ನವದೆಹಲಿ: ಅನೇಕರಿಗೆ ಸದಾ ಕಂಡಿದನ್ನು, ನೆನಸಿಕೊಂಡಿದ್ದನ್ನು ತಿನ್ನುವ ಬಾಯಿ ಚಪಲ ಇರುತ್ತದೆ. ಇದರಿಂದ ಸ್ಥೂಲಕಾಯದ ಸಮಸ್ಯೆಗೆ ಕಾರಣವಾಗುತ್ತದೆ. ಇದರ ಅರಿವಿದ್ದರೂ ತಿನ್ನುವ ಅಭ್ಯಾಸವನ್ನು ನಿಯಂತ್ರಿಸಲಾಗುವುದಿಲ್ಲ. ಇವರಲ್ಲಿ ತಿನ್ನುವುದು ಒಂದು ಚಟವಾಗಿ ರೂಪುಗೊಂಡಿರುತ್ತದೆ. ಎಷ್ಟೇ ಪ್ರಯತ್ನಿಸಿದರೂ ತಿನ್ನುವ ಈ ಕಡುಬಯಕೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲವೇಕೆ ಎಂದು ಕಾರಣ ಹುಡುಕುತ್ತಿದ್ರೆ ಅದಕ್ಕೆ ಉತ್ತರವನ್ನು ಹೊಸ ಸಂಶೋಧನೆಯೊಂದು ನೀಡಿದೆ.
ಅಚ್ಚರಿಯಾದರೂ ಹೌದು, ತಿನ್ನುವ ಈ ಆಸೆಗೆ ಮೂಲ ಕಾರಣ ಕರುಳಿನಲ್ಲಿರುವ ನಿರ್ದಿಷ್ಟ ಬ್ಯಾಕ್ಟೀರಿಯಾವಂತೆ. ಈ ಕುರಿತು ಇಲಿ ಮತ್ತು ಮನುಷ್ಯರ ಮೇಲೆ ಅಧ್ಯಯನ ನಡೆಸಿದ್ದು, ಇದು ತಿನ್ನುವ ಸಮಸ್ಯೆ ಮತ್ತು ಸ್ಥೂಲಕಾಯಕ್ಕೆ ಕಾರಣವಾಗಿದೆ ಎಂಬುದನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ.
ಫೆಡರೇಶನ್ ಆಫ್ ಯುರೋಪಿಯನ್ ನ್ಯೂರೋಸೈನ್ಸ್ ಸೊಸೈಟೀಸ್ (ಎಫ್ಇಎನ್ಎಸ್) ಫೋರಮ್ 2024ನಲ್ಲಿ ಈ ಕುರಿತು ಸಂಶೋಧನೆಯನ್ನು ಅಂತಾರಾಷ್ಟ್ರೀಯ ತಂಡ ಮಂಡಿಸಿದೆ. ಇದೇ ವೇಳೆ, ತಿನ್ನುವ ಕಡು ಬಯಕೆಯನ್ನು ತಡೆಗಟ್ಟಿ, ಸಹಾಯ ಮಾಡುವ ಬ್ಯಾಕ್ಟೀರಿಯಾವನ್ನು ಗುರುತಿಸಲಾಗಿದೆ.
ಇಲ್ಲಿಯವರೆಗೆ ಈ ನಡವಳಿಕೆಯ ಹಿಂದಿನ ಉದ್ದೇಶ ಮಾತ್ರ ಅಸ್ಪಷ್ಟವಾಗಿದೆ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನವನ್ನು ಜರ್ನಲ್ ಗಟ್ನಲ್ಲಿ ಪ್ರಕಟಿಸಲಾಗಿದ್ದು, ಇದು ಸ್ಥೂಲಕಾಲ ಸಂಬಂಧಿತ ನಡವಳಿಕೆಗೆ ಹೊಸ ಚಿಕಿತ್ಸೆಗೆ ಸಹಾಯಕವಾಗಲಿದೆ ಎಂದು ತಿಳಿಸಲಾಗಿದೆ. ಹೊಸ ಚಿಕಿತ್ಸೆಯಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾ ಮತ್ತು ಪಥ್ಯದ ಪೂರಕವನ್ನು ಬಳಸಲಾಗಿದೆ ಎಂದು ರಾಫೆಲ್ ಮಾಲ್ಡೊನಾಡೊ ತಿಳಿಸಿದ್ದಾರೆ.
ಅಧ್ಯಯನದಲ್ಲಿ ಆಹಾರದ ಚಟವನ್ನು ಹೊಂದಿರದ ಇಲಿಗಳ ಕರುಳಿನ ಬ್ಯಾಕ್ಟೀರಿಯಾವನ್ನು ಪರೀಕ್ಷೆ ಮಾಡಲಾಗಿದೆ. ಆಹಾರ ಸೇವಿಸುವ ಕಡು ಬಯಕೆ ಹೊಂದಿರುವ ಇಲಿಗಳಲ್ಲಿ ಪ್ರೋಟಿಯೋಬ್ಯಾಕ್ಟೀರಿಯಾ ಫೈಲಮ್ ಎಂಬ ಬ್ಯಾಕ್ಟೀರಿಯಾ ಹೆಚ್ಚಿದ್ದು, ಆಕ್ಟಿನೋಬ್ಯಾಕ್ಟೀರಿಯಾ ಫೈಲಮ್‌ಗೆ ಸೇರಿದ ಬ್ಯಾಕ್ಟೀರಿಯಾಗಳು ಕಡಿಮೆ ಇರುವುದು ಕಂಡು ಬಂದಿದೆ. ಅಲ್ಲದೇ, ಈ ಇಲಿಗಳಲ್ಲಿ ಫೈಲಮ್‌ನಿಂದ ಬ್ಲೌಟಿಯಾ ಎಂಬ ಮತ್ತೊಂದು ರೀತಿಯ ಬ್ಯಾಕ್ಟೀರಿಯಾ ಇಳಿಕೆಯನ್ನು ಕಂಡು ಹಿಡಿಯಲಾಗಿದೆ.
ಇಲಿಗಳಂತೆ ಆಕ್ಟಿನೊಬ್ಯಾಕ್ಟೀರಿಯಾ ಫೈಲಮ್ ಮತ್ತು ಬ್ಲೌಟಿಯಾ ಬ್ಯಾಕ್ಟೀರಿಯಾ ಕಡಿಮೆ ಹೊಂದಿರುವ ತಿನ್ನುವ ಚಟ ಹೊಂದಿರುವ ವ್ಯಕ್ತಿಗಳಲ್ಲಿ ಪ್ರೋಟಿಯೊ ಬ್ಯಾಕ್ಟೀರಿಯಾ ಫೈಲಮ್ನ ಹೆಚ್ಚಳ ಕಂಡುಬಂದಿದೆ.
ಆಹಾರ ಸೇವಿಸುವ ಕಡು ಬಯಕೆಯನ್ನು ತಡೆಗಟ್ಟುವಲ್ಲಿ ನಿರ್ದಿಷ್ಟ ಮೈಕ್ರೋಬಯೋಟಾ ಪ್ರಮುಖವಾಗಿದೆ ಎಂದು ಅಧ್ಯಯನದ ಫಲಿತಾಂಶ ತೋರಿಸಿದೆ ಎಂದು ಎಲಾನ್ ಮಾರ್ಟಿನ್ ಗ್ರೇಸಿಯಾ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಇಷ್ಟದ ಆಹಾರದ ಚಿತ್ರವನ್ನು ಪದೇ ಪದೇ ನೋಡುವುದೇಕೆ? ವರದಿ ಹೀಗನ್ನುತ್ತದೆ!