ನವದೆಹಲಿ: ವಿಶ್ವದಾದ್ಯಂತ ಐದು ವರ್ಷದೊಳಗಿನ ಶೇ 40ರಷ್ಟು ಅಂದರೆ, 1.6 ಮಿಲಿಯನ್ ಮಕ್ಕಳು ಅಸುರಕ್ಷಿತ ಆಹಾರ ಸೇವನೆಯಿಂದ ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಸೈಮಾ ವಾಜೆದ್ ತಿಳಿಸಿದ್ದಾರೆ.
ವಿಶ್ವ ಆಹಾರ ಸುರಕ್ಷಿತ ದಿನವನ್ನು ಪ್ರತಿ ವರ್ಷ ಜೂನ್ 7ರಂದು ಆಚರಿಸಲಾಗುತ್ತಿದ್ದು. 2018ರಲ್ಲಿ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಗಮನ ಸೆಳೆಯಲಾಯಿತು. ಈ ಮೂಲಕ ಅಸುರಕ್ಷಿತ ಆಹಾರ ಸಂಬಂಧ ಸಾರ್ವಜನಿಕ ಆರೋಗ್ಯ ಬೆದರಿಕೆ ತಡೆಯುವುದು, ಕಾರಣ ಪತ್ತೆ ಮತ್ತು ಅದಕ್ಕೆ ಸಹಾಯ ಮಾಡುವ ಕ್ರಮವನ್ನು ಪ್ರೇರೇಪಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ.
ಈ ವರ್ಷ ಈ ದಿನದ ಘೋಷ ವಾಕ್ಯ ಅನಿರೀಕ್ಷಿತಕ್ಕಾಗಿ ಸಿದ್ದರಾಗಿ ಇರಿ ಎಂಬುದಾಗಿದೆ. ಐದು ವರ್ಷದೊಳಗಿನ ಶೇ 40ರಷ್ಟು ಮಕ್ಕಳು ಈಗಾಗಲೇ ಅಪೌಷ್ಟಿಕತೆ ಮತ್ತು ಅಸುರಕ್ಷಿತ ಆಹಾರದಿಂದ ಸಾವಿನ ಅಪಾಯದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಅಸುರಕ್ಷಿತ ಆಹಾರವು ಕಡಿಮೆ ಉತ್ಪಾದಕತೆಗೆ ಕಾರಣವಾಗುತ್ತಿದೆ. ಆಹಾರದಿಂದ ಹರಡುವ ಕಾಯಿಲೆಗಳು ವೈದ್ಯಕೀಯ ವೆಚ್ಚಕ್ಕೂ ಕಾರಣವಾಗುತ್ತದೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ 110 ಬಿಲಿಯನ್ ಡಾಲರ್ ನಷ್ಟವಾಗುತ್ತಿದೆ ಎಂದು ಅಂದಾಜಿಸಲಾಗಿದೆ ಎಂದು ಸೈಮಾ ತಿಳಿಸಿದ್ದಾರೆ.
ಕಲುಷಿತ ಆಹಾರ ಸೇವನೆ ಅಪಾಯದಲ್ಲಿ ಮೊದಲ ಸ್ಥಾನ ಆಫ್ರಿಕ ಹೊಂದಿದ್ದರೆ, ಆಗ್ನೇಯ ಏಷ್ಯಾ ಪ್ರದೇಶವು ಎರಡನೇ ಸ್ಥಾನದಲ್ಲಿದೆ. ಈ ಪ್ರದೇಶದಲ್ಲಿ ಪ್ರತಿ ವರ್ಷ ಅಂದಾಜು 150 ಮಿಲಿಯನ್ ಜನರು ಅನಾರೋಗ್ಯಕ್ಕೆ ಒಳಗಾತ್ತಿದ್ದಾರೆ.
ಉಷ್ಣವಲಯದ ಹವಾಮಾನದಲ್ಲಿ ಕೀಟಾಣುಗಳು ಹರಡುವಿಕೆ ಹೆಚ್ಚಾಗಿರುತ್ತದೆ. ಇವು ನೈಸರ್ಗಿಕವಾಗಿ ವಿಷಪೂರಿತ ರಚನೆಗೆ ಕಾರಣವಾಗುತ್ತದೆ. ಆಹಾರ ಮಾಲಿನ್ಯದ ಹಿಂದೆ ಹವಾಮಾನ ಮಾಲಿನ್ಯವೂ ಕಾರಣವಾಗಿದೆ. ಆಹಾರ ಸುರಕ್ಷತೆ ಕಾಪಾಡುವುದು ಸಾಮೂಹಿಕ ಜವಾಬ್ದಾರಿ ಆಗಿದೆ. ಈ ಕುರಿತು ಸರ್ಕಾರ, ಉತ್ಪಾದಕರು ಮತ್ತು ಗ್ರಾಹಕರು ಆಹಾರ ಸುರಕ್ಷತೆಯನ್ನು ಖಚಿತಕೊಡಿಸಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಆಹಾರ ಸುರಕ್ಷತೆ ತುರ್ತು ಪ್ರತಿಕ್ರಿಯೆ ಯೋಜನೆಗಳ ಪರಿಣಾಮಕಾರಿತ್ವ ಅಭಿವೃದ್ಧಿಪಡಿಸಲು ನಿಯಮಿತವಾಗಿ ಪರೀಕ್ಷೆಗೆ ಸರ್ಕಾರಗಳು ಮುಂದಾಗಬೇಕು. ಆಹಾರ ಸುರಕ್ಷತೆ ನಿರ್ವಹಣಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮತ್ತು ನವೀಕರಣದ ಜವಾಬ್ದಾರಿಯ ಹೊಣೆ ಆಹಾರ ವ್ಯಾಪಾರ ನಿರ್ವಾಹಕರು ಮೇಲಿರುತ್ತದೆ ಎಂದರು.
ಮನೆಯಲ್ಲೂ ಜನರು ಸುರಕ್ಷಿತ ಆಹಾರ ನಿರ್ವಹಣೆಯನ್ನು ಅಭ್ಯಾಸ ಮಾಡಬೇಕು ಎಂದರು ತಿಳಿಸಿದರು. (ಐಎಎನ್ಎಸ್)
ಇದನ್ನೂ ಓದಿ: ಭಾರತದ ಎಲ್ಲ ಮಕ್ಕಳಿಗೆ ಹೊಟ್ಟೆ ತುಂಬ ಆಹಾರ ಸಿಗ್ತಿದೆಯೇ? ಯುನಿಸೆಫ್ ವರದಿ ಹೀಗಿದೆ