ನವದೆಹಲಿ: ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ಬೆಳವಣಿಗೆಗಳ ನಡುವೆ ಇಂದಿಗೂ ಕ್ಯಾನ್ಸರ್ ವಿರುದ್ಧದ ಶಾಶ್ವತ ಚಿಕಿತ್ಸೆಗೆ ನಿರಂತರ ಪ್ರಯೋಗ ನಡೆಯುತ್ತಲೇ ಇದೆ. ಆದರೆ, ಈ ಕ್ಯಾನ್ಸರ್ಗೆ 4 ಸಾವಿರ ವರ್ಷಗಳ ಹಿಂದೆಯೇ ಚಿಕಿತ್ಸೆ ನೀಡಲು ಈಜಿಪ್ಟಿಯನ್ನರು ಪ್ರಯತ್ನ ನಡೆಸಿದ್ದರು ಎಂಬ ವಿಚಾರ ಇದೀಗ ಅಧ್ಯಯನದಲ್ಲಿ ಬಯಲಾಗಿದೆ.
4 ಸಾವಿರ ವರ್ಷಗಳ ಹಿಂದೆ ಈಜಿಪ್ಟಿಯನ್ನರು ವ್ಯಕ್ತಿ ಸಾವಿನ ಬಳಿಕ ಅವರಲ್ಲಿನ ಹೆಚ್ಚುವರಿ ಅಂಗಾಂಶ ಬೆಳವಣಿಗೆ ಅಥವಾ ಕ್ಯಾನ್ಸರ್ ಅಸ್ವಸ್ಥತೆಯ ಕುರಿತು ತಿಳಿದುಕೊಳ್ಳಲು ಪ್ರಯತ್ನ ನಡೆಸಿದ್ದರು ಎಂದು ವರದಿ ತಿಳಿಸಿದೆ.
ಆರಂಭಿಕ ನಾಗರೀಕತೆಗೆ ಮುನ್ನುಡಿ ಬರೆದ ಪ್ರಾಚೀನ ಈಜಿಪ್ಟಿಯನ್ನರು ಅಪಘಾತದ ಗಾಯಗಳು, ರೋಗಗಳಿಗೆ ಚಿಕಿತ್ಸೆ, ಪತ್ತೆ ಮತ್ತು ವಿವರಣೆ ಜೊತೆಗೆ ಹಲ್ಲು ಸಮಸ್ಯೆಯಲ್ಲಿ ಫಿಲ್ಲಿಂಗ್ನಂತಹ ಚಿಕಿತ್ಸೆ ಬಗ್ಗೆ ತಿಳಿದಿದ್ದರು.
ಈಜಿಪ್ಟಿಯನ್ನರ ಚಿಕಿತ್ಸಾ ಪದ್ಧತಿ ಅರಿತುಕೊಳ್ಳುವ ಉದ್ದೇಶದಿಂದ ಅಂತಾರಾಷ್ಟ್ರೀಯ ತಂಡ ಮತ್ತಷ್ಟು ಅಧ್ಯಯನ ನಡೆಸಿದೆ. ಈ ವೇಳೆ ಸಾವಿರ ವರ್ಷದ ಹಳೆಯದಾದ ಪುರುಷ ಮತ್ತು ಮಹಿಳೆಯ ತಲೆಬುರುಡೆ ಕುರಿತು ಅಧ್ಯಯನ ನಡೆಸಲಾಗಿದೆ.
ಈ ತಲೆ ಬುರುಡೆಗಳಲ್ಲಿ ಕತ್ತರಿಸಿದ ಗುರುತುಗಳು ಕಂಡು ಬಂದಿವೆ. ಇದು ಈಜಿಪ್ಟಿಯನ್ನರು ಟ್ರಾಪಟೊಲಾಜಿಕಲ್ ಮತ್ತು ಅಂಕಾಲಾಜಿಕಲ್ ಚಿಕಿತ್ಸೆ ಅಭ್ಯಾಸ ಮಾಡುತ್ತಿದ್ದರು ಎಂಬ ಮಾಹಿತಿಯನ್ನು ಒದಗಿಸಿದೆ. ಈ ಅಧ್ಯಯನದ ವರದಿಯನ್ನು ಜರ್ನಲ್ ಫ್ರಂಟಿಯರ್ಸ್ ಇನ್ ಮೆಡಿಸಿನ್ನಲ್ಲಿ ಪ್ರಕಟಿಸಲಾಗಿದೆ.
4 ಸಾವಿರ ವರ್ಷಗಳ ಹಿಂದೆಯೇ ಈಜಿಪ್ಟಿಯನ್ನರು ಕ್ಯಾನ್ಸರ್ಗೆ ಯಾವ ರೀತಿ ಚಿಕಿತ್ಸೆ ನೀಡಲು ಪ್ರಯತ್ನಿಸಿದ್ದರು ಎಂಬುದಕ್ಕೆ ವಿಶಿಷ್ಟ ಮತ್ತು ಅದ್ಬುತ ಸಾಕ್ಷ್ಯ ಪತ್ತೆಯಾಗಿದೆ ಎಂದು ಸ್ಪೇನ್ನ ಸ್ಯಾಂಟಿಯಾಗೊ ಡೆ ಕಾಂಪ್ಪೊಸ್ಟೆಲಾ ಯುನಿವರ್ಸಿಟಿಯ ಪ್ಯಾಲಿಯೊಪಾಥಾಲಜಿಸ್ಟ್ ಎಡ್ಗಾರ್ಡ್ ಕ್ಯಾಮರೋಸ್ ತಿಳಿಸಿದ್ದಾರೆ.
ಕ್ರಿ.ಪೂ 2687 ಮತ್ತು 2345ನಡುವಿನ ಎರಡು ತಲೆಬುರುಡೆಗಳನ್ನು ಅಧ್ಯಯನ ಮಾಡಲಾಗಿದೆ. 30 ರಿಂದ 35 ವರ್ಷ ವಯಸ್ಸಿನ ಪುರುಷ ವ್ಯಕ್ತಿಗೆ ಸೇರಿದ್ದು, ಕ್ರಿ.ಪೂ 663 ಮತ್ತು 343ರಲ್ಲಿನ 50 ವರ್ಷ ಮೇಲ್ಪಟ್ಟ ಮಹಿಳೆಯ ತಲೆ ಬುರುಡೆ ಇದಾಗಿದೆ.
ಮೈಕ್ರೋಸ್ಕೋಪಿಕ್ ಗಮನ ಹರಿಸುವಿಕೆಯಲ್ಲಿ ಪುರುಷ ತಲೆಬುರುಡೆಯಲ್ಲಿ ದೊಡ್ಡ ಗಾತ್ರದ ಹೆಚ್ಚಿನ ಅಂಗಾಂಶದ ಅಡ್ಡಿಪಡಿಸುವಿಕೆ ಅಂದರೆ ನಿಯೋಪ್ಲಾಸ್ಮಾವನ್ನು ಕಾಣಲಾಗಿದೆ. ಜೊತೆಗೆ 30ಕ್ಕಿಂತ ಹೆಚ್ಚಿನ ಸಣ್ಣ ಮತ್ತು ದುಂಡಾಕೃತಿಯ ಮೆಟಾಸ್ಟಾಸಿಸ್ ಗಾಯಗಳನ್ನು ಅಲ್ಲಲ್ಲಿ ಕಾಣಬಹುದಾಗಿದೆ. ಈ ಕತ್ತರಿಸಿದ ಗುರುತುಗಳನ್ನು ಗಮನಿಸಿದಾಗ ಲೋಹದ ಚೂಪಾದ ಸಾಧನ ಬಳಕೆ ಮಾಡಿರುವುದು ಕಂಡು ಬಂದಿದೆ.
ಮೈಕ್ರೋಸ್ಕೋಪ್ನಲ್ಲಿ ಈ ಕತ್ತರಿಸಿದ ಗುರುತನ್ನು ಮೊದಲು ನೋಡಿದಾಗ, ನಮ್ಮ ಮುಂದೆ ಏನಿದೆ ಎಂಬುದನ್ನು ನಂಬಲು ಅಸಾಧ್ಯವಾಯಿತು ಎಂದು ಜರ್ಮನಿಯ ತುಬಿಂಗೆನ್ ಯುನಿವರ್ಸಿಟಿ ಸಂಶೋಧಕ ಟಟಿಯನಾ ತಿಳಿಸಿದ್ದಾರೆ.
ಮಹಿಳೆಯ ತಲೆ ಬುರುಡೆಯಲ್ಲಿ ಕ್ಯಾನ್ಸರ್ ರೀತಿಯ ಟ್ಯೂಮರ್ನಿಂದ ಮೂಳೆ ಅಡ್ಡಿಯನ್ನು ಕಾಣಬಹುದು.
ಇಂದಿನ ಜೀವನ ಶೈಲಿ ಮತ್ತು ಪರಿಸರದಲ್ಲಿನ ಕ್ಯಾನ್ಸರ್ಕಾರಕ ರೋಗವು ಈ ಹಿಂದೆಯೇ ಅಸ್ತಿತ್ವದಲ್ಲಿತ್ತು ಎಂಬುದನ್ನು ಈ ತಲೆ ಬುರುಡೆಗಳು ಸೂಚಿಸಿವೆ ಎಂದು ಅಧ್ಯಯನ ತಂಡ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ದೇಶದ ಯುವಜನರಲ್ಲಿ ಹೆಚ್ಚುತ್ತಿವೆ ಕ್ಯಾನ್ಸರ್ ಪ್ರಕರಣಗಳು: ಅಧ್ಯಯನ