ಹೈದರಾಬಾದ್: ಬಹುತೇಕ ಜನರಿಗೆ ಮೊಡವೆಗಳ ಸಮಸ್ಯೆ ಸಾಮಾನ್ಯ. ಮೊಡವೆಗಳಿಂದ ಕಲೆಗಳು, ಎಣ್ಣೆಯುಕ್ತ ಚರ್ಮ ಮತ್ತು ಕೆಲವೊಮ್ಮೆ ನೋವು ಅಥವಾ ಬಿಸಿ ಚರ್ಮದ ಸಮಸ್ಯೆ ಉಂಟಾಗಬಹುದು. ಇದು ಮುಖ, ಎದೆ ಮತ್ತು ಬೆನ್ನಿನ ಮೇಲೆ ಕಾಣಿಸಿಕೊಳ್ಳಬಹುದು.
ಬ್ರಿಟನ್ನ ರಾಷ್ಟ್ರೀಯ ಆರೋಗ್ಯ ಸೇವೆಯ (National Health Service, UK) ವೆಬ್‌ಸೈಟ್‌ನಲ್ಲಿ ಪ್ರಕಟವಾದ ಮಾಹಿತಿಯ ಪ್ರಕಾರ, ಮೊಡವೆಗಳು ಏಕೆ ಕಾಣಿಸಿಕೊಳ್ಳುತ್ತವೆ? ಮೊಡವೆಗಳು ಕಾಣಿಸಿಕೊಳ್ಳಲು ಕಾರಣಗಳೇನು? ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವುದು ಹೇಗೆ? ಮತ್ತು ಇದಕ್ಕೆ ಯಾವ ರೀತಿಯ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬುದು ತಿಳಿದುಕೊಳ್ಳೋಣ ಬನ್ನಿ..
ಮೊಡವೆಗಳು ಕಾಣಿಸಿಕೊಳ್ಳಲು ಕಾರಣಗಳೇನು?: ಮೊಡವೆಗಳು ಸಾಮಾನ್ಯವಾಗಿ ಪ್ರೌಢಾವಸ್ಥೆಯಲ್ಲಿ ಕಾಣಿಸಿಕೊಳ್ಳುತ್ತವೆ. ಹಾರ್ಮೋನ್ ಬದಲಾವಣೆ ಹಿನ್ನೆಲೆ ದೇಹದ ವಿವಿಧ ಭಾಗಗಳಲ್ಲಿ ಮೊಡವೆಗಳು ಆಗುತ್ತವೆ. ಆದರೆ, ಮೊಡವೆಗಳಾಗಲು ಯಾವುದೇ ವಯಸ್ಸಿವ ಮಿತಿಯಿಲ್ಲ. ಹಾರ್ಮೋನುಗಳಿಂದ ಹೆಚ್ಚುವರಿ ತೈಲ ಉತ್ಪಾದನೆ ಮಾಡಲು ಕಾರಣವಾಗುತ್ತದೆ. ಮತ್ತು ಚರ್ಮದಲ್ಲಿನ ಬ್ಯಾಕ್ಟೀರಿಯಾಗಳ ಚಟುವಟಿಕೆಯನ್ನು ಬದಲಾಯಿಸುತ್ತವೆ. ಇದರಿಂದ ಉರಿಯೂತನು ಉಂಟುಮಾಡುತ್ತವೆ. ಜೆನೆಟಿಕ್ಸ್ ಮತ್ತು ಋತುಚಕ್ರದ ಅಥವಾ ಗರ್ಭಾವಸ್ಥೆಯಂತಹ ಹಾರ್ಮೋನುಗಳ ಏರಿಳಿತಗಳು ಮೊಡವೆಗಳಿಗೆ ಕಾರಣವಾಗಬಹುದು.
ಮೊಡವೆ ಕಲೆಯ ಲಕ್ಷಣ ಮತ್ತು ವಿಧಗಳೇನು?:
ಕಪ್ಪು ಚುಕ್ಕೆಗಳು: ಮೇದೋಗ್ರಂಥಿಗಳ ಸ್ರಾವದ ಆಕ್ಸಿಡೀಕರಣದಿಂದಾಗಿ ಚರ್ಮದ ಮೇಲೆ ಚಿಕ್ಕ, ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ.
