ನ್ಯೂಯಾರ್ಕ್( ಅಮೆರಿಕ): ನಿರ್ದಿಷ್ಠ ನರಗಳಿಂದ ಮೆದುಳಿಗೆ ರಕ್ತದ ಹರಿವಿನ ಕೊರತೆಯಿಂದ ಉಂಟಾಗುವ ಅಡ್ಡಿಯಿಂದಾಗಿ ಪಾರ್ಶ್ವವಾಯು ಸಂಭವಿಸುತ್ತದೆ. ಈ ವೇಳೆ, ಚಿಕಿತ್ಸೆಗೆ ವೈದ್ಯರುಗಳು ಆ್ಯಂಟಿಕೊಲಾಗ್ಲಂಟ್ ಅನ್ನು ಬಳಕೆ ಮಾಡುತ್ತಾರೆ. ಈ ಆ್ಯಂಟಿಕೊಲಾಗ್ಲಂಟ್ ರಕ್ತವನ್ನು ಸಲಭವಾಗಿ ಹೆಪ್ಪುಗಟ್ಟದಂತೆ ತಡೆಯಲು ಸಹಾಯ ಮಾಡುವ ಔಷಧವಾಗಿದೆ. ಆದರೆ, ಈ ಔಷಧಗಳು ಎಷ್ಟರ ಮಟ್ಟಿಗೆ ಪಾರ್ಶ್ವವಾಯು ರೋಗಿಗಳಿಗೆ ಸಹಾಯ ಮಾಡಲಿದೆ ಎಂಬ ಕುರಿತು ಅಧ್ಯಯನ ನಡೆಸಲಾಗಿದೆ. ಅದರಂತೆ, ಕೆಲವು ವಿವರಿಸಲಾದ ಪಾರ್ಶ್ವವಾಯುಗೆ ಶಿಫಾರಸು ಮಾಡುವ ಆ್ಯಂಟಿಕೊಲಾಗ್ಲಂಟ್ (ಹೆಪ್ಪುರೋಧಕ) ಸಾಮಾನ್ಯ ಅಭ್ಯಾಸವನ್ನು ನಿಲ್ಲಿಸಬೇಕು. ಇದು ಯಾವುದೇ ಅಪಾಯವನ್ನು ತಡೆಯಲು ಪ್ರಯೋಜನಕಾರಿಯಾಗಿಲ್ಲ ಎಂದು ಸಂಶೋಧನೆ ತಿಳಿಸಿದೆ.
ಆರಂಭಿಕ ಪಾರ್ಶ್ವವಾಯು ಸಂದರ್ಭದಲ್ಲಿ ಹೆಚ್ಚಿನ ಅಪಾಯವನ್ನು ತಡೆಯುವ ಉದ್ದೇಶದಿಂದ ಈ ಆ್ಯಂಟಿಕೊಲಾಗ್ಲಂಟ್ ಅನ್ನು ಚಿಕಿತ್ಸೆಯ ಭಾಗವಾಗಿ ನೀಡಲಾಗುವುದು. ಆದರೆ, ಇದು ಹೃದಯಕ್ಕೆ ಅಪಾಯವನ್ನು ತರುತ್ತದೆ. ಈ ಔಷಧವನ್ನು ಸಾಮಾನ್ಯವಾಗಿ ಹೃತ್ಕರ್ಣದ ಕಂಪನವನ್ನು ಹೊಂದಿರುವ ರೋಗಿಗಳಿಗೆ ಬಳಕೆ ಮಾಡಲಾಗುತ್ತದೆ. ಹೃತ್ಕರ್ಣದ ಕಾರ್ಡಿಯೋಪತಿ ಹೊಂದಿರುವ ಜನರಿಗೆ ಈ ಔಷಧ ಸಹಾಯ ಮಾಡುತ್ತದೆ ಎಂದು ಶಿಫಾರಸು ಮಾಡಲಾಗುತ್ತದೆ ಎಂದು ವೆಗೆಕೊಸ್ ಕಾಲೇಜ್ ಆಫ್ ಫಿಸಿಜಿಷಿಯನ್ಸ್ ಅಂಡ್ ಸರ್ಜನ್ಸ್ನ ಮಿಚೆಲ್ ಎಲ್ಕಿಂಡ್ ತಿಳಿಸಿದ್ದಾರೆ.
