಾವುದೇ ಭಾರತೀಯನು ತನ್ನ ಆರ್ಥಿಕ ಸ್ಥಿತಿಯ ಕಾರಣದಿಂದಾಗಿ ಆರೋಗ್ಯ ರಕ್ಷಣೆಯಿಂದ ವಂಚಿತನಾಗದಂತೆ ನೋಡಿಕೊಳ್ಳುವುದು ಇದರ ಮುಖ್ಯ ಧ್ಯೇಯವಾಗಿದೆ. ಆಸ್ಪತ್ರೆಗಳಲ್ಲಿ ದ್ವಿತೀಯ ಮತ್ತು ತೃತೀಯ ಹಂತದ ಚಿಕಿತ್ಸೆ ಪಡೆಯಲು ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ.ಗಳ ವಿಮೆಯೊಂದಿಗೆ, ಎಬಿ-ಪಿಎಂಜೆಎವೈ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ದೇಶದ ಕೆಲವು ಅತ್ಯುತ್ತಮ ಆಸ್ಪತ್ರೆಗಳಲ್ಲಿ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಪಡೆಯುವ ಅವಕಾಶವನ್ನು ಒದಗಿಸಿದೆ.
ಸಾಮಾಜಿಕ - ಆರ್ಥಿಕ ಸ್ಥಿತಿಯನ್ನು ಪರಿಗಣಿಸದೆ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲ ಹಿರಿಯ ನಾಗರಿಕರಿಗೆ ಎಬಿ ಪಿಎಂ-ಜೆಎವೈ ಪ್ರಯೋಜನಗಳನ್ನು ವಿಸ್ತರಿಸುವ ಭಾರತ ಸರ್ಕಾರದ ಇತ್ತೀಚಿನ ನಿರ್ಧಾರವು ನಮ್ಮ ದೇಶದಲ್ಲಿ ಬದಲಾಗುತ್ತಿರುವ ಜನಸಂಖ್ಯಾ ಪರಿಸ್ಥಿತಿ ಲೆಕ್ಕಹಾಕುವ ಸೂಕ್ಷ್ಮ ಹೆಜ್ಜೆಯಾಗಿದೆ. ಈ ಹಿಂದೆ, ನಮ್ಮ ಸಮುದಾಯ ಆರೋಗ್ಯ ಕಾರ್ಯಕರ್ತರ ಕುಟುಂಬಗಳನ್ನು - ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು (ಆಶಾ), ಅಂಗನವಾಡಿ ಕಾರ್ಯಕರ್ತರು ಮತ್ತು ಅಂಗನವಾಡಿ ಸಹಾಯಕರನ್ನು ಯೋಜನೆಯ ವ್ಯಾಪ್ತಿಗೆ ತರಲಾಗಿದೆ.
This Day, That Year!
— Ministry of Health (@MoHFW_INDIA) September 23, 2024
On 23rd September 2018, Prime Minister Shri @narendramodi launched Ayushman Bharat Pradhan Mantri Jan Arogya Yojana, marking a transformative shift in healthcare. The scheme promised top-class, affordable healthcare for the poor.