ವೈಟ್ ಹೆಡ್ಸ್: ಚರ್ಮವನ್ನು ಒತ್ತಿದರೆ ತೆರೆದುಕೊಳ್ಳದ ಗಟ್ಟಿಯಾದ ಬಿಳಿ ಮಚ್ಚೆಗಳು.
ಪಪೂಲ್ಗಳು: ಪಪೂಲ್ಗಳು ಸಣ್ಣ, ಕೆಂಪು ಕಲೆಗಳಾಗಿವೆ.
ಪಸ್ಟಲ್ಗಳು: ಪಸ್ಟಲ್ಗಳು (ಎಪಿಡರ್ಮಿಸ್) ಪಪೂಲ್ಗಳಂತೆಯೇ ಇರುತ್ತವೆ. ಆದರೆ, ಈ ಮೊಡವೆಗಳಲ್ಲಿ ಬಿಳಿ ಕೀವು ತುಂಬಿದ ತುದಿಗಳನ್ನು ಹೊಂದಿರುತ್ತವೆ.
ಮೊಡವೆಯ ಗಂಟುಗಳು: ಚರ್ಮದ ಅಡಿಯಲ್ಲಿ ದೊಡ್ಡದಾದ, ಗಟ್ಟಿಯಾದ ಗಂಟುಗಳು ನೋವಿನಿಂದ ಕೂಡಿರುತ್ತವೆ.
ಕೀವಿನ ಗುಳ್ಳೆಗಳು: ಅತ್ಯಂತ ಗಂಭೀರವಾದ ಮೊಡವೆ ಕಲೆಗಳು ದೊಡ್ಡದಾದ ಕೀವು ತುಂಬಿದ ಗುಳ್ಳೆಗಳಾಗಿವೆ. ಇವು ಗಮನಾರ್ಹವಾದ ಕಲೆಗಳನ್ನು ಉಂಟುಮಾಡಬಹುದು.
ಯಾರು ಮೇಲೆ ಹೆಚ್ಚು ಪರಿಣಾಮ ಬೀರುತ್ತೆ?: ಮೊಡವೆಗಳು ಮುಖ್ಯವಾಗಿ ಹದಿಹರೆಯದವರು ಮತ್ತು ಯುವ ವಯಸ್ಕರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. 11 ರಿಂದ 30 ವರ್ಷ ವಯಸ್ಸಿನ ಸುಮಾರು ಶೇ 95 ರಷ್ಟು ಜನರು ಮೊಡವೆ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಮೊಡವೆಗಳು ಸಾಮಾನ್ಯವಾಗಿ ವಯಸ್ಸಾದಂತೆ ಕಡಿಮೆಯಾಗುತ್ತವೆ. ಆದರೆ ಕೆಲವು ವ್ಯಕ್ತಿಗಳಿಗೆ ಇದು ಪ್ರೌಢಾವಸ್ಥೆಯಲ್ಲಿ ಹೆಚ್ಚು ಕಾಣಿಸಿಕೊಳ್ಳತ್ತವೆ. ಕಾರಣಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದರ ಜೊತೆಗೆ ನಿಮ್ಮ ಮೊಡವೆಗಳ ನಿಯಂತ್ರಣ ಮಾಡಬಹುದು. ನಿಮ್ಮ ಮೇಲೆ ಅದರ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ನಿರಂತರ ಸಮಸ್ಯೆಗಳನ್ನು ಹೊಂದಿದ್ದರೆ, ಸರಿಯಾದ ಚಿಕಿತ್ಸೆಯನ್ನು ಪಡೆಯಲು ವೃತ್ತಿಪರ ಸಲಹೆಯನ್ನು ಪಡೆಯುವುದು ಮುಖ್ಯವಾಗಿದೆ ಎಂದು ವೈದ್ಯರು ತಿಳಿಸುತ್ತಾರೆ.
