ETV Bharat / health

ಭಾರತೀಯ ನರ್ಸ್​​ಗಳಿಗೆ ಹೆಚ್ಚಿದ ಬೇಡಿಕೆ; ಜಪಾನ್​ಗೆ ಹೊರಟ ಮೇಘಾಲಯಾದ ದಾದಿಯರು - nurses professional career in Japan

author img

By ETV Bharat Karnataka Team

Published : Jun 4, 2024, 9:59 AM IST

ಡಿಸೆಂಬರ್​ 7, 2023ರಲ್ಲಿ ಭಾರತ, ಜಪಾನ್​, ಯುಕೆ, ಸಿಂಗಪೂರ್​ ಮತ್ತು ಯುಎಇ ಜೊತೆ ಭಾಷಾ ತರಬೇತಿ ಮತ್ತು ಉದ್ಯೋಗ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದ್ದವು

27 nurses from Meghalaya  all set to begin their professional journey in Japan
ಜಪಾನ್​​ಗೆ ಹೊರಟ ದಾದಿಯರು (ಐಎಎನ್​ಎಸ್​)

ಶಿಲಾಂಗ್​​: ಕಳೆದ ಆಗಸ್ಟ್​ನಲ್ಲಿ ನಡೆದ ಸಾಗರೋತ್ತರ ನರ್ಸ್​​ಗಳ ಉದ್ಯೋಗ ಮೇಳದಲ್ಲಿ ಮೇಘಾಲಯ 27 ನರ್ಸ್​ಗಳು ಜಪಾನ್​ನಲ್ಲಿ ಉದ್ಯೋಗಾವಕಾಶವನ್ನು ಪಡೆದಿದ್ದರು. ಈ 27 ನರ್ಸ್​​ಗಳು ಇದೀಗ ಜಪಾನಿ ಭಾಷೆಯ ತರಬೇತಿ ಕಲಿಕೆ ಪೂರ್ಣಗೊಳಿಸಿದ್ದು, ಇದೀಗ ದೂರದ ದೇಶದಲ್ಲಿ ವೃತ್ತಿಜೀವನದ ಪ್ರಯಾಣ ಆರಂಭಿಸಲು ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ತಮ್ಮ ಹೊಸ ಭಾಷಾ ಕೌಶಲ್ಯದೊಂದಿಗೆ ಇದೀಗ ಈ ನರ್ಸ್​​ಗಳ ಜಪಾನ್​ ವಿವಿಧ ಆಸ್ಪತ್ರೆ ಮತ್ತು ಕೇರ್​ ಹೋಮ್​ಗಳಲ್ಲಿ ನೇಮಿಸಲಾಗುವುದು ಎಂದು ಮೇಘಾಲಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ 14 ನರ್ಸ್​​ಗಳು ಸಿಂಗಾಪೂರ್​ನ ಹಲವಾರು ಸಂಸ್ಥೆಗಳಿಗೆ ನೇಮಿಸಲಾಗಿದೆ.

ರಾಜ್ಯ ಸರ್ಕಾರ ಪ್ರತಿ ವರ್ಷ 50 ಸಾವಿರ ಅಭ್ಯರ್ಥಿಗಳಿಗೆ ಮೇಘಾಲಯ ರಾಜ್ಯ ಕೌಶಲ್ಯ ಅಭಿವೃದ್ಧಿ ಸೊಸೈಟಿ ಅಡಿ ಕೌಶಲ್ಯ ಮೇಘಾಲಯ ಯೋಜನೆ ಭಾಗವಾಗಿ ತರಬೇತಿ ಅವಕಾಶವನ್ನು ಒದಗಿಸುತ್ತಿದೆ. ಮುಂದಿನ ವರ್ಷದಲ್ಲಿ 300 ನರ್ಸ್​​ಗಳನ್ನು ಈ ಯೋಜನೆಯ ಭಾಗವಾಗಿಸುವ ಗುರಿ ಹೊಂದಲಾಗಿದೆ.