ಈ ಕುರಿತು ತಿಳಿಯುವ ಉದ್ದೇಶದಿಂದ 1,015 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಇಲ್ಲಿ ಬಂದ ಫಲಿತಾಂಶವನ್ನು ಜಾಮಾದಲ್ಲಿ ಪ್ರಕಟಿಸಲಾಗಿದೆ. ಹೃತ್ಕರ್ಣದ ಕಾರ್ಡಿಯೋಪತಿ ಹೊಂದಿರುವ ರೋಗಿಗಳಿಗೆ ಆ್ಯಂಟಿಕೊಲಾಗ್ಲಂಟ್ ಅಪಿಕ್ಸಬಾನ್ ಚಿಕಿತ್ಸೆ ನೀಡಿರುವುದನ್ನು ಇದೆ ವೇಳೆ ಆಸ್ಪಿರಿನ್ ಔಷಧ ನೀಡಿದ ರೋಗಿಗಳನ್ನು ಹೋಲಿಕೆ ಮಾಡಿದಾಗ ಪಾರ್ಶ್ವವಾಯು ದರ ಒಂದೇ ರೀತಿಯಾಗಿದೆ.
ಅಧ್ಯಯನದಲ್ಲಿ ಫಿಸಿಷಿಯನ್ ವಿಜ್ಞಾನಿಗಳಿಗೆ ಹೈಪೋಥಿಸಿಸ್ ಅನ್ನು ಸಾಬೀತು ಪಡಿಸದಿರುವುದು ನಿರಾಶೆ ಮೂಡಿಸಿದರೂ, ಸಂಶೋಧನೆ ಉಪಯುಕ್ತ ಮಾಹಿತಿಯನ್ನು ನೀಡುತ್ತದೆ. ಹೃತ್ಕರ್ಣದ ಕಾರ್ಡಿಯೋಪತಿ ರೀತಿಯ ಹೃದಯ ಸ್ಥಿತಿ ಹೊಂದಿರುವ ರೋಗಿಗಳು ಆಸ್ಪಿರಿನ್‌ಗಿಂತ ಅಪಾಯಕಾರಿಯಾದ ಆ್ಯಂಟಿಕೊಲಾಗ್ಲಂಟ್ ನೀಡಬಾರದು ಎಂದು ನರರೋಗತಜ್ಞರಿಗೆ ತಿಳಿಸಬೇಕಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಪಾರ್ಶ್ವವಾಯು ಪ್ರಕರಣದಲ್ಲಿ ಮೂರರಲ್ಲಿ ಒಂದರ ಕಾರಣ ತಿಳಿದಿಲ್ಲ. ರೋಗಿಗಳಿಗೆ ಇತರ ಪಾರ್ಶ್ವವಾಯು ತಡೆಯುವ ಸಹಾಯ ಮಾಡುವುದು ನರರೋಗ ತಜ್ಞರಿಗೆ ಒಂದು ಸವಾಲಾಗಿ ಪರಿಣಮಿಸುತ್ತದೆ. ವಿವರಿಸಲಾಗದ ಪಾರ್ಶ್ವವಾಯುಗೂ ಕಾಣುವ ಎಎಫ್ಐಬಿ ಕಂಡು ಬರುವ ಹೃದಯದಲ್ಲಿನ ಬದಲಾವಣೆಯಿಂದ ಆಗುತ್ತದೆ. ಅಧ್ಯಯನದಲ್ಲಿ ಹೈಪೋಥೀಸಿಸ್ ಅನ್ನು ಯಾಕೆ ಬೆಂಬಲಿಸಲಿಲ್ಲ ಎಂಬುದರ ಸಂಬಂಧ ಅನೇಕ ಕಾರಣಗಳನ್ನು ಕಂಡುಕೊಳ್ಳಲಾಗಿದೆ. ಇದರಲ್ಲಿ ತಪ್ಪಾದ ರೋಗಿಗಳಲ್ಲಿ ಸರಿಯಾದ ಚಿಕಿತ್ಸೆ ನೀಡಿರುವ ಬಗ್ಗೆ ಪರೀಕ್ಷೆ ನಡೆಸಲಾಗಿದೆ.
ಇದನ್ನೂ ಓದಿ: ಯುವ ಜನತೆ ಕಾಡುತ್ತಿರುವ ಪಾರ್ಶ್ವವಾಯು: ಏಮ್ಸ್ ಅಂಕಿ ಅಂಶದಲ್ಲಿ ಆಘಾತಕಾರಿ ಅಂಶ ಬಯಲು