ಮೊಡವೆಗಳನ್ನು ತಡೆಯಲು ಏನು ಮಾಡಬೇಕು?:
- ಆಗಾಗ ತೊಳೆಯುವುದು: ಮೊಡವೆಗಳಾದ ಭಾಗಗಳನ್ನು ದಿನಕ್ಕೆ ಎರಡು ಬಾರಿ ಸೋಪ್ ಅಥವಾ ಕ್ಲೆನ್ಸರ್ನಿಂದ ಸ್ವಚ್ಛಗೊಳಿಸಿ. ಆದ್ರೆ, ಬಿಸಿ ಅಥವಾ ತಣ್ಣನೆಯ ನೀರನ್ನು ಬಳಸಬೇಡಿ.
- ಮೊಡವೆ ಹಿಸುಕುವುದನ್ನು ತಪ್ಪಿಸಿ: ಮೊಡವೆಗಳ ಗುರುತುಗಳನ್ನು ತಡೆಗಟ್ಟಲು, ಕಪ್ಪು ಚುಕ್ಕೆಗಳನ್ನು ಸ್ವಚ್ಛಗೊಳಿಸಲು ಅಥವಾ ಕಲೆಗಳನ್ನು ಹಿಸುಕಲು ಪ್ರಯತ್ನಿಸುವುದನ್ನು ತಪ್ಪಿಸಿ.
- ನಾನ್-ಕಾಮೆಡೋಜೆನಿಕ್ ಉತ್ಪನ್ನಗಳು: ಮುಚ್ಚಿಹೋಗಿರುವ ರಂಧ್ರಗಳನ್ನು ತಪ್ಪಿಸಲು ನೀರು ಆಧಾರಿತ, ಎಣ್ಣೆ ರಹಿತ ಮೇಕಪ್ ಮತ್ತು ಚರ್ಮದ ಆರೈಕೆ ಉತ್ಪನ್ನಗಳನ್ನು ಬಳಸಿ.
- ಎಮೋಲಿಯಂಟ್‌ಗಳು: ಒಣ ಚರ್ಮಕ್ಕಾಗಿ ಸುಗಂಧ-ಮುಕ್ತ ನೀರು ಆಧಾರಿತ ಎಮೋಲಿಯಂಟ್‌ಗಳನ್ನು ಬಳಸಿ.
ವೈದ್ಯಕೀಯ ಸಹಾಯ ಯಾವಾಗ ಪಡೆಯಬೇಕು?: ಮೊಡವೆಗಳು ತೀವ್ರವಾಗಿದ್ದರೆ ಮತ್ತು ನಿಮ್ಮ ಬೆನ್ನು ಅಥವಾ ಎದೆಯ ಮೇಲೆ ಪರಿಣಾಮ ಬೀರಿದರೆ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ. ತೀವ್ರವಾದ ಮೊಡವೆ ಕಾಣಿಸಿಕೊಂಡರೆ, ವಿಶೇಷವಾಗಿ ದೊಡ್ಡ ಮೊಡವೆ ಆಗಿದ್ದರೆ, ವೈದ್ಯರು ಪ್ರತಿಜೀವಕಗಳು ಅಥವಾ ಪ್ರಿಸ್ಕ್ರಿಪ್ಷನ್ ಕ್ರೀಮ್‌ಗಳಂತಹ ಚಿಕಿತ್ಸೆಯನ್ನು ಶಿಫಾರಸು ಮಾಡಬಹುದು. ನೆನಪಿಡಿ, ಮೊಡವೆ ಚಿಕಿತ್ಸೆಯಿಂದ ಫಲಿತಾಂಶಗಳನ್ನು ನೋಡಲು ಹಲವಾರು ತಿಂಗಳುಗಳನ್ನು ತೆಗೆದುಕೊಳ್ಳಬಹುದು, ಆದ್ದರಿಂದ ತಾಳ್ಮೆಯಿಂದಿರುವುದು ಮುಖ್ಯ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗೆ ಸಂಪರ್ಕಿಸಬಹುದು: https://www.nhs.uk/conditions/tiredness-and-fatigue/
ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.