Today, as we celebrate 6… pic.twitter.com/nbnWvEsgDL
ಪ್ರಸ್ತುತ 55 ಕೋಟಿಗೂ ಹೆಚ್ಚು ಜನರು ಈ ಯೋಜನೆಯಡಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅರ್ಹರಾಗಿದ್ದಾರೆ. ಈ ಯೋಜನೆಯಡಿ 1 ಲಕ್ಷ ಕೋಟಿ ಮೌಲ್ಯದ 7.5 ಕೋಟಿಗೂ ಹೆಚ್ಚು ಸಂಖ್ಯೆಯ ಚಿಕಿತ್ಸೆಗಳನ್ನು ಈಗಾಗಲೇ ನೀಡಲಾಗಿದೆ. ಇದು ಗಮನಾರ್ಹ ಸಾಧನೆಯಾಗಿದೆ. ಒಂದು ಕಾಲದಲ್ಲಿ ದುಬಾರಿ ವೈದ್ಯಕೀಯ ವೆಚ್ಚಗಳಿಂದಾಗಿ ಬಡತನಕ್ಕೆ ತಳ್ಳಲ್ಪಡುತ್ತಿದ್ದ ಕುಟುಂಬಗಳು ಈಗ ಅಂತಹ ಬಿಕ್ಕಟ್ಟಿನಿಂದ ಪಾರಾಗಿವೆ. ದುಬಾರಿ ವೆಚ್ಚದ ಚಿಕಿತ್ಸೆ ಪಡೆಯುತ್ತಿರುವ ಕುಟುಂಬಗಳಿಗೆ ಈ ಯೋಜನೆಯು ಜೀವನಾಡಿಯಾಗಿದೆ. ರೈತರಿಂದ ದಿನಗೂಲಿ ಕಾರ್ಮಿಕರವರೆಗೆ ಕೋಟ್ಯಂತರ ಫಲಾನುಭವಿಗಳು ಈ ಯೋಜನೆಯನ್ನು ಪ್ರಶಂಸಿಸಿದ್ದಾರೆ. ಈ ಯೋಜನೆಯಿಂದ ಅವರು ಆರ್ಥಿಕ ಸಂಕಷ್ಟದಿಂದ ಪಾರಾಗಲು ಹೇಗೆ ಸಾಧ್ಯವಾಯಿತು ಎಂಬುದನ್ನು ಅನೇಕರು ಹೇಳಿಕೊಂಡಿದ್ದಾರೆ. ಈ ಅರ್ಥದಲ್ಲಿ, ಆಯುಷ್ಮಾನ್ ಭಾರತ್ ನಿಜವಾಗಿಯೂ ತನ್ನ ಭರವಸೆಯನ್ನು ಈಡೇರಿಸಿದೆ.
ಈ ಯೋಜನೆಯ ವ್ಯಾಪ್ತಿ ಸಮಗ್ರವಾಗಿದ್ದು, ಹೃದಯ ಬೈಪಾಸ್ ಮತ್ತು ಕೀಲು ಬದಲಿಗಳಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗಳಿಂದ ಹಿಡಿದು ಕ್ಯಾನ್ಸರ್ ಮತ್ತು ಮೂತ್ರಪಿಂಡದ ಕಾಯಿಲೆಗಳ ಚಿಕಿತ್ಸೆಗಳಿಗೆ 1900 ಕ್ಕೂ ಹೆಚ್ಚು ವೈದ್ಯಕೀಯ ಕಾರ್ಯವಿಧಾನಗಳನ್ನು ಒಳಗೊಂಡಿದೆ. ಈ ಚಿಕಿತ್ಸೆಗಳು ಈ ಹಿಂದೆ ಅನೇಕರಿಗೆ ಕೈಗೆಟುಕದಂತಾಗಿದ್ದವು. ಆದರೆ ಎಬಿ-ಪಿಎಂಜೆಎವೈ ಅವುಗಳನ್ನು ಎಲ್ಲರಿಗೂ ಕೈಗೆಟುಕುವಂತೆ ಮಾಡಿದೆ.
India’s Ayushman Bharat Digital Health ID launched by Prime Minister Narendra Modi is an excellent example of how digitalisation can help improve people's lives.
— BJP (@BJP4India) September 23, 2024
- Vivian Balakrishnan, Minister of Foreign Affairs in Singapore#6YearsOfAyushmanBharat pic.twitter.com/sAvmkBvYCa
ಜಾಲ ವಿಸ್ತರಣೆ: ವ್ಯವಸ್ಥೆಯ ಬಲವರ್ಧನೆ: ಎಬಿ-ಪಿಎಂಜೆಎವೈನ ಒಂದು ಲಕ್ಷಣವೆಂದರೆ ಆರೋಗ್ಯ ಚಿಕಿತ್ಸೆ ಪೂರೈಕೆದಾರರ ದೃಢವಾದ ಜಾಲವನ್ನು ರಚಿಸುವ ಸಾಮರ್ಥ್ಯ. ಇಂದು, 13,000 ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಭಾರತದಾದ್ಯಂತ 29,000 ಕ್ಕೂ ಹೆಚ್ಚು ಆಸ್ಪತ್ರೆಗಳು ಈ ಯೋಜನೆಯಡಿ ಎಂಪಾನೆಲ್ ಆಗಿವೆ. ಈ ಜಾಲವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಮಾನವಾಗಿ ವ್ಯಾಪಿಸಿದೆ. ಈ ಮೂಲಕ ದೇಶದ ಅತ್ಯಂತ ದೂರದ ಭಾಗಗಳಲ್ಲಿ ವಾಸಿಸುವವರು ಸಹ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿದೆ. ಈ ಯೋಜನೆಯ ವಿಶಿಷ್ಟ ಪೋರ್ಟಬಿಲಿಟಿ ವೈಶಿಷ್ಟ್ಯವು ಫಲಾನುಭವಿಗಳು ತಾವು ಸೇರಿದ ರಾಜ್ಯದ ಜೊತೆಗೆ ದೇಶಾದ್ಯಂತದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು.
ಈ ವಿಶಾಲ ಜಾಲವು ದೃಢವಾದ ಐಟಿ ಮೂಲಸೌಕರ್ಯದಿಂದ ಬೆಂಬಲಿತವಾಗಿದೆ. ಇದು ಕ್ಲೈಮ್ ಇತ್ಯರ್ಥಗಳಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ವೇಗವನ್ನು ಖಚಿತಪಡಿಸುತ್ತದೆ. ಆಧಾರ್ ಆಧರಿತ ಬಯೋಮೆಟ್ರಿಕ್ ಪರಿಶೀಲನೆ ಮತ್ತು ಕಾಗದರಹಿತ ಕ್ಲೈಮ್ ಪ್ರಕ್ರಿಯೆಯ ಅನುಷ್ಠಾನವು ವಂಚನೆ ಮತ್ತು ಅದಕ್ಷತೆಯನ್ನು ತೀವ್ರವಾಗಿ ಕಡಿಮೆ ಮಾಡಿದೆ.
ಆಯುಷ್ಮಾನ್ ಭಾರತ್ ನ ಯಶಸ್ಸು ಆರೋಗ್ಯ ಪರಿಸರ ವ್ಯವಸ್ಥೆಯ ಇತರ ಭಾಗಗಳಲ್ಲಿಯೂ ಸುಧಾರಣೆಗಳನ್ನು ವೇಗವರ್ಧಿಸಿದೆ. ಗುಣಮಟ್ಟದ ಆರೋಗ್ಯ ರಕ್ಷಣೆಗೆ ಈ ಯೋಜನೆಯ ಒತ್ತು ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳನ್ನು ತಮ್ಮ ಮೂಲಸೌಕರ್ಯ ಮತ್ತು ಸೇವೆಗಳನ್ನು ನವೀಕರಿಸಲು ಪ್ರೇರೇಪಿಸಿದೆ. ಹೆಚ್ಚುವರಿಯಾಗಿ. ಇದು ಆರೋಗ್ಯಕರ ಸ್ಪರ್ಧೆಯ ವಾತಾವರಣವನ್ನು ಬೆಳೆಸಿದೆ ಮತ್ತು ರೋಗಿಯ ಆರೈಕೆಯನ್ನು ಉತ್ತಮಪಡಿಸಲು ಪ್ರೋತ್ಸಾಹಿಸಿದೆ.
ಸಮಗ್ರ ಆರೋಗ್ಯ ರಕ್ಷಣೆಯ ಮೇಲೆ ಗಮನ: ಆಯುಷ್ಮಾನ್ ಭಾರತ್ ಕೇವಲ ಆಸ್ಪತ್ರೆ ಆರೈಕೆಗೆ ಸಂಬಂಧಿಸಿದ್ದಲ್ಲ. ಎಬಿ - ಪಿಎಂಜೆಎವೈ ಜೊತೆಗೆ, ಆಯುಷ್ಮಾನ್ ಆರೋಗ್ಯ ಮಂದಿರ (ಎಎಎಂ) ರಚಿಸುವ ಮೂಲಕ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಬಲಪಡಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಈ ಆರೋಗ್ಯ ಕೇಂದ್ರಗಳು ಜನಸಂಖ್ಯೆಯಲ್ಲಿ ರೋಗದ ಒಟ್ಟಾರೆ ಹೊರೆಯನ್ನು ಕಡಿಮೆ ಮಾಡುವ ಗುರಿಯೊಂದಿಗೆ ರೋಗ ತಡೆಗಟ್ಟುವ ಮತ್ತು ಆರೊಗ್ಯ ಉತ್ತೇಜಿಸುವ ಆರೋಗ್ಯ ರಕ್ಷಣೆಯ ಮೇಲೆ ಗಮನ ಕೇಂದ್ರೀಕರಿಸಿವೆ. ಇಲ್ಲಿಯವರೆಗೆ, ಭಾರತದಾದ್ಯಂತ 1.73 ಲಕ್ಷಕ್ಕೂ ಹೆಚ್ಚು ಎಎಎಂಗಳನ್ನು ಸ್ಥಾಪಿಸಲಾಗಿದ್ದು, ಸಾಮಾನ್ಯ ಕಾಯಿಲೆಗಳು ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್ನಂತಹ ದೀರ್ಘಕಾಲದ ರೋಗಗಳಿಗೆ ಉಚಿತ ತಪಾಸಣೆ, ರೋಗನಿರ್ಣಯ ಮತ್ತು ಔಷಧಿಗಳನ್ನು ಒದಗಿಸುತ್ತಿದೆ.
ಈ ಕೇಂದ್ರಗಳು ಹೆಚ್ಚು ಸಮಗ್ರ ಮತ್ತು ಸಮಗ್ರ ಆರೋಗ್ಯ ಮಾದರಿಯತ್ತ ಸಾಗುವ ನಮ್ಮ ಪ್ರಯತ್ನದ ಕೇಂದ್ರದಲ್ಲಿವೆ. ಸ್ವಾಸ್ಥ್ಯ ಮತ್ತು ಆರಂಭಿಕ ರೋಗನಿರ್ಣಯವನ್ನು ಉತ್ತೇಜಿಸುವ ಮೂಲಕ, ಆಸ್ಪತ್ರೆಗೆ ದಾಖಲಾಗುವ ಅಗತ್ಯವನ್ನು ಕಡಿಮೆ ಮಾಡಲು ಮತ್ತು ದೀರ್ಘಾವಧಿಯಲ್ಲಿ ಆರೋಗ್ಯ ರಕ್ಷಣೆಯನ್ನು ಹೆಚ್ಚು ಸುಸ್ಥಿರವಾಗಿಸುವುದು ನಮ್ಮ ಗುರಿಯಾಗಿದೆ.
ಸವಾಲುಗಳನ್ನು ಜಯಿಸಿ ಮುಂದೆ ಸಾಗುವುದು: ನಾವು ಆಯುಷ್ಮಾನ್ ಭಾರತದ ಸಾಧನೆಗಳನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಮುಂದಿರುವ ಸವಾಲುಗಳನ್ನು ಸಹ ನಾವು ಒಪ್ಪಿಕೊಳ್ಳಬೇಕಿದೆ. ಯೋಜನೆಯ ಪ್ರಮಾಣವು ಅಗಾಧವಾಗಿದೆ ಮತ್ತು ಅದರೊಂದಿಗೆ ಅದನ್ನು ನಿರಂತರವಾಗಿ ಅಳವಡಿಸಿಕೊಳ್ಳುವ, ಪರಿಷ್ಕರಿಸುವ ಮತ್ತು ಸುಧಾರಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲು, ಆಸ್ಪತ್ರೆಗಳಿಗೆ ಸಮಯೋಚಿತ ಪಾವತಿಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರತಿ ಫಲಾನುಭವಿಗೆ ಒದಗಿಸುವ ಆರೈಕೆಯ ಗುಣಮಟ್ಟವನ್ನು ಹೆಚ್ಚಿಸಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ.
ಆಯುಷ್ಮಾನ್ ಭಾರತ್ ಬಲಪಡಿಸುವುದನ್ನು ನಾವು ಮುಂದುವರಿಸಲಿದ್ದೇವೆ. ಸಮಗ್ರ, ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆಯಲ್ಲಿ ಭಾರತವು ಮುಂಚೂಣಿಯಲ್ಲಿರುವಂತೆ ನಾವು ಖಾತ್ರಿ ನೀಡುತ್ತೇವೆ. ಈ ಯೋಜನೆಯಡಿ ಬರುವ ಚಿಕಿತ್ಸೆಗಳ ಪಟ್ಟಿಯನ್ನು ವಿಸ್ತರಿಸಲು, ಎಂಪಾನೆಲ್ ಮಾಡಲಾದ ಆಸ್ಪತ್ರೆಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಆಯುಷ್ಮಾನ್ ಆರೋಗ್ಯ ಮಂದಿರಗಳ ಯಶಸ್ಸನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ.
ಆರೋಗ್ಯಕರ ಭಾರತದ ದೃಷ್ಟಿಕೋನ: ಕೇಂದ್ರ ಆರೋಗ್ಯ ಸಚಿವನಾಗಿ, ರಾಷ್ಟ್ರದ ಆರೋಗ್ಯವು ಅದರ ಸಮೃದ್ಧಿಯ ಅಡಿಪಾಯವಾಗಿದೆ ಎಂದು ನಾನು ದೃಢವಾಗಿ ನಂಬುತ್ತೇನೆ. ದೇಶದ ಬೆಳವಣಿಗೆ, ಉತ್ಪಾದಕತೆ ಮತ್ತು ಆವಿಷ್ಕಾರಕ್ಕೆ ಕೊಡುಗೆ ನೀಡಲು ಆರೋಗ್ಯವಂತ ಜನಸಂಖ್ಯೆ ಉತ್ತಮವಾಗಿ ಸಜ್ಜುಗೊಂಡಿದೆ. ಆಯುಷ್ಮಾನ್ ಭಾರತ್ ಆರೋಗ್ಯಕರ, ಬಲವಾದ ಮತ್ತು ವಿಕಸಿತ್ ಭಾರತ ದೃಷ್ಟಿಕೋನದ ಕೇಂದ್ರವಾಗಿದೆ.
ಇಲ್ಲಿಯವರೆಗೆ ಯೋಜನೆಯ ಯಶಸ್ಸು ಸರ್ಕಾರ, ಆರೋಗ್ಯ ಸೇವಾ ಪೂರೈಕೆದಾರರು ಮತ್ತು ಜನರ ನಡುವಿನ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸಹಯೋಗವನ್ನು ಪ್ರತಿಬಿಂಬಿಸುತ್ತದೆ. ಆದಾಗ್ಯೂ, ನಮ್ಮ ಪ್ರಯಾಣವು ಇನ್ನೂ ಮುಗಿದಿಲ್ಲ. ಪ್ರತಿಯೊಬ್ಬ ನಾಗರಿಕನ ಯೋಗಕ್ಷೇಮ ಮತ್ತು ಆರೋಗ್ಯದ ದೃಷ್ಟಿಕೋನಕ್ಕೆ ನಾವು ಬದ್ಧರಾಗಿದ್ದೇವೆ.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಈ ಆರನೇ ವಾರ್ಷಿಕೋತ್ಸವದಂದು ಎಲ್ಲರನ್ನೂ ಒಳಗೊಂಡ, ಎಲ್ಲರಿಗೂ ಲಭ್ಯವಾಗುವಂಥ ಮತ್ತು ಸಹಾನುಭೂತಿಯುಳ್ಳ ಆರೋಗ್ಯ ವ್ಯವಸ್ಥೆಯನ್ನು ರಚಿಸುವ ನಮ್ಮ ಸಮರ್ಪಣೆಯನ್ನು ಪುನರುಚ್ಚರಿಸೋಣ. ಒಟ್ಟಾಗಿ, ನಾವು ಮುಂದಿನ ಪೀಳಿಗೆಗೆ ಆರೋಗ್ಯಕರ ಭಾರತವನ್ನು ನಿರ್ಮಿಸುವುದನ್ನು ಮುಂದುವರಿಸುತ್ತೇವೆ.
ಜೈ ಹಿಂದ್!
ಲೇಖನ : ಜಗತ್ ಪ್ರಕಾಶ್ ನಡ್ಡಾ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು