ETV Bharat / health

ಟಿಫಿನ್ ಸೆಂಟರ್ ಸ್ಟೈಲ್​ "ಶುಂಠಿ ಚಟ್ನಿ" ; 10 ನಿಮಿಷದಲ್ಲಿ ತಯಾರಿಸಿ ನೀವು ಸವಿಯಬಹುದು ಈ ರುಚಿ! - ALLAM CHUTNEY - ALLAM CHUTNEY

ಹೋಟೆಲ್​ಗಳಲ್ಲಿ​ ನಾವು ಬಯಸುವ ಟಿಫಿನ್​ ಪದಾರ್ಥಗಳ ಜೊತೆಗೆ ತರಹೇವಾರಿ ಚಟ್ನಿಗಳನ್ನು ಸಹ ಸವಿಯುತ್ತೇವೆ. ಅದರಲ್ಲಿ ಮೆಣಸಿನಕಾಯಿ ಚಟ್ನಿ, ಶೇಂಗಾ ಚಟ್ನಿ, ಕೊಬ್ಬರಿ ಚಟ್ನಿ, ಪುಟಾಣಿ ಚಟ್ನಿ ಸವಿದಿದ್ದೇವೆ. ಇದೀಗ ಹೋಟೆಲ್​ ಸ್ಟೈಲ್​ನಲ್ಲಿ ರುಚಿಕಟ್ಟಾದ ಶುಂಠಿ ಚಟ್ನಿಯನ್ನು ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ..

allam chutney
ಅಲ್ಲಂ ಚಟ್ನಿ (ETV Bharat)
author img

By ETV Bharat Karnataka Team

Published : Jul 22, 2024, 5:13 PM IST

Updated : Jul 22, 2024, 5:41 PM IST

ಶುಂಠಿ ಚಟ್ನಿಯು ತುಂಬಾ ಜನರು ಟಿಫಿನ್‌ನಲ್ಲಿ ತಿನ್ನಲು ಇಷ್ಟಪಡುವ ಚಟ್ನಿಗಳಲ್ಲಿ ಒಂದಾಗಿದೆ. ಶೇಂಗಾ ಚಟ್ನಿ ಹೆಚ್ಚು ಬಳಕೆಯಲ್ಲಿದ್ದರೂ ಸಹ ನೀವೊಮ್ಮೆ ಶುಂಠಿ ಚಟ್ನಿಯ ರುಚಿಯನ್ನು ಸವಿದರೆ ರುಚಿ ಜೊತೆ ಆರೋಗ್ಯಕ್ಕೂ ಉತ್ತಮವಾಗಿರುತ್ತೆ. ಆದರೆ, ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಟಿಫಿನ್ ಸೆಂಟರ್ ಶೈಲಿಯ ರುಚಿ ಸಿಗುವುದಿಲ್ಲ. ಅಂಥವರಿಗಾಗಿಯೇ ನಿಖರವಾದ ಅಳತೆಯೊಂದಿಗೆ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಮಸಾಲೆಯುಕ್ತ ಶುಂಠಿ ಚಟ್ನಿ ರೆಸಿಪಿ ಬಗ್ಗೆ ನಾವ್​ ತಿಳಿಸುತ್ತೇವೆ.

ಇದನ್ನೂ ಓದಿ: ಆರೋಗ್ಯಯುತ ಎಂದು ಡಯಟ್​ ಸಾಫ್ಟ್​ ಡ್ರಿಂಕ್ಸ್​ ಕುಡಿಯುತ್ತೀರಾ; ಹಾಗಾದ್ರೆ ಈಗಲೇ ಎಚ್ಚೆತ್ತುಕೊಳ್ಳಿ! - diet soft drink effect on health

ಈ ಚಟ್ನಿ ಆರೋಗ್ಯಕ್ಕೂ ಒಳ್ಳೆಯದು ಎನ್ನುತ್ತಾರೆ ತಜ್ಞರು. ಹಾಗಾದರೆ.. ಇಂದು ಈ ರೆಸಿಪಿಯ ತಯಾರಿಯನ್ನು ನೋಡೋಣ. ಮತ್ತು ಶುಂಠಿ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು ಯಾವುವು? ತಯಾರಿ ಹೇಗೆ? ಎಂಬುದನ್ನು ತಿಳಿದುಕೊಳ್ಳೋಣ.

ಇದನ್ನೂ ಓದಿ: ಮಳೆಗಾಲದಲ್ಲಿ ಸೊಳ್ಳೆ ಕಾಟ ತಡೆಯೋಕಾಗ್ತಿಲ್ವಾ? ಈ ಮನೆಮದ್ದು​ ಬಳಸಿ ಸಾಕು, ಒಂದು ಸೊಳ್ಳೆಯೂ ಕಚ್ಚಲ್ಲ! - How To Keep Away Mosquitoes

ಶುಂಠಿ ಪೇಸ್ಟ್‌ಗೆ ಬೇಕಾಗುವ ಪದಾರ್ಥಗಳು:

  • ಶುಂಠಿ - 75 ಗ್ರಾಂ
  • ಮೆಣಸಿನಕಾಯಿ - ಅಗತ್ಯಕ್ಕೆ ತಕ್ಕಷ್ಟು
  • ಎಣ್ಣೆ - 2 ಟೀ ಸ್ಪೂನ್
  • ಹುಣಸೆಹಣ್ಣು - 50 ರಿಂದ 70 ಗ್ರಾಂ
  • ಬೆಲ್ಲ - 100 ಗ್ರಾಂ
  • ಉಪ್ಪು - ರುಚಿಗೆ ತಕ್ಕಷ್ಟು
  • ಬಿಸಿ ನೀರು - ಅಗತ್ಯವಿರುವಷ್ಟು

ಈ ಮಸಾಲೆ ಪದಾರ್ಥ ಸೇರಿಸಿ:

  • ಎಣ್ಣೆ - 1 ಟೇಬಲ್​ ಸ್ಪೂನ್​
  • ಸಾಸಿವೆ - 1 ಟೀ ಸ್ಪೂನ್
  • ಜೀರಿಗೆ - 1 ಟೀ ಸ್ಪೂನ್
  • ಕರಿಬೇವಿನ ಎಲೆಗಳು - ಸ್ವಲ್ಪ
  • ಕರಿಮೆಣಸು - 3

ತಯಾರಿಸುವ ವಿಧಾನ:

  • ಶುಂಠಿ ಚಟ್ನಿಗೆ.. ಮೊದಲು ಬೇಕಾದಷ್ಟು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ತುರಿದುಕೊಳ್ಳಿ. ಕೆಲಹೊತ್ತು ಬಿಸಿಯಾದ ಹಸಿರು ಮೆಣಸಿನಕಾಯಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಹುರಿಯಬಹುದು.
  • ಹುಣಸೆಹಣ್ಣು ನೀರಿನಲ್ಲಿ ನೆನೆಸಿಡಿ.
  • ಈಗ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಸ್ವಲ್ಪ ಬಿಸಿಯಾದ ನಂತರ ಹಸಿಮೆಣಸಿನಕಾಯಿ ಹಾಕಿ ವಾಸನೆ ಹೋಗುವವರೆಗೆ ಹುರಿಯಿರಿ.
  • ಹಾಗೆ ಹುರಿದ ನಂತರ.. ಅದರಲ್ಲಿ ತುರಿದ ಶುಂಠಿ ತುಂಡುಗಳನ್ನು ಹಾಕಿ ಮಿಶ್ರಣವನ್ನು ಸ್ವಲ್ಪ ಹೊತ್ತು ಬಿಸಿ ಮಾಡಿ. ನಂತರ ಅದನ್ನು ತಟ್ಟೆಯಲ್ಲಿ ತೆಗೆದುಕೊಂಡು ತಣ್ಣಗಾಗಲು ಬಿಡಿ.
  • ಈಗ ಮಿಕ್ಸಿ ಜಾರ್ ತೆಗೆದುಕೊಂಡು ತಣ್ಣಗಾದ ಹಸಿರು ಮೆಣಸಿನಕಾಯಿ ಮಿಶ್ರಣವನ್ನು ಹುಣಸೆ ರಸ, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತು ಅಗತ್ಯ ಪ್ರಮಾಣದ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
  • ಆದರೆ.. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ, ಬಿಸಿ ನೀರನ್ನು ಸೇರಿಸಿದರೆ ಚಟ್ನಿ ಬೇಗ ಕೆಡುವುದಿಲ್ಲ.
  • ಅದಕ್ಕಾಗಿ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಅದು ಸ್ವಲ್ಪ ಬಿಸಿಯಾದಾಗ ಜೀರಿಗೆ, ಸಾಸಿವೆ, ಕರಿಬೇವು, ಕರಿಮೆಣಸು ಹಾಕಿ ಹುರಿಯಿರಿ.
  • ನಂತರ ಅದನ್ನು ಬೌಲ್​ಗೆ ಹಾಕಿ ಮಿಶ್ರಣ ಮಾಡಿ. ಆಗ ಬಾಯಲ್ಲಿ ನೀರೂರಿಸುವ ಟಿಫಿನ್ ಸೆಂಟರ್ ಶೈಲಿಯ ಶುಂಠಿ ಚಟ್ನಿ ಸಿದ್ಧ!

ಮನೆಯಲ್ಲಿ ಬಿಸಿ ಬಿಸಿ ಇಡ್ಲಿ ಮತ್ತು ದೋಸೆ ಜೊತೆ ಈ ಶುಂಠಿ ಚಟ್ನಿ ತಿಂದರೆ ಅದರ ರುಚಿ ಅದ್ಭುತವಾಗಿರುತ್ತೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ!

ಇದನ್ನೂ ಓದಿ: ನೀರಿನ ಬಾಟಲಿಗಳು ಎಷ್ಟೇ ತೊಳೆದರೂ ದುರ್ವಾಸನೆ ಹೋಗುತ್ತಿಲ್ಲವೇ? - ಈ ಟಿಪ್ಸ್​ ಪಾಲಿಸಿದ್ರೆ ಸ್ಮೆಲ್​ ಮಾಯ! - WATER BOTTLES CLEANING TIPS

Last Updated : Jul 22, 2024, 5:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.