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್​ ಸಂಗ್ಮಾ, ಈ ಉಪಕ್ರಮದಲ್ಲಿ ಭಾಗಿಯಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು. ಈ ವೇಳೆ ಮಾತನಾಡಿದ ಅವರು, ಸಾಗರೋತ್ತರದಲ್ಲಿ ನಮ್ಮ ರಾಜ್ಯದ ನರ್ಸ್​​ಗಳು ಸೇವೆ ಸಲ್ಲಿಸಲು ಮುಂದಾಗುತ್ತಿರುವುದು ನೋಡುವುದಕ್ಕೆ ಸಂತಸವಾಗಿದೆ.

ಎಲ್ಲಾ ಆಶೀರ್ವಾದ ಮತ್ತು ಅವರ ಕುರಿತು ಸಕಾರಾತ್ಮಕ ವಿಷಯ ಆಲಿಸುವ ಭರವಸೆಯೊಂದಿಗೆ ಅವರನ್ನು ನಾವು ಕಳುಹಿಸುತ್ತಿದ್ದೇವೆ. ಇದೇ ವೇಳೆ ನಾನು ಈ ರೀತಿ ಅವಕಾಶವನ್ನು ಪಡೆಯಲು ಮತ್ತಷ್ಟು ಜನರು ಮುಂಬರುವಂತೆ ಒತ್ತಾಯಿಸುತ್ತೇನೆ. ಕಾರಣ, ಇದು ಕೇವಲ ಸಾಗರೋತ್ತರ ದೇಶದಲ್ಲಿ ಜೀವನೋಪಯ ಕಂಡು ಕೊಳ್ಳುವ ಮಾರ್ಗವಲ್ಲ. ನಿಮ್ಮ ವೃತ್ತಿ ಮತ್ತು ಜ್ಞಾನವನ್ನು ವೃದ್ಧಿಸಿಕೊಳ್ಳಲು ಇದೊಂದು ಅದ್ಬುತ ಅವಕಾಶ ಎಂದರು.

ಕೌಶಲ್ಯ ಮೇಘಾಲಯ ಉಪಕ್ರಮದ ಮುಖ್ಯ ಉದ್ದೇಶ ಯುವ ಜನತೆ ಅಗತ್ಯವಾದ ಕೌಶಲ್ಯವನ್ನು ನೀಡುವುದು. ಎಂಎಸ್​ಎಸ್​ಡಿ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾಷಾ ತರಬೇತಿ ಮತ್ತು ಉದ್ಯೋಗ ಅವಕಾಶ ನೀಡಲಾಗುತ್ತಿದೆ. ಅಲ್ಲಿನ ಭಾಷೆ ತರಬೇತಿ ಮತ್ತು ಸಂಸ್ಕೃತಿ ಅರಿಯುವ ಉದ್ದೇಶದಿಂದ 27 ನರ್ಸ್​​ಗಳು ನವಿಸ್​ನಲ್ಲಿ ನೋಂದಾವಣಿ ನಡೆಸಿದ್ದರು. ನವಿಸ್​ ಬೆಂಗಳೂರು ಮೂಲದ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕವಾಗಿದೆ.

ಮೊದಲ ಪ್ರಯತ್ನದಲ್ಲೇ 25 ಮಂದಿ ಎನ್​4 ಮತ್ತು ಎನ್​​5 ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಉದ್ಯೋಗದ ಆಫರ್​ ಪಡೆದಿದ್ದಾರೆ. ಐದು ನರ್ಸ್​ಗಳಿಗೆ ಈಗಾಗಲೇ ವೀಸಾ ಸಿಕ್ಕಿದೆ. ಉಳಿದ ಅಭ್ಯರ್ಥಿಗಳ ವೀಸಾ ಕಾರ್ಯ ಪ್ರಗತಿಯಲ್ಲಿದೆ.

ಡಿಸೆಂಬರ್​ 7, 2023ರಲ್ಲಿ ಭಾರತ, ಜಪಾನ್​, ಯುಕೆ, ಸಿಂಗಪೂರ್​ ಮತ್ತು ಯುಎಇ ಜೊತೆ ಭಾಷಾ ತರಬೇತಿ ಮತ್ತು ಉದ್ಯೋಗ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದ್ದವು. (ಐಎಎನ್​ಎಸ್)

ಇದನ್ನೂ ಓದಿ: 2030ರ ಹೊತ್ತಿಗೆ ಭಾರತದ ವೈದ್ಯರು, ನರ್ಸ್​​ಗಳಿಗೆ ಭಾರೀ ಬೇಡಿಕೆ: